ಬೆಂಗಳೂರು (ಜುಲೈ 23): ನಿಮ್ಮ ದುಬಾರಿ ಆಪಲ್ ಐಫೋನ್ ಬ್ಯಾಟರಿ ಒಂದು ದಿನಕ್ಕೂ ಬಾಳಿಕೆ ಬರದಿದ್ದರೆ ಮತ್ತು ಪದೇ ಪದೇ ಚಾರ್ಜ್ ಮಾಡಬೇಕಾದರೆ, ಫೋನ್ ಸೆಟ್ಟಿಂಗ್ಗಳಲ್ಲಿ ಸಮಸ್ಯೆ ಇರಬಹುದು. ಹೊಸ ಐಫೋನ್ ಅಥವಾ ಹಳೆಯದೇ ಆಗಿರಲಿ, ಕೆಲವು ಡೀಫಾಲ್ಟ್ ಸೆಟ್ಟಿಂಗ್ಗಳು ಬ್ಯಾಟರಿಯನ್ನು ಗಮನಿಸದೇ ಹೀರಿಕೊಳ್ಳುತ್ತವೆ.
ನೀವು ಪ್ರತಿದಿನ ಐಫೋನ್ ಚಾರ್ಜ್ ಮಾಡುತ್ತಿದ್ದರೆ, ರೆಡ್ಡಿಟ್ ಬಳಕೆದಾರರ ಸಲಹೆಗಳನ್ನು ಅನುಸರಿಸಬಹುದು. ಕೆಲವು ಸೆಟ್ಟಿಂಗ್ಗಳನ್ನು ಬದಲಾಯಿಸುವ ಮೂಲಕ ಬ್ಯಾಟರಿ ಹೆಚ್ಚಿಸಬಹುದು. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೋಮ್ ಪಾಡ್ ಸೆಟ್ಟಿಂಗ್
ಮನೆ ಅಥವಾ ಕಚೇರಿಯಲ್ಲಿ ಆಪಲ್ ಹೋಮ್ ಪಾಡ್ ಬಳಸುವವರಿಗೆ ಈ ಸೆಟ್ಟಿಂಗ್ ಉಪಯುಕ್ತ. ಆದರೆ, ಹೋಮ್ ಪಾಡ್ ಸ್ಪೀಕರ್ಗಳಿಗೆ ಐಫೋನ್ ಸಂಪರ್ಕಿಸಲು ಸದಾ ಸಂವೇದಕಗಳನ್ನು ಬಳಸುವುದರಿಂದ ಬ್ಯಾಟರಿ ತ್ವರಿತವಾಗಿ ಖಾಲಿಯಾಗುತ್ತದೆ. ಬಳಕೆಯಿಲ್ಲದಾಗ ಈ ಸೆಟ್ಟಿಂಗ್ ಆಫ್ ಮಾಡಿ.
ಕಂಟಿನ್ಯೂಟಿ ಕ್ಯಾಮೆರಾ
ಈ ವೈಶಿಷ್ಟ್ಯ ಐಫೋನ್ ಅನ್ನು ಮ್ಯಾಕ್‌ನ ವೆಬ್‌ಕ್ಯಾಮ್ ಆಗಿ ಬಳಸಲು ಅನುವು ಮಾಡಿಕೊಡುತ್ತದೆ. ಆದರೆ, ಬಳಕೆಯಿಲ್ಲದಿದ್ದರೂ ಹಿನ್ನೆಲೆಯಲ್ಲಿ ಮ್ಯಾಕ್ ಸಿಗ್ನಲ್ ಸ್ಕ್ಯಾನ್ ಮಾಡುವುದರಿಂದ ಬ್ಯಾಟರಿ ತಗ್ಗುತ್ತದೆ. ಬಳಕೆಯಿಲ್ಲದಾಗ ಇದನ್ನು ಆಫ್ ಮಾಡಲು ಸೂಚಿಸಲಾಗುತ್ತದೆ.
ಹ್ಯಾಂಡ್‌ಆಫ್ ವೈಶಿಷ್ಟ್ಯ
ಐಫೋನ್, ಮ್ಯಾಕ್ ಅಥವಾ ಐಪ್ಯಾಡ್‌ಗಳ ನಡುವೆ ಅಪ್ಲಿಕೇಶನ್ಗಳನ್ನು ಮುಂದುವರಿಸಲು ಈ ಸೆಟ್ಟಿಂಗ್ ಸಹಾಯಕ. ಆದರೆ, ಐಫೋನ್ ಮಾತ್ರ ಬಳಸುವವರಿಗೆ ಇದು ಅನಾವಶ್ಯಕ. ಬ್ಯಾಟರಿ ಉಳಿಸಲು ಇದನ್ನು ಆಫ್ ಮಾಡಬಹುದು.
ಏರ್‌ಪ್ಲೇ ರಿಸೀವರ್
ಈ ವೈಶಿಷ್ಟ್ಯದಿಂದ ಐಫೋನ್‌ನಿಂದ ಏರ್ ವಿಷನ್ ಪ್ರೊ ವಿಷಯವನ್ನು ಸ್ಟ್ರೀಮ್ ಮಾಡಬಹುದು. ಆದರೆ, ಏರ್ ವಿಷನ್ ಪ್ರೊ ದುಬಾರಿಯಾದ್ದರಿಂದ ಬಹುತೇಕ ಬಳಕೆದಾರರು ಇದನ್ನು ಬಳಸುವುದಿಲ್ಲ. ಅನಗತ್ಯ ಬ್ಯಾಟರಿ ಬಳಕೆ ತಪ್ಪಿಸಲು ಈ ಸೆಟ್ಟಿಂಗ್ ಆಫ್ ಮಾಡಿ.
ಈ ಸರಳ ಸೆಟ್ಟಿಂಗ್ ಬದಲಾವಣೆಗಳಿಂದ ಐಫೋನ್ ಬ್ಯಾಟರಿ ಗಮನಾರ್ಹವಾಗಿ ಹೆಚ್ಚಿಸಬಹುದು!
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.