Picsart 25 08 24 23 28 52 153 scaled

ಕೇಂದ್ರದಿಂದ ₹1500/- ಸಹಾಯಧನ ಗರ್ಭಿಣಿ ಮಹಿಳೆಯರಿಗೆ, ಜನನಿ ಸುರಕ್ಷಾ ಯೋಜನೆ 2025

WhatsApp Group Telegram Group

ಆರೋಗ್ಯಕರ ತಾಯಿ – ಆರೋಗ್ಯಕರ ಸಮಾಜ: ಕರ್ನಾಟಕದಲ್ಲಿ JSY ಯೋಜನೆ ಬಡ ಕುಟುಂಬಗಳಿಗೆ ಆಶಾಕಿರಣ

ತಾಯಿ ಮತ್ತು ಶಿಶುವಿನ ಆರೋಗ್ಯವು (Mother and baby health) ಯಾವುದೇ ಸಮಾಜದ ಪ್ರಗತಿ, ಅಭಿವೃದ್ಧಿ ಹಾಗೂ ಭದ್ರತೆಯ ಮೂಲಸ್ತಂಭ. ಭಾರತದಲ್ಲಿ ಪ್ರತಿ ವರ್ಷ ಸಾವಿರಾರು ಮಹಿಳೆಯರು ಸುರಕ್ಷಿತ ಹೆರಿಗೆ ಸೇವೆಗಳ ಕೊರತೆಯಿಂದಾಗಿ ಆರೋಗ್ಯ ಸಮಸ್ಯೆಗಳನ್ನು (Health issues) ಎದುರಿಸುತ್ತಾರೆ. ನವಜಾತ ಶಿಶುಗಳ ಮರಣ ಪ್ರಮಾಣವು ಸಹ ಇನ್ನೂ ಸವಾಲಿನ ವಿಷಯವಾಗಿದೆ. ಈ ಹಿನ್ನೆಲೆಯಲ್ಲಿ, ಗರ್ಭಿಣಿ ಮಹಿಳೆಯರಿಗೆ ಆರ್ಥಿಕ ನೆರವು ನೀಡಿ, ಅವರನ್ನು ಆಸ್ಪತ್ರೆಗಳಲ್ಲಿ ಸುರಕ್ಷಿತ ಹೆರಿಗೆ ಮಾಡಿಸಲು ಪ್ರೋತ್ಸಾಹಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಜನನಿ ಸುರಕ್ಷಾ ಯೋಜನೆಯನ್ನು(Janani Suraksha Yojana – JSY)  ಜಾರಿಗೊಳಿಸಿದೆ. ಹಾಗಿದ್ದರೆ ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೌದು, ಭಾರತದಲ್ಲಿ ಪ್ರತಿವರ್ಷ ಲಕ್ಷಾಂತರ ಗರ್ಭಿಣಿ ಮಹಿಳೆಯರು (Pregnant Women’s) ಆರ್ಥಿಕ ಅಸಮರ್ಥತೆಯ ಕಾರಣದಿಂದಾಗಿ ಸೂಕ್ತವಾದ ವೈದ್ಯಕೀಯ ಆರೈಕೆಯಿಂದ ವಂಚಿತರಾಗುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಬಡ ಕುಟುಂಬಗಳಲ್ಲಿ ಹೆರಿಗೆ ಸಂದರ್ಭದಲ್ಲಿ ತಾಯಿ ಮತ್ತು ಶಿಶು ಮರಣ ಪ್ರಮಾಣವು (Maternal and infant mortality rate) ಇನ್ನೂ ಆತಂಕಕಾರಿಯಾಗಿದೆ. ತಾಯಂದಿರ ಆರೋಗ್ಯ ಕಾಪಾಡುವುದು ಕೇವಲ ಕುಟುಂಬದಷ್ಟೇ ಅಲ್ಲ, ಸಮಗ್ರ ಸಮಾಜ ಮತ್ತು ರಾಷ್ಟ್ರದ ಆರೋಗ್ಯದ ಬಲವರ್ಧನೆಗೂ ಅತಿ ಮುಖ್ಯ. “ಆರೋಗ್ಯಕರ ತಾಯಿ – ಆರೋಗ್ಯಕರ ಸಮಾಜ” ಎಂಬ ಮೂಲತತ್ವದ ಆಧಾರದ ಮೇಲೆ ಕೇಂದ್ರ ಸರ್ಕಾರವು ಜನನಿ ಸುರಕ್ಷಾ ಯೋಜನೆಯನ್ನು (Janani Suraksha Yojana – JSY)  ರೂಪಿಸಿದೆ.

2005ರಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್ (National Health Mission) ಅಡಿಯಲ್ಲಿ ಪ್ರಾರಂಭವಾದ ಈ ಯೋಜನೆ, ದೇಶದ ಎಲ್ಲಾ ರಾಜ್ಯಗಳಲ್ಲಿ ಹಂತ ಹಂತವಾಗಿ ವಿಸ್ತರಿಸಲ್ಪಟ್ಟಿದ್ದು, ವಿಶೇಷವಾಗಿ ಆರ್ಥಿಕವಾಗಿ ದುರ್ಬಲ ವರ್ಗದ ಮಹಿಳೆಯರಿಗೆ ಆಶಾಕಿರಣವಾಗಿದೆ. 2025ರ ವೇಳೆಗೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು (Central and state governments) ಸೇರಿ ಈ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿ ರೀತಿಯಲ್ಲಿ ಜಾರಿಗೊಳಿಸುತ್ತಿದ್ದು, ಕರ್ನಾಟಕದ ಗರ್ಭಿಣಿಯರು ಹೆರಿಗೆಗಾಗಿ ಆಸ್ಪತ್ರೆ ಆಯ್ಕೆ ಮಾಡಿದರೆ ಆರ್ಥಿಕ ನೆರವಿನೊಂದಿಗೆ ಹಲವಾರು ಆರೋಗ್ಯ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ.

ಜನನಿ ಸುರಕ್ಷಾ ಯೋಜನೆ ಎಂದರೇನು?:

ಜನನಿ ಸುರಕ್ಷಾ ಯೋಜನೆ (JSY) ಒಂದು ರಾಷ್ಟ್ರಮಟ್ಟದ ಆರೋಗ್ಯ ಕಾರ್ಯಕ್ರಮವಾಗಿದ್ದು, ಗರ್ಭಿಣಿ ತಾಯಂದಿರನ್ನು ಆಸ್ಪತ್ರೆಯಲ್ಲಿ ಸುರಕ್ಷಿತ ಹೆರಿಗೆ(Safe delivery) ಮಾಡಲು ಪ್ರೋತ್ಸಾಹಿಸುವುದು ಇದರ ಮುಖ್ಯ ಉದ್ದೇಶ.
ತಾಯಿ ಮತ್ತು ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡುವುದು.
ಗರ್ಭಿಣಿಯರಿಗೆ ಆರ್ಥಿಕ ನೆರವು ಒದಗಿಸುವುದು.
ಗ್ರಾಮೀಣ ಮತ್ತು ನಗರ ಪ್ರದೇಶದ ಬಡ ಕುಟುಂಬಗಳಿಗೂ ಸಮಾನವಾಗಿ ಆರೋಗ್ಯ ಸೌಲಭ್ಯ (Health facilities) ಒದಗಿಸುವುದು.
ಇದರ ಮೂಲಕ ಬಡ ಕುಟುಂಬದ ಮಹಿಳೆಯರು ಖರ್ಚಿನ ಚಿಂತೆಯಿಲ್ಲದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಅಥವಾ ಮಾನ್ಯತೆ ಪಡೆದ ಖಾಸಗಿ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಿಕೊಳ್ಳಬಹುದು.

ಯೋಜನೆಯ ಮುಖ್ಯ ಅಂಶಗಳು (Important elements) ಹೀಗಿವೆ:

ಆರ್ಥಿಕ ನೆರವು:
ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗುವ ಮಹಿಳೆಯರಿಗೆ ಹಣಕಾಸಿನ ನೆರವು (Finance help) ನೀಡಲಾಗುತ್ತದೆ.
ರಾಜ್ಯವಾರು ವರ್ಗೀಕರಣ:
ಕಡಿಮೆ ಕಾರ್ಯಕ್ಷಮತೆಯ ರಾಜ್ಯಗಳು (LPS) – ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ, ಅಸ್ಸಾಂ, ಇತ್ಯಾದಿ.
ಹೆಚ್ಚು ಕಾರ್ಯಕ್ಷಮತೆಯ ರಾಜ್ಯಗಳು (HPS) – ಕರ್ನಾಟಕ ಸೇರಿ ಉಳಿದ ರಾಜ್ಯಗಳು.
ಆಸ್ಪತ್ರೆಯ ಹೆರಿಗೆಗೆ ಪ್ರೋತ್ಸಾಹ:
ಮನೆ ಹೆರಿಗೆಗಿಂತ ಸುರಕ್ಷಿತ ಆಸ್ಪತ್ರೆ ಹೆರಿಗೆಗೆ ಆದ್ಯತೆ.

ಕರ್ನಾಟಕದಲ್ಲಿ ಜನನಿ ಸುರಕ್ಷಾ ಯೋಜನೆ(Janani Suraksha Yojana in Karnataka) 2025:

ಕರ್ನಾಟಕವು ಹೆಚ್ಚು ಕಾರ್ಯಕ್ಷಮತೆಯ ರಾಜ್ಯಗಳ ಪೈಕಿ ಒಂದಾಗಿ ಪರಿಗಣಿಸಲ್ಪಟ್ಟಿದೆ. ಇಲ್ಲಿ JSY ಯೋಜನೆ ಆರೋಗ್ಯ ಕರ್ನಾಟಕ ಯೋಜನೆಗೆ ಸಂಯೋಜಿತವಾಗಿದೆ.  ಯೋಜನೆಯ ಉದ್ದೇಶ ತಾಯಿ ಮತ್ತು ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡಿ, ಗ್ರಾಮೀಣ ಹಾಗೂ ನಗರ ಪ್ರದೇಶಗಳ ಬಡ ಮಹಿಳೆಯರಿಗೆ ಸುರಕ್ಷಿತ ಹೆರಿಗೆ(Safe childbirth for poor women in rural and urban areas) ಮಾಡಲು ನೆರವಾಗುವುದು. ಫಲಾನುಭವಿಗಳು ತಮ್ಮ ಆರೋಗ್ಯ ಕರ್ನಾಟಕ ಕಾರ್ಡ್ ಮೂಲಕವೇ ಸೇವೆ ಪಡೆಯಬಹುದು.

ಸೌಲಭ್ಯಗಳು Karnataka JSY 2025,
ಬಡ ಕುಟುಂಬಗಳ ಗರ್ಭಿಣಿಯರಿಗೆ ಆಸ್ಪತ್ರೆ ಹೆರಿಗೆಗೆ ಆರ್ಥಿಕ ನೆರವು.
ತಾಯಿ ಮತ್ತು ಶಿಶುವಿನ ಆರೋಗ್ಯ ಕಾಪಾಡುವುದು.
ಮನೆಯಲ್ಲಿ ಹೆರಿಗೆಯಾದರೆ: ₹500.
ನಗರ ಆಸ್ಪತ್ರೆ ಹೆರಿಗೆ: ₹600.
ಗ್ರಾಮೀಣ ಆಸ್ಪತ್ರೆ ಹೆರಿಗೆ: ₹700.
ಖಾಸಗಿ ಆಸ್ಪತ್ರೆಯಲ್ಲಿ ಸಿಜೇರಿಯನ್ ಶಸ್ತ್ರಚಿಕಿತ್ಸೆ: ₹1500.
ಮಗುವಿನ ಜನನವನ್ನು ಕಡ್ಡಾಯವಾಗಿ ನೋಂದಣಿ ಮಾಡಿಸುವುದು.

ಜನನಿ ಶಿಶು ಸುರಕ್ಷಾ ಕಾರ್ಯಕ್ರಮ (JSSK):

JSYಯ ಅಂಗವಾದ JSSK ಅಡಿಯಲ್ಲಿ, ತಾಯಿ ಮತ್ತು ನವಜಾತ ಶಿಶುಗಳಿಗೆ ಸಂಪೂರ್ಣ ಉಚಿತ ಆರೋಗ್ಯ ಸೇವೆಗಳು ಒದಗಿಸಲಾಗುತ್ತವೆ.
ಗರ್ಭಿಣಿಯರಿಗೆ: ಉಚಿತ ಹೆರಿಗೆ, ಔಷಧಿ, ಪರೀಕ್ಷೆಗಳು, ಆಹಾರ, ಆಸ್ಪತ್ರೆಯ ಶುಲ್ಕಗಳಿಂದ ವಿನಾಯಿತಿ.
ನವಜಾತ ಶಿಶುಗಳಿಗೆ: ಜನನದ ನಂತರ 30 ದಿನಗಳವರೆಗೆ ಉಚಿತ ಚಿಕಿತ್ಸೆ, ಔಷಧಿ, ರಕ್ತ, ಪರೀಕ್ಷೆಗಳು.
ಉಚಿತ ಸಾರಿಗೆ(Free transfort) : ಆರೋಗ್ಯ ಸಂಸ್ಥೆಗೆ ಹೋಗಲು ಮತ್ತು ಮನೆಗೆ ಹಿಂತಿರುಗಲು ಸರ್ಕಾರದಿಂದ ಉಚಿತ ವಾಹನ ವ್ಯವಸ್ಥೆ.

ಆಶಾ ಕಾರ್ಯಕರ್ತೆಯರ ಪಾತ್ರ ಏನು?:

ಜನನಿ ಸುರಕ್ಷಾ ಯೋಜನೆಯ ಯಶಸ್ಸಿನಲ್ಲಿ ಆಶಾ ಕಾರ್ಯಕರ್ತೆಯರು(ASHA workers) ಪ್ರಮುಖ ಸೇತುವೆಯಂತೆ ಕಾರ್ಯನಿರ್ವಹಿಸುತ್ತಾರೆ.
ಗರ್ಭಿಣಿಯರನ್ನು ಗುರುತಿಸಿ ನೋಂದಣಿ ಮಾಡಿಸುವುದು.
ದಾಖಲೆಗಳನ್ನು ಒದಗಿಸಲು ಸಹಾಯ ಮಾಡುವುದು.
ಹೆರಿಗೆಯ ನಂತರ ತಾಯಿ-ಮಗುವಿನ ಆರೈಕೆಯನ್ನು ಖಚಿತಪಡಿಸಿಕೊಳ್ಳುವುದು.
ಲಸಿಕೆ, ಪೌಷ್ಠಿಕತೆ ಹಾಗೂ ಆರೋಗ್ಯ ಮಾರ್ಗದರ್ಶನ ನೀಡುವುದು.

ಅರ್ಹತೆ ಮತ್ತು ಅರ್ಜಿ ಸಲ್ಲಿಸುವ ವಿಧಾನ:

ಅರ್ಹತೆ:
ಬಿಪಿಎಲ್ (BPL) ಕುಟುಂಬಗಳ ಗರ್ಭಿಣಿಯರು.
ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಮಹಿಳೆಯರು.
19 ವರ್ಷಕ್ಕಿಂತ ಮೇಲ್ಪಟ್ಟ ಗರ್ಭಿಣಿಯರು.
ಸರ್ಕಾರಿ ಅಥವಾ ಮಾನ್ಯತೆ ಪಡೆದ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡುವವರು.

ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು (Documents) ಯಾವುವು?:

ಆಧಾರ್ ಕಾರ್ಡ್
ಬಿಪಿಎಲ್ ರೇಷನ್ ಕಾರ್ಡ್
ತಾಯಿ ಕಾರ್ಡ್ (ಆರೋಗ್ಯ ಇಲಾಖೆ ನೀಡುವುದು)
ಜಾತಿ ಪ್ರಮಾಣಪತ್ರ (ಅನ್ವಯಿಸಿದರೆ)
ಆರೋಗ್ಯ ಕರ್ನಾಟಕ ಕಾರ್ಡ್
ನಿವಾಸ ದೃಢೀಕರಣ

ಅರ್ಜಿ ಸಲ್ಲಿಸುವುದು ಹೇಗೆ(How to apply application)?:

ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಅಥವಾ ಸ್ಥಳೀಯ ಆಶಾ ಕಾರ್ಯಕರ್ತೆಯರ ಮೂಲಕ ಅರ್ಜಿ ಸಲ್ಲಿಸಬಹುದು.
ಯಾವುದೇ ಶುಲ್ಕವಿಲ್ಲದೆ ಅರ್ಜಿ ಸಲ್ಲಿಸಬಹುದು.
ಹಣಕಾಸಿನ ನೆರವು ಸಾಮಾನ್ಯವಾಗಿ ಹೆರಿಗೆಯ ನಂತರ ಆಸ್ಪತ್ರೆಯಲ್ಲಿಯೇ ನೇರವಾಗಿ ವಿತರಿಸಲಾಗುತ್ತದೆ.

ಒಟ್ಟಾರೆಯಾಗಿ, ಜನನಿ ಸುರಕ್ಷಾ ಯೋಜನೆ 2025 ಕರ್ನಾಟಕದ ಬಡ ಹಾಗೂ ಹಿಂದುಳಿದ ವರ್ಗದ ಗರ್ಭಿಣಿಯರಿಗೆ ಆಶೀರ್ವಾದದಂತಾಗಿದೆ. ಆಸ್ಪತ್ರೆ ಹೆರಿಗೆಗೆ ಆರ್ಥಿಕ ನೆರವು(Economic help) ನೀಡುವುದರೊಂದಿಗೆ ತಾಯಿ ಮತ್ತು ಶಿಶುವಿನ ಆರೋಗ್ಯವನ್ನು ಕಾಪಾಡುವ ಗುರಿ ಹೊಂದಿರುವ ಈ ಯೋಜನೆ, ಸಮಾಜದ ಆರೋಗ್ಯ ಸೂಚ್ಯಂಕವನ್ನು ಸುಧಾರಿಸುವ ದಿಟ್ಟ ಹೆಜ್ಜೆಯಾಗಿದೆ. ಇದು ಕೇವಲ ಆರ್ಥಿಕ ನೆರವು ನೀಡುವ ಯೋಜನೆಯಲ್ಲ, ಬದಲಾಗಿ ತಾಯಿ ಮತ್ತು ಮಗು ಸುರಕ್ಷಿತವಾಗಿರುವ ಸಮಾಜವನ್ನು ಕಟ್ಟುವ ಒಂದು ಸಾಮಾಜಿಕ ಕ್ರಾಂತಿ ಎಂದು ಹೇಳಬಹುದು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories