ಮನೇಲಿ ಪ್ರತಿದಿನ ಪಾಲಿಶ್ ಅಕ್ಕಿ ಊಟ ಮಾಡ್ತೀರಾ.? ಶಾಕಿಂಗ್ ಅಂಶ ಇಲ್ಲಿದೆ, ತಿಳಿದುಕೊಳ್ಳಿ

WhatsApp Image 2025 05 02 at 12.45.04 AM 1

WhatsApp Group Telegram Group

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹೃದಯಾಘಾತಗಳು ಸಣ್ಣ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಸಾಮಾನ್ಯ ರೋಗವಾಗಿ ಮಾರ್ಪಟ್ಟಿದೆ. ವಿಶೇಷವಾಗಿ ಬಾಲಕ ಬಾಲಕಿಯರಲ್ಲಿ ಹೃದಯ ಸಮಸ್ಯೆಗಳು ಹೆಚ್ಚಾಗುತ್ತಿರುವ ಕಾರಣಗಳನ್ನು ವೈದ್ಯಕೀಯ ತಜ್ಞರು ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ. ಮನೆಗಳಲ್ಲಿ ಬಳಸುವ ಪಾಲಿಷ್ ಮಾಡಿದ ಬಿಳಿ ಅಕ್ಕಿಯ ಸೇವನೆಯೇ ಈ ಹೃದಯ ರೋಗಗಳ ಹಿಂದಿನ ಪ್ರಮುಖ ಕಾರಣವೆಂದು ತಜ್ಞರು ಆಘಾತಕಾರಿ ಸತ್ಯವನ್ನು ಬಹಿರಂಗಪಡಿಸಿದ್ದಾರೆ.

ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಆರೋಗ್ಯಕ್ಕೆ ಹಾನಿಕಾರಕವಾದ ಹಲವಾರು ಪದಾರ್ಥಗಳನ್ನು ನಾವು ಅನಿವಾರ್ಯವಾಗಿ ಸೇವಿಸುತ್ತಿದ್ದೇವೆ. ಇದರಲ್ಲಿ ಅಕ್ಕಿಯು ಪ್ರತಿ ಮನೆಯಲ್ಲಿ ದಿನನಿತ್ಯ ಬಳಕೆಯಾಗುವ ಪ್ರಮುಖ ಆಹಾರವಾಗಿದೆ. ಬಿಳಿ ಅಕ್ಕಿಯನ್ನು ಬೇರೆ ಬೇರೆ ರೀತಿಯಲ್ಲಿ ಬಳಸಿ ಅಡುಗೆ ಮಾಡಿ ಸೇವಿಸಲಾಗುತ್ತದೆ. ಆದರೆ ಇತ್ತೀಚೆಗೆ ಈ ಪಾಲಿಷ್ ಮಾಡಿದ ಬಿಳಿ ಅಕ್ಕಿಯ ಬಳಕೆದಾರರು ಹೆಚ್ಚಿನ ಎಚ್ಚರಿಕೆ ವಹಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ಏಕೆಂದರೆ ಹೃದಯ ಸಂಬಂಧಿ ರೋಗಗಳಿಗೆ ಈ ಪಾಲಿಷ್ ಮಾಡಿದ ಬಿಳಿ ಅಕ್ಕಿಯೇ ಮೂಲ ಕಾರಣವೆಂದು ವೈದ್ಯಕೀಯ ತಜ್ಞರು ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸಣ್ಣ ಮಕ್ಕಳಲ್ಲೂ ಸಹ ಹೃದಯ ಸಂಬಂಧಿ ರೋಗಗಳು ಕಾಣಿಸಿಕೊಳ್ಳುತ್ತಿವೆ. ಈ ಸಮಸ್ಯೆಗೆ ಕಾರಣವೇನು ಎಂಬುದನ್ನು ಜಯದೇವ ಹೃದಯ ಸಂಸ್ಥೆಯ ವೈದ್ಯರು ತಮ್ಮ ಅಧ್ಯಯನದ ಮೂಲಕ ಬಹಿರಂಗಪಡಿಸಿದ್ದಾರೆ. ಸುಮಾರು 400 ಮಕ್ಕಳ ಮೇಲೆ ನಡೆಸಿದ ಸಂಶೋಧನೆಯಲ್ಲಿ ಕಂಡುಬಂದಿದ್ದು, ಗರ್ಭಿಣಿಯರು ಮತ್ತು ಮಕ್ಕಳು ಪಾಲಿಷ್ ಮಾಡಿದ ಬಿಳಿ ಅಕ್ಕಿಯನ್ನು ಸೇವಿಸಿದ್ದರಿಂದಲೇ ಹೃದಯ ಸಂಬಂಧಿ ತೊಂದರೆಗಳಿಗೆ ಒಳಗಾಗುತ್ತಿದ್ದಾರೆ ಎಂಬ ಆತಂಕಜನಕ ಸತ್ಯ ಬೆಳಕಿಗೆ ಬಂದಿದೆ. ಈ ಸಂಶೋಧನೆಯು ಆರೋಗ್ಯ ಸಚೇತನತೆಗೆ ಹೊಸ ಆಯಾಮವನ್ನು ಸೇರಿಸಿದೆ ಎಂದು ಹೃದಯರೋಗ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!