ಕರ್ನಾಟಕ ರಾಜ್ಯದ ಎಲ್ಲಾ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳಿಗೆ ಹಬ್ಬದ ಮುಂಗಡ ಹಣ ಮತ್ತು ಗಳಿಕೆ ರಜೆಯ ನಿಗಧೀಕರಣಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಡಿಜಿಟಲ್ ಗೊಳಿಸಲಾಗಿದೆ. ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (HRMS) 2.0 ನಿರ್ದೇಶನಾಲಯದ ಯೋಜನಾ ವ್ಯವಸ್ಥಾಪಕರು ಈ ಬಗ್ಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
HRMS-2 ತಂತ್ರಾಂಶವನ್ನು ಬಳಸಿ ವೇತನ ಪಡೆಯುತ್ತಿರುವ ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳ ನೌಕರರು, ‘Employee Self Service’ (ESS) ವೆಬ್ ಪೋರ್ಟಲ್ https://hrmsess.karnataka.gov.in ಅಥವಾ ‘gov.ka.ess_app’ ಎಂಬ Android ಮೊಬೈಲ್ ಅಪ್ಲಿಕೇಶನ್ ಅನ್ನು ಬಳಸಿಕೊಂಡು ತಮ್ಮ ವೈಯಕ್ತಿಕ ಲಾಗಿನ್ ಐಡಿಗಳ ಮೂಲಕ ಈ ಕೆಳಕಂಡ ಮಾಹಿತಿಗಳನ್ನು ಈಗ ನೇರವಾಗಿ ವೀಕ್ಷಿಸಬಹುದು ಮತ್ತು ನಿರ್ವಹಿಸಬಹುದು:
ವೇತನ ಪಟ್ಟಿ: ತಮ್ಮ ಮಾಸಿಕ ವೇತನ ಪಟ್ಟಿಯನ್ನು ಪರಿಶೀಲಿಸಬಹುದು.
ರಜಾ ವಿವರಗಳು: ಗಳಿಕೆ ರಜೆ (Earned Leave), ಅರ್ಧ ವೇತನ ರಜೆ (Half Pay Leave), ಮತ್ತು ಮುಂಬರುವ ಸಾರ್ವಜನಿಕ ರಜಾದಿನಗಳ ಬಗ್ಗೆ ಮಾಹಿತಿ.
ಸಾಲದ ವಿವರಗಳು: ಸಕ್ರಿಯವಾಗಿರುವ ಸಾಲಗಳು ಮತ್ತು ಮುಕ್ತಾಯಗೊಂಡ ಸಾಲಗಳ ವಿವರ.
ಮುಂಗಡ ವಿವರಗಳು: ನೀಡಲಾಗಿರುವ ಸಕ್ರಿಯ ಮುಂಗಡಗಳು, ಮುಚ್ಚಿದ ಮುಂಗಡಗಳು ಮತ್ತು ಮುಂಗಡಕ್ಕೆ ಸಲ್ಲಿಸಿದ ಅರ್ಜಿಗಳ ಸ್ಥಿತಿ.
ವಿಮೆ: ಸಕ್ರಿಯ ವಿಮೆ ಯೋಜನೆಗಳು ಮತ್ತು ಒಟ್ಟು ಪಾವತಿಸಿದ ಪ್ರೀಮಿಯಂ ಮೊತ್ತ.
ವಸೂಲಾತಿ: ಸಕ್ರಿಯ ಮತ್ತು ಮುಕ್ತಾಯಗೊಂಡ ವಸೂಲಾತಿ ಆದೇಶಗಳು.
ಡಿಜಿಲಾಕರ್: ಡಿಜಿಟಲ್ ದಾಖಲೆಗಳನ್ನು ಪ್ರವೇಶಿಸಲು.
ಪ್ರೊಫೈಲ್: ನೌಕರರ ವೈಯಕ್ತಿಕ ಮಾಹಿತಿ, ಸಂಪರ್ಕದ ವಿವರಗಳು, ಮತ್ತು ಇತರೆ ಅಂಶಗಳು.
ಮೇಲ್ಕಂಡ 1 ರಿಂದ 8ನೇ ವಿವರಗಳನ್ನು ವೀಕ್ಷಿಸುವುದರ ಜೊತೆಗೆ, HRMS-2 ತಂತ್ರಾಂಶವನ್ನು ಬಳಸುವ ನೌಕರರು ಹಬ್ಬದ ಮುಂಗಡ (Festival Advance – FA) ಮತ್ತು ಗಳಿಕೆ ರಜೆ ನಿಗಧೀಕರಣ (EL Encashment) ಗಾಗಿ ಅರ್ಜಿಯನ್ನು ಈಗ ತಮ್ಮ ESS ಲಾಗಿನ್ ಮೂಲಕವೇ ಆನ್ ಲೈನ್ ನಲ್ಲಿ ಸಲ್ಲಿಸಬೇಕು. ಹಿಂದಿನ ಭೌತಿಕ ಅರ್ಜಿ ಪ್ರಕ್ರಿಯೆಗೆ ಬದಲಾಗಿ, ಎಲ್ಲಾ ಅರ್ಜಿಗಳು ಈಗ ಡಿಜಿಟಲ್ ಪ್ಲಾಟ್ ಫಾರ್ಮ್ ಮೂಲಕ ನಿರ್ವಹಿಸಲ್ಪಡುತ್ತವೆ.
ನೌಕರರಿಗೆ ಸಹಾಯ ಮಾಡುವ ಸಲುವಾಗಿ, ಹಬ್ಬದ ಮುಂಗಡ ಮತ್ತು ಗಳಿಕೆ ರಜೆ ನಿಗಧೀಕರಣಕ್ಕಾಗಿ ESS ಅಪ್ಲಿಕೇಶನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನವನ್ನು ವಿವರಿಸುವ ಒಂದು ಕೈಪಿಡಿಯನ್ನು ಸಹ ಬಿಡುಗಡೆ ಮಾಡಲಾಗಿದೆ. ಈ ಕೈಪಿಡಿಯ ‘ಸಾಫ್ಟ್ ಕಾಪಿ’ಯನ್ನು HRMS-2 ತಂತ್ರಾಂಶದ ಅಧಿಕೃತ ವೆಬ್ ಸೈಟ್ ಲ್ಯಾಂಡಿಂಗ್ ಪುಟದಲ್ಲಿರುವ “Help and Tutorials” ವಿಭಾಗದಿಂದ ಯಾವುದೇ ಸಮಯದಲ್ಲಿ ವೀಕ್ಷಿಸಬಹುದು ಮತ್ತು ಡೌನ್ಲೋಡ್ ಮಾಡಬಹುದು.
ಭವಿಷ್ಯದಲ್ಲಿ, ರಜೆ ಮನವಿ, ವಿವಿಧ ಭತ್ಯೆಗಳ ಕೋರಿಕೆ, ಮತ್ತು ದೂರು ನಿವಾರಣೆ (complaint redressal) ಯಂತಹ ಎಲ್ಲಾ ಪ್ರಕ್ರಿಯೆಗಳನ್ನು ESS ಪೋರ್ಟಲ್ ಮೂಲಕವೇ ನಿರ್ವಹಿಸಲು ಯೋಜಿಸಲಾಗಿದೆ ಎಂದು ಸರ್ಕಾರಿ ಸೂಚನೆ ತಿಳಿಸುತ್ತದೆ. ಆದ್ದರಿಂದ, ಎಲ್ಲಾ ನೌಕರರು ತಮ್ಮ ಅವಶ್ಯಕತೆಗಳಿಗಾಗಿ ಆನ್ ಲೈನ್ ಅರ್ಜಿ ಸಲ್ಲಿಸುವಂತೆ ಮತ್ತು ಈ ನೂತನ ಡಿಜಿಟಲ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವಂತೆ ಸಚಿವಾಲಯಗಳು ಮತ್ತು ಇಲಾಖೆಗಳು ತಮ್ಮ ಅಧೀನ ನೌಕರರಿಗೆ ಈ ಮಾಹಿತಿಯನ್ನು ತಲುಪಿಸಲು ಕೋರಲಾಗಿದೆ.



ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.