Picsart 25 08 28 22 28 20 186 scaled

ಬೆಳಗಿನ ವಾಕಿಂಗ್ ಸರಿಯಾಗಿ ಮಾಡದಿದ್ದರೆ ಪ್ರಯೋಜನಕ್ಕಿಂತ ನಷ್ಟವೇ ಹೆಚ್ಚು! ತಪ್ಪದೇ ತಿಳಿದುಕೊಳ್ಳಿ

Categories:
WhatsApp Group Telegram Group

ಆರೋಗ್ಯ ಕಾಪಾಡಿಕೊಳ್ಳುವುದು ಇಂದಿನ ಜೀವನಶೈಲಿಯಲ್ಲಿ ಅತ್ಯಂತ ಮುಖ್ಯ. ದಿನನಿತ್ಯದ ಒತ್ತಡ, ಅಸ್ವಸ್ಥಕರ ಆಹಾರ ಪದ್ಧತಿ ಮತ್ತು ಕುಳಿತ ಕೆಲಸಗಳ ನಡುವಿನಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಸುಲಭವಾದ ಮಾರ್ಗಗಳಲ್ಲಿ ಒಂದಾಗಿದೆ ಬೆಳಗಿನ ವಾಕಿಂಗ್ (Morning Walk). ಬೆಳಿಗ್ಗೆ ಹಸಿರು ಗಾಳಿ, ತಾಜಾ ವಾತಾವರಣದಲ್ಲಿ ನಡೆದರೆ ದೇಹ ಹಾಗೂ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು. ಹೆಚ್ಚಾಗಿ ಶ್ವಾಸಕೋಶಗಳು ಬಲವಾಗುತ್ತವೆ. ಜೊತೆಗೆ, ಹೃದಯದ ಆರೋಗ್ಯ ಸುಧಾರಣೆ, ತೂಕ ನಿಯಂತ್ರಣ, ಒತ್ತಡ ನಿವಾರಣೆ, ಮನಸ್ಸಿಗೆ ಶಾಂತಿ ಮತ್ತು ದಿನಪೂರ್ತಿ ಉತ್ಸಾಹಭರಿತರಾಗಿ ಇರಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಆದರೆ, ವಾಕಿಂಗ್ ಮಾಡುವ ವಿಧಾನ ಸರಿಯಾಗಿರದಿದ್ದರೆ ಅಥವಾ ಕೆಲವು ಸಾಮಾನ್ಯ ತಪ್ಪುಗಳನ್ನು ಮಾಡಿದರೆ ಪ್ರಯೋಜನಕ್ಕಿಂತ ನಷ್ಟವೇ ಹೆಚ್ಚು. ಅಂದರೆ, ದೇಹಕ್ಕೆ ಬಲ ನೀಡಬೇಕಾದ ಅಭ್ಯಾಸವೇ ಕೆಲವೊಮ್ಮೆ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಆದ್ದರಿಂದ ಬೆಳಗಿನ ವಾಕಿಂಗ್ ಮಾಡುವ ಪ್ರತಿಯೊಬ್ಬರೂ ತಪ್ಪದೇ ಗಮನಿಸಬೇಕಾದ ಕೆಲವು ವಿಷಯಗಳಿವೆ ಅವುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಬೆಳಗಿನ ವಾಕಿಂಗ್ ಮಾಡುವಾಗ ಪ್ರತಿಯೊಬ್ಬರೂ ಗಮನಿಸಬೇಕಾದ ವಿಷಯ:

1. ನೀರು ಕುಡಿಯದೇ ವಾಕಿಂಗ್ ಹೋಗುವುದು:

ಬೆಳಿಗ್ಗೆ ಎದ್ದು ನೇರವಾಗಿ ವಾಕಿಂಗ್‌ಗೆ ಹೋಗುವುದು ಅನೇಕರು ಮಾಡುವ ತಪ್ಪಾಗಿದೆ. ನೀರು ಕುಡಿಯದೇ ನಡೆಯುವುದರಿಂದ ದೇಹ ಬೇಗನೆ ದಣಿವನ್ನು ಅನುಭವಿಸುತ್ತದೆ ಮತ್ತು ನಿರ್ಜಲೀಕರಣ (Dehydration) ಉಂಟಾಗುತ್ತದೆ. ಆದ್ದರಿಂದ, ವಾಕಿಂಗ್‌ಗೆ ಹೋಗುವ 15-20 ನಿಮಿಷಗಳ ಮೊದಲು ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರು ಕುಡಿಯುವುದು ಅಗತ್ಯ.

2. ಖಾಲಿ ಹೊಟ್ಟೆಯಲ್ಲಿ ದೀರ್ಘ ಹೊತ್ತು ನಡೆಯುವುದು:

ಖಾಲಿ ಹೊಟ್ಟೆಯಲ್ಲಿ ದೀರ್ಘ ಕಾಲ ವಾಕಿಂಗ್ ಮಾಡಿದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಇದರಿಂದ ತಲೆತಿರುಗುವುದು, ಆಯಾಸ, ಕೆಲವೊಮ್ಮೆ ತಲೆನೋವು ಕಾಣಿಸಿಕೊಳ್ಳಬಹುದು. ಹೀಗಾಗಿ 20 ನಿಮಿಷಕ್ಕಿಂತ ಹೆಚ್ಚು ಕಾಲ ವಾಕಿಂಗ್ ಮಾಡಲು ಉದ್ದೇಶಿಸಿದರೆ ಮೊದಲು ಬಾಳೆಹಣ್ಣು, ನೆನೆಸಿದ ಕಡಲೆಕಾಯಿ ಅಥವಾ ಒಂದು ಹಿಡಿ ಒಣಹಣ್ಣು ತಿನ್ನುವುದು ಒಳಿತು.

3. ವಾರ್ಮ್‌ಅಪ್(Warm up) ಮಾಡದೆ ಆರಂಭಿಸುವುದು:

ಬೆಳಿಗ್ಗೆ ನಿದ್ರೆಯಿಂದ ಎದ್ದ ತಕ್ಷಣ ಸ್ನಾಯುಗಳು ಇನ್ನೂ ಗಟ್ಟಿಯಾಗಿರುತ್ತವೆ. ಈ ಸಮಯದಲ್ಲಿ ವಾರ್ಮ್‌ಅಪ್ ಮಾಡದೆ ನೇರವಾಗಿ ನಡೆಯುವುದರಿಂದ ಸ್ನಾಯು ನೋವು, ಕೀಲು ನೋವು ಅಥವಾ ಆಕಸ್ಮಿಕ ಒತ್ತಡ ಉಂಟಾಗಬಹುದು. ಆದ್ದರಿಂದ ಕನಿಷ್ಠ 3-5 ನಿಮಿಷಗಳ ಕಾಲ ಸರಳವಾದ ಸ್ಟ್ರೆಚಿಂಗ್ ಅಥವಾ ವಾರ್ಮ್‌ಅಪ್ ವ್ಯಾಯಾಮ ಮಾಡಿದ ನಂತರವೇ ನಡೆಯಲು ಪ್ರಾರಂಭಿಸಬೇಕು.

4. ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದು:

ಅನೇಕರು ವಾಕಿಂಗ್‌ಗೆ ಶಕ್ತಿ ಸಿಗಲೆಂದು ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುತ್ತಾರೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಖಾಲಿ ಹೊಟ್ಟೆಯಲ್ಲಿ ಕೆಫೀನ್ ಸೇವನೆ ಮಾಡಿದರೆ ಆಮ್ಮಿಯತೆ (Acidity), ಎದೆಯುರಿ ಮತ್ತು ನರಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ. ಆದ್ದರಿಂದ ವಾಕಿಂಗ್ ಬಳಿಕ ಲಘು ಉಪಹಾರ ಮಾಡಿ ನಂತರವೇ ಕಾಫಿ ಕುಡಿಯುವುದು ಒಳಿತು.

5. ವಾಕಿಂಗ್‌ಗೆ ಮೊದಲು ಶೌಚಾಲಯಕ್ಕೆ ಹೋಗದೇ ಇರುವುದು:

ಹೊರಗೆ ಹೋಗುವ ತುರ್ತು ಕಾರಣಗಳಿಂದ ಕೆಲವರು ಶೌಚಾಲಯಕ್ಕೆ ಹೋಗದೆ ವಾಕಿಂಗ್ ಪ್ರಾರಂಭಿಸುತ್ತಾರೆ. ಇದು ಹೊಟ್ಟೆ ಸಂಬಂಧಿ ಸಮಸ್ಯೆಗಳು, ಜೀರ್ಣಕ್ರಿಯೆಯ ತೊಂದರೆಗಳು ಮತ್ತು ಕೆಲವೊಮ್ಮೆ ಯುಟಿಐ (UTI) ಉಂಟಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ವಾಕಿಂಗ್‌ಗೆ ತೆರಳುವ ಮೊದಲು ವಾಶ್‌ರೂಮ್‌ಗೆ ಹೋಗುವುದು ಅತ್ಯಗತ್ಯ.

ಒಟ್ಟಾರೆಯಾಗಿ, ಬೆಳಗಿನ ವಾಕಿಂಗ್ ದೇಹಕ್ಕೆ ಆರೋಗ್ಯದ ದಾರಿ ತೆರೆಸಿದರೂ, ಅದನ್ನು ಸರಿಯಾದ ರೀತಿಯಲ್ಲಿ ಮಾಡುವುದು ಮುಖ್ಯ. ನೀರು ಕುಡಿಯುವುದು, ವಾರ್ಮ್‌ಅಪ್ ಮಾಡುವುದು, ಸರಿಯಾದ ಆಹಾರ ಸೇವಿಸುವುದು ಮತ್ತು ಅನಗತ್ಯ ಅಭ್ಯಾಸಗಳನ್ನು ತ್ಯಜಿಸುವುದರಿಂದ ವಾಕಿಂಗ್‌ನ ಪ್ರಯೋಜನಗಳನ್ನು ಪೂರ್ಣವಾಗಿ ಪಡೆಯಬಹುದು. ನೆನಪಿಟ್ಟುಕೊಳ್ಳಿ, ಸರಿಯಾದ ವಿಧಾನದಲ್ಲಿ ನಡೆದರೆ ವಾಕಿಂಗ್ ಜೀವನ ಶೈಲಿಯ ಅತ್ಯುತ್ತಮ ಔಷಧವಾಗಿರುತ್ತದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

WhatsApp Group Join Now
Telegram Group Join Now

Popular Categories