ಕರ್ನಾಟಕದಲ್ಲಿ ಸರ್ಕಾರಿ ಹುದ್ದೆಗಳಿಗಾಗಿ ಎದುರು ನೋಡುತ್ತಿರುವ ಅಭ್ಯರ್ಥಿಗಳಿಗೆ ಶೀಘ್ರದಲ್ಲಿ ಗುಡ್ ನ್ಯೂಸ್ ಸಿಗಲಿದೆ. ಇಂಧನ ಇಲಾಖೆ ಸಚಿವ ಕೆ.ಜೆ. ಜಾರ್ಜ್ (K.J. George) ಅವರು ಇತ್ತೀಚೆಗೆ ನೀಡಿದ ಮಾಹಿತಿಯ ಪ್ರಕಾರ, 2024ರ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಅಧಿಸೂಚನೆಗೊಂಡಿದ್ದ 2,975 ಲೈನ್‌ಮೆನ್ ಹುದ್ದೆಗಳ ನೇಮಕಾತಿ (Recruitment of Linemen posts) ಪ್ರಕ್ರಿಯೆ 2025ರ ಏಪ್ರಿಲ್ (April 2025) ಅಂತ್ಯದೊಳಗೆ ಪೂರ್ಣಗೊಳ್ಳಲಿದೆ. ರಾಜ್ಯದ ಇಂಧನ ಇಲಾಖೆಯಡಿಯಲ್ಲಿ (State Energy Department) ಬರುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL), ಬೆಸ್ಕಾಂ, ಮೆಸ್ಕಾಂ, ಜೆಸ್ಕಾಂ, ಸೆಸ್ಕಾಂ, ಮತ್ತು ಹೆಸ್ಕಾಂ ಮುಂತಾದ ವಿಭಾಗಗಳಲ್ಲಿ ಈ ಹುದ್ದೆಗಳ ಭರ್ತಿಯನ್ನು ಕೈಗೊಳ್ಳಲಾಗುತ್ತಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಇಂದಿನ ದಿನದಲ್ಲಿ ಲೈನ್‌ಮೆನ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಚುರುಕುಗೊಂಡಿದ್ದು, ಈ ಕೆಳಗಿನ ಹುದ್ದೆಗಳ ಭರ್ತಿಗೆ ಆದ್ಯತೆ ನೀಡಲಾಗಿದೆ:
ಹುದ್ದೆ ಹೆಸರು ಹುದ್ದೆಗಳ ಸಂಖ್ಯೆ: ಕಿರಿಯ ಸ್ಟೇಷನ್ ಪರಿಚಾರಕ(Junior Station Attendant ) 433 (411 NKK + 22 KK)
ಕಿರಿಯ ಪವರ್‌ಮ್ಯಾನ್ (younger Powerman) 2542 (2349 NKK + 193 KK)
ವೇತನ ಶ್ರೇಣಿ:
ಲೈನ್‌ಮೆನ್ ಹುದ್ದೆಗಳಿಗೆ ಪ್ರಾರಂಭಿಕ ವೇತನ ₹28,550-₹63,000 ಆಗಿದೆ. ಆದರೆ, ಮೊದಲ ಮೂರು ವರ್ಷಗಳ ಕಾಲ ನಿಯಮಿತ ಕ್ರೋಡೀಕೃತ ಸಂಭಾವನೆ ನೀಡಲಾಗುತ್ತದೆ:
1ನೇ ವರ್ಷ: ₹17,000
2ನೇ ವರ್ಷ: ₹19,000
3ನೇ ವರ್ಷ: ₹21,000
ನೇಮಕಾತಿ ಪ್ರಕ್ರಿಯೆ:
ಒಂದೇ ದಿನ ದೈಹಿಕ ಪರೀಕ್ಷೆ(Physical test) ಈ ಬಾರಿ, ಇಂಧನ ಇಲಾಖೆ ಒಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ಇಡೀ ರಾಜ್ಯದ ಮಟ್ಟದಲ್ಲಿ ಒಂದೇ ದಿನ ದೈಹಿಕ ಪರೀಕ್ಷೆಯನ್ನು ಆಯೋಜಿಸಲಾಗುವುದು. ಈ ಕ್ರಮದಿಂದ ಭರ್ತಿಯಲ್ಲಿ ಚುರುಕು ಮತ್ತು ಪಾರದರ್ಶಕತೆಯನ್ನು ನಿರ್ವಹಿಸಲಾಗುತ್ತದೆ.
ಎಇಇ (AEE) ಮತ್ತು ಜೆಇ(JE) ಹುದ್ದೆಗಳ ಮುಂದಿನ ಗುರಿ :
ಲೈನ್‌ಮೆನ್ ಹುದ್ದೆಗಳ ನೇಮಕಾತಿ ಪೂರ್ಣಗೊಂಡ ಬಳಿಕ, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗಗಳಲ್ಲಿ AEE (ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್) ಮತ್ತು JE (ಜೂನಿಯರ್ ಇಂಜಿನಿಯರ್) ಹುದ್ದೆಗಳ ನೇಮಕಾತಿಗೆ ಹೊಸ ಅಧಿಸೂಚನೆ ಬಿಡುಗಡೆ ಮಾಡುವ ಪ್ರಕ್ರಿಯೆ ಪ್ರಾರಂಭವಾಗಲಿದೆ.
ಎಇಇ (AEE) ಹುದ್ದೆಗಾಗಿ ವಿದ್ಯಾರ್ಹತೆ:
ಇಲೆಕ್ಟ್ರಿಕಲ್ ಅಥವಾ ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ (Electrical or Electronics Engineering)ಪದವಿ ಪಾಸ್ ಮಾಡಿರಬೇಕು.
ಜೆಇ (JE) ಹುದ್ದೆಗಾಗಿ ವಿದ್ಯಾರ್ಹತೆ: ಡಿಪ್ಲೊಮ ಇನ್ ಇಲೆಕ್ಟ್ರಿಕಲ್ ಅಥವಾ ಇಲೆಕ್ಟ್ರಾನಿಕ್ಸ್(Diploma in electrical or Electronics) ಪದವಿ ಹೊಂದಿರಬೇಕು.
ಅಭ್ಯರ್ಥಿಗಳಿಗೆ ಸಲಹೆ:
ಕರ್ನಾಟಕ ಸರ್ಕಾರಿ ಹುದ್ದೆಗಳಲ್ಲಿ ಆಸಕ್ತಿ ಇರುವವರು ಈಗಾಗಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಪ್ರಾರಂಭಿಸಬಹುದು(start preparing for competitive exams). ಇಂಧನ ಇಲಾಖೆಯ ಈ ಬೃಹತ್ ನೇಮಕಾತಿ ಪ್ರಕ್ರಿಯೆ ಉದ್ಯೋಗ ನಿರೀಕ್ಷಿತ ಅಭ್ಯರ್ಥಿಗಳಿಗೆ ಸುವರ್ಣಾವಕಾಶವನ್ನು ಒದಗಿಸಲಿದೆ.
ಈ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳುವುದರಿಂದ ರಾಜ್ಯದ ವಿದ್ಯುತ್ ಇಲಾಖೆಯಲ್ಲಿ ಮಾನವ ಸಂಪತ್ತಿನ ಕೊರತೆಯನ್ನು ತಡೆಯಲು ಸಾಧ್ಯವಾಗುತ್ತದೆ. ಇನ್ನು, ಉದ್ಯೋಗಿಗಳ ನೇಮಕಾತಿಯು ಉತ್ತಮ ಕಾರ್ಯಕ್ಷಮತೆಯನ್ನು ತರಲು ಸಹಾಯಮಾಡಲಿದೆ.
ಕೊನೆಯದಾಗಿ ಹೇಳುವುದಾದರೆ,ಇಂಧನ ಇಲಾಖೆಯ (Energy department) ಈ ನೇಮಕಾತಿ ಪ್ರಕ್ರಿಯೆ ರಾಜ್ಯದ ಉದ್ಯೋಗ ಕ್ಷೇತ್ರದಲ್ಲಿ ಹೊಸ ಚೇತನವನ್ನು ತಂದೊಡ್ಡುವಂತೆ ಕಾಣುತ್ತಿದೆ. ನಿರೀಕ್ಷಿತ ಅಭ್ಯರ್ಥಿಗಳು ಈ ಸುವರ್ಣಾವಕಾಶವನ್ನು ಬಳಸಿಕೊಳ್ಳಲು ತಕ್ಕ ಮುನ್ನೋಟ ಹೊಂದಬೇಕು.ಮತ್ತು ನೀವೇನಾದರೂ, ಮೇಲಿನ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಈಗಿನಿಂದಲೇ ಅದಕ್ಕಾಗಿ ತಯಾರಿಯನ್ನು ಮಾಡಿಕೊಳ್ಳುವುದು ಅವಶ್ಯಕವಾಗಿದೆ. ಅಷ್ಟೇ ಅಲ್ಲದೆ, ನೇಮಕಾತಿಯ ಅಧಿಸೂಚನೆಗಳಿಗಾಗಿ ಪ್ರತಿದಿನ ಅಧಿಕೃತ ಜಾಲತಾಣಕ್ಕೆ ತೆರಳಿ ಪರಿಶೀಲಿಸಿ. ಹಾಗೆಯೇ ಈ ವರದಿಯನ್ನು ಎಲ್ಲರಿಗೂ ಶೇರ್ ಮಾಡಿ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




