ದೀಪಾವಳಿ ಸಂಭ್ರಮ: ರಿಲಯನ್ಸ್ ಇಂಟ್ರಸ್ಟ್ರೀಸ್‌ನಿಂದ ಉಚಿತ JioSaavn Pro ಸಬ್‌ಸ್ಕ್ರಿಪ್ಷನ್(JioSaavn pro subscription). ಸಂಪೂರ್ಣ ಮಾಹಿತಿಗಾಗಿ ವರದಿಯನ್ನು ಕೊನೆಯವರೊ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಮುಕೇಶ್ ಅಂಬಾನಿ ಒಡೆತದ ರಿಲಯನ್ಸ್(Reliance) ಇಂಡಸ್ಟ್ರೀಸ್ ತನ್ನ ಶೇರುದಾರರು, ಉದ್ಯೋಗಿಗಳು ಮತ್ತು ಗ್ರಾಹಕರಿಗೆ ವಿಶೇಷ ಗಿಫ್ಟ್‌ಗಳನ್ನು ನೀಡಲು ಮುಂದಾಗಿದೆ. ಈ ಸಂದರ್ಭದಲ್ಲಿ, ಕಂಪನಿಯ ಮ್ಯೂಸಿಕ್-ಸ್ಟ್ರೀಮಿಂಗ್ ಪ್ಲಾಟ್‌ಫಾರಂ JioSaavn ಉಚಿತ Pro ಸಬ್‌ಸ್ಕ್ರಿಪ್ಷನ್ ಆಫರ್ ಮೂಲಕ ಬಳಕೆದಾರರಿಗೆ ಉಡುಗೊರೆಯನ್ನು ನೀಡುತ್ತಿದೆ.
JioSaavn Pro ಸಬ್‌ಸ್ಕ್ರಿಪ್ಷನ್: ಮೂರು ತಿಂಗಳ ಉಚಿತ ಆಫರ್
ನಿಮ್ಮ ನೆಚ್ಚಿನ ಹಾಡುಗಳನ್ನು ಜಾಹೀರಾತುಗಳ ಅಡೆತಡೆಯಿಲ್ಲದೇ, ಅತ್ಯುತ್ತಮ ಗುಣಮಟ್ಟದಲ್ಲಿ ಆನಂದಿಸಲು JioSaavn Pro ಸಬ್‌ಸ್ಕ್ರಿಪ್ಷನ್ ಹಬ್ಬಕ್ಕೂ ಮುನ್ನವೇ ಉಚಿತವಾಗಿ ಮೂರು ತಿಂಗಳು ಲಭ್ಯವಿದೆ. ಆಯ್ದ ಬಳಕೆದಾರರಿಗೆ ಈ ವಿಶೇಷ ಆಫರ್ ಲಭ್ಯವಾಗಿದ್ದು, ಇದರಿಂದ ಬಳಕೆದಾರರು ಹೈ ಕ್ವಾಲಿಟಿಯಲ್ಲಿ ಅನ್‌ಲಿಮಿಟೆಡ್ ಮ್ಯೂಸಿಕ್ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶವಿದೆ.
ಆಂಡ್ರಾಯ್ಡ್, iOS, JioPhone ಮತ್ತು ವೆಬ್‌ನಲ್ಲಿ ಲಭ್ಯತೆ
JioSaavn ಪ್ರೊ ಸಬ್‌ಸ್ಕ್ರಿಪ್ಷನ್ Android, iOS, JioPhone ಮತ್ತು ವೆಬ್ ಪ್ಲಾಟ್‌ಫಾರಂಗಳಲ್ಲಿ ಲಭ್ಯವಿದ್ದು, ಹೊಸ ಬಳಕೆದಾರರಿಗೆ ಆಡ್-ಫ್ರೀ, ಸುಧಾರಿತ ಗುಣಮಟ್ಟದ ಸಂಗೀತ ಅನುಭವವನ್ನು ನೀಡುವುದೇ ಈ ಆಫರ್‌ನ ಉದ್ದೇಶ. ಪ್ರೊ ಸಬ್‌ಸ್ಕ್ರಿಪ್ಷನ್ ಮೂಲಕ ಬಳಕೆದಾರರು 320kbps ಸ್ಟ್ರೀಮಿಂಗ್ ಹಾಗೂ MP3 ಫೈಲ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ಇಂಟರ್‌ನೆಟ್ ಇಲ್ಲದೇ ಆನಂದಿಸಬಹುದು.
ಆಕರ್ಷಕ ಪ್ಲಾನ್ಗಳ ವಿವರಣೆ
JioSaavn Pro: ಪ್ರತಿ ತಿಂಗಳು ಕೇವಲ 15 ರೂಪಾಯಿಯಿಂದ ಪ್ರಾರಂಭವಾಗುವ ಈ ಪ್ಲಾನ್, ಜಾಹೀರಾತುಗಳಿಲ್ಲದ ಸಂಗೀತವನ್ನು ಸ್ಟ್ರೀಮ್ ಮಾಡಲು ಅವಕಾಶ ನೀಡುತ್ತದೆ.
ಪ್ರೋ ಲೈಟ್ ಪ್ಲಾನ್: ಪ್ರತಿ ದಿನಕ್ಕೆ ಕೇವಲ 5 ರೂಪಾಯಿ ಅಥವಾ ವಾರಕ್ಕೆ 19 ರೂಪಾಯಿಯಲ್ಲಿ ಈ ಪ್ಲಾನ್ ಲಭ್ಯವಿದ್ದು, ಸಂಗೀತ ಪ್ರಿಯರಿಗೆ ಅಫೋರ್ಡಬಲ್ ಆಯ್ಕೆ.
ಪ್ರೊ ಸ್ಟುಡೆಂಟ್ ಪ್ಲಾನ್: ವಿದ್ಯಾರ್ಥಿಗಳು ತಮ್ಮ ಗುರುತನ್ನು ಪರಿಶೀಲಿಸಿ ಈ ವಿಶೇಷ ಸಬ್‌ಸ್ಕ್ರಿಪ್ಷನ್‌ನ್ನು ಪಡೆದುಕೊಳ್ಳಬಹುದು.
ಡ್ಯೂಯಲ್ ಮತ್ತು ಫ್ಯಾಮಿಲಿ ಪ್ಲಾನ್: ಡ್ಯೂಯಲ್ ಪ್ಲಾನ್‌ನಲ್ಲಿ ಎರಡು ಸದಸ್ಯರು ಒಂದೇ ಖಾತೆಯಲ್ಲಿ ಮ್ಯೂಸಿಕ್ ಆನಂದಿಸಬಹುದು; ಬೆಲೆ 149 ರೂಪಾಯಿ. ಫ್ಯಾಮಿಲಿ ಪ್ಲಾನ್‌ನಲ್ಲಿ ಐವರು ಸದಸ್ಯರು ತಮ್ಮ ಪರ್ಸನಲ್ ಪ್ರೋ ಅಕೌಂಟ್‌ನೊಂದಿಗೆ ವಿಶಿಷ್ಟ ಅನುಭವವನ್ನು ಪಡೆಯಬಹುದು. ಈ ಪ್ಲಾನ್ ಬೆಲೆ 179 ರೂಪಾಯಿಯಾಗಿದೆ.
ಮೂಲ್ಯಯುತ ಮ್ಯೂಸಿಕ್ ಸ್ಟ್ರೀಮಿಂಗ್ ಅನುಭವ
ಇಂಟರ್‌ನೆಟ್ ಇಲ್ಲದಿದ್ದರೂ ಡೌನ್‌ಲೋಡ್ ಮಾಡಿದ ಹಾಡುಗಳನ್ನು ಆನಂದಿಸಲು ಜಿಯೋ ಸಾವನ್ ಪ್ರೊ ಸಬ್‌ಸ್ಕ್ರಿಪ್ಷನ್ ಬಳಕೆದಾರರಿಗೆ ಅವಕಾಶ ನೀಡುತ್ತದೆ. ಹೆಚ್ಚಿನ ಬಿಟ್ರೇಟ್‌ನ 320kbps ನಲ್ಲಿ ಮ್ಯೂಸಿಕ್ ಸ್ಟ್ರೀಮಿಂಗ್ ಆಪ್ಶನ್, ಜಾಹೀರಾತುಗಳ ಅಡೆತಡೆಯಿಲ್ಲದ ಅನುಭವ, ಮತ್ತು ಅನ್‌ಲಿಮಿಟೆಡ್ JioTunes ಎಂಬ ಸೌಲಭ್ಯಗಳು JioSaavn Pro ಬಳಕೆದಾರರಿಗೆ ಉತ್ತಮ ಆಯ್ಕೆಗೊಳ್ಳುತ್ತಿವೆ.
ಇದು ಪ್ರಥಮ ಬಾರಿಗೆ ಭಾರತದ ಮ್ಯೂಸಿಕ್-ಸ್ಟ್ರೀಮಿಂಗ್ ಕ್ಷೇತ್ರದಲ್ಲಿ ಪ್ರಮುಖ ಪ್ರಮಾಣದಲ್ಲಿ ಉಚಿತ ಸಬ್‌ಸ್ಕ್ರಿಪ್ಷನ್ ಆಫರ್ ನೀಡಲಾಗಿದ್ದು, ಇದರಿಂದ ಜಿಯೋ ಸಾವನ್ ತನ್ನ ಗ್ರಾಹಕರಿಗೆ ವಿಭಿನ್ನ ಮತ್ತು ಸುಧಾರಿತ ಅನುಭವವನ್ನು ನೀಡಲು ಪ್ರಯತ್ನಿಸುತ್ತಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




