ಈ ವರದಿಯಲ್ಲಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗ(Regional Rural Bank)ಳಲ್ಲಿ ಹೊರಡಿಸಿದ 9000 ವಿವಿಧ ಹುದ್ದೆಗಳ ನೇಮಕಾತಿ ಕುರಿತು ತಿಲಿಸಿಕೊಡಲಾಗುತ್ತಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ ಕಛೇರಿ ಸಹಾಯಕ ಹುದ್ದೆಗಳ ನೇಮಕಾತಿ: IBPS RRB CRP recruitment 2024
ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ (IBPS) ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ ಖಾಲಿ ಇರುವ 9000 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಗೆ ಆನ್‌ಲೈನ್(Online) ಮೂಲಕ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 27-06-2023. ಅರ್ಜಿ ಸಲ್ಲಿಕೆ, ಅರ್ಹತೆ, ವಯೋಮಿತಿ ಮತ್ತು ಇತರ ಮಾಹಿತಿಯನ್ನು ಈ ವರದಿಯಲ್ಲಿ ತಿಳಿಸಲಾಗುವುದು.
ಸಂಸ್ಥೆಯ ಹೆಸರು : ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (Institute of Banking Personnel Selection – IBPS)
ಹುದ್ದೆಗಳ ವಿವರ:
ಕಛೇರಿ ಸಹಾಯಕ (ವಿವಿಧೋದ್ದೇಶ): 5538
ಆಫೀಸರ್ ಸ್ಕೆಲ್ 1 (AM): 2485
ಆಫೀಸರ್ ಸ್ಕೆಲ್ 2 (ಸಾಮಾನ್ಯ ಬ್ಯಾಂಕಿಂಗ್): 315
ಆಫೀಸರ್ ಸ್ಕೆಲ್ 2 (IT): 68
ಆಫೀಸರ್ ಸ್ಕೆಲ್ 2 (CA): 21
ಆಫೀಸರ್ ಸ್ಕೆಲ್ 2 (ಕಾನೂನು,Legal): 24
ಆಫೀಸರ್ ಸ್ಕೆಲ್ 2 (ಖಜಾನೆ ವ್ಯವಸ್ಥಾಪಕ,Treasury Manager): 08
ಆಫೀಸರ್ ಸ್ಕೆಲ್ 2 (ಮಾರ್ಕೆಟಿಂಗ್): 03
ಆಫೀಸರ್ ಸ್ಕೆಲ್ 2 (ಕೃಷಿ): 59
ಆಫೀಸರ್ ಸ್ಕೆಲ್ 3 (ಹಿರಿಯ ಮ್ಯಾನೇಜರ್, Senior Manager): 73
ಒಟ್ಟು ಹುದ್ದೆಗಳು: 8594
ವೇತನ/ ಸಂಬಳ:
ಅಯ್ಕೆಯಾದ ಅಭ್ಯರ್ಥಿ ಗಳಿಗೆ ಈ ಕೆಳಗಿನ ಶ್ರೇಣಿಯಲ್ಲಿ ವೇತನ ಪಾವತಿಸಲಾಗುವುದು
ಆಫೀಸರ್ ಸ್ಕೆಲ್ 1: ₹51,000-₹58,000
ಆಫೀಸರ್ ಸ್ಕೆಲ್ 2: ₹48,170-₹69,800
ಕಛೇರಿ ಸಹಾಯಕ: ₹21,000-₹48,000
ವೇತನದ ಜೊತೆಗೆ DA/HRA ಮುಂತಾದ ಸೌಲಭ್ಯಗಳು ಬ್ಯಾಂಕಿನ ನಿಯಮಗಳನ್ವಯ ದೊರೆಯುತ್ತವೆ.
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು 01-06-2024 ರಂದು ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಹೊಂದಿರಬೇಕು.
ಅರ್ಜಿ ಶುಲ್ಕ:
ಸಾಮಾನ್ಯ/ OBC/ EWS: ₹850
ಪ.ಜಾ/ ಪಪಂ/ ಅಂಗವಿಕಲ: ₹175
ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬಹುದು.
ವಯೋಮಿತಿ
01-06-2024 ರಂತೆ ಅಭ್ಯರ್ಥಿಯ ವಯಸ್ಸು ಈ ಕೆಳಗಿನಂತೆ ಪೂರೈಸಬೇಕು:
ಆಫೀಸರ್ ಸ್ಕೆಲ್ 1: 21-40 ವರ್ಷ
ಆಫೀಸರ್ ಸ್ಕೆಲ್ 2: 21-32 ವರ್ಷ
ಆಫೀಸರ್ ಸ್ಕೆಲ್ 3: 18-28 ವರ್ಷ
ಕಛೇರಿ ಸಹಾಯಕ: 18-28 ವರ್ಷ
ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ:
ಪರಿಶಿಷ್ಟ ಜಾತಿ(SC)/ ಪರಿಶಿಷ್ಟ ಪಂಗಡ(ST): 05 ವರ್ಷ
ಇತರೆ ಹಿಂದೂಳಿದ ವರ್ಗ: 03 ವರ್ಷ
ಅಂಗವಿಕಲ: 10 ವರ್ಷ (ಅವರ ಕೆಟಗೇರಿಯಲ್ಲಿ)
ಆಯ್ಕೆ ವಿಧಾನ:
ಪೂರ್ವಭಾವಿ ಪರೀಕ್ಷೆ
ಮುಖ್ಯ ಪರೀಕ್ಷೆ (ಸ್ಕೇಲ್ I, II, III)
ಸಂದರ್ಶನ(Interview) (ಸ್ಕೇಲ್ I, II, III)
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 07-06-2024
ಕೊನೆಯ ದಿನಾಂಕ: 27-06-2024
ಪೂರ್ವಭಾವಿ ಪರೀಕ್ಷೆ: ಆಗಸ್ಟ್ 2024
ಅರ್ಜಿ ಸಲ್ಲಿಸುವ ಲಿಂಕ್ : https://www.ibps.in/
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




