ಮೇ 31, 2024ರ ವರೆಗೆ ಲಭ್ಯವಿರುತ್ತದೆ jio ಹೊಸ ಪ್ರೀಮಿಯಂ OTT ಬ್ಯಾಂಡ್ ಡೇಟಾ ಯೋಜನೆ. 15 OTT ಗಳೊಂದಿಗೆ ರೂ 888 ಪ್ರಾರಂಭ.
ಕರೋನ ಕಾಲದ ನಂತರ ಬಹಳಷ್ಟು ವೇಗದಲ್ಲಿ ಓಟಿಟಿ(OTT) ಪ್ಲಾಟ್ ಫಾರ್ಮ್ ಗಳು (platform) ಭಾರತದಲ್ಲಿ ಹೆಚ್ಚಾಗಿವೆ. ಈ ಓಟಿಟಿಯ ವ್ಯವಸ್ಥೆ ಒಂದು ರೀತಿಯಲ್ಲಿ ಜನರಿಗೆ ಸಹಾಯವನ್ನು ಮಾಡಿದರೆ ಇನ್ನೊಂದು ರೀತಿಯಲ್ಲಿ ಸಾಂಪ್ರದಾಯಿಕ ವ್ಯವಸ್ಥೆಗಳ ಮೂಲಕ ಮನರಂಜನೆಯನ್ನು ಪಡೆಯುತ್ತಿರುವವರಿಗೆ ಸ್ವಲ್ಪ ಕಷ್ಟವಾಗುತ್ತದೆ. ಓಟಿಟಿ ಎಂದರೆ ಓವರ್ ದಿ ಟಾಪ್ ( over the top ) ಎಂಬ ಅರ್ಥವನ್ನು ನೀಡುತ್ತದೆ. ಈ ಒಂದು ಓಟಿಟಿ ಪ್ಲ್ಯಾಟ್ ಫಾರ್ಮ್ ನಲ್ಲಿ ನಾವು ಇಂಟರ್ನೆಟ್(Internet) ಮೂಲಕ ಲಭ್ಯವಿರುವ ಯಾವುದೇ ಸೇವೆಯನ್ನು ಪಡೆಯಬಹುದು. ಓಟಿಟಿ ಪ್ಲ್ಯಾಟ್ ಫಾರ್ಮ್ ಹೆಚ್ಚು ಮನರಂಜನೆ ವಿಷಯಕ್ಕೆ ಬಳಕೆಯಾಗುತ್ತಿದೆ. ಇನ್ನು ಈ ಓಟಿಟಿ ಪ್ಲಾಟ್ ಫಾರ್ಮ್ ಅನ್ನು ಹೆಚ್ಚು ಯಾರು ಬಳಸುತ್ತಿದ್ದಾರೋ ಅವರಿಗೆ ಜಿಯೋ ಬಂಪರ್ ಆಫರ್ ದೊರೆಯುತ್ತಿದೆ. ಹೌದು ಜಿಯೋಫೈಬರ್(Jio Fiber) ಹಾಗೂ ಜಿಯೋ ಏರ್ ಫೈಬರ್ (Jio Air Fiber)ಗ್ರಾಹರಿಗಾಗಿ ರಿಲಯನ್ಸ್ (Reliance) ಜಿಯೋದಿಂದ ಹೊಸ ಪೋಸ್ಟ್ ಪೇಯ್ಡ್(Postpaid) ಯೋಜನೆ ಘೋಷಿಸಿದೆ. ಈ ಒಂದು ಯೋಜನೆಯ ಅಡಿಯಲ್ಲಿ ರೂ 888 ಪ್ರಾರಂಭವಾಗಿ ಗ್ರಾಹಕರಿಗೆ 15 ಪ್ರೀಮಿಯಂ ಓಟಿಟಿ (OTT) ಅಪ್ಲಿಕೇಶನ್ ಗಳನ್ನು ನೀಡಲಾಗುತ್ತಿದೆ. ಈ ಯೋಜನೆ ಎಲ್ಲಿವರೆಗೂ ಚಾಲ್ತಿಯಲ್ಲಿ ಇರುತ್ತದೆ ಹಾಗೂ ಈ ಯೋಜನೆಯ ಸೇವೆಗಳೇನೇನು?ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಜಿಯೋ ಹೊಸ ಯೋಜನೆ :
ಜಿಯೋ ತನ್ನ ಗ್ರಾಹಕರಿಗಾಗಿ ಹೊಚ್ಚ ಹೊಸ ಯೋಜನೆಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. ಹಾಗಾಗಿ ಇಂದು ಓಟಿಟಿಯನ್ನು ಬಳಸುತ್ತಿರುವವರಿಗೆ ಹೊಸ ಓವರ್ ದಿ ಟಾಪ್ ಯೋಜನೆಯನ್ನು ಪ್ರಾರಂಭಿಸಿದೆ. ತಿಂಗಳಿಗೆ ರೂ.888 ಅಡಿಯಲ್ಲಿ ನೆಟ್‌ಫ್ಲಿಕ್ಸ್ (Netflix) ಮೂಲ ಚಂದಾದಾರಿಕೆ ಸೇರಿದಂತೆ 15 ಪ್ರೀಮಿಯಂ ಸೇವಾ ಅಪ್ಲಿಕೇಶನ್‌ಗಳನ್ನು ಬ್ರಾಡ್‌ಬ್ಯಾಂಡ್ ಯೋಜನೆಯೊಂದಿಗೆ ನೀಡಲಾಗುತ್ತಿದೆ. ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಲೈಟ್(amazon prime lite), ಡಿಸ್ನಿ + ಹಾಟ್‌ಸ್ಟಾರ್ (Disney +hotstar) ಸೇರಿದಂತೆ 15 ಅಪ್ಲಿಕೇಶನ್‌ಗಳ ಪ್ರೀಮಿಯಂ ಸೇವೆಗಳನ್ನು ನೀಡಲಾಗುತ್ತಿದೆ.
ಜಿಯೋ ನೀಡಿರುವಂತಹ ಈ ಹೊಸ ಪೋಸ್ಟ್ ಪೇಯ್ಡ್ ಯೋಜನೆ ಓಟಿಟಿ ಪ್ಲಾಟ್ ಫಾರ್ಮ್ ಗಳನ್ನು ಅತಿ ಹೆಚ್ಚಾಗಿ ಬಳಕೆ ಮಾಡುವವರಿಗೆ ಹಾಗೂ ಇಷ್ಟಪಡುವವರಿಗೆ ಇದು ಒಂದು ಉತ್ತಮ ಹಾಗೂ ಸೂಕ್ತವಾದಂತಹ ಯೋಜನೆಯಾಗಿದೆ. ಈ ಪ್ಲಾನ್ ಗೆ ತಿಂಗಳಿಗೆ 888 ರೂಪಾಯಿ ಇರಲಿದೆ. 15 ಪ್ರೀಮಿಯಂ ಅಪ್ಲಿಕೇಶನ್ ಜೊತೆಯಲ್ಲಿ ಅನಿಯಮಿತಿ ಡೇಟಾ (unlimited data ) ಕೂಡ ದೊರೆಯುತ್ತದೆ. ಈ ಒಂದು ಯೋಜನೆ ಗ್ರಾಹಕರಿಗೆ ತುಂಬಾ ಉಪಯುಕ್ತವಾಗಲಿದ್ದು ಯಾವಾಗ ಮತ್ತು ಎಲ್ಲಿ ಬೇಕಾದರೂ ತಮಗಿಷ್ಟವಾದಂತಹ ಮನರಂಜನ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು.
ಈ ಯೋಜನೆ ಲಾಭ ಎಲ್ಲಿಯವರೆಗೂ ಮುಂದುವರೆಯಲಿದೆ:
ಜಿಯೋ ಫೈಬರ್ ಅಥವಾ ಏರ್ ಫೈಬರ್ ನ ಅರ್ಹ ಗ್ರಾಹಕರು ತಮ್ಮ ಜಿಯೋ ಹೋಮ್ ಬ್ರಾಡ್ ಬ್ಯಾಂಡ್ ಸಂಪರ್ಕದಲ್ಲಿ 50 ದಿನ ರಿಯಾಯಿತಿ ಕ್ರೆಡಿಟ್ ವೋಚರ್ ಪಡೆಯಬಹುದು. ಈ ಪ್ಲಾನ್ ಮೇ 31, 2024ರ ವರಿಗೂ ಲಭ್ಯವಿರುತ್ತದೆ.
ಈ ಯೋಜನೆಯ ಸಬ್ ಸ್ಕ್ರಿಪ್ಷನ್ ಯಾರಿಗೆ ದೊರೆಯುತ್ತದೆ :
ಈ ಹೊಸ ಯೋಜನೆಯ ಅಡಿಯಲ್ಲಿ ಗ್ರಾಹಕರು 30 ಎಂಬಿಪಿಎಸ್ (mbps) ವೇಗವನ್ನು ಪಡೆಯಲಿದ್ದಾರೆ. ಈ ಅಪ್ಲಿಕೇಷನ್ ನ ಸಬ್ ಸ್ಕ್ರಿಪ್ಷನ್ ದೊರೆಯುವುದು ಯೋಜನೆಯ ಜನತೆಗೆ ಮಾತ್ರ. ಈ ಯೋಜನೆಯನ್ನು ಹೊಸ ಚೆಂದಾದಾರಷ್ಟೇ ಅಲ್ಲ, 10 ಅಥವಾ 30 ಎಂಬಿಪಿಎಸ್ (mbps) ಯೋಜನೆಯನ್ನು ಈಗಾಗಲೇ ಬಳಸುತ್ತಿರುವ ಜಿಯೋದ ಈಗಿನ ಬಳಕೆದಾರರು ಸಹ ಪಡೆಯಬಹುದಾಗಿದೆ. ಹಾಗೂ ಈ 888 ರೂಪಾಯಿಯ ಪೋಸ್ಟ್ ಪೇಯ್ಡ್ ಯೋಜನೆಯು ಪ್ರತಿಯೊಬ್ಬರಿಗೂ ದೊರೆಯಲಿದ್ದು, ಸದ್ಯಕ್ಕೆ ಪ್ರಿಪೇಯ್ಡ್ ಯೋಜನೆ ಹೊಂದಿರುವ ಗ್ರಾಹಕರು ಈ ಹೊಸ ಪೋಸ್ಟ್ ಪೇಯ್ಡ್ ಯೋಜನೆಗೆ ಅಪ್ ಗ್ರೇಡ್ ಮಾಡಬಹುದು.
ವಿಶೇಷ ಸೂಚನೆ :
ಮತ್ತೊಂದು ವಿಶೇಷತೆಯೆಂದರೆ ಇತ್ತೀಚಿಗೆ ಘೋಷಣೆಯಾದ ಜಿಯೋ ಐಪಿಎಲ್ (IPL)ಧನ್ ಧನಾ ಧನ್ ಆಫರ್ (dhan dhana dhan offer) ಕೂಡ ಈ ಯೋಜನೆಗೆ ಅನ್ವಯಿಸುತ್ತದೆ. ಜಿಯೋ ಡಿಡಿಡಿ ಕೊಡುಗೆಯನ್ನು ವಿಶೇಷವಾಗಿ ಟಿ20 ಋತುವಿಗಾಗಿ ವಿನ್ಯಾಸಗೊಳಿಸಲಾಗಿದೆ.
ಈ ಮಾಹಿತಿಗಳನ್ನು ಓದಿ
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




