Indian Railway : ಭಾರತೀಯ ರೈಲ್ವೆ ಇಲಾಖೆಯು ಜೆನರಲ್ ಟಿಕೆಟಿನ ನಿಯಮಗಳನ್ನು ನವೀಕರಿಸಿದೆ.
Indian Railway : ಭಾರತೀಯ ರೈಲ್ವೆ ಜೆನರಲ್ ಟಿಕೆಟ್ ಪ್ರಯಾಣಿಕರಿಗೆ ಸಂಬಂಧಿಸಿದ ನಿಯಮಗಳನ್ನು ಪರಿಷ್ಕರಿಸಲು ಯೋಚಿಸುತ್ತಿದ್ದು, ಈ ಕ್ರಮವು ಕೋಟ್ಯಂತರ ದೈನಂದಿಕ ಪ್ರಯಾಣಿಕರ ಮೇಲೆ ಪರಿಣಾಮ ಬೀರಲಿದೆ. ಇತ್ತೀಚಿಗೆ ನವದೆಹಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಜನದಟ್ಟಣೆ ಘಟನೆ, ವಿಶೇಷವಾಗಿ ಹತ್ತನೆಂಟು ಜನರ ಸಾವಿಗೆ ಕಾರಣವಾದ ಕಲ್ತುಳಿತದ ಘಟನೆಯ ನಂತರ ಈ ಬದಲಾವಣೆಯನ್ನು ಪರಿಗಣಿಸಲಾಗುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಭಾರತೀಯ ರೈಲ್ವೆ ಇಲಾಖೆ ಹೊಸ ನಿಯಮಗಳು :
- ರೈಲು ನಿರ್ದಿಷ್ಟ ಜೆನರಲ್ ಟಿಕೆಟಗಳು: ಪ್ರಯಾಣಿಕರ ಟಿಕೇಟಿನಲ್ಲಿ ರೈಲಿನ ಹೆಸರು ಮತ್ತು ರೈಲಿನ ಸಂಖ್ಯೆಯನ್ನು ಉಲ್ಲೇಖಿಸಲಾಗುತ್ತದೆ. ಪ್ರಯಾಣಿಕರು ಟಿಕೆಟಿನಲ್ಲಿ ಗೊತ್ತು ಪಡಿಸಿದ ರೈಲಿನಲ್ಲೇ ಪ್ರಯಾಣಿಸಬೇಕು. ಇದರಿಂದಾಗಿ ಪ್ರಯಾಣಿಕರು ರೈಲನ್ನು ಬದಲಾಯಿಸುವುದನ್ನು ನಿರ್ಬಂಧಸಬಹುದು.
- ಜೆನರಲ್ ಟಿಕೆಟ್ ಮಾನ್ಯತೆಯ ಅವಧಿ: ಜೆನರಲ್ ಟಿಕೆಟಗಳಿಗೆ ನಿರ್ದಿಷ್ಟ ಸಮಯಾವಧಿಯ ಮಾನ್ಯತೆಯನ್ನು ಜಾರಿಗೆ ತ೦ದಿದೆ. ಟಿಕೆಟ್ ಪಡೆದುಕೊಂಡ ಮೂರು ಗಂಟೆಗಳವರೆಗೆ ಮಾತ್ರ ಮಾನ್ಯತೆ. ಪ್ರಯಾಣಿಕರು ತಮ್ಮ ಟಿಕೆಟ್ ಅನ್ನು ಖರೀದಿಸಿದ ಮೂರು ಗಂಟೆಗಳ ಒಳಗೆ ಬಳಸಬೇಕು. ಈ ಸಮಯದೊಳಗೆ ಬಳಸದಿದ್ದರೆ, ಟಿಕೆಟ್ ಅಮಾನ್ಯವಾಗುತ್ತದೆ.

ಭಾರತೀಯ ರೈಲ್ವೆ ಇಲಾಖೆ ಹೊಸ ನಿಯಮಗಳ ಮುಖ್ಯ ಉದ್ದೇಶ :
ಭಾರತೀಯ ರೈಲ್ವೆ ಇಲಾಖೆಯು ಈ ನವೀಕರಣಗಳನ್ನು ಜನಸಂದಣಿಯ ಉತ್ತಮ ನಿರ್ವಹಣೆಗೆ, ಅತ್ಯುನತ ಟಿಕೆಟ್ ಸೌಲಭ್ಯಗಳಿಗೆ, ಉತ್ತಮ ಕಾರ್ಯಕಾರಿತ್ವವನ್ನು ಒದಗಿಸಲು, ಒಟ್ಟಾರೆ ಪ್ರಯಾಣಿಕರ ಅನುಭವವನ್ನು ಸುರಕ್ಷಿತ ಮತ್ತು ಸುಗಮವಾಗಿಸುವ ಗುರಿಯನ್ನಿಟ್ಟುಕೊ೦ಡು ಜಾರಿ ಮಾಡಲಾಗಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.