Picsart 25 09 14 23 19 24 443 scaled

ಕಿಯಾ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್‌ ಆಫರ್ – ಜಿಎಸ್‌ಟಿ ಕಡಿತಕ್ಕೂ ಮುಂಚೆ ಗ್ರಾಹಕರಿಗೆ ಗುಡ್ ನ್ಯೂಸ್

Categories:
WhatsApp Group Telegram Group

ಭಾರತದ ಕಾರು ಮಾರುಕಟ್ಟೆಯಲ್ಲಿ (Indian car market) ಪ್ರತಿ ಹಬ್ಬದ ಸಂದರ್ಭದಲ್ಲಿ ಗ್ರಾಹಕರಿಗೆ ಆಕರ್ಷಕ ಆಫರ್‌ಗಳು ಸಿಗುವ ಪರಂಪರೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ಈ ಬಾರಿ, ಜನಪ್ರಿಯ ಕಾರು ತಯಾರಕರಾದ ಕಿಯಾ ಇಂಡಿಯಾ ಹಬ್ಬದ ಹಿನ್ನೆಲೆಯಲ್ಲಿ ಭರ್ಜರಿ ಡಿಸ್ಕೌಂಟ್‌ ಆಫರ್ (Bumper Discount Offer) ಘೋಷಿಸಿದೆ. ಇದೇ ಸಂದರ್ಭದಲ್ಲಿ ಸೆಪ್ಟೆಂಬರ್ 22ರಿಂದ ಜಿಎಸ್‌ಟಿ (GST) ದರಗಳ ಇಳಿಕೆಯಾಗುವುದರಿಂದ, ಗ್ರಾಹಕರಿಗೆ ಹೆಚ್ಚಿನ ಲಾಭ ಸಿಗಲಿರುವ ನಿರೀಕ್ಷೆಯಿದೆ. ಆದರೆ ಕಿಯಾ ಈಗಾಗಲೇ ಜಿಎಸ್‌ಟಿ ಕಡಿತಕ್ಕೂ ಮುನ್ನ ಭಾರೀ ಡಿಸ್ಕೌಂಟ್ ಆಫರ್ ನೀಡುತ್ತಿದ್ದು, ಇದು ಜನರನ್ನು ವಿಶೇಷವಾಗಿ ಆಕರ್ಷಿಸುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಭರ್ಜರಿ ಡಿಸ್ಕೌಂಟ್ ಘೋಷಣೆ – ಗರಿಷ್ಠ 2.25 ಲಕ್ಷ ರೂ.ವರೆಗೂ ಕಡಿತ:

ಕಿಯಾ ಇಂಡಿಯಾ (Kia India) ವತಿಯಿಂದ ಘೋಷಿಸಿರುವ ಈ ವಿಶಿಷ್ಟ ಆಫರ್‌ ಪ್ರಕಾರ, ಗ್ರಾಹಕರು ಗರಿಷ್ಠ 2.25 ಲಕ್ಷ ರೂ. ವರೆಗೆ ಡಿಸ್ಕೌಂಟ್‌ ಪಡೆಯಬಹುದಾಗಿದೆ. ಈ ಆಫರ್ ಸೀಮಿತ ಸಮಯಕ್ಕೆ ಮಾತ್ರ ಲಭ್ಯವಿದ್ದು, ದೇಶದ ಎಲ್ಲಾ ಕಿಯಾ ಡೀಲರ್‌ಗಳಲ್ಲಿ(Kia Dealer) ಲಭ್ಯವಿದೆ. ಇದು ಜಿಎಸ್‌ಟಿ ಕಡಿತಕ್ಕೆ ಸಂಬಂಧಪಟ್ಟ ಭವಿಷ್ಯದ ಘೋಷಣೆ ಅಲ್ಲ, ಬದಲಾಗಿ ಹಬ್ಬದ ವಿಶೇಷ ಆಫರ್ ಆಗಿದ್ದು, ಈ ಸೀಮಿತ ಅವಧಿಯಲ್ಲಿ ಮಾತ್ರ ಲಾಭ ಪಡೆಯಲು ಸಾಧ್ಯ.

ಯಾವ ಕಾರುಗಳ ಮೇಲೆ ಡಿಸ್ಕೌಂಟ್ ಲಭ್ಯ?:

ಈ ಹಬ್ಬದ ಆಫರ್‌ ಮೂರು ಪ್ರಮುಖ ಕಿಯಾ ಕಾರು ಮಾದರಿಗಳ ಮೇಲೆ ಪ್ರಚಾರಗೊಳ್ಳುತ್ತಿದೆ,
ಕಿಯಾ ಸೆಲ್ಲೋಸ್ (Seltos).
ಕಿಯಾ ಕ್ಯಾರೆನ್ಸ್ (Carens).
ಕಿಯಾ ಕ್ಲಾವಿಸ್ (Carnival).
ಗ್ರಾಹಕರು ಈ ಹಬ್ಬದ ಆಫರ್‌ ಮೂಲಕ 1.67 ಲಕ್ಷ ರೂ. ಡಿಸ್ಕೌಂಟ್ ಮತ್ತು 58,000 ರೂ. ಪೂರ್ವ ಜಿಎಸ್‌ಟಿ (GST) ಕಡಿತ ಪ್ರಯೋಜನ ಪಡೆಯಲಿದ್ದಾರೆ.

ಕರ್ನಾಟಕದಲ್ಲಿ ವಿಶೇಷ ಡಿಸ್ಕೌಂಟ್ :

ರಾಜ್ಯ ಮಟ್ಟದಲ್ಲಿ ತೆರಿಗೆಗಳಿಗೆ ಅನುಗುಣವಾಗಿ ಆಫರ್‌ಗಳ ಮೌಲ್ಯದಲ್ಲಿ ವ್ಯತ್ಯಾಸ ಕಂಡು ಬರುತ್ತದೆ. ಕರ್ನಾಟಕದಲ್ಲಿ ನೀಡಲಾದ ವಿಶೇಷ ಡಿಸ್ಕೌಂಟ್ ವಿವರಗಳು ಹೀಗಿದೆ,
ಕಿಯಾ ಸೆಲ್ಲೋಸ್: ಗರಿಷ್ಠ 2,10,000 ರೂ. ಡಿಸ್ಕೌಂಟ್.
ಕಿಯಾ ಕ್ಯಾರೆನ್ಸ್: 1,10,500 ರೂ. ಡಿಸ್ಕೌಂಟ್.
ಕಿಯಾ ಕ್ಲಾವಿಸ್: 88,650 ರೂ. ಡಿಸ್ಕೌಂಟ್

ಸೆಪ್ಟೆಂಬರ್ 22ರೊಳಗಿನ ಬುಕ್ಕಿಂಗ್‌ ಅಗತ್ಯ:

ಈ ವಿಶೇಷ ಹಬ್ಬದ ಡಿಸ್ಕೌಂಟ್ ಆಫರ್ (Discount Offer) ಸೆಪ್ಟೆಂಬರ್ 22ರೊಳಗೆ ಮಾತ್ರ ಲಭ್ಯ. ಗ್ರಾಹಕರು ಈ ದಿನಾಂಕದೊಳಗೆ ಬುಕ್ ಮಾಡಿದರೆ ಮಾತ್ರ 2.25 ಲಕ್ಷ ರೂ. ಡಿಸ್ಕೌಂಟ್ ಪಡೆಯುವ ಅವಕಾಶ ದೊರೆಯಲಿದೆ. ಸೆಪ್ಟೆಂಬರ್ 22ರ ನಂತರ ಕೇವಲ ಜಿಎಸ್‌ಟಿ ಕಡಿತದ ಆಫರ್‌ ಮಾತ್ರ ಲಭ್ಯವಾಗಲಿದೆ.

ಇನ್ನು, ಕಿಯಾ ಇಂಡಿಯಾ CSO ಜೂನ್ನು ಸೂ ಅವರು ಈ ಸಂಬಂಧ ಮಾತನಾಡಿದ್ದು, ಹಬ್ಬದ ಸಂದರ್ಭದಲ್ಲಿ ನವ ವಸ್ತು ಖರೀದಿ ಹಾಗೂ ಕಾರು ಖರೀದಿ ಸಾಮಾನ್ಯ ಮಾರುಕಟ್ಟೆ ಪ್ರವೃತ್ತಿಯಾಗಿದೆ ಎಂದು ಹೇಳಿದರು. ಗ್ರಾಹಕರ ಹಿತಕ್ಕಾಗಿ, ಜಿಎಸ್‌ಟಿ ಕಡಿತಕ್ಕೂ (GST cut) ಮುಂಚೆ ಹೆಚ್ಚಿದ ಡಿಸ್ಕೌಂಟ್‌ ಆಫರ್ ನೀಡಲಾಗಿದ್ದು ಇದರಿಂದ ಜನರು ಸುಲಭವಾಗಿ, ಕಡಿತ ಬೆಲೆಯಲ್ಲಿ ಕಾರು ಖರೀದಿಸುವ ಅವಕಾಶವನ್ನು ಪಡೆದುಕೊಳ್ಳಬಹುದೆಂದು ಹೇಳಿದ್ದಾರೆ.

ಹಬ್ಬದ ಸಮಯದಲ್ಲಿ ಈ ರೀತಿಯ ಆಕರ್ಷಕ ಡಿಸ್ಕೌಂಟ್‌ಗಳು (Special attractive discounts)  ಜನರಿಗೆ ವಿಶೇಷ ಅವಕಾಶಗಳನ್ನು ನೀಡುತ್ತವೆ. ಕಾರು ಖರೀದಿಸುವ ನೆಪದಲ್ಲಿ ಈ ನಿಯತಾವಧಿಯ ಆಫರ್‌ಗಳನ್ನು ತಪ್ಪದೆ ಉಪಯೋಗಿಸಿಕೊಳ್ಳಿ.

WhatsApp Image 2025 09 05 at 11.51.16 AM 5

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories