ರೈಲು ಸಂಚಾರಿಗಳೇ ಎಚ್ಚರ : ಹುಬ್ಬಳ್ಳಿ-ಬೆಂಗಳೂರು ರೈಲು (Hubli-Bangalore train) ಸಂಚಾರ ಸಮಯ ಬದಲಾವಣೆ
ಭಾರತ ದೇಶದಲ್ಲಿ ಇಂದು ಎಲೆಕ್ಟ್ರಿಕ್ ಸ್ಕೂಟರ್ ಗಳ ಜೊತೆಯಲ್ಲಿ ವಾಹನಗಳ ತಯಾರಿಕೆ ಹೆಚ್ಚಾಗುತ್ತಿದೆ. ಹಾಗೂ ಈ ರೀತಯ ವಾಹನಗಳನ್ನು ಬಳಸುವವರೂ ಕೂಡ ಹೆಚ್ಚಾಗಿದ್ದಾರೆ. ಪ್ರತಿಯೊಬ್ಬರ ಬಳಿ ಒಂದೊಂದು ವಾಹನವಿದ್ದರೂ ಈ ರೀತಿಯ ವಾಹನಗಳ ಬಳಕೆ ಎಷ್ಟೇ ಹೆಚ್ಚಾದರೂ, ಜನರು ರೈಲು ಪ್ರಯಾಣವನ್ನು (train journey) ನಿಲ್ಲಿಸಿಲ್ಲ. ರೈಲು ಪ್ರಯಾಣ ಮಾಡಿದರೆ ಖರ್ಚು ಕಡಿಮೆಯಾಗುವದರ ಜೊತೆಯಲ್ಲಿ ಆರಾಮದಾಯಕ ಸಂಚಾರವನ್ನು ಮಾಡಬಹುದು. ಆದ್ದರಿಂದ ಹೆಚ್ಚು ಜನ ದೂರದ ಪ್ರಯಾಣಗಳಿಗೆ ರೈಲನ್ನು ಅವಲಂಬಿಸಿರುತ್ತಾರೆ. ಹೆಚ್ಚು ರೈಲಿನ ಪ್ರಯಾಣವನ್ನು ಇಷ್ಟಪಡುವ ಹಾಗೂ ಸಂಚರಿಸುವ ಜನರಿಗೆ ಸಂಕಷ್ಟ ಎದುರಾಗಿದೆ . ಹುಬ್ಬಳ್ಳಿ-ಬೆಂಗಳೂರು ನಡುವಿನ ರೈಲು ಸಂಚಾರ ಸಮಯ ಬದಲಾವಣೆ ಮಾಡಲಾಗುತ್ತದೆ. ಈನ ಕುರಿತು ನೈಋತ್ಯ ರೈಲ್ವೆ ವಲಯ ತನ್ನ ಟ್ವಿಟರ್ ಖಾತೆಯಲ್ಲಿ ಫೋಸ್ಟ್ (Twitter post ) ಹಾಕುವ ಮೂಲಕ ಮಾಹಿತಿ ಹಂಚಿಕೊಂಡಿದೆ. ಯಾಕೆ ರೈಲುಗಳ ಸಮಯದಲ್ಲಿ ವ್ಯತ್ಯಾಸ ಮಾಡಲಾಗುತ್ತಿದೆ? ಯಾವ ರೈಲುಗಳ ಸಮಯದಲ್ಲಿ ವ್ಯತ್ಯಾಸವಾಗಲಿದೆ? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಯಾಕೆ ಹುಬ್ಬಳ್ಳಿ-ಬೆಂಗಳೂರು ನಡುವಿನ ರೈಲು ಸಂಚಾರ ಸಮಯ ಬದಲಾವಣೆ ಮಾಡಲಾಗುತ್ತಿದೆ:
ಹುಬ್ಬಳ್ಳಿ ಮತ್ತು ಬೆಂಗಳೂರಿನ ನಡುವೆ ಸಂಚರಿಸುವ ಕೆಲವು ರೈಲುಗಳ ಸಮಯ ಬದಲಾವಣೆ ಮಾಡಲಾಗುತ್ತಿದೆ. ಇದಕ್ಕೆ ಕಾರಣ ಸಾಮಾನ್ಯವಾಗಿ ಭಾರಿ ಮಳೆ ಎನ್ನಬಹುದು. ವಿಪರೀತ ಮಳೆಯಿಂದಾಗಿ ರೈಲ್ವೆಗೆ ಸಂಭಂಧಿತ ಕಾಮಗಾರಿಗಳನ್ನು ಮಾಡಲಾಗುತ್ತದೆ ಆ ಕಾರಣಕ್ಕೆ ರೈಲು ಸಂಚಾರದಲ್ಲಿ ಸ್ವಲ್ಪ ಬದಲಾವಚಣೆಯನ್ನೂ ಕೂಡ ಮಾಡಲಾಗುತ್ತದೆ. ಅದೇ ರೀತಿಯಾಗಿ ಇದೀಗ ಶ್ರೀ ಸಿದ್ಧರೂಢ ಸ್ವಾಮೀಜಿ ಹುಬ್ಬಳ್ಳಿ(SSS Hubballi) -ಕೆಎಸ್ಆರ್ ಬೆಂಗಳೂರು(KSR Bangalore) ನಡುವೆ ಸಂಚರಿಸುವ ರೈಲು ಸಮಯದಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಬೆಂಗಳೂರು ವಿಭಾಗದ ದೊಡ್ಡಬೆಲೆ-ನಿಡವಂದ ನಿಲ್ದಾಣಗಳ ನಡುವೆ ಅಗತ್ಯ ನಿರ್ವಹಣೆ ಮತ್ತು ಮೂಲಸೌಕರ್ಯ ನವೀಕರಣದ ಕಾಮಗಾರಿ ನಡೆಯಲಿದೆ. ಆದ್ದರಿಂದ ಹುಬ್ಬಳ್ಳಿ-ಬೆಂಗಳೂರು ಮಧ್ಯೆ ಸಂಚರಿಸುವ ಕೆಲ ರೈಲುಗಳ ಸಂಚಾರ ಸಮಯದಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಈ ಬಗ್ಗೆ ನೈಋತ್ಯ ರೈಲ್ವೆ ವಲಯ (South Western Railway Zone) ತನ್ನ ಟ್ವಿಟರ್ ಖಾತೆಯಲ್ಲಿ ಮಾಹಿತಿಯನ್ನು ತಿಳಿಸಿದೆ.ಯಾಕೆ ಹುಬ್ಬಳ್ಳಿ-ಬೆಂಗಳೂರು ನಡುವಿನ ರೈಲು ಸಂಚಾರ ಸಮಯ ಬದಲಾವಣೆ ಮಾಡಲಾಗುತ್ತಿದೆ:
ಯಾವ ಯಾವ ರೈಲುಗಳ ಸಮಯ ಬದಲಾವಣೆಯಾಗಲಿದೆ?:
ಹುಬ್ಭಳ್ಳಿಯಿಂದ ನವೆಂಬರ್ 10 ರಂದು ಹೊರಡುವ ಎಸ್ಎಸ್ಎಸ್ ಹುಬ್ಬಳ್ಳಿ-ಕೆಎಸ್ಆರ್ ಬೆಂಗಳೂರು ಎಕ್ಸ್ಪ್ರೆಸ್ (ರೈಲು ಸಂಖ್ಯೆ 17392) ರೈಲು ಮಾರ್ಗದಲ್ಲಿ 40 ನಿಮಿಷಗಳ ಕಾಲ ನಿಲುಗಡೆಯಾಗಲಿದೆ.
ಬೆಂಗಳೂರಿನಿಂದ ನವೆಂಬರ್ 7 ಮತ್ತು 10 ರಂದು ಹೊರಡುವ ಕೆಎಸ್ಆರ್ ಬೆಂಗಳೂರು-ಎಸ್ಎಸ್ಎಸ್ ಹುಬ್ಬಳ್ಳಿ ವಿಶೇಷ ಎಕ್ಸ್ಪ್ರೆಸ್ ರೈಲು (ರೈಲು ಸಂಖ್ಯೆ 07340) ಕೆಎಸ್ಆರ್ ಬೆಂಗಳೂರಿನಿಂದ 120 ನಿಮಿಷ ತಡವಾಗಿ ಹೊರಡಲಿದ್ದು, ಮಾರ್ಗ ಮಧ್ಯೆ 40 ನಿಮಿಷಗಳ ಕಾಲ ನಿಲುಗಡೆಯಾಗಲಿದೆ.
ಬೆಂಗಳೂರಿನಿಂದ ನವೆಂಬರ್ 8 ಮತ್ತು 11ರಂದು ಹೊರಡುವ ಕೆಎಸ್ಆರ್ ಬೆಂಗಳೂರು-ಎಸ್ಎಸ್ಎಸ್ ಹುಬ್ಬಳ್ಳಿ ಎಕ್ಸ್ಪ್ರೆಸ್ ರೈಲು (ರೈಲು ಸಂಖ್ಯೆ 17391 ಕೆ) ಬೆಂಗಳೂರಿನಿಂದ 90 ನಿಮಿಷಗಳ ಕಾಲ ತಡವಾಗಿ ಹೊರಡಲಿದ್ದು, ಮಾರ್ಗ ಮಧ್ಯೆ 40 ನಿಮಿಷಗಳ ಕಾಲ ನಿಲುಗಡೆಯಾಗಲಿದೆ.
ಪ್ರಯಾಗ್ರಾಜ್ಗೆ ವಿಶೇಷ ರೈಲು
ಪ್ರಯಾಗ್ರಾಜ್-ಎಸ್ಎಮ್ವಿಟಿ ಬೆಂಗಳೂರು ವೀಕ್ಲಿ ಎಕ್ಸ್ಪ್ರೆಸ್ (ರೈಲು ಸಂಖ್ಯೆ 04131) ನವೆಂಬರ್ 10ರಿಂದ 17ರ ವರೆಗೆ ಭಾನುವಾರದಂದು ಮಾತ್ರ ಸಂಚರಿಸುತ್ತದೆ.
ಎಸ್ಎಮ್ವಿಟಿ ಬೆಂಗಳೂರು-ಪ್ರಯಾಗರಾಜ್ ವೀಕ್ಲಿ ಎಕ್ಸ್ಪ್ರೆಸ್ (ರೈಲು ಸಂಖ್ಯೆ 04132) 13ರಿಂದ 20ರ ವರೆಗೆ ಬುಧವಾರದಂದು ಮಾತ್ರ ಸಂಚರಿಸುತ್ತದೆ.
ಈ ಎರೆಡೂ ರೈಲುಗಳು ಎರಡು ಎಸಿ ಸೆಕೆಂಡ್ ಕ್ಲಾಸ್ ಬೋಗಿ, ಐದು ಎಸಿ ತ್ರಿ ಟೈಯರ್ ಬೋಗಿ, ಐದು ಎಸಿ-ತ್ರಿ ಟೈಯರ್ ಎಕನಾಮಿಕ್ ಕ್ಲಾಸ್ ಬೋಗಿ, ನಾಲ್ಕು ಸ್ಲೀಪರ್ ಕ್ಲಾಸ್ ಮತ್ತು ಎರಡು ಲಗೇಜ್ ಬ್ರೇಕ್ ಮತ್ತು ಜನರಲ್ ಬೋಗಿಗಳು ಸೇರಿದಂತೆ ಪ್ರಸ್ತುತ ಸಂಯೋಜನೆಯು 18 ಬೋಗಿಗಳನ್ನು ಒಳಗೊಂಡಿದೆ.
ಗಮನಿಸಿ:
ರೈಲುಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಮಡೆದುಕೊಳ್ಳಲು 139ಕ್ಕೆ ಕರೆ ಮಾಡಬಹುದು. ಹಾಗೂ ಅಧಿಕೃತ ರೈಲ್ವೆ ವೆಬ್ಸೈಟ್ www.enquiry.indianrail.gov.in. ಗೆ ಭೇಟಿ ನೀಡುವ ಮೂಲಕ ರೈಲುಗಳ ಪ್ರತಿ ನಿಲ್ದಾಣದ ಆಗಮನ ಹಾಗೂ ನಿರ್ಗಮನವಾಗುವ ಸಮಯದ ವಿವರವನ್ನು ಪಡೆಯಬಹುದು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




