ನಮಸ್ಕಾರ ಓದುಗರಿಗೆ, ಇವತ್ತಿನ ವರದಿಯಲ್ಲಿ Apple ತನ್ನ iPhone 15 ಸರಣಿಯನ್ನು ಸೆಪ್ಟೆಂಬರ್ 2023 ರಲ್ಲಿ ಬಿಡುಗಡೆ ಮಾಡುವ ನಿರೀಕ್ಷೆ ಇರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಮುಂಬರುವ ಐಫೋನ್‌ಗಳು ಹೇಗೆ ಕಾಣುತ್ತವೆ, ಸ್ಪೆಕ್ಸ್ ಮತ್ತು ಹೆಚ್ಚಿನವುಗಳ ಬಗ್ಗೆ ಊಹಾಪೋಹಗಳಿಂದ ಕೂಡಿವೆ, ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ನಮ್ಮ ಲೇಖನವನ್ನೂ ಸಂಪೂರ್ಣವಾಗಿ ಓದಿ ತಿಳಿಯಿರಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಹೌದು, ಈ ಮೇಲೆ ಹೇಳಿದಂತೆ Apple ನಿಂದ iPhone 15 ಸರಣಿಯನ್ನು ಈ ವರ್ಷ ಸೆಪ್ಟೆಂಬರ್‌ನಲ್ಲಿ ಕ್ಯಾಲಿಫೋರ್ನಿಯಾ ಮೂಲದ ಟೆಕ್ ದೈತ್ಯ ಅನಾವರಣಗೊಳಿಸುವ ನಿರೀಕ್ಷೆ ಕಂಡು ಬರುತ್ತಿದೆ. ಐಫೋನ್ ಸರಣಿಯು ಅದರ ಐಫೋನ್ 15, ಐಫೋನ್ 15 ಪ್ಲಸ್, ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ಸೇರಿದಂತೆ ನಾಲ್ಕು ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿರುತ್ತದೆ. ಕಂಪನಿಯು ಕೂಡಾ ಇನ್ನೂ ಈ ಸ್ಮಾರ್ಟ್‌ಫೋನ್‌ಗಳ ಕುರಿತು ಯಾವುದೇ ವಿವರಗಳನ್ನು ದೃಢೀಕರಿಸಿಲ್ಲ ಆದರೆ ಇತ್ತೀಚಿನ ಸೋರಿಕೆಯ ಸುದ್ದಿಯ ಪ್ರಕಾರ ಐಫೋನ್ 15 ಪ್ರೊನ ಬಣ್ಣ ಆಯ್ಕೆಗಳಲ್ಲಿ ಒಂದನ್ನು ಬಹಿರಂಗಪಡಿಸಿದೆ.
ಹೌದು, ಐಫೋನ್ ಸ್ಮಾರ್ಟ್‌ಫೋನ್ ಹೊಸ ಕಡು ನೀಲಿ ಬಣ್ಣದ ಛಾಯೆಯಲ್ಲಿ ಬರಲಿದೆ ಎಂದು ತಿಳಿದು ಬಂದಿದೆ.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ಮುಂಬರುವ iPhone 15 Pro ಒಂದು ವಿಶಿಷ್ಟವಾದ ಗಾಢ ನೀಲಿ ಬಣ್ಣದಲ್ಲಿ ಬರಲಿದೆ ಎಂದು ವರದಿಯಾಗಿದೆ.
ಇದು ಬೂದುಬಣ್ಣದ ಟೋನ್‌ನಲ್ಲಿ ಕಂಡುಬರುತ್ತದೆ.
ಐಫೋನ್ 15 ಪ್ರೊನ ವದಂತಿಯ ನೀಲಿ ಬಣ್ಣವನ್ನು ಎಂದು ಇನ್ನೂ ಅಧಿಕೃತವಾಗಿ ದೃಢೀಕರಿಸಲಾಗಿಲ್ಲ ಎಂದು ತಿಳಿಸಲಾಗಿದೆ.
ಇದು ಕೇವಲ ಪರೀಕ್ಷಾ ಕಾನ್ಫಿಗರೇಶನ್ ಆಗಿರಬಹುದು ಎಂದು ಊಹಿಸಲಾಗಿದೆ.
ಹೊಸ ಟೈಟಾನಿಯಂ ವಸ್ತುವಿನ ಮೇಲೆ PVD ಲೇಪನದ ಬಾಳಿಕೆ ಪರೀಕ್ಷಿಸಲು ಸೋರಿಕೆಯಾದ ಬಣ್ಣವನ್ನು ಮೂಲಮಾದರಿಯಾಗಿ ಬಳಸಲಾಗುತ್ತದೆ ಎಂದು ಹೇಳಲಾಗುತ್ತದೆ.
ಹೆಚ್ಚುವರಿಯಾಗಿ, ಫೋನ್‌ನ ಇತರ ಬಣ್ಣ ಆಯ್ಕೆಗಳು ಸಿಲ್ವರ್(silver), ಸ್ಪೇಸ್ ಗ್ರೇ/ಸ್ಪೇಸ್ ಬ್ಲ್ಯಾಕ್(space grey/space black) ಮತ್ತು ಟೈಟಾನಿಯಂ ಗ್ರೇ (Titanium grey)ಶೇಡ್ ಅನ್ನು ಒಳಗೊಂಡಿರಬಹುದು.
ಇದರ ಜೊತೆಗೆ ಸೋರಿಕೆಯಾದ ಸುದ್ದಿಯಲ್ಲಿರುವ ರೆಂಡರ್‌ಗಳು ಹೊಸ ಟೈಟಾನಿಯಂ ವಸ್ತುವಿನ ಬಗ್ಗೆ ಸುಳಿವು ನೀಡುವ ಬ್ರಷ್ಡ್ ಫಿನಿಶ್‌ನೊಂದಿಗೆ ಸ್ಮಾರ್ಟ್‌ಫೋನ್ ಅನ್ನು ತೋರಿಸುತ್ತಿದ್ದಾರೆ.
ಇವೆಲ್ಲವನ್ನೂ ಹೊರತು ಮಾಡಿ, ಐಫೋನ್ 15 ಪ್ರೊ, ಐಫೋನ್ 14 ಪ್ರೊ ವಿನ್ಯಾಸವನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ಹಿಂಭಾಗದಲ್ಲಿ ವಾಲ್ಯೂಮ್ ಕಂಟ್ರೋಲರ್‌ಗಳಿಗಾಗಿ ಎರಡು-ಬಟನ್ ವಿನ್ಯಾಸವನ್ನು ತೋರಿಸಲಾಗಿದೆ, ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸಂವೇದಕ ಮತ್ತು LED flash ಹೊಂದಿರುವ ಒಂದೇ ರೀತಿಯ ಕ್ಯಾಮೆರಾ ಮಾಡ್ಯೂಲ್ ಹೊಂದಿರಬಹುದು.
ಮುಂಬರುವ ಐಫೋನ್ 15 ಪ್ರೊ ಮ್ಯಾಕ್ಸ್ ಅನ್ನು ಬಿಡುಗಡೆಯ ಸಮಯದಲ್ಲಿ ಐಫೋನ್ 14 ಪ್ರೊ ಮ್ಯಾಕ್ಸ್‌ಗಿಂತ ಹೆಚ್ಚಿನ ಬೆಲೆಗೆ ನೀಡಲಾಗುವುದು ಎಂದು ತಿಳಿದು ಬಂದಿದೆ.
ಐಫೋನ್ 15 ಪ್ರೊ ಎರಡೂ ಮಾದರಿಗಳಿಗೆ ಹೆಚ್ಚಿನ ಬೆಲೆ ನೀಡಲಾಗುವುದು ಎಂದು ನಿಗದಿಪಡಿಸಲಾಗಿತ್ತು. ಈಗ ನಿರ್ದಿಷ್ಟವಾಗಿ ಪ್ರೊ ಮ್ಯಾಕ್ಸ್ ಮಾದರಿಯನ್ನು ಹೆಚ್ಚಿನ ಬೆಲೆಗೆ ದೊರೆಯಬಹುದು ಎಂದು ಸೂಚಿಸಿದ್ದಾರೆ.
ನೀವೇನಾದರೂ ಐ ಫೋನ್ 15 ಗೆ ಕಾಯುತ್ತಿದ್ದರೆ ಅದರ ಕುರಿತಾದ ಕೆಲವು ಮಾಹಿತಿಗಳನ್ನು ತಿಳಿದುಕೊಳ್ಳಲು ಈ ಲೇಖನವನ್ನು ನಿಮಗೆ ಉಪಯುಕ್ತವಾಗುತ್ತದೆ. ಇಂತಹ ಉತ್ತಮವಾದ ಮಾಹಿತಿ ಕುರಿತು ಸುದ್ದಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card
| ಪ್ರಮುಖ ಲಿಂಕುಗಳು |
| ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್ |
Download App |
| ಟೆಲಿಗ್ರಾಂ ಚಾನೆಲ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ವಾಟ್ಸಪ್ ಗ್ರೂಪ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group







