ರಾಜ್ಯದ ಮನೆ-ಅಂಗಡಿಗಳ ಸ್ಮಾರ್ಟ್ ವಿದ್ಯುತ್‌ ಮೀಟರ್‌ ಅಳವಡಿಕೆಗೆ ಸರ್ಕಾರದ ನಿರ್ಧಾರ – ಇಲ್ಲಿದೆ ವಿವರ 

Picsart 25 06 12 18 43 23 723

WhatsApp Group Telegram Group

ರಾಜ್ಯದ ಮನೆ-ಅಂಗಡಿಗಳ ವಿದ್ಯುತ್‌ ಮೀಟರ್‌ಗಳಲ್ಲಿ ಹೊಸ ಯುಗಕ್ಕೆ ಶುಭಾರಂಭ.! ಸ್ಮಾರ್ಟ್ ಮೀಟರ್(Smart meter) ಜಾರಿಯತ್ತ ಮುನ್ನುಗ್ಗಿದ ಸರ್ಕಾರ

ಇತ್ತೀಚಿನ ದಿನಗಳಲ್ಲಿ ತಾಂತ್ರಿಕ ನವೋನ್ನತಿಯು ಸಾರ್ವಜನಿಕ ಸೇವೆಗಳ ಎಲ್ಲಾ ಕ್ಷೇತ್ರಗಳಲ್ಲಿ ಬೆಳವಣಿಗೆಗೆ ಕಾರಣವಾಗುತ್ತಿದೆ. ಈಗ ಕರ್ನಾಟಕದ ವಿದ್ಯುತ್ ವಿತರಣಾ ವ್ಯವಸ್ಥೆಯಲ್ಲೂ ಮಹತ್ವದ ಬದಲಾವಣೆಗೆ ನಾಂದಿಯಾಗುತ್ತಿದೆ. ಭಾರತೀಯ ವಿದ್ಯುತ್ ವ್ಯವಸ್ಥೆಯ ಪರಿಷ್ಕರಣೆಯ ಭಾಗವಾಗಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ‘ಪರಿಷ್ಕೃತ ವಿತರಣಾ ವಲಯ ಯೋಜನೆ (Revamped Distribution Sector Scheme – RDSS)’ ಜಾರಿಗೆ ಮುಂದಾಗಿವೆ. ಈ ಯೋಜನೆಯ ಪ್ರಮುಖ ಅಂಶವೆಂದರೆ, ಸ್ಮಾರ್ಟ್ ವಿದ್ಯುತ್ ಮೀಟರ್‌ಗಳ ಅಳವಡಿಕೆ. ರಾಜ್ಯದ ಇಂಧನ ಸಚಿವ ಕೆ.ಜೆ. ಜಾರ್ಜ್(Minister K.J. George) ಈ ಕುರಿತು ಒಂದು ಮಹತ್ವದ ಘೋಷಣೆಯನ್ನು ಮಾಡಿದ್ದಾರೆ. ಸ್ಮಾರ್ಟ್ ಮೀಟರ್ ಎಂದರೇನು? ಗ್ರಾಹಕರಿಗೆ ಸ್ಮಾರ್ಟ್ ಮೀಟರ್‌ನಿಂದ ಏನು ಪ್ರಯೋಜನ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಸ್ಮಾರ್ಟ್ ಮೀಟರ್(Smart meter) ಎಂದರೇನು?:

ಸ್ಮಾರ್ಟ್ ಮೀಟರ್‌ಗಳು ಸಾಮಾನ್ಯ ವಿದ್ಯುತ್ ಮೀಟರ್‌ಗಿಂತ ತಂತ್ರಜ್ಞಾನದ ನಿಟ್ಟಿನಲ್ಲಿ ಬಹುಮುಖ್ಯವಾದವು. ಇವು ಪ್ರಿಪೇಯ್ಡ್ ವಿಧಾನದಲ್ಲಿ ಕಾರ್ಯನಿರ್ವಹಿಸುತ್ತವೆ. ಗ್ರಾಹಕರು ಮೊಬೈಲ್ ಸಿಮ್ ಕಾರ್ಡ್‌ ರೀಚಾರ್ಜ್ ಮಾಡುವ ಮಾದರಿಯಲ್ಲಿ, ಈ ಮೀಟರ್‌ಗಳಲ್ಲಿಯೂ ಮೊದಲು ಹಣ ಪಾವತಿಸಿ, ನಂತರ ವಿದ್ಯುತ್ ಸೇವೆ ಪಡೆಯಬೇಕು. ಇದರಿಂದ ಗ್ರಾಹಕರು ತಮ್ಮ ಖರ್ಚು ಮತ್ತು ಬಳಕೆಯ ಮೇಲೆ ನಿಖರ ನಿಯಂತ್ರಣ ಸಾಧಿಸಬಹುದಾಗಿದೆ.

ಸ್ಮಾರ್ಟ್ ಮೀಟರ್‌ಗಳ ಜಾರಿ ಕುರಿತು ಸಚಿವರಿಂದ ಘೋಷಣೆ:

ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಕೆ.ಜೆ. ಜಾರ್ಜ್ ಅವರು, ರಾಜ್ಯದ ಎಲ್ಲಾ ಮನೆ, ಅಂಗಡಿ, ಆಫೀಸ್ ಗಳಲ್ಲಿ ಹಳೆಯ ಮೀಟರ್‌ಗಳನ್ನು ಬದಲಿಸಿ ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸುವ ಯೋಜನೆಯ ಬಗ್ಗೆ ವಿವರ ನೀಡಿದರು. ಕೆಲವೆಡೆ ಪ್ರಾಯೋಗಿಕ ಹಂತದಲ್ಲಿ ಈ ಮೀಟರ್‌ಗಳನ್ನು ಅಳವಡಿಸಲಾಗಿದ್ದು, ಶೀಘ್ರದಲ್ಲೇ ರಾಜ್ಯದಾದ್ಯಂತ ಈ ಯೋಜನೆ ವಿಸ್ತರಿಸಲಾಗುವುದು ಎಂದರು.

ಇದು ಕೇಂದ್ರ ಸರ್ಕಾರದ ಅನುಮೋದಿತ ಯೋಜನೆಯಾಗಿದ್ದು, ರಾಜ್ಯ ಸಂಪುಟದ ಅನುಮೋದನೆ ನಂತರ ಸಂಪೂರ್ಣ ಜಾರಿಗೆ ಬರಲಿದೆ. ವಿಶೇಷವೆಂದರೆ, ಈ ಮೀಟರ್‌ಗಳಿಗೆ ಸಿಮ್ ಕಾರ್ಡ್(Sim card) ಮಾದರಿಯ ತಂತ್ರಜ್ಞಾನ ಅಳವಡಿಸಲಾಗಿದ್ದು, ಪ್ರತಿಯೊಂದು ಸ್ಮಾರ್ಟ್ ಮೀಟರ್‌ಗೂ ಸರಾಸರಿ 5000 ರೂ. ವೆಚ್ಚವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಹಳೆಯ ಮೀಟರ್‌ಗಳ ಭವಿಷ್ಯ ಏನು?:

ಸ್ಮಾರ್ಟ್ ಮೀಟರ್‌ಗಳ ಅಳವಡಿಕೆಯಿಂದ ಹಳೆಯ ಮೀಟರ್‌ಗಳನ್ನು ಹಿಂಪಡೆಯುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಅಂದರೆ, ಹೊಸ ಸ್ಮಾರ್ಟ್ ಮೀಟರ್‌ಗಳ ಅಳವಡಿಕೆಗೆ ಹಳೆಯ ಮೀಟರ್‌ಗಳನ್ನು ತೆಗೆದುಹಾಕದೇ, ಕ್ರಮಬದ್ಧವಾಗಿ ಬದಲಾವಣೆ ತರುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಗ್ರಾಹಕರಿಗೆ ಸ್ಮಾರ್ಟ್ ಮೀಟರ್‌ನಿಂದ ಏನು ಪ್ರಯೋಜನ?:

ಟ್ರಾನ್ಸಪರನ್ಸಿ(Transparency): ವಿದ್ಯುತ್ ಬಳಕೆಯ ಸಂಪೂರ್ಣ ಮಾಹಿತಿ ಎನ್‌ಡಿಟೈಂ ಲಭ್ಯವಾಗುತ್ತದೆ.
ಆರ್ಥಿಕ ನಿಯಂತ್ರಣ: ಮೊದಲು ಹಣ ಪಾವತಿಸಿ ಬಳಸುವ ವ್ಯವಸ್ಥೆಯಿಂದ ದುರ್ಬಳಕೆ ತಡೆಯಬಹುದು.
ಆನ್ಲೈನ್ ರೀಚಾರ್ಜ್ ಸೌಲಭ್ಯ(Online recharge facility): ಎಲ್ಲಿ ಇದ್ದರೂ ಆನ್‌ಲೈನ್ ಮೂಲಕ ರೀಚಾರ್ಜ್ ಮಾಡಬಹುದು.
ಬಿಲ್ ವಿವಾದಗಳಿಗೆ ಮುಕ್ತಿ: ಅಂಕಿ-ಅಂಶಗಳು ಸ್ಪಷ್ಟವಾಗಿರುವುದರಿಂದ ಭಿನ್ನಾಭಿಪ್ರಾಯಗಳ ಸಾಧ್ಯತೆ ಕಡಿಮೆ  ಇರುತ್ತದೆ.

ಒಟ್ಟಾರೆಯಾಗಿ, ಕರ್ನಾಟಕ ಸರ್ಕಾರದ ಈ ಮಹತ್ವದ ಹೆಜ್ಜೆಯು ವಿದ್ಯುತ್ ಸೇವೆಗಳಲ್ಲಿ ಹೆಚ್ಚು ಪಾರದರ್ಶಕತೆ, ಜವಾಬ್ದಾರಿ ಮತ್ತು ಗ್ರಾಹಕ ಸೌಕರ್ಯವನ್ನು ತರುವ ನಿರೀಕ್ಷೆಯಿದೆ. ಸ್ಮಾರ್ಟ್ ಮೀಟರ್‌ಗಳ(Smart meter) ಅಳವಡಿಕೆಯಿಂದ ಸಾಮಾನ್ಯ ಗ್ರಾಹಕರಿಗೂ ತಂತ್ರಜ್ಞಾನ ಆಧಾರಿತ ಸೇವೆಗಳ ಅನುಭವ ಲಭಿಸಲು ಸಾಧ್ಯವಾಗಲಿದೆ. ಈ ಹೊಸ ವ್ಯವಸ್ಥೆ ಯಶಸ್ವಿಯಾಗಲು ಸಾರ್ವಜನಿಕರ ಸಹಕಾರ ಮತ್ತು ಅರಿವು ಅಗತ್ಯವಾಗಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!