Picsart 25 09 20 22 53 31 412 scaled

ಇನ್ಕಮ್ ಟ್ಯಾಕ್ಸ್ ರೀಫಂಡ್ ಇನ್ನೂ ಬಂದಿಲ್ಲವಾ? ಬಡ್ಡಿನೂ ಸಿಗುತ್ತಾ.? ಇಲ್ಲಿದೆ ಅಸಲಿ ಕಾರಣ.!

Categories:
WhatsApp Group Telegram Group

ಭಾರತದಲ್ಲಿ ಪ್ರತಿ ವರ್ಷ ಲಕ್ಷಾಂತರ ಜನರು ತಮ್ಮ ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸುತ್ತಾರೆ. ತೆರಿಗೆ ಪಾವತಿದಾರರಿಗೆ, ವಿಶೇಷವಾಗಿ ಮಧ್ಯಮ ವರ್ಗದವರಿಗೆ, ಇದು ಕೇವಲ ಕಾನೂನು ಬಾಧ್ಯತೆ ಮಾತ್ರವಲ್ಲದೆ ಹಣಕಾಸಿನ ಯೋಜನೆಗೂ ಸಂಬಂಧಪಟ್ಟ ಪ್ರಮುಖ ಹಂತವಾಗಿದೆ. ITR ಸಲ್ಲಿಸಿದ ಬಳಿಕ ತಮಗೆ ಬರುವ Income Tax Refund ಎಂಬುದು ಅನೇಕರ ನಿರೀಕ್ಷೆಯ ವಿಷಯ. ಏಕೆಂದರೆ, ಹೆಚ್ಚುವರಿ ತೆರಿಗೆ ಪಾವತಿಯಾದಲ್ಲಿ ಅದನ್ನು ಮರಳಿ ಪಡೆಯುವುದು ತಮ್ಮ ಹಕ್ಕು. ಆದರೆ, ಬಹಳಷ್ಟು ಜನರು ಐಟಿಆರ್ ಫೈಲ್ ಮಾಡಿ ಹಲವು ವಾರಗಳೇ ಆಗಿವೆ, ಇನ್ನೂ ರೀಫಂಡ್ ಬಂದಿಲ್ಲ ಎಂದು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ವಾಸ್ತವವಾಗಿ, ರೀಫಂಡ್ ಪ್ರಕ್ರಿಯೆ ಸಾಮಾನ್ಯವಾಗಿ ವೇಗವಾಗಿ ನಡೆಯುತ್ತದೆಯಾದರೂ, ಕೆಲವೊಮ್ಮೆ ವಿಳಂಬವಾಗುವ ಸಂಭವವಿದೆ. ಈ ಬಾರಿ (2025) ಹೆಚ್ಚಿನವರು ಆಗಸ್ಟ್ ತಿಂಗಳಲ್ಲೇ ತಮ್ಮ ರಿಟರ್ನ್ಸ್ ಸಲ್ಲಿಸಿದ್ದರೂ, ಸೆಪ್ಟೆಂಬರ್ ಗಡುವು ಮುಗಿದ ನಂತರವೂ ರೀಫಂಡ್ ಇನ್ನೂ ಬರದಿರುವ ಕುರಿತು ಹಲವು ಪ್ರಶ್ನೆಗಳು ಎದ್ದಿವೆ. ಹಾಗಿದ್ದರೆ ಏಕೆ ಈ ವಿಳಂಬವಾಗುತ್ತಿದೆ? ಹಣ ತಡವಾಗಿ ಬಂದರೆ ಬಡ್ಡಿ ಸಿಗುತ್ತದೆಯೇ ಎಂಬ ಗೊಂದಲಗಳಿವೆ. ಈ ಗೊಂದಲಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ರೀಫಂಡ್ ವಿಳಂಬವಾಗಲು ಕಾರಣಗಳು ಏನು?:

ಸಾಮಾನ್ಯವಾಗಿ ಸಣ್ಣ ಮೊತ್ತದ ರೀಫಂಡ್ ಇದ್ದರೆ ಕೆಲವೇ ದಿನಗಳಲ್ಲಿ ಖಾತೆಗೆ ಜಮೆಯಾಗುತ್ತದೆ. ಕೆಲವರಿಗೆ ಐಟಿಆರ್ ವೆರಿಫೈ ಆದ ದಿನವೇ ಹಣ ಬರುತ್ತದೆ.
ಆದರೆ ದೊಡ್ಡ ಮೊತ್ತದ ರೀಫಂಡ್ ಇದ್ದರೆ ಇಲಾಖೆ ಹೆಚ್ಚು ಪರಿಶೀಲನೆ ನಡೆಸುತ್ತದೆ.
ಈ ವರ್ಷ ಡಿಡಕ್ಷನ್ ಮತ್ತು ಎಕ್ಸೆಂಪ್ಶನ್‌ಗಳಿಗೆ ಹೊಸ ವೆರಿಫಿಕೇಶನ್ ಕ್ರಮ ಜಾರಿಯಲ್ಲಿದ್ದು, ಇದರಿಂದ ಪ್ರಕ್ರಿಯೆ ಸ್ವಲ್ಪ ನಿಧಾನವಾಗಿದೆ.
ಕ್ಯಾಪಿಟಲ್ ಗೇನ್, ಬ್ಯುಸಿನೆಸ್ ಇತ್ಯಾದಿ ಮೂಲಗಳಿಂದ ಆದಾಯ ಇದ್ದರೆ ಇಲಾಖೆ ಹೆಚ್ಚು ನಿಗಾ ಇಡುತ್ತದೆ.
ತೆರಿಗೆ ಬಾಧ್ಯತೆ ಹಾಗೂ ರೀಫಂಡ್ ಕ್ಲೇಮ್(Refund Claim) ನಡುವೆ ಅಸಂಗತಿ ಕಂಡುಬಂದರೆ ಇಲಾಖೆಯು ತೆರಿಗೆಪಾವತಿದಾರರಿಂದ ಸ್ಪಷ್ಟನೆ ಕೇಳಬಹುದು.

ಎಷ್ಟು ದಿನಗಳಲ್ಲಿ ರೀಫಂಡ್ ಸಿಗುತ್ತದೆ?:

ಸಾಮಾನ್ಯ ಪರಿಸ್ಥಿತಿಯಲ್ಲಿ, ITR ಸಲ್ಲಿಸಿ ವೆರಿಫೈ ಮಾಡಿದ ಬಳಿಕ ನಾಲ್ಕು ರಿಂದ ಐದು ವಾರಗಳಲ್ಲಿ ರೀಫಂಡ್ ಖಾತೆಗೆ ಜಮೆಯಾಗುತ್ತದೆ. ಆದರೆ ಪರಿಶೀಲನೆ ನಡೆಯುತ್ತಿರುವ ಸಂದರ್ಭಗಳಲ್ಲಿ ಒಂದು ತಿಂಗಳಿಗಿಂತ ಹೆಚ್ಚು ಕಾಲ ಹಿಡಿಯುವುದು ಸಹಜ.

ಬಡ್ಡಿ ಸಮೇತ ರೀಫಂಡ್:

ರೀಫಂಡ್ ವಿಳಂಬವಾದರೆ ತೆರಿಗೆಪಾವತಿದಾರರಿಗೆ ಚಿಂತೆಯ ಅಗತ್ಯವಿಲ್ಲ. ಆದಾಯ ತೆರಿಗೆ ಇಲಾಖೆ(Income Tax Department) ವಾರ್ಷಿಕ ಶೇ. 6ರ ಬಡ್ಡಿ ಸಹಿತವಾಗಿ ಹಣವನ್ನು ಸಂದಾಯ ಮಾಡುತ್ತದೆ.
ಬಡ್ಡಿ ಏಪ್ರಿಲ್ 1ರಿಂದ ಲೆಕ್ಕ ಹಾಕಲಾಗುತ್ತದೆ.
ಉದಾಹರಣೆಗೆ, ನಿಮಗೆ ಅಕ್ಟೋಬರ್‌ನಲ್ಲಿ ರೀಫಂಡ್ ಬಂದರೆ ಆರು ತಿಂಗಳ ಬಡ್ಡಿ ಸೇರಿರುತ್ತದೆ.
ನವೆಂಬರ್‌ನಲ್ಲಿ ಬಂದರೆ ಏಳು ತಿಂಗಳ ಬಡ್ಡಿ ಸೇರ್ಪಡೆಯಾಗಿರುತ್ತದೆ.

ಅಂದರೆ, ರೀಫಂಡ್ ತಡವಾದರೂ ಹಣ ನಷ್ಟವಾಗುವುದಿಲ್ಲ. ಬಡ್ಡಿ ಸಮೇತವಾಗಿ ಖಾತೆಗೆ ಬರುವುದರಿಂದ ತೆರಿಗೆಪಾವತಿದಾರರು ತಮ್ಮ ಹಕ್ಕಿನ ಹಣವನ್ನು ಸುರಕ್ಷಿತವಾಗಿ ಮರಳಿ ಪಡೆಯುತ್ತಾರೆ.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories