WhatsApp Image 2025 10 13 at 6.05.16 PM

ನೀವು ಸ್ಲಿಮ್ ಆಗಿ ಕಾಣಬೇಕು ಅಂದ್ರೆ ಪ್ರತಿದಿನ ಈ ಒಂದು ಪಾನೀಯ ಕುಡಿದ್ರೆ ಸಾಕು.!

Categories:
WhatsApp Group Telegram Group

ಇತ್ತೀಚಿನ ದಿನಗಳಲ್ಲಿ, ಪ್ರತಿಯೊಬ್ಬರೂ ಫಿಟ್ ಮತ್ತು ಸ್ಲಿಮ್ ಆಗಿರಲು ಬಯಸುತ್ತಾರೆ. ಅದರಲ್ಲೂ ಮಹಿಳೆಯರು ಸೊಗಸಾಗಿ ಕಾಣಲು ಡಯಟ್, ಯೋಗ, ವ್ಯಾಯಾಮ, ಜಿಮ್ ವರ್ಕೌಟ್ ಹೀಗೆ ಹಲವು ಕಸರತ್ತುಗಳನ್ನು ನಡೆಸುತ್ತಿರುತ್ತಾರೆ. ಇಷ್ಟೆಲ್ಲಾ ಪ್ರಯತ್ನಗಳ ಹೊರತಾಗಿಯೂ ಕೆಲವರಲ್ಲಿ ಬೊಜ್ಜು ಕಮ್ಮಿಯಾಗುವುದಿಲ್ಲ, ದೇಹದ ತೂಕ ಇಳಿಕೆಯಾಗುವುದಿಲ್ಲ ಎಂಬ ಸಮಸ್ಯೆ ಕಾಡುತ್ತದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ನೀವು ಸಹ ಎಷ್ಟೇ ಪ್ರಯತ್ನ ಮಾಡಿದರೂ ತೂಕ ಇಳಿಯದೆ ನಿರಾಶರಾಗಿದ್ದೀರಾ? ಹಾಗಿದ್ದರೆ, ಸ್ಲಿಮ್ ಆಗಲು ಪ್ರತಿದಿನ ಬೆಳಗ್ಗೆ ಈ ಒಂದು ಸರಳ ಪಾನೀಯವನ್ನು ಸೇವಿಸಿ. ಈ ಸುಲಭ ಅಭ್ಯಾಸವು ನಿಮ್ಮ ತೂಕವನ್ನು ಇಳಿಸುವುದಲ್ಲದೆ, ದೇಹವನ್ನು ಆಂತರಿಕವಾಗಿ ಬಲಿಷ್ಠ ಮತ್ತು ಕ್ರಿಯಾಶೀಲವಾಗಿಸುತ್ತದೆ.

ಸ್ಲಿಮ್ ಆಗಲು ಬೆಳಿಗ್ಗೆ ಯಾವ ಪಾನೀಯ ಕುಡಿಯಬೇಕು?

ನೀವು ಸ್ಲಿಮ್ ಆಗಿ ಕಾಣಲು ಬಯಸಿದರೆ, ಬೆಳಿಗ್ಗೆ ಬೇಗನೆ ಪಿಂಕ್ ಸಾಲ್ಟ್ (ಗುಲಾಬಿ ಉಪ್ಪು) ನೀರನ್ನು ಕುಡಿಯಿರಿ. ಅನೇಕ ಬಾಲಿವುಡ್ ನಟಿಯರು ಮತ್ತು ಫಿಟ್‌ನೆಸ್ ತಜ್ಞರು ಇದನ್ನು ತಮ್ಮ ಬೆಳಗಿನ ದಿನಚರಿಯಲ್ಲಿ ಅಳವಡಿಸಿಕೊಂಡಿದ್ದಾರೆ.

ಪಿಂಕ್ ಸಾಲ್ಟ್ ಅಥವಾ ಹಿಮಾಲಯನ್ ಉಪ್ಪು ನಮ್ಮ ದೇಹದ ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡುವ ಅಗತ್ಯ ಖನಿಜಗಳನ್ನು ಹೊಂದಿದೆ. ಇದನ್ನು ಬೆಚ್ಚಗಿನ ನೀರಿನೊಂದಿಗೆ ಬೆರೆಸಿ ಕುಡಿದಾಗ, ಇದು ದೇಹವನ್ನು ಪರಿಣಾಮಕಾರಿಯಾಗಿ ಹೈಡ್ರೇಟ್ ಮಾಡುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಸಕ್ರಿಯಗೊಳಿಸುತ್ತದೆ. ಮುಖ್ಯವಾಗಿ, ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪಿಂಕ್ ಸಾಲ್ಟ್ ಬೆರೆಸಿದ ನೀರನ್ನು ಕುಡಿಯುವುದರಿಂದ ತೂಕ ಇಳಿಸಿಕೊಳ್ಳಲು ಸಹಾಯವಾಗುತ್ತದೆ.

ಪಿಂಕ್ ಸಾಲ್ಟ್ ನೀರನ್ನು ತಯಾರಿಸುವ ವಿಧಾನಗಳು

ಪಿಂಕ್ ಸಾಲ್ಟ್ ಪಾನೀಯವನ್ನು ಈ ಕೆಳಗಿನ ಎರಡು ವಿಧಾನಗಳಲ್ಲಿ ತಯಾರಿಸಬಹುದು:

ಪಿಂಕ್ ಸಾಲ್ಟ್, ನಿಂಬೆ ಮತ್ತು ಜೇನುತುಪ್ಪದ ಪಾನೀಯ:

ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಪಿಂಕ್ ಸಾಲ್ಟ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ನಂತರ ಅದಕ್ಕೆ ನಿಂಬೆ ರಸ ಮತ್ತು ಜೇನುತುಪ್ಪವನ್ನು ಸೇರಿಸಿ.

ಬೇಕಿದ್ದರೆ, ನೀವು ಸ್ವಲ್ಪ ಕರಿಮೆಣಸು ಪುಡಿಯನ್ನೂ ಸೇರಿಸಬಹುದು.

ಪಿಂಕ್ ಸಾಲ್ಟ್ ಮತ್ತು ಆಪಲ್ ಸೈಡರ್ ವಿನೆಗರ್ ಪಾನೀಯ:

ಉಗುರು ಬೆಚ್ಚಗಿನ ನೀರಿಗೆ ಪಿಂಕ್ ಸಾಲ್ಟ್ ಮತ್ತು ಆಪಲ್ ಸೈಡರ್ ವಿನೆಗರ್ (ACV) ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ನಂತರ ಅದಕ್ಕೆ ನಿಂಬೆ ರಸವನ್ನು ಸೇರಿಸಿ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.

    ಪಿಂಕ್ ಸಾಲ್ಟ್ ನೀರಿನ ಪ್ರಯೋಜನಗಳೇನು?

    ತೂಕ ಇಳಿಕೆಗೆ ಸಹಕಾರಿ: ಈ ಪಾನೀಯವು ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ, ಇದು ಕೊಬ್ಬನ್ನು ವೇಗವಾಗಿ ಕರಗಿಸಲು ಸಹಾಯ ಮಾಡುತ್ತದೆ.

    ಜೀರ್ಣಕ್ರಿಯೆ ಸುಧಾರಣೆ: ಬೆಳಿಗ್ಗೆ ಇದನ್ನು ಕುಡಿಯುವುದರಿಂದ ಹೊಟ್ಟೆ ಶುದ್ಧವಾಗಿ, ಗ್ಯಾಸ್ ಮತ್ತು ಅಜೀರ್ಣದಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ.

    ಜಲಸಂಚಯನ (ಹೈಡ್ರೇಶನ್) ಹೆಚ್ಚಳ: ಈ ಪಾನೀಯವು ದೇಹದಲ್ಲಿ ಸರಿಯಾದ ಪ್ರಮಾಣದ ನೀರಿನ ಅಂಶವನ್ನು ಕಾಪಾಡಲು ಸಹಾಯ ಮಾಡುತ್ತದೆ. ಇದರಿಂದಾಗಿ ಚರ್ಮವು ಹೊಳೆಯಲು ಪ್ರಾರಂಭಿಸುತ್ತದೆ.

    ವಿಷವನ್ನು ಹೊರಹಾಕುತ್ತದೆ: ಇದು ದೇಹದ ನಿರ್ವಿಷೀಕರಣ (Detoxification) ಪ್ರಕ್ರಿಯೆಗೆ ಸಹಾಯ ಮಾಡಿ, ನಿಮ್ಮನ್ನು ಹಗುರ ಮತ್ತು ಶಕ್ತಿಯುತವಾಗಿ ಇರಿಸುತ್ತದೆ.

    WhatsApp Image 2025 09 05 at 11.51.16 AM 12

    ಈ ಮಾಹಿತಿಗಳನ್ನು ಓದಿ

    ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

    WhatsApp Group Join Now
    Telegram Group Join Now

    Popular Categories