Picsart 25 11 22 22 13 09 663 scaled

ಮನೆಗೆ ಹಾವು ಬಂದರೆ ಭಯ ಬೇಡ – ಜಾಣ್ಮೆಯಿಂದ ಹೀಗೆ ಮಾಡಿದ್ರೆ ಹಾವು ಸ್ವತಃ ಹೊರ ಹೋಗುತ್ತದೆ!

Categories:
WhatsApp Group Telegram Group

ಭಾರತದಲ್ಲಿ ಮಾತ್ರವಲ್ಲ, ವಿಶ್ವದಲ್ಲಿಯೇ ಭಯ ಹುಟ್ಟಿಸುವ ಜೀವಿಗಳಲ್ಲಿ ಹಾವುಗಳು (Snakes) ಪ್ರಮುಖ ಸ್ಥಾನದಲ್ಲಿವೆ. ಕೆಲವು ಜಾತಿಯ ಹಾವುಗಳು ವಿಷಕಾರಿ, ಅವುಗಳ ಕಚ್ಚಿದರೆ ಜೀವಕ್ಕೆ ಅಪಾಯ. ಆದರೆ ಒಂದು ಸತ್ಯವನ್ನು ಜನರು ಸಾಮಾನ್ಯವಾಗಿ ಮರೆತು ಬಿಡುತ್ತಾರೆ ಹಾವು ಮನುಷ್ಯನ ಮೇಲೆ ದಾಳಿ ಮಾಡಲು ಬರುವುದಿಲ್ಲ, ಅದು ಹೆದರಿದಾಗ ಮಾತ್ರ ಕಚ್ಚುತ್ತದೆ. ಬೇಸಿಗೆ ಮತ್ತು ಮಳೆಗಾಲದಲ್ಲಿ ಹಾವುಗಳು ತಮ್ಮ ವಾಸಸ್ಥಾನಗಳಿಂದ ಹೊರಬರುತ್ತವೆ. ಈ ಸಮಯದಲ್ಲಿ ಆಹಾರ (ಇಲಿ, ಕಪ್ಪೆ, ಸಣ್ಣ ಪಕ್ಷಿಗಳು, ಕೀಟಗಳು) ಹುಡುಕುತ್ತಾ ಮನೆ-ಮಳಿಗೆಯೊಳಗೂ ಬರಬಹುದು. ಮನೆ ಮುಂದೆ ಗಿಡಮರ, ಫರ್ಪೆಟ್, ಹಳೆಯ ಬಟ್ಟೆ, ಇಟ್ಟಿಗೆ ರಾಶಿ ಇದ್ದರೆ, ಅವು ಅಲ್ಲಿ ಅಡಗಿಕೊಳ್ಳುತ್ತವೆ. ಇಂತಹ ಸಂದರ್ಭದಲ್ಲಿ ಹಾವು ಮನೆಗೆ ಬಂದರೆ ಅನೇಕರ  ಗಾಬರಿಯಾಗುತ್ತಾರೆ, ಕೂಗಿಕೊಳ್ಳುತ್ತಾರೆ, ಹೊರಗೆ ಓಡುತ್ತಾರೆ ಅಥವಾ ಹಿಡಿದು ಕೊಲ್ಲೋದಕ್ಕೆ ಪ್ರಯತ್ನ ಪಡುತ್ತಾರೆ. ಆದರೆ ತಜ್ಞರ ಪ್ರಕಾರ ಈ ಕ್ರಮಗಳು ತಪ್ಪು. ಹಾಗಿದ್ದರೆ ಹಾವು ಮನೆಗೆ ಬಂದಾಗ ಏನು ಮಾಡಬೇಕು ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹಾವು ಮನೆಗೆ ಬಂದಾಗ ನಾವು ಈ ಕೆಲಸವನ್ನು ಮಾಡಬರದು:

ಅದನ್ನು ಹೊಡೆಯಲು ಪ್ರಯತ್ನಿಸಬೇಡಿ
ಜೋರಾಗಿ ಓಡಾಡಬೇಡಿ
ಕಡ್ಡಿ, ಕಲ್ಲು, ಕೋಲು ಇತ್ಯಾದಿಯಿಂದ ಚದುರಿಸುವ ಪ್ರಯತ್ನ ಮಾಡಬೇಡಿ
ಹೀಗೆ ಮಾಡಿದರೆ ಹಾವು ಭಯಪಟ್ಟು ಕಿಟಕಿ, ಸೋಫಾ, ಕಾರ್ಬೋರ್ಡ್ ಒಳಗೆ ಅಡಗಿಕೊಳ್ಳುತ್ತದೆ. ನಂತರ ಅದನ್ನು ಹೊರಗೆ ಕಳಿಸುವುದು ಬಹಳ ಕಷ್ಟ!

ಹಾವುಗಳನ್ನು ಓಡಿಸುವ ಸುಲಭ ಮತ್ತು ಸುರಕ್ಷಿತ ವಿಧಾನಗಳು ಹೀಗಿವೆ:

ತಜ್ಞರ ಪ್ರಕಾರ ಹಾವುಗಳಿಗೆ ಕೆಲವು ವಾಸನೆಗಳು ತುಂಬಾ ಅಸಹ್ಯ. ಕೆಲವು ಸುಗಂಧಗಳು ಅವುಗಳಿಗೆ ಸಹಿಸಲಾರದ್ದು. ಆದ್ದರಿಂದ ಕೆಳಗಿನ ವಿಧಾನ ಪರಿಣಾಮಕಾರಿ.

ನವರತ್ನ ಎಣ್ಣೆ ಅಥವಾ ಬಲವಾದ ಸುಗಂಧದ ಎಣ್ಣೆ ಸಿಂಪಡಿಸಿ:
ಹಾವು ಅಡಗಿರುವ ಸ್ಥಳದ ಬಳಿ ಸಿಂಪಡಿಸಿ
ನೇರವಾಗಿ ಹಾವಿನ ಮೇಲೆ ಸಿಂಪಡಿಸಬೇಡಿ
ಹಾವು ವಾಸನೆ ತಾಳಲಾಗದೆ ಹೊರಗೆ ಬರುತ್ತದೆ.

ಫೀನೈಲ್ ನೀರು:
ಬಕೆಟ್ ನೀರಿಗೆ ಫೀನೈಲ್ ಬೆರೆಸಿ, ಹಾವು ಇರುವ ಸ್ಥಳದ ಬಳಿ ಚೆಲ್ಲಿದರೆ ವಾಸನೆಗೆ ಹೆದರಿಸಿ ಹೊರಗೆ ಕಳುಹಿಸಬಹುದು.

ಬೇಕಿಂಗ್ ಪೌಡರ್, ಫಾರ್ಮಾಲಿನ್, ಸೀಮೆ ಎಣ್ಣೆ:
ಈ ವಾಸನೆಗಳು ಸಹ ಹಾವುಗಳಿಗೆ ಅಸಹ್ಯ.
ಇವನ್ನು ನೀರಿನಲ್ಲಿ ಬೆರೆಸಿ ಸ್ಥಳದ ಸುತ್ತ ಮುತ್ತ ಸಿಂಪಡಿಸಿದರೆ ಹಾವು ಹೊರಗೆ ಹೋಗಲು ಪ್ರಯತ್ನಿಸುತ್ತದೆ.

HIT ಅಥವಾ ಕೀಟನಾಶಕ ಸ್ಪ್ರೇ:
ಇದು ಕೊಲ್ಲಲು ಅಲ್ಲ ವಾಸನೆಗಾಗಿ ಅಷ್ಟೆ.
ಹಾವು ಅಡಗಿರುವ ಸ್ಥಳದ ಹೊರಭಾಗದಲ್ಲಿ ಮಾತ್ರ ಸಿಂಪಡಿಸಿದರೆ, ಅದು ಹೊರಗೆ ಬರಲು ಪ್ರಯತ್ನಿಸುತ್ತದೆ.

ಎಚ್ಚರಿಕೆ: (VERY IMPORTANT):

ಹಾವಿನ ಮೇಲೆ ನೇರವಾಗಿ ಫೀನೈಲ್, ಸ್ಪ್ರೇ, ಕೀಟನಾಶಕ ಹಾಕಬೇಡಿ.
ಅದನ್ನು ಚುಚ್ಚಲು, ಹಿಡಿಯೋಕೆ ಹೋಗೋದು ಅಥವಾ ಕಲ್ಲು ಹೊಡೆಯಬೇಡಿ.
ಹಾವು ಹೊರಗೆ ಬರಲು ಪ್ರಾರಂಭಿಸಿದಾಗ ಅಡ್ಡಬರಬೇಡಿ.
ಅದಕ್ಕೆ ಹಾನಿಯಾದರೆ ಅಥವಾ ಅದು ಭಯಪಟ್ಟರೆ ಅದೇ ದಾಳಿ ಮಾಡುತ್ತದೆ.

ಭವಿಷ್ಯದಲ್ಲಿ ಹಾವು ಬಾರದಂತೆ ಮುನ್ನೆಚ್ಚರಿಕೆಯಾಗಿ ಯಾವ ಕ್ರಮಗನ್ನು ತೆಗೆದುಕೊಳ್ಳ ಬೇಕು?:

ಮನೆಯ ಹೊರಗೆ ಅಳವಡಿಸಿದ್ದ ಇಟ್ಟಿಗೆ, ಮರ, ಹಳೆಯ ವಸ್ತುಗಳ ರಾಶಿ ತೆಗೆದುಹಾಕಿ.
ಮನೆಯ ಹಿಂಬಾಗಿಲು ಮತ್ತು ಗಾರ್ಡನ್‌ ನಲ್ಲಿನ ಹುಲ್ಲು ಕತ್ತರಿಸಿ ಇಡಿ.
ಇಲಿ ಇದ್ದರೆ ಅತೀ ಬೇಗ ನಿವಾರಿಸಿ ಇಲಿಗಳು ಹಾವನ್ನು ಆಕರ್ಷಿಸುತ್ತವೆ

ಒಟ್ಟಾರೆಯಾಗಿ, ಹಾವು ಹೊರ ಹೋಗದಿದ್ದರೆ, ತಕ್ಷಣ Snake Rescue ಅಥವಾ Forest Department ಗೆ ಕರೆ ಮಾಡಿ. ಇಂದಿನ ದಿನಗಳಲ್ಲಿ ಹಾವು ರೆಸ್ಕ್ಯೂ ಮಾಡುವವರು ಬಹಳ ಮಂದಿ ಸಿಗುತ್ತಾರೆ. ಹಾವು ಮನೆಯಲ್ಲಿ ಕಾಣಿಸಿಕೊಂಡರೂ ಗಾಬರಿ ಬೇಡ. ಸರಿಯಾದ ಕ್ರಮಗಳು, ಸುರಕ್ಷತೆ ಮತ್ತು ಜಾಗ್ರತೆ ಇದ್ದರೆ, ಹಾವೇ ಸ್ವತಃ ಮನೆಯಿಂದ ಹೊರ ಹೋಗುತ್ತದೆ.

WhatsApp Image 2025 09 05 at 11.51.16 AM 12

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories