ದೇಶದ ಇಂಧನ ಭದ್ರತೆ, ಶುದ್ಧ ಅಡುಗೆ ಇಂಧನದ ಸಾಮಾನ್ಯ ಲಭ್ಯತೆ ಮತ್ತು ತಾಂತ್ರಿಕ ಶಿಕ್ಷಣದ ಗುಣಮಟ್ಟವನ್ನು ಬಲಪಡಿಸುವ ಉದ್ದೇಶದಿಂದ, ಕೇಂದ್ರ ಸರ್ಕಾರವು ಮಹತ್ವದ ಆರ್ಥಿಕ ಅನುಮೋದನೆಗಳನ್ನು ನೀಡಿದೆ. ಆಗಸ್ಟ್ 8 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ, ಎಲ್ಪಿಜಿ ಸಬ್ಸಿಡಿ, ಪ್ರಧಾನ ಮಂತ್ರಿ ಉಜ್ವಲ ಯೋಜನೆ ಹಾಗೂ ತಾಂತ್ರಿಕ ಶಿಕ್ಷಣ ಸುಧಾರಣೆಯ MERITE ಯೋಜನೆಗಳಿಗೆ ಒಟ್ಟು 42 ಸಾವಿರ ಕೋಟಿ ರೂ. ಮಂಜೂರು ಮಾಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈ ನಿರ್ಧಾರಗಳು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಶುದ್ಧ ಅಡುಗೆ ಇಂಧನದ ಲಭ್ಯತೆಯನ್ನು ಸುಲಭಗೊಳಿಸುವುದರ ಜೊತೆಗೆ, ತಾಂತ್ರಿಕ ಕ್ಷೇತ್ರದಲ್ಲಿ ನವೀನತೆ, ಕೌಶಲ್ಯಾಭಿವೃದ್ಧಿ ಹಾಗೂ ಸಂಶೋಧನೆಗೆ ಉತ್ತೇಜನ ನೀಡಲಿವೆ. ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಬಗ್ಗೆ ಸಂಪುಟದ ನಂತರ ಮಾಹಿತಿ ನೀಡಿದ್ದಾರೆ.
ಎಲ್ಪಿಜಿ ದರ ಸ್ಥಿರತೆಗೆ 30,000 ಕೋಟಿ ರೂ. ಸಬ್ಸಿಡಿ:
ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್ಪಿಜಿ) ಬೆಲೆಯನ್ನು ನಿಯಂತ್ರಣದಲ್ಲಿಡಲು ಮತ್ತು ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಲಭ್ಯವಾಗುವಂತೆ ಮಾಡಲು, ತೈಲ ಮಾರುಕಟ್ಟೆ ಕಂಪನಿಗಳಿಗೆ (OMC) 30,000 ಕೋಟಿ ರೂ. ಸಬ್ಸಿಡಿ ನೀಡಲು ಅನುಮೋದನೆ ನೀಡಲಾಗಿದೆ.
ಈ ಕ್ರಮವು ದೇಶದಾದ್ಯಂತ ಎಲ್ಪಿಜಿ ಪೂರೈಕೆಯನ್ನು ನಿರಂತರವಾಗಿ ಕಾಯ್ದುಕೊಳ್ಳಲು ಮತ್ತು ಇಂಧನ ಸುರಕ್ಷತೆಯನ್ನು ಖಾತ್ರಿಪಡಿಸಲು ಸಹಕಾರಿ ಆಗಲಿದೆ.
ಉಜ್ವಲ ಯೋಜನೆಗೆ ಹೆಚ್ಚುವರಿ 12,000 ಕೋಟಿ ರೂ.:
2025–26 ರ ಹಣಕಾಸು ವರ್ಷಕ್ಕೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ 12,000 ಕೋಟಿ ರೂ. ಹೆಚ್ಚುವರಿ ಸಬ್ಸಿಡಿ ನೀಡಲು ಸಂಪುಟ ಸಮ್ಮತಿ ನೀಡಿದೆ.
ಈ ಯೋಜನೆಯಡಿ ಆರ್ಥಿಕವಾಗಿ ದುರ್ಬಲ ಕುಟುಂಬಗಳಿಗೆ ಸಬ್ಸಿಡಿ ದರದಲ್ಲಿ ಎಲ್ಪಿಜಿ ಸಂಪರ್ಕಗಳನ್ನು ಒದಗಿಸಲಾಗುತ್ತಿದ್ದು, ಇದು ಸಾರ್ವತ್ರಿಕ ಶುದ್ಧ ಅಡುಗೆ ಇಂಧನ ಪ್ರವೇಶ ಗುರಿಯನ್ನು ಸಾಧಿಸಲು ಪ್ರಮುಖ ಹೆಜ್ಜೆಯಾಗಲಿದೆ.
ತಾಂತ್ರಿಕ ಶಿಕ್ಷಣ ಸುಧಾರಣೆಗೆ MERITE ಯೋಜನೆಗೆ 4,200 ಕೋಟಿ ರೂ.:
ಸಂಪುಟವು ‘Multidisciplinary Education and Research Improvement in Technical Education’ (MERITE) ಯೋಜನೆಗೆ 4,200 ಕೋಟಿ ರೂ. ಮಂಜೂರು ಮಾಡಿದೆ.
ಈ ಯೋಜನೆಯಡಿ ದೇಶದ 275 ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ತಾಂತ್ರಿಕ ಸಂಸ್ಥೆಗಳಾದ,ಎಂಜಿನಿಯರಿಂಗ್ ಕಾಲೇಜುಗಳು, ಪಾಲಿಟೆಕ್ನಿಕ್ಗಳು, ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಗಳು (NIT), ರಾಜ್ಯ ಎಂಜಿನಿಯರಿಂಗ್ ಸಂಸ್ಥೆಗಳು, ಅಂಗಸಂಸ್ಥೆ ತಾಂತ್ರಿಕ ವಿಶ್ವವಿದ್ಯಾಲಯಗಳಲ್ಲಿ ಮೂಲಸೌಕರ್ಯ, ಪಠ್ಯಕ್ರಮ, ಸಂಶೋಧನಾ ಸಾಮರ್ಥ್ಯ ಮತ್ತು ಆಡಳಿತದ ಗುಣಮಟ್ಟವನ್ನು ವೃದ್ಧಿಸಲು ಕ್ರಮ ಕೈಗೊಳ್ಳಲಾಗುತ್ತದೆ.
ಯೋಜನೆಯ ವಿಶೇಷ ಗುರಿಗಳು ಹೀಗಿವೆ:
ಪಠ್ಯಕ್ರಮ ಆಧುನೀಕರಣ :
ನವೀನ ಉದ್ಯೋಗ ಮಾರುಕಟ್ಟೆಯ ಅವಶ್ಯಕತೆಗಳಿಗೆ ಅನುಗುಣವಾಗಿ.
ವೃತ್ತಿ ಆಧಾರಿತ ತರಬೇತಿ : ಕೈಗಾರಿಕಾ ಕೌಶಲ್ಯಾಭಿವೃದ್ಧಿಗೆ.
ಇಂಟರ್ನ್ಶಿಪ್ಗಳ ವಿಸ್ತರಣೆ : ವಿದ್ಯಾರ್ಥಿಗಳಿಗೆ ಅನುಭವಾಧಾರಿತ ಕಲಿಕೆಯ ಅವಕಾಶ.
ಮಹಿಳಾ ಪಾಲ್ಗೊಳ್ಳಿಕೆ ಹೆಚ್ಚಿಸುವುದು : STEM ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಮಾರ್ಗದರ್ಶನ, ತರಬೇತಿ ಮತ್ತು ಪ್ರೋತ್ಸಾಹ.
ಈ ಯೋಜನೆಯಿಂದ ದೇಶದಾದ್ಯಂತ ಅಂದಾಜು 7.5 ಲಕ್ಷ ವಿದ್ಯಾರ್ಥಿಗಳಿಗೆ ನೇರ ಪ್ರಯೋಜನ ಲಭ್ಯವಾಗಲಿದೆ. ಇದು ರಾಷ್ಟ್ರೀಯ ಶಿಕ್ಷಣ ನೀತಿ (NEP) 2020ರ ಗುರಿಗಳಿಗೆ ಹೊಂದಿಕೆಯಾಗುವ ಮಹತ್ವದ ಹೆಜ್ಜೆಯಾಗಿದೆ.
ಒಟ್ಟಾರೆಯಾಗಿ, ಈ ಮೂರು ಮಹತ್ವದ ನಿರ್ಧಾರಗಳು ಎಲ್ಪಿಜಿ ದರ ಸ್ಥಿರತೆ, ಉಜ್ವಲ ಯೋಜನೆಗೆ ಬಲ ಮತ್ತು ತಾಂತ್ರಿಕ ಶಿಕ್ಷಣ ಸುಧಾರಣೆ ಸಮಾಜದ ದುರ್ಬಲ ವರ್ಗಗಳ ಕಲ್ಯಾಣ ಹಾಗೂ ದೇಶದ ಮಾನವ ಸಂಪನ್ಮೂಲ ಅಭಿವೃದ್ಧಿಗೆ ದೀರ್ಘಕಾಲಿಕ ಪ್ರಭಾವ ಬೀರುವ ಸಾಧ್ಯತೆ ಇವೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.