ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ನಾವು ನಿಮಗೆ ಜೆಇಇ ಮೇನ್ಸ್ 2024 ಪರೀಕ್ಷೆಯ (JEE Mains 2024 Examination) ಅರ್ಜಿ ಆಹ್ವಾನದ ಕುರಿತು ಮಾಹಿತಿಯನ್ನು ನೀಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
JEE ಮೆನ್ಸ್ ಪರೀಕ್ಷೆಯ ಅರ್ಜಿ ಆಹ್ವಾನ :
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಜನವರಿ 2024 ರ ಜಂಟಿ ಪ್ರವೇಶ ಪರೀಕ್ಷೆ (ಮೆನ್ಸ್) ಗಾಗಿ ಆನ್‌ಲೈನ್ ನೋಂದಣಿ ಪ್ರಕ್ರಿಯೆಯನ್ನು(Online registration process) ಪ್ರಾರಂಭಿಸಿದೆ. ಆಸಕ್ತ ಅಭ್ಯರ್ಥಿಗಳು ಅರ್ಹತೆ ಮತ್ತು ಪ್ರಮುಖ ನೋಂದಣಿ ವಿವರಗಳನ್ನು ತಿಳಿದುಕೊಂಡು ಪ್ರವೇಶ ಪರೀಕ್ಷೆಗೆ ಅಧಿಕೃತ ವೆಬ್‌ಸೈಟ್‌ನಲ್ಲಿ (Official website) ಅರ್ಜಿ ಸಲ್ಲಿಸಬಹುದಾಗಿದೆ.
ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಬಿಇ, ಬಿ.ಟೆಕ್, ಬಿ.ಆರ್ಚ್, ಬಿ ಪ್ಲಾನಿಂಗ್ ಕೋರ್ಸ್‌ಗಳ ಪ್ರವೇಶಕ್ಕೆ, ಸರ್ಕಾರಿ ಸೀಟುಗಳ ಹಂಚಿಕೆಗಾಗಿ ಜಂಟಿ ಪ್ರವೇಶ ಪರೀಕ್ಷೆ (ಜೆಇಇ ಮೇನ್ಸ್) ಅನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸುತ್ತದೆ.
JEE ಮೆನ್ಸ್ ಪರೀಕ್ಷೆಯನ್ನು ಎರಡು ಅವಧಿಯಲ್ಲಿ ನಡೆಸಲಾಗುತ್ತದೆ.
ಸೆಷನ್ 1 ಪರೀಕ್ಷೆಯು ಜನವರಿ 24, 2024 ರಿಂದ ಫೆಬ್ರವರಿ 1, 2024 ರವರೆಗೆ ನಡೆಸಲಾಗುತ್ತದೆ.
ಸೆಷನ್ 2 ಪರೀಕ್ಷೆಯು ಏಪ್ರಿಲ್ 1, 2024 ರಂದು ಪ್ರಾರಂಭವಾಗಿ , ಏಪ್ರಿಲ್ 15 ರವರೆಗೆ ಮುಂದುವರಿಯುತ್ತದೆ. ಆದರಿಂದ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕ ನವೆಂಬರ್ 30ವರಗೆ ಇರುತ್ತದೆ. ಆದರೆ ಇದೀಗ ಸೆಷನ್ 1 ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ. ಆನ್ಲೈನ್ ಅಲ್ಲಿ ಅಧಿಕೃತ ವೆಬ್ ಸೈಟ್ jeemain.nta.ac.in ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಮತ್ತು ಇನ್ನೂ ಈ ಪರೀಕ್ಷೆಯ ಅರ್ಜಿ ಪ್ರಕ್ರಿಯೆ ಹಾಗೂ ಪರೀಕ್ಷೆ ದಿನಾಂಕಗಳು, ಶುಲ್ಕ, ಇತರೆ ವಿವರಗಳು ಈ ಕೆಳಗಿನಂತಿವೆ.
ಇದನ್ನೂ ಓದಿ – Onion Price Today- ಸರ್ಕಾರದಿಂದಲೇ 25 ರೂ.ಗೆ ಒಂದು ಕೆಜಿ ಈರುಳ್ಳಿ ಮಾರಾಟ! ಎಲ್ಲಿ ಗೊತ್ತಾ..? ಇಲ್ಲಿದೆ ವಿವರ
ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?:
ಈ ಜೆಇಇ ಮೆನ್ಸ್ ಪರೀಕ್ಷೆಗೆ ಯಾವುದೇ ವಯೋಮಿತಿ ಅರ್ಹತೆ ಇರುವುದಿಲ್ಲ ಆದರಿಂದ ನೀವು ಆರಾಮವಾಗಿ ಅರ್ಜಿ ಸಲ್ಲಿಸಬಹುದು. ಇನ್ನು ಈ ಪರೀಕ್ಷೆಗೆ ವಿಧ್ಯಾಹರ್ತೆ ಬಗ್ಗೆ ತಿಳಿಯುವುದಾದರೆ, ದ್ವಿತೀಯ ಪಿಯುಸಿ ಪಾಸಾದ ಹಾಗೂ 2023-24ನೇ ಸಾಲಿನಲ್ಲಿ (ವಿಜ್ಞಾನ ವಿಭಾಗ) ದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳು ಜೆಇಇ ಮೇನ್ಸ್ ಪರೀಕ್ಷೆ ಬರೆಯಲು ಅವಕಾಶ ಇರುತ್ತದೆ. ಈ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಪಾಸ್ ಆಗಿ ಅರ್ಹತೆ ಪಡೆದ ನಂತರ ಜೆಇಇ ಅಡ್ವಾನ್ಸ್‌ಡ್ ಗೆ ರಿಜಿಸ್ಟ್ರೇಷನ್ ಸಲ್ಲಿಸಬಹುದಾಗಿದೆ.
ಪ್ರಮುಖ ದಿನಾಂಕಗಳು :
ಜೆಇಇ ಮೆನ್ಸ್ ಪರೀಕ್ಷೆಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಪ್ರಮುಖ ದಿನಾಂಕಗಳನ್ನು ಪ್ರಕಟಿಸಿದೆ,
ಜೆಇಇ ಮೆನ್ಸ್ ಪರೀಕ್ಷೆಗೆ ಆನ್‌ಲೈನ್ ಅಪ್ಲಿಕೇಶನ್ ಸಲ್ಲಿಸುವ ಆರಂಭಿಕ ದಿನಾಂಕ : 01-11-2023
ಆನ್‌ಲೈನ್ ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ : 30-11-2023 ರ ರಾತ್ರಿ 09 ಗಂಟೆವರೆಗೆ.
ಅರ್ಜಿ ಶುಲ್ಕ ಪಾವತಿಗೆ ಕೊನೆ ದಿನಾಂಕ : 30-11-2023 ರಾತ್ರಿ 11-50 ಗಂಟೆವರೆಗೆ.
ಪರೀಕ್ಷೆ ಕೇಂದ್ರಗಳ ಮಾಹಿತಿ ಬಿಡುಗಡೆ : 2024 ರ ಜನವರಿ ಎರಡನೇ ವಾರ
ಅಡ್ಮಿಟ್ ಕಾರ್ಡ್ ಡೌನ್‌ಲೋಡ್‌ಗೆ ಅವಕಾಶ : ಪರೀಕ್ಷೆಗೆ 3 ದಿನ ಮುಂಚಿತವಾಗಿ ಅವಕಾಶ ಇರುತ್ತದೆ.
ಜೆಇಇ ಮೇನ್ಸ್ ಪರೀಕ್ಷೆ ದಿನಾಂಕ : 2024 ರ ಜನವರಿ 24 ರಿಂದ ಫೆಬ್ರವರಿ 01 ರ ನಡುವೆ.
ಪರೀಕ್ಷೆ ಕೇಂದ್ರ, ದಿನಾಂಕ, ಶಿಫ್ಟ್ ಮಾಹಿತಿ ಇವೆಲ್ಲವನ್ನೂ ಅಡ್ಮಿಟ್ ಕಾರ್ಡ್‌ನಲ್ಲಿ ತಿಳಿಸಲಾಗುತ್ತದೆ.
ಜೆಇಇ ಮೇನ್ಸ್ ಜನವರಿ ಸೆಷನ್ ಫಲಿತಾಂಶ : ಫೆಬ್ರವರಿ 12, 2024 ಕ್ಕೆ ಪ್ರಕಟಿಸಲಾಗುತ್ತದೆ ಎಂದು ತಿಳಿದು ಬಂದಿದೆ.
ಜೆಇಇ ಮೇನ್ಸ್ ಪರೀಕ್ಷೆಯನ್ನು ಒಟ್ಟು 13 ಭಾಷೆಗಳಲ್ಲಿ ನಡೆಸಲಾಗುತ್ತದೆ. ಅವುಗಳೆಂದರೆ ಇಂಗ್ಲಿಷ್, ಹಿಂದಿ, ಅಸ್ಸಾಮಿ, ಬೆಂಗಾಲಿ, ಗುಜರಾತಿ, ಕನ್ನಡ, ಮಲಯಾಳಂ ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು , ಇವುಗಳಲ್ಲಿ ನಿಮ್ಮಗೆ ತಿಳಿಯುವ ಯಾವುದಾದರೂ ಭಾಷೆಯನ್ನು ಆಯ್ದುಕೊಂಡು ನಾವು ಪರೀಕ್ಷೆಯನ್ನು ಬರೆಯಬಹುದಾಗಿದೆ. ಮತ್ತು
ಅಭ್ಯರ್ಥಿಗಳು ಎರಡನೇ ಸೆಷನ್ ಪರೀಕ್ಷೆಯನ್ನು ಬರೆಯುತ್ತೇನೆ ಎಂದು ನೀವು ಬಯಸಿದ್ದಲ್ಲಿ ಎರಡು ಸೆಷನ್ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು ಆದರೆ ಕಡ್ಡಾಯವಾಗಿ ಇರುವುದಿಲ್ಲ ನಿಮ್ಮ ಆಯ್ಕೆಗೆ ಬಿಟ್ಟಿರುತ್ತದೆ.
ಇದನ್ನೂ ಓದಿ – Gruhalakshmi – ಈ ಬ್ಯಾಂಕ್ ನಲ್ಲಿ ಹೊಸ ಖಾತೆ ತೆರೆದು ಮೇಲೆ ಬಂತು ಗೃಹಲಕ್ಷ್ಮೀ 2000/- ಹಣ – ಇಲ್ಲಿದೆ ವಿವರ
JEE ಮುಖ್ಯ 2024 ಪರೀಕ್ಷೆಯು 3 ಪತ್ರಿಕೆಗಳನ್ನು ಒಳಗೊಂಡಿರುತ್ತದೆ
ಮೊದಲನೆಯದಾಗಿ,ಪೇಪರ್ 1
ಪೇಪರ್ 2A
ಪೇಪರ್ 2 ಬಿ ಆಗಿರುತ್ತದೆ.
BE ಅಥವಾ B. Tech ಕೋರ್ಸ್‌ಗಳಿಗೆ ಸೇರಲು ಬಯಸುವ ಅಭ್ಯರ್ಥಿಗಳು ಪೇಪರ್ 1 ಗೆ ಅರ್ಜಿ ಸಲ್ಲಿಸುತ್ತಾರೆ.
B. ಆರ್ಚ್ ಕೋರ್ಸ್‌ಗಳನ್ನು ಆಯ್ಕೆ ಮಾಡುವ ಅಭ್ಯರ್ಥಿಗಳು ಪೇಪರ್ 2A ಗೆ ಹಾಜರಾಗಬೇಕಾಗುತ್ತಾರೆ
ಇನ್ನು ಪೇಪರ್ 2 ಬಿ ಬಿ. ಪ್ಲಾನಿಂಗ್ ಕೋರ್ಸ್‌ಗೆ ಸಂಬಂಧಿಸಿರುತ್ತದೆ.
JEE ಮುಖ್ಯ 2024 ಪೇಪರ್ 1, ಬಯಾಲಜಿ, ಕೆಮಿಸ್ಟ್ರಿ, ಮತೆಮೇಟಿಕ್ಸ್ ಪ್ರಶ್ನೆಗಳನ್ನು ಹೊಂದಿರುತ್ತದೆ.
ಪೇಪರ್ 2 ಎ ಗಣಿತ, ಯೋಗ್ಯತೆ ಮತ್ತು ರೇಖಾಚಿತ್ರದಲ್ಲಿ ಅಭ್ಯರ್ಥಿಗಳನ್ನು ನಿರ್ಣಯಿಸುತ್ತದೆ.
ಪೇಪರ್ 2B ಗಣಿತ, ಯೋಗ್ಯತೆ ಮತ್ತು ಯೋಜನೆ ಕುರಿತು ಪ್ರಶ್ನೆಗಳನ್ನು ಹೊಂದಿರುತ್ತದೆ.
ಅರ್ಜಿ ಶುಲ್ಕ :
ಈ ಮೇಲೆ ತಿಳಿಸಿರುವಂತೆ,ಪೇಪರ್-1 ಬಿಇ/ಬಿ.ಟೆಕ್ ಅಥವಾ ಪೇಪರ್ 2A – ಬಿ.ಆರ್ಚ್ ಅಥವಾ ಪೇಪರ್ 2B – ಬಿ.ಪ್ಲಾನಿಂಗ್ ಯಾವುದಾದರು ಒಂದಕ್ಕೆ ಅರ್ಜಿ ಸಲ್ಲಿಸಿದರು ಕೂಡಾ ಭಾರತೀಯ ವಿದ್ಯಾರ್ಥಿಗಳು ಈ ಕೆಳಗಿನ ಶುಲ್ಕ ಪಾವತಿಸಬೇಕಾಗುತ್ತದೆ.
ಸಾಮಾನ್ಯ ವರ್ಗಗಳ ಪುರುಷರಿಗೆ – Rs.1000, ಮಹಿಳೆಯರಿಗೆ ರೂ.800.
EWS / ಇತರೆ ಹಿಂದುಳಿದ ವರ್ಗಗಳ ಪುರುಷರಿಗೆ – Rs.900, ಮಹಿಳೆಯರಿಗೆ ರೂ.800.
ಎಸ್‌ಸಿ, ಎಸ್‌ಟಿ, ಪಿಡಬ್ಲ್ಯೂಡಿ ವರ್ಗಗಳ ಪುರುಷರಿಗೆ – Rs.500, ಮಹಿಳೆಯರಿಗೆ ರೂ.500.
ಟ್ರಾನ್ಸ್‌ಜೆಂಡರ್ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ.500.
ಒಂದಕ್ಕಿಂತ ಹೆಚ್ಚು ಪೇಪರ್‌ಗೆ ಅರ್ಜಿ ಸಲ್ಲಿಸಿದ್ದಲ್ಲಿ, ಅಥವಾ ವಿದೇಶಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದಲ್ಲಿ ಅರ್ಜಿ ಶುಲ್ಕ ಬೇರೆ ಮೊತ್ತದಲ್ಲಿ ಇರುತ್ತದೆ.
ಜೆಇಇ ಮೆನ್ಸ್ ಪರೀಕ್ಷೆ2024 ಗೆ ನೋಂದಾಯಿಸುವುದು ಹೇಗೆ ಎಂದು ತಿಳಿಯಲು ಕೆಳಗಿನ ಹಂತಗಳನ್ನು ಅನುಸರಿಸಿರಿ:
ಹಂತ 1: jeemain.nta.nic.in ನಲ್ಲಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
ಹಂತ 2: ಮುಖಪುಟದಲ್ಲಿ, ‘ಅಭ್ಯರ್ಥಿ ಚಟುವಟಿಕೆ’ ಟ್ಯಾಬ್‌ಗೆ ಹೋಗಿ ಮತ್ತು JEE 2024 ನೋಂದಣಿ ಲಿಂಕ್ ಅನ್ನು ಕ್ಲಿಕ್ ಮಾಡಿ
ಹಂತ 3: ನೀವೇ ನೋಂದಾಯಿಸಿ ಮತ್ತು ಲಾಗಿನ್ ರುಜುವಾತುಗಳನ್ನು ರಚಿಸಿ
ಹಂತ 4: ಈಗ, ಅದೇ ವಿವರಗಳನ್ನು ಬಳಸಿಕೊಂಡು ಲಾಗಿನ್ ಮಾಡಿ ಮತ್ತು ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
ಹಂತ 5: ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಮತ್ತು ನೋಂದಣಿ ಶುಲ್ಕವನ್ನು ಪಾವತಿಸಿ
ಹಂತ 6: ಭವಿಷ್ಯದ ಉಲ್ಲೇಖಕ್ಕಾಗಿ ದೃಢೀಕರಣ ಪುಟದ ಮುದ್ರಣವನ್ನು ಡೌನ್‌ಲೋಡ್ ಮಾಡಿ ಮತ್ತು ತೆಗೆದುಕೊಳ್ಳಿ.
ನೀವೇನಾದರೂ, ಮೇಲಿನ ಪರೀಕ್ಷೆಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಈಗಿನಿಂದಲೇ ಅದಕ್ಕಾಗಿ ತಯಾರಿಯನ್ನು ಮಾಡಿಕೊಳ್ಳುವುದು ಅವಶ್ಯಕವಾಗಿದೆ . ಅಷ್ಟೇ ಅಲ್ಲದೆ, ಪರೀಕ್ಷೆಯ ಅಧಿಸೂಚನೆಗಳಿಗಾಗಿ ಪ್ರತಿದಿನ ಅಧಿಕೃತ ಜಾಲತಾಣಕ್ಕೆ ತೆರಳಿ ಪರಿಶೀಲಿಸಿ. ಹಾಗೆಯೇ ಈ ವರದಿಯನ್ನು ಎಲ್ಲರಿಗೂ ಶೇರ್ ಮಾಡಿ, ಧನ್ಯವಾದಗಳು.
ಇದನ್ನೂ ಓದಿ – SC/ST ವರ್ಗದವರಿಗೆ ಸಾಲ & ಸಬ್ಸಿಡಿ ಯೋಜನೆಗಳಿಗೆ ಅರ್ಜಿ ಆಹ್ವಾನ, ನಿಮ್ಮ ಅರ್ಜಿ ಹೀಗೆ ಸಲ್ಲಿಸಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group





