WhatsApp Image 2025 12 13 at 3.28.36 PM

ರಾಜ್ಯದ ಜನತೆಗೆ ಮಹತ್ವದ ಮಾಹಿತಿ! ಗ್ರಾಮ ಪಂಚಾಯಿತಿಯಲ್ಲಿ ನೀವು ಕೇಳಿ ಪಡೆಯಬಹುದಾದ ಅಗತ್ಯ ಮಾಹಿತಿಗಳ ಪಟ್ಟಿ ಇಲ್ಲಿದೆ!

Categories:
WhatsApp Group Telegram Group

ಬೆಂಗಳೂರು: ಭಾರತೀಯ ಆಡಳಿತ ವ್ಯವಸ್ಥೆಯಲ್ಲಿ ಸ್ಥಳೀಯ ಸ್ವ-ಸರ್ಕಾರದ ಮೂಲಾಧಾರವಾಗಿರುವ ಗ್ರಾಮ ಪಂಚಾಯಿತಿ, ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿ ಮತ್ತು ದೈನಂದಿನ ಆಡಳಿತವನ್ನು ನೋಡಿಕೊಳ್ಳುವ ಪ್ರಮುಖ ಘಟಕವಾಗಿದೆ. ತೆರಿಗೆ ಸಂಗ್ರಹದಿಂದ ಹಿಡಿದು ರಸ್ತೆ, ನೀರು, ಮತ್ತು ನೈರ್ಮಲ್ಯ ನಿರ್ವಹಣೆಯಂತಹ ಮೂಲಸೌಕರ್ಯಗಳ ಜವಾಬ್ದಾರಿಯನ್ನು ಈ ಸಂಸ್ಥೆ ನಿರ್ವಹಿಸುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಪ್ರಜಾಪ್ರಭುತ್ವದಲ್ಲಿ ಪಾರದರ್ಶಕತೆ ಅತ್ಯಗತ್ಯ. ಹೀಗಾಗಿ, ಪ್ರತಿಯೊಬ್ಬ ನಾಗರಿಕನು ತನ್ನ ಗ್ರಾಮದ ಅಭಿವೃದ್ಧಿಗಾಗಿ ಪಂಚಾಯಿತಿಯು ಕೈಗೊಂಡಿರುವ ಕಾರ್ಯಗಳು, ಬಳಸಿದ ಹಣಕಾಸು ಮತ್ತು ನಿರ್ಧಾರಗಳ ಕುರಿತು ಮಾಹಿತಿ ಪಡೆಯುವ ಹಕ್ಕನ್ನು ಹೊಂದಿರುತ್ತಾನೆ. ಗ್ರಾಮ ಪಂಚಾಯಿತಿಯು ಸಾರ್ವಜನಿಕರಿಗೆ ಒದಗಿಸಬಹುದಾದ ಮತ್ತು ಜನತೆ ಕೇಳಿ ಪಡೆಯಬಹುದಾದ ಮಹತ್ವದ ಮಾಹಿತಿಗಳನ್ನು ಕೆಳಗೆ ವಿವರವಾಗಿ ನೀಡಲಾಗಿದೆ:

ಗ್ರಾಮ ಪಂಚಾಯಿತಿಗೆ ಬಿಡುಗಡೆಯಾದ ಅನುದಾನದ ವಿವರಗಳು

  • ಗ್ರಾಮ ಪಂಚಾಯಿತಿಯ ಆಯವ್ಯಯ
  • ಗ್ರಾಮ ಪಂಚಾಯತಿ ಡಿ.ಸಿ.ಬಿ. ತಪ್ತ ವಿವರಗಳು (ಬೇಡಿಕೆ, ವಸೂಲಿ ಮತ್ತು ಬಾಕಿ)
  • ಮನೆ ಖಾತೆ ಉದೃತ ಭಾಗ, ಡಿಮ್ಯಾಂಡ್ ಉದ್ಭತ ಭಾಗ, ಲೈಸೆನ್ಸ್, ಮ್ಯೂಟೇಶನ್ ಇತ್ಯಾದಿ ಪತ್ರಗಳು
  • ಗ್ರಾಮ ಪಂಚಾಯತಿ ಜಮಾ ಮತ್ತು ಖರ್ಚಿನ ವಿವರಗಳು (ನಮೂನೆ-9ರಲ್ಲಿ)
  • ಗ್ರಾಮ ಪಂಚಾಯತಿ ಸಾಮಾನ್ಯ ಸಭೆ ಹಾಗೂ ಸ್ಥಾಯಿ ಸಮಿತಿಗಳ ನಡವಳಿಗಳು
  • ಗ್ರಾಮ ಪಂಚಾಯತಿ ಸಭಾ ನಡವಳಿಗಳ ಮೇಲೆ ತೆಗೆದುಕೊಂಡ ಕ್ರಮಗಳು
  • ಗ್ರಾಮ ಸಭೆ ನಡವಳಿಗಳ ಮೇಲೆ ತೆಗೆದುಕೊಂಡ ಕ್ರಮಗಳು
  • ಗ್ರಾಮ ಪಂಚಾಯತಿ ಆಸ್ತಿಗಳ ವಿವರಗಳು
  • ಸಿಬ್ಬಂದಿ ವಿವರಗಳು
  • ಆಡಿಟ್ ವರದಿಗಳ ಮೇಲಿನ ಅನುಪಾಲನಾ ವರದಿ
  • ಗ್ರಾಮ ಪಂಚಾಯತಿ ಸ್ಮತ್ತಿನ ಹರಾಜು, ಗುತ್ತಿಗೆ, ಮಾರಾಟ ಇತ್ಯಾದಿಗಳ ವಿವರಗಳು
  • ಕಾಮಗಾರಿಗಳ ಕ್ರಿಯಾ ಯೋಜನೆಗಳು (ಅಂದಾಜು ವೆಚ್ಚ, ಕಾಮಗಾರಿಗಳ ಸ್ಥಳ ವಿವರಗಳನ್ನೊಳಗೊಂಡಂತೆ)
  • ಗ್ರಾಮ ಪಂಚಾಯತಿ ಪ್ರಕಾರ್ಯಗಳ ಬಗ್ಗೆ ಮಾಹಿತಿ
  • ಗ್ರಾಮ ಪಂಚಾಯತಿ ದಾಸ್ತಾನು ನಿರ್ವಹಣೆ/ವಿತರಣೆ ವಿವರಗಳು
  • ಗ್ರಾಮ ಪಂಚಾಯತಿ ಲೆಕ್ಕ ಪತ್ರ ನಿಯಮಗಳ ವಿವರಗಳು (ವಿವಿಧ ಖರೀದಿ ನಿಯಮಗಳಿಗೆ ಅನುಸರಿಸಬೇಕಾದ ರೀತಿಗಳು ಸೇರಿದಂತೆ)
  • ಗ್ರಾಮ ಪಂಚಾಯಿತಿ ಮನೆ ಕಂದಾಯ, ನಿವೇಶನ ಶುಲ್ಕ, ನೀರಿನ ಕಂದಾಯ, ಸೆಸ್ ಇತ್ಯಾದಿಗಳನ್ನು ನಿರ್ಧರಿಸಿದ ವಿಧಿ ವಿಧಾನಗಳು
  • ಗ್ರಾಮ ಪಂಚಾಯತಿ ಕುಡಿಯುವ ನೀರು ನಿರ್ವಹಣೆ, ಬೀದಿ ದೀಪಗಳ ನಿರ್ವಹಣೆ, ನೈರ್ಮಲೀಕರಣಕ್ಕೆ ಮಾಡಿದ ವೆಚ್ಚದ ವಿವರಗಳು
  • ವಿವಿಧ ಯೋಜನೆಗಳಡಿ ಆಯ್ಕೆಯಾದ ಪಲಾನುಭವಿಗಳ ಪಟ್ಟಿ
  • ಬಡತನ ರೇಖೆಗಿಂತ ಕೆಳಗಿರುವವರ ಪಟ್ಟಿ
  • ಗ್ರಾಮ ಪಂಚಾಯಿತಿ ಮೂಲ ಅಂಕಿ ಅಂಶಗಳ ವಿವರಗಳು
  • ವಾರ್ಷಿಕ ಆಡಳಿತ ವರದಿ
  • ಗ್ರಾಮ ಪಂಚಾಯತಿ ವತಿಯಿಂದ ಸಾಲ ಮಾಡಿದ ದೇಣಿಗೆ ಪಡೆದ ವಿವರಗಳು
  • ಗ್ರಾಮ ಪಂಚಾಯತಿಯ ಕುಳವಾರು ಬಾಕಿ ಪಟ್ಟಿ.
  • ಬಡತನ ರೇಖೆಗಿಂತ ಕೆಳಗಿರುವವರ ಪಟ್ಟಿ (ಬಿ.ಪಿ.ಎಲ್.ಪಟ್ಟಿ)
  • ಜನನ ಮರಣ ಮಾಹಿತಿ (ಗ್ರಾಮ ಪಂಚಾಯಿತಿ ವ್ಯಾಪ್ತಿಯೊಳಗೆ)
  • ಸರ್ಕಾರದಿಂದ ಬಂದ ವಿವಿಧ ಸುತ್ತೋಲೆಗಳು, ಆದೇಶ ಪ್ರತಿಗಳು
  • ಶೇ.18 ರ ಪ.ಜಾ/ಪ.ಪಂ.ಗಳ ಅಭಿವೃದ್ಧಿಗೆ ತೆಗೆದುಕೊಂಡ ಕಾರ್ಯಕ್ರಮಗಳ ಮಾಹಿತಿ
  • ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ತೆಗೆದುಕೊಂಡ ಕ್ರಮಗಳ ಮಾಹಿತಿ
  • ಗ್ರಾಮ ಪಂಚಾಯತಿ ಸದಸ್ಯರುಗಳ ವಿವರಗಳು
WhatsApp Image 2025 12 13 at 3.16.49 PM

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories