ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸುವ ಕುರಿತು ಕಳೆದ ಹಲವು ದಶಕಗಳಿಂದ ಚರ್ಚೆಗಳು ನಡೆಯುತ್ತಿವೆ. ರಾಜ್ಯದ ಪರಿಶಿಷ್ಟ ಜಾತಿಗಳಲ್ಲಿ ಅನೇಕ ಉಪಜಾತಿಗಳು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಬಹಳ ಹಿಂದುಳಿದಿರುವುದರಿಂದ, ಎಲ್ಲರಿಗೂ ಸಮಾನವಾಗಿ ಮೀಸಲಾತಿ ನೀಡುವುದರಿಂದ ನಿಜವಾದ ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಗುತ್ತಿಲ್ಲ ಎಂಬ ಆಕ್ಷೇಪಣೆಗಳು ಮೂಡುತ್ತಿವೆ. ಇದನ್ನೇ ಸರಿಪಡಿಸುವ ಉದ್ದೇಶದಿಂದ, ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಹಂಚಿಕೆ ಮಾಡುವ ಕುರಿತು ರಾಜ್ಯ ಸರ್ಕಾರ ಹಲವು ಆಯೋಗಗಳನ್ನು ರಚಿಸಿದೆ. ಇದೇ ಹಿನ್ನೆಲೆಯಲ್ಲಿ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್‌ದಾಸ್(Retired Justice H.N. Nagmohandas) ಅವರ ನೇತೃತ್ವದ ಏಕಸದಸ್ಯ ಆಯೋಗವು 1,765 ಪುಟಗಳ ವರದಿಯನ್ನು ಸಿದ್ಧಪಡಿಸಿ, ಮುಖ್ಯಮಂತ್ರಿಗೆ ಸಲ್ಲಿಸಿದೆ. ಈ ವರದಿ ರಾಜ್ಯದ ಪರಿಶಿಷ್ಟ ಜಾತಿಗಳ ಸಾಮಾಜಿಕ ಸ್ಥಿತಿಗತಿ, ಶಿಕ್ಷಣದ ಹಿಂದುಳಿದಿರುವಿಕೆ, ಉದ್ಯೋಗದ ಪ್ರಾತಿನಿಧ್ಯ ಮುಂತಾದ ಅಂಶಗಳನ್ನು ವೈಜ್ಞಾನಿಕವಾಗಿ ಪರಿಶೀಲಿಸಿ ತಯಾರಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಕುರಿತ ಬಹುನಿರೀಕ್ಷಿತ ವರದಿ ಕೊನೆಗೂ ಹೊರಬಿದ್ದಿದೆ. ರಾಜ್ಯದ ಪರಿಶಿಷ್ಟ ಜಾತಿಗಳಲ್ಲಿ ಹಿಂದುಳಿದ ಉಪಜಾತಿಗಳಿಗೆ ಸಮನ್ಯಾಯ ದೊರಕುವಂತೆ ಮೀಸಲಾತಿಯನ್ನು ಮರುಹಂಚಿಕೆ ಮಾಡಲು, ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್‌ದಾಸ್ ಅವರ ನೇತೃತ್ವದ ಏಕಸದಸ್ಯ ಆಯೋಗ ರಚಿಸಲಾಗಿತ್ತು. ಸುಮಾರು 1,765 ಪುಟಗಳ ವರದಿಯನ್ನು ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗಿದೆ.
ರಾಜ್ಯದಾದ್ಯಂತ ಸುಮಾರು 27.24 ಲಕ್ಷ ಕುಟುಂಬಗಳು, ಒಟ್ಟು 1.07 ಕೋಟಿ ಜನರು ಈ ಸಮೀಕ್ಷೆಯಲ್ಲಿ ಭಾಗಿಯಾಗಿದ್ದು, ಮೇ 5ರಿಂದ ಜುಲೈ 6ರವರೆಗೆ 60 ದಿನಗಳ ಕಾಲ ಸಮೀಕ್ಷೆ ನಡೆಯಿತು. ಪರಿಶಿಷ್ಟ ಜಾತಿಗಳ ಶಿಕ್ಷಣ, ಸಾಮಾಜಿಕ ಸ್ಥಿತಿ ಹಾಗೂ ಸರ್ಕಾರಿ ಉದ್ಯೋಗದಲ್ಲಿ ಪ್ರತಿನಿಧಿತ್ವವನ್ನು ವಿಶ್ಲೇಷಿಸಿ, ಆಯೋಗವು ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಗಳ ಆಧಾರದ ಮೇಲೆ ಶಾಸ್ತ್ರೀಯ ಹಾಗೂ ವೈಜ್ಞಾನಿಕ ಮಾನದಂಡಗಳನ್ನು ಅನುಸರಿಸಿ ಒಳಮೀಸಲಾತಿ ಹಂಚಿಕೆ ಮಾಡಿದೆ.
ಐದು ಗುಂಪುಗಳ ವರ್ಗೀಕರಣ:
ನಾಗಮೋಹನ್‌ದಾಸ್ ಆಯೋಗವು ಪರಿಶಿಷ್ಟ ಜಾತಿಯ 101 ಉಪಜಾತಿಗಳನ್ನು ಹೊಸದಾಗಿ ಐದು ಗುಂಪುಗಳಾಗಿ ವರ್ಗೀಕರಿಸಿದೆ. ಸುಪ್ರೀಂ ಕೋರ್ಟ್ ಸೂಚಿಸಿದ ಮಾನದಂಡಗಳನ್ನು ಪರಿಗಣಿಸಿ, ಜಾತಿಗಳ ಶೈಕ್ಷಣಿಕ ಹಿಂದುಳಿದಿರುವಿಕೆ, ಸರ್ಕಾರಿ ಉದ್ಯೋಗದಲ್ಲಿ ಪ್ರಾತಿನಿಧ್ಯ, ಮತ್ತು ಸಾಮಾಜಿಕ ಹಿಂದುಳಿದಿರುವಿಕೆ ಆಧಾರಗಳ ಮೇಲೆ ಒಳ ಮೀಸಲಾತಿ ಹಂಚಿಕೆಯಾಗಿದೆ.
ಗುಂಪುಗಳ ವಿವರ ಹೀಗಿದೆ:
1. ಗುಂಪು 1 – ಅತೀ ಹಿಂದುಳಿದ ಜಾತಿಗಳು – ಶೇ 1 ಮೀಸಲಾತಿ:
ಈ ಗುಂಪಿನ ಒಟ್ಟು ಜನಸಂಖ್ಯೆ ಸುಮಾರು 5 ಲಕ್ಷ.
ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ತೀರಾ ವಂಚಿತ ಜಾತಿಗಳನ್ನು ಇಲ್ಲಿ ಸೇರಿಸಲಾಗಿದೆ.
2. ಗುಂಪು 2 – ಎಡಗೈ ಜಾತಿಗಳು – ಶೇ 6 ಮೀಸಲಾತಿ.
3. ಗುಂಪು 3 – ಬಲಗೈ ಜಾತಿಗಳು – ಶೇ 5 ಮೀಸಲಾತಿ.
4. ಗುಂಪು 4 – ಬಂಜಾರ, ಬೋವಿ, ಕೊರಚ, ಕೊರಮ (ಅಸ್ಪೃಶ್ಯರಲ್ಲದ ಜಾತಿಗಳು) – ಶೇ 4 ಮೀಸಲಾತಿ.
5. ಗುಂಪು 5 – ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ – ಶೇ 1 ಮೀಸಲಾತಿ.
ಈ ಗುಂಪಿನಲ್ಲಿರುವವರು ಸುಮಾರು 5 ಲಕ್ಷ ಜನರಿದ್ದು, ಮೂಲ ಜಾತಿ ಗುರುತಿಸದೇ, ಈ ಹೆಸರಿನಲ್ಲಿ ಗುರುತಿಸಿಕೊಂಡಿದ್ದಾರೆ.
ಸಮೀಕ್ಷೆ ಮತ್ತು ದತ್ತಾಂಶ:
ರಾಜ್ಯಾದ್ಯಂತ 60 ದಿನಗಳ(60 days) ಕಾಲ (ಮೇ 5ರಿಂದ ಜುಲೈ 6ರವರೆಗೆ) ಸಮೀಕ್ಷೆ ನಡೆಸಲಾಯಿತು.
27.24 ಲಕ್ಷ ಕುಟುಂಬಗಳ 1.07 ಕೋಟಿ ಪರಿಶಿಷ್ಟ ಜಾತಿ ಜನರು ಈ ಸಮೀಕ್ಷೆಯಲ್ಲಿ ಭಾಗವಹಿಸಿದರು.
ಸರ್ಕಾರದ ವಿವಿಧ ಇಲಾಖೆಗಳು, ನಿಗಮ ಮಂಡಳಿಗಳಿಂದ ಸಂಗ್ರಹಿಸಿದ ಮಾಹಿತಿಯನ್ನೂ ಆಯೋಗ ಪರಿಶೀಲಿಸಿದೆ.
5,000ಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ 70 ಜಾತಿಗಳು ಹಾಗೂ 1 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ 7-8 ಜಾತಿಗಳನ್ನು ವರದಿಯಲ್ಲಿ ವಿಶೇಷವಾಗಿ ಗುರುತಿಸಲಾಗಿದೆ.
ಆಯೋಗದ ಪ್ರಮುಖ ಶಿಫಾರಸುಗಳು(Major recommendations of the Commission) ಹೀಗಿವೆ:
ಕುಲಶಾಸ್ತ್ರೀಯ ಅಧ್ಯಯನ : ಪಟ್ಟಿಯಲ್ಲಿ ಗುರುತಿಸಿಕೊಳ್ಳದ ಜಾತಿಗಳ ಕುರಿತು ಸರ್ಕಾರವು ಸಮಗ್ರ ಕುಲಶಾಸ್ತ್ರೀಯ ಅಧ್ಯಯನ ನಡೆಸಿ, ಅವರನ್ನು ಜಾತಿ ಪಟ್ಟಿಗೆ ಸೇರಿಸಬೇಕು.
ಪ್ರಮಾಣಪತ್ರ ನೀಡುವ ವಿಧಾನ : ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂದು ಗುರುತಿಸಿಕೊಂಡವರಿಗೆ ಅದೇ ಹೆಸರಿನಲ್ಲಿ ಜಾತಿ ಪ್ರಮಾಣಪತ್ರ ನೀಡಬೇಕು.
ರೋಸ್ಟರ್ ಬಿಂದುಗಳು : ಉದ್ಯೋಗದಲ್ಲಿ ಮೀಸಲಾತಿ ನೀಡುವಾಗ ‘ಗುಂಪು’ ಆಧಾರದ ಮೇಲೆ ರೋಸ್ಟರ್ ಬಿಂದುಗಳನ್ನು ಗುರುತಿಸಬೇಕು.
ಮೂಲ ಜಾತಿ ಗುರುತಿಸುವಿಕೆ : ಆದಿ, ದ್ರಾವಿಡ, ಆದಿ ಕರ್ನಾಟಕ, ಆದಿ ಆಂಧ್ರ ಎಂಬ ಹೆಸರಿನ ಜೊತೆಗೆ ಮೂಲ ಜಾತಿ ತಿಳಿದಿದ್ದರೆ, ಅದೇ ಹೆಸರಿನಲ್ಲಿ ಪ್ರಮಾಣಪತ್ರ ನೀಡಬೇಕು.
ಹಿಂದಿನ ವರದಿ ಮತ್ತು ಬದಲಾವಣೆಗಳು ಯಾವರೀತಿಯಿವೆ?:
2005ರಲ್ಲಿ ನ್ಯಾಯಮೂರ್ತಿ ಎ.ಜಿ. ಸದಾಶಿವ(Justice A.G. Sadashiva) ನೇತೃತ್ವದ ಆಯೋಗವು, ಪರಿಶಿಷ್ಟ ಜಾತಿಗಳಿಗೆ ಇದ್ದ ಶೇ 15 ಮೀಸಲಾತಿಯನ್ನು ಕೆಳಗಿನಂತೆ ಹಂಚಲು ಶಿಫಾರಸು ಮಾಡಿತ್ತು,
ಎಡಗೈ – ಶೇ 6
ಬಲಗೈ – ಶೇ 5
ಸ್ಪೃಶ್ಯ ಉಪಜಾತಿಗಳು – ಶೇ 3
ಉಳಿದವರು – ಶೇ 1
ನಂತರ, ಬಸವರಾಜ ಬೊಮ್ಮಾಯಿ ಸರ್ಕಾರ(Basavaraja Bommai Govt) ರಚಿಸಿದ ಜೆ.ಸಿ. ಮಾಧುಸ್ವಾಮಿ ಸಮಿತಿಯು(J.C. Madhuswami Committee) 2011ರ ಜನಗಣತಿಯ ಆಧಾರದ ಮೇಲೆ 101 ಜಾತಿಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಿ, ಶೇ 17 ಮೀಸಲಾತಿಯನ್ನು ಹಂಚಿತ್ತು.
ಆದರೆ ನಾಗಮೋಹನ್‌ದಾಸ್ ಆಯೋಗವು ಸಮಗ್ರ ಸಮೀಕ್ಷೆ ನಡೆಸಿ, ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಆಧಾರದ ಮೇಲೆ ಹೊಸ ವರ್ಗೀಕರಣ ಮಾಡಿದೆ. ಈ ವರದಿ ಸರ್ಕಾರದ ಮುಂದಿನ ತೀರ್ಮಾನಕ್ಕೆ ಆಧಾರವಾಗಲಿದೆ. ಜೊತೆಯಲ್ಲಿ ಈ ವರದಿ ಜಾರಿಗೆ ಬಂದರೆ, ರಾಜ್ಯದ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವ್ಯವಸ್ಥೆಯಲ್ಲಿ ಮೂಲಭೂತ ಬದಲಾವಣೆ ಕಾಣಬಹುದಾಗಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.