WhatsApp Image 2025 12 30 at 4.22.17 PM

‘ರಾಜ್ಯ ಸರ್ಕಾರಿ’ ನೌಕರರ ಗಮನಕ್ಕೆ : ‘ಆದಾಯ ತೆರಿಗೆ ಪಾವತಿ’ ಈ ದಿನಾಂಕದೊಳಗೆ ಮಾಹಿತಿ ನೀಡದಿದ್ದರೆ ವೇತನದಲ್ಲಿ ತೆರಿಗೆ ಕಡಿತ ಫಿಕ್ಸ್!

Categories:
WhatsApp Group Telegram Group
📌 ಪ್ರಮುಖ ಮುಖ್ಯಾಂಶಗಳು
  • ನವೆಂಬರ್ 25ರೊಳಗೆ ತೆರಿಗೆ ಪದ್ಧತಿ ಆಯ್ಕೆ ಕಡ್ಡಾಯ.
  • ಹೊಸ ಪದ್ಧತಿಯಲ್ಲಿ HRA, ಗೃಹಸಾಲ ಬಡ್ಡಿ ರಿಯಾಯಿತಿ ಇರುವುದಿಲ್ಲ.
  • ಹಳೆ ಪದ್ಧತಿ ಇಚ್ಛಿಸುವವರು 12BB ಸಲ್ಲಿಸುವುದು ಅನಿವಾರ್ಯ.

ಪ್ರತಿ ವರ್ಷದಂತೆ ಈ ಬಾರಿಯೂ ಆದಾಯ ತೆರಿಗೆ (Income Tax) ಲೆಕ್ಕಾಚಾರ ಶುರುವಾಗಿದೆ. 2025-26ನೇ ಸಾಲಿನ ಆರ್ಥಿಕ ವರ್ಷಕ್ಕೆ ಸಂಬಂಧಿಸಿದಂತೆ, ನಿಮ್ಮ ವೇತನದಿಂದ ಎಷ್ಟು ತೆರಿಗೆ ಕಟ್ ಆಗಬೇಕು ಎಂಬುದನ್ನು ನಿರ್ಧರಿಸಲು ಸರ್ಕಾರ ಈಗ ಹೊಸ ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಹೀಗಿದೆ

  1. ದಿನಾಂಕ: 01-04-2020ರಿಂದ ಅನ್ವಯವಾಗುವಂತೆ ವರಮಾನ ತೆರಿಗೆ ಕಾಯಿದೆ ಕಲಂ 115BAC ರಡಿ ಆದಾಯ ತೆರಿಗೆ ದರದಲ್ಲಿ ರಿಯಾಯತಿ ನೀಡಿ ಹೊಸ ತೆರಿಗೆ ವಿಧಾನವನ್ನು ಜಾರಿಗೆ ತರಲಾಗಿರುತ್ತದೆ. ಅದರಂತೆ 2020-21 ನೇ ಆರ್ಥಿಕ ವರ್ಷದಿಂದ ಎರಡು ತೆರಿಗೆ ವಿಧಾನಗಳು ಜಾರಿಯಲ್ಲಿರುತ್ತದೆ. ಒಂದು ನಿಯಮಾನುಸಾರ ಅನ್ವಯವಾಗುವ ಕಡಿತ ಮತ್ತು ವಿನಾಯಿತಿಗಳನ್ನು ಮತ್ತು Finance Act 2020 ರಲ್ಲಿ ವಿಧಿಸಲಾಗಿರುವ ತೆರಿಗೆ ದರಗಳನ್ನು ಒಳಗೊಂಡ ಹಳೆ ಆದಾಯ ತರಿಗೆ ವಿಧಾನ. ಎರಡನೆಯ ವಿಧಾನ ಕಾಯಿದೆ ಕಲಂ 115BAC ರಡಿ ನಿರ್ದಿಷ್ಟ ಕಡಿತ ಮತ್ತು ವಿನಾಯಿತಿಗಳನ್ನು ಕೈ ಬಿಟ್ಟು ವಿಧಿಸಲಗಿರುವ ಹೊಸ ತೆರಿಗೆ ದರ.
  2. 2023-24 ನೇ ಆರ್ಥಿಕ ವರ್ಷದಿಂದ ವರಮಾನ ತೆರಿಗೆ ಕಾಯಿದೆ ಕಲಂ 115BAC ರಡಿ ಉಪನಿಯಮ (IA) ಸೇರಿಸಲಾಗಿದ್ದು ಅದರನ್ವಯ ಹೊಸ ತೆರಿಗೆ ವಿಧಾನ ಪೂರ್ವ ನಿಯೋಜಿತ (DEFAULT) ಆದಾಯ ತೆರಿಗೆ ವಿಧಾನವಾಗಿರುತ್ತದೆ ಹಾಗೂ ಇಚ್ಛಿಸಿದಲ್ಲಿ ಹಳೆ ఆదాయ ತೆರಿಗೆ ವಿಧಾನವನ್ನು ಆಯ್ಕೆ ಮಾಡಿಕೊಳ್ಳಲು ವರಮಾನ ತೆರಿಗೆ ಕಾಯಿದೆ ಕಲಂ 115BAC(1) ರಲ್ಲಿ ಅವಕಾಶ ಕಲ್ಪಿಸಲಾಗಿದೆ. ಆದಾಯ ತೆರಿಗೆ ಕಕ್ಷೆಗೆ ಒಳಪಡುವ ಎಲ್ಲಾ ಸರ್ಕಾರಿ ನೌಕರರು ಹಳೆ ಆದಾಯ ತೆರಿಗೆ ದರ ವಿಧಾನವನ್ನು ಆಯ್ಕೆ ಮಾಡಿ ಕೊಳ್ಳಲು ಇಚ್ಛಿಸಿದಲ್ಲಿ ಲಿಖಿತವಾಗಿ ಅವರ ವೇತನ ತೆಗೆಯುವ ಹಾಗೂ ವಿತರಿಸುವ ಅಧಿಕಾರಿಗಳಿಗೆ ದಿನಾಂಕ: 25-11-2025 ರೊಳಗೆ ನೀಡತಕ್ಕದ್ದು. ಆದಾಯದ ಮೇಲೆ ಪಾವತಿಸಬೇಕಾಗುವ ಹಳೇ ಮತ್ತು ಹೊಸ ಆದಾಯ ತೆರಿಗೆ ದರ ಹಾಗೂ ಇತರೆ ಅವಶ್ಯಕ ವಿವರಗಳನ್ನು ಅನುಬಂಧ-III ರಲ್ಲಿ ನೀಡಿದೆ.
  3. ಕಾಯಿದೆ ಕಲಂ 1ISBAC ರಡಿ ವಿಧಿಸಲಾಗಿರುವ ಹೊಸ ಆದಾಯ ತೆರಿಗೆ ದರ ವಿಧಾನವನ್ನು ಆಯ್ಕೆ ಮಾಡಿಕೊಂಡಿರುವ ನೌಕರರಿಗೆ ಈ ಕೆಳಕಂಡ ಕಡಿತ ಮತ್ತು ವಿನಾಯಿತಿಗಳು ಅನ್ವಯವಾಗುವುದಿಲ್ಲ.

ವೃತ್ತಿ ತೆರಿಗೆ

*ಮನೆ ಬಾಡಿಗೆ ಭತ್ಯೆ

*ಇತರೆ ವಿಶೇಷ ಭತ್ಯೆ [ಕಲಂ10(14)]

*ಸ್ವಂತ ವಾಸಕ್ಕಾಗಿ ಮನೆ ಕಟ್ಟಲು / ಖರೀದಿಸಲು ತೆಗೆದುಕೊಂಡ ಸಾಲದ ಮೇಲಿನ ಬಡ್ಡಿ (៩០០ 24)

*ಚ್ಯಾಪ್ಟರ್ VIA ವಿನಾಯಿತಿಗಳು [ಕಲಂ 80CCD(2) ಮತ್ತು 80JJAA ಹೊರತು ಪಡಿಸಿ]

2023-24ನೇ ಆರ್ಥಿಕ ವರ್ಷದಿಂದ ಸ್ಟಾಂಡರ್ಡ್ ಡಿಡಕ್ಷನ್ ಸೌಲಭ್ಯ ಹೊಸ ಆದಾಯ ತೆರಿಗೆ ದರ ವಿಧಾನಕ್ಕೆ ವಿಸ್ತರಿಸಲಾಗಿದೆ.

(ಸ್ಟಾಂಡರ್ಡ್ ಡಿಡಕ್ಷನ್ ಆದಾಯದ ಮೇಲೆ ಪಾವತಿಸಬೇಕಾಗುವ ಆದಾಯ ತೆರಿಗೆ ದರ ಹಾಗೂ ಇತರೆ ಅವಶ್ಯಕ ವಿವರಗಳನ್ನು ಅನುಬಂಧ-III ರಲ್ಲಿ ನೀಡಿದೆ.)

  1. ಹಳೆ ಆದಾಯ ತರಿಗೆ ವಿಧಾನದಲ್ಲಿ ಮುಂದುವರೆಯಲು ಇಚ್ಚಿಸುವ ನೌಕರರು ಅವರ ಉಳಿತಾಯದ ಮಾಹಿತಿಗಳನ್ನು (ವೇತನದಿಂದ ಆಗುವ ಕಡಿತಗಳನ್ನು ಹೊರತು ಪಡಿಸಿ) ನಮೂನೆ 12BB ರಲ್ಲಿ ಅಗತ್ಯ ದಾಖಲೆಗಳೊಂದಿಗೆ ನೀಡ ತಕ್ಕದ್ದು

ಕಲಂ 80CCEರನ್ವಯ ಪ್ರಸ್ತುತ ಕಲಂ 80C, 80CCC, 80CCD(1) ಈ ಮೂರನ್ನು ಸೇರಿಸಿ ತೊಡಗಿಸಬಹುದಾದ ಮೊತ್ತದ ಗರಿಷ್ಠ ಮಿತಿ ರೂ.1.50 ಲಕ್ಷ ಅಂದರೆ ಆರ್ಥಿಕ ವರ್ಷದಲ್ಲಿ ಮಾಡಬಹುದಾದ ಎಲ್ಲಾ ರೀತಿಯ ಉಳಿತಾಯ, ಟ್ಯೂಷನ್ ಫೀ ಹಾಗೂ ಮನೆ ಕಟ್ಟುವ ಸಾಲದ ಅಸಲು ಮರುಪಾವತಿ, ಬ್ಯಾಂಕು ಠೇವಣಿ, ಸುಕನ್ಯಾ ಸಮೃದ್ಧಿ ಯೋಜನೆ, ಎಲ್.ಐ.ಸಿ ಈ ಎಲ್ಲಾ ಮೊತ್ತ ಸೇರಿ ಗರಿಷ್ಠ ರೂ.1.50ಲಕ್ಷಕ್ಕೆ ಮೀರಬಾರದು ಎಂಬುದನ್ನು ತಿಳಿಸಿದೆ.

ii. 2021-22 ನೇ ಆರ್ಥಿಕ ವರ್ಷದಿಂದ ಸಾಮಾನ್ಯ ಭವಿಷ್ಯ ನಿಧಿ ಖಾತೆಯಲ್ಲಿ ರೂ.5.00 ಲಕ್ಷಕ್ಕು ಮೀರಿ ತೊಡಗಿಸಿದ್ದ ಮೊತ್ತವನ್ನು Taxable Contribution ಎಂದು ಪರಿಗಣಿಸಲಾಗುವುದು ಹಾಗೂ ಸದರಿ ಮೊತ್ತದ ಮೇಲಿನ ಬಡ್ಡಿಯನ್ನು ಆದಾಯಕರ ವರಮಾನ (Taxable Interest) ಪರಿಗಣಿಸಲಾಗುವುದು.

iii. ವೇತನದಿಂದ ಕಟಾಯಿಸದೇ ಇರುವ ಹೂಡಿಕೆಗಳಿಗೆ / ಟ್ಯೂಷನ್ ಫೀ / ಮನೆ ಕಟ್ಟುವ ಸಾಲದ ಅಸಲು ಮತ್ತು ಬಡ್ಡಿ ಇತ್ಯಾದಿಗಳಿಗೆ ವಿನಾಯ್ತಿಗೆ ಪರಿಗಣಿಸಲು ಮಾಹಿತಿಯನ್ನು ನಮೂನೆ 12BB ರಲ್ಲಿ ಪ್ರತ್ಯೇಕ, ಒಪ್ಪಬಹುದಾದ ದಾಖಲೆಗಳೊಂದಿಗೆ ಒದಗಿಸತಕ್ಕದ್ದು. ಸರಿಯಾದ ದಾಖಲಾತಿ ಒದಗಿಸದೇ ಇದ್ದಲ್ಲಿ ತೆರಿಗೆ ವಿನಾಯ್ತಿ ನೀಡತಕ್ಕದ್ದಲ್ಲ. ದಾಖಲಾತಿ ಪಡೆಯದೆ, ಸರಿಯಾಗಿ ಪರಿಶೀಲಿಸದೆ ತೆರಿಗೆ ವಿನಾಯ್ತಿ ನೀಡಿದ್ದಲ್ಲಿ, ಸಂಬಂಧಪಟ್ಟ ಅಧಿಕಾರಿಗಳು/ಸಿಬ್ಬಂದಿಯವರು ಹೊಣೆಗಾರರಾಗುತ್ತಾರೆ. ವೈಯಕ್ತಿಕವಾಗಿ

iv. ಆದಾಯ ತೆರಿಗೆ ಕಲಂ 80CCC ರನ್ವಯ ಎಲ್.ಐ.ಸಿ ಅಥವಾ ಇತರೆ ವಿಮಾದರರ ನಿರ್ದಿಷ್ಟ ಪೆನ್ನನ್ ಸ್ಟೀಂನಲ್ಲಿ ತೊಡಗಿಸಿದ ಮೊತ್ತಕ್ಕೆ ಗರಿಷ್ಟ ರೂ.1,50,000/-ವರೆಗೆ ವಿನಾಯ್ತಿ ನೀಡಿದೆ.

V. ಆದಾಯ ತೆರಿಗೆ ಕಲಂ 80CCD(1) ರನ್ವಯ ನ್ಯಾಷನಲ್ ಪೆನ್ನನ್ ಸ್ಕಿಂನಲ್ಲಿ ತೊಡಗಿಸಿದ ಮೊತ್ತಕ್ಕೆ ವೇತನದ ಶೇ 10 ರಷ್ಟು ಮೊತ್ತ ವಿನಾಯ್ತಿ ನೀಡಿದೆ.

vi. ಆದಾಯ ತೆರಿಗೆ ಕಲಂ 80CCD(1B) ರನ್ವಯ ನ್ಯಾಷನಲ್ ಪೆನ್ಸನ್ ಸ್ಕಿಂನಲ್ಲಿ (Voluntary Contribution) ತೊಡಗಿಸಿದ ಹೆಚ್ಚುವರಿ ಮೊತ್ತ ರೂ.50000/-ವರೆಗೆ ವಿನಾಯ್ತಿ ನೀಡಿದೆ. ಈ ಹೆಚ್ಚುವರಿ ಮೊತ್ತ ಕಲಂ 80CCD(1) ರಡಿ ಪರಿಗಣಿಸಲಾಗುವ ಮೊತ್ತ ಅಂದರೆ ವೇತನದ ಶೇ 10 ರಷ್ಟು ಮಿತಿಗೆ ಒಳಪಟ್ಟಿರುವ ಮೊತ್ತವಾಗಿರಬಾರದು. ಈ ವಿನಾಯ್ತಿ ಕಲಂ 80CCE ರಡಿ ನೀಡಲಾಗಿರುವ ಗರಿಷ್ಠ ಮಿತಿ ರೂ.1.50 ಲಕ್ಷ ಕ್ಕೆ ಒಳಪಡುವುದಿಲ್ಲ.

vii. ಆದಾಯ ತೆರಿಗೆ ಕಲಂ 80CCD(2) ರನ್ವಯ ನ್ಯಾಷನಲ್ ಪೆನ್ನನ್ ಸ್ಟೀಂನಲ್ಲಿ ಸರ್ಕಾರದ ವತಿಯಿಂದ ನೀಡಲಾಗುವ ಅಂಶದಾನಕ್ಕೆ (ವೇತನದ ಶೇ 10 ರಷ್ಟು ಮೊತ್ತಕ್ಕೆ ಮೀರದಂತೆ) ವಿನಾಯ್ತಿ ನೀಡಿದೆ. ಈ ವಿನಾಯ್ತಿ ಕಲಂ 80CCE ರಡಿ ನೀಡಲಾಗಿರುವ ಗರಿಷ್ಠ ಮಿತಿ ರೂ.1.50 ಲಕ್ಷ ಕ್ಕೆ ಒಳಪಡುವುದಿಲ್ಲ. (ಸರ್ಕಾರದ ವತಿಯಿಂದ ನ್ಯಾಷನಲ್ ಪೆನ್ನನ್ ಸ್ಟೀಂಗೆ ನೀಡಲಾಗಿರುವ ಅಂಶದಾನವನ್ನು ನೌಕರರ ಒಟ್ಟು ವೇತನ ಲೆಕ್ಕಾರಚಾರಕ್ಕೆ ಸೇರಿಸಿರಬೇಕು).

viii. ಆದಾಯ ತೆರಿಗೆ ಕಲಂ 80G ರನ್ವಯ ಚಾರಿಟೆಬಲ್ ಸಂಸ್ಥೆಗಳಿಗೆ ಡೊನೇಷನ್ ನೀಡಿ ವಿನಾಯಿತಿ ಕೈಮು ಮಾಡುವ ಪ್ರಕರಣಗಳಲ್ಲಿ ಇಂತಹ ಡೊನೇಷನ್ ಆದಾಯ ತೆರಿಗೆ ಕಾಯ್ದೆಯಡಿ ವಿನಾಯಿತಿಗೆ ಅರ್ಹತೆ ಪಡೆದಿರುವ ಬಗ್ಗೆ ಆದಾಯ ತೆರಿಗೆ ಇಲಾಖೆಯ ದೃಢೀಕರಣ ಪಡೆದ ನಂತರವೇ ವಿನಾಯ್ತಿ ನೀಡಬೇಕಾಗಿರುತ್ತದೆ. ಹಾಗೂ ರೂ. 2,000/-ಕ್ಕಿಂತ ಹೆಚ್ಚಿನ ಡೊನೇಷನ್‌ಗಳು ಚೆಕ್ ಅಥವಾ ಇತರೆ ಮೂಲಗಳಿಂದ ಪಾವತಿಯಾಗಿರಬೇಕು. ಸ್ವಚ್ಛ ಭಾರತ ಅಭಿಯಾನಕ್ಕೆ ವಂತಿಕೆ ನೀಡುವ ಮೊತ್ತಕ್ಕೆ ಕಲಂ 80G ರಡಿಯಲ್ಲಿ ಈ ಮೊತ್ತಕ್ಕೆ ಶೇ.100ರಷ್ಟು ವಿನಾಯಿತಿ ಲಭ್ಯವಿದೆ (ದಾಖಲೆಗಳನ್ನು ಒದಗಿಸುವುದು).

ix. ಆದಾಯ ತೆರಿಗೆ ಕಲಂ 24 ರಡಿ ಸ್ವಂತ ವಾಸಕ್ಕಾಗಿ ಮನೆ ಕಟ್ಟಲು / ಖರೀದಿಸಲು ತೆಗೆದುಕೊಂಡ ಸಾಲದ ಮೇಲಿನ ಬಡ್ಡಿ ದಿನಾಂಕ: 31-03-1999ರೊಳಗೆ ಸಾಲ ಪಡೆದಿದ್ದಲ್ಲಿ ಗರಿಷ್ಟ ರೂ.30,000/-ಗಳು, ದಿನಾಂಕ:01-04-1999ರ ನಂತರ ಪಡೆದಲ್ಲಿ ಗರಿಷ್ಟ ರೂ.2,00,000/- ಹಾಗೂ ಸದರಿ ಮನೆ ಕಟ್ಟುವ /ಕೊಳ್ಳುವ ಕಾರ್ಯವು ಸಾಲ ಪಡೆದ ಆರ್ಥಿಕ ವರ್ಷದಿಂದ ಮೂರು ವರ್ಷಗಳ ಒಳಗೆ ಮುಗಿದಿದ್ದಲ್ಲಿ (2017-18 ಆರ್ಥಿಕ ವರ್ಷದಿಂದ ಸಾಲ ಪಡೆದ 5 ವರ್ಷಗಳ ಒಳಗೆ) ವಿನಾಯಿತಿ ನೀಡತಕ್ಕದ್ದು.ಫಾರಂ 120 ರಲ್ಲಿ ಮಾಹಿತಿ ನೀಡುವುದು.

ಒಂದು ನೋಟದಲ್ಲಿ ತೆರಿಗೆ ನಿಯಮಗಳು

ಎಡಕ್ಕೆ ಸ್ಲೈಡ್ ಮಾಡಿ ನೋಡಿ ➔
ವಿವರ ಹಳೆ ಪದ್ಧತಿ (Old) ಹೊಸ ಪದ್ಧತಿ (New)
ಕೊನೆಯ ದಿನಾಂಕ 25-11-2025 ಅನ್ವಯಿಸುವುದಿಲ್ಲ
80C ವಿನಾಯಿತಿ 1.50 ಲಕ್ಷದವರೆಗೆ ಲಭ್ಯವಿಲ್ಲ
ಮನೆ ಸಾಲದ ಬಡ್ಡಿ 2 ಲಕ್ಷದವರೆಗೆ ಲಭ್ಯವಿಲ್ಲ
ಸ್ಟಾಂಡರ್ಡ್ ಡಿಡಕ್ಷನ್ ಲಭ್ಯವಿದೆ ಈಗ ವಿಸ್ತರಿಸಲಾಗಿದೆ
HRA ರಿಯಾಯಿತಿ ಲಭ್ಯವಿದೆ ಲಭ್ಯವಿಲ್ಲ
WhatsApp Image 2025 12 30 at 3.54.52 PM
WhatsApp Image 2025 12 30 at 3.54.52 PM 1
WhatsApp Image 2025 12 30 at 3.54.53 PM
WhatsApp Image 2025 12 30 at 3.54.53 PM 1
WhatsApp Image 2025 12 30 at 3.54.53 PM 2

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories