ಹೃದಯಜ್ಯೋತಿ ಯೋಜನೆಯಡಿ(Hrudayajyoti scheme) ದುಬಾರಿ ಚುಚ್ಚುಮದ್ದನ್ನು(injection) ಆರೋಗ್ಯ ಇಲಾಖೆ(Department of Health) ಉಚಿತವಾಗಿ ನೀಡುತ್ತಿದೆ.
ಇತ್ತೀಚಿಗೆ ಹೃದಯಾಘಾತದಿಂದ(heart attack) ಸಾವಿನೀಡಾಗುವವರ ಸಂಖ್ಯೆ ಏರಿಕೆಯಾಗುತ್ತಿದೆ. ಬಹಳ ಚಿಕ್ಕ ವಯಸ್ಸಿಗೆ ತಮ್ಮ ಜೀವವನ್ನು ಕಳೆದುಕೊಂಡು ತಾವು ಇಷ್ಟಪಡುವ ಎಲ್ಲರನ್ನೂ ಬಿಟ್ಟು ಸಾಯುತ್ತಿದ್ದಾರೆ. ಅದರಲ್ಲೂ ಕನ್ನಡ ಚಿತ್ರರಂಗದ ದಿವಂಗತ ಡಾ. ಪುನೀತ್ ರಾಜಕುಮಾರ್(Late Dr. Puneeth Rajkumar) ಅವರ ಅಗಲಿಕೆ ಜನರಲ್ಲಿ ಹೆಚ್ಚು ನೋವನ್ನುಂಟು ಮಾಡಿತ್ತು. ಆ ದಿನ ಒಂದು ಗಂಟೆ ಸಮಯವಿದ್ದರೆ ಬಹುಶಃ ಡಾ.ಪುನೀತ್ ರಾಜಕುಮಾರ್ ಅವರ ಜೀವ ಉಳಿಯುತ್ತಿತ್ತು ಎನಿಸುತ್ತದೆ. ಆದ್ದರಿಂದ ಹೃದಯಘಾತ ಸಂಭವಿಸಿದ ನಂತರದ ಒಂದು ಗಂಟೆ ವ್ಯಕ್ತಿಯ ಜೀವವನ್ನು ಉಳಿಸಲು ಅಮೂಲ್ಯ ಸಮಯವಾಗಿರುತ್ತದೆ. ಆದ್ದರಿಂದ ಗೋಲ್ಡನ್ ಅವರ್‌ನಲ್ಲಿ ಜನರ ಪ್ರಾಣ ಉಳಿಸುವ ಸಲುವಾಗಿ ದಿವಂಗತ ಡಾ. ಪುನೀತ್ ರಾಜ್‌ಕುಮಾರ್ ಅವರ ಹೆಸರಿನಲ್ಲಿ ರಾಜ್ಯ ಸರ್ಕಾರ ಹೃದಯಜ್ಯೋತಿ ಯೋಜನೆಯನ್ನು ಈಗಾಗಲೇ ಜಾರಿಗೆ ತಂದಿದ್ದು, ಇದರಿಂದ ಅವಕಾಶವನ್ನು ಸಾಕಷ್ಟು ಜನರು ಪಡೆದುಕೊಂಡಿದ್ದಾರೆ. ಎಷ್ಟು ಜನ ಪ್ರಯೋಜನ ಪಡೆದುಕೊಂಡಿದ್ದಾರೆ? ಈ ಯೋಜನೆಯಡಿ ಇತ್ತೀಚಿಗೆ ಯಾವ ಬದಲಾವಣೆ ತರಲಾಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ದಿವಂಗತ ಡಾ.ಪುನೀತ್ ರಾಜ್‌ಕುಮಾರ್ ಅವರ ಹೆಸರಿನಲ್ಲಿ ರಾಜ್ಯ ಸರ್ಕಾರ ಹೃದಯಜ್ಯೋತಿ ಯೋಜನೆಯನ್ನು ಮೊದಲ ಹಂತದಲ್ಲಿ 2023ರ ಮಾರ್ಚ್‌ನಲ್ಲಿ(March 2023) ಪ್ರಾರಂಭಿಸಿತು. ಇದರ ಮುಂದುವರೆದ ಭಾಗವಾಗಿ ಎರಡನೇ ಹಂತವನ್ನು 2024ರ ಮಾರ್ಚ್‌ನಲ್ಲಿ(March 2024) ರಾಜ್ಯದಾದ್ಯಂತ ವಿಸ್ತರಿಸಿತು. ಇನ್ನು, ಹೃದಯಾಘಾತಕ್ಕೆ ಒಳಪಟ್ಟವರಿಗೆ ಈ ಯೋಜನೆಯಡಿ ದುಬಾರಿ ಮೊತ್ತದ ಒಂದು ಚುಚ್ಚುಮದ್ದನ್ನು ಆರೋಗ್ಯ ಇಲಾಖೆ ಉಚಿತವಾಗಿ ಒದಗಿಸುತ್ತಿದೆ.
ಆರೋಗ್ಯ ಇಲಾಖೆಯಿಂದ ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆಯಡಿ ದುಬಾರಿ ಮೊತ್ತದ ಚುಚ್ಚುಮದ್ದನ್ನು ಉಚಿತವಾಗಿ ಒದಗಿಸುತ್ತಿದ್ದು, ಇದರಿಂದ ಈವರೆಗೆ 300ಕ್ಕೂ ಅಧಿಕ ಮಂದಿ(More than 300 people) ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಒಟ್ಟಾರೆಯಾಗಿ ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ ಪ್ರತಿವರ್ಷ ಸುಮಾರು 96 ಸಾವಿರ ಮಂದಿ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಆದ್ದರಿಂದ ಸರ್ಕಾರ ಎಚ್ಚೆತ್ತುಕೊಂಡು ಈ ಯೋಜನೆಯಡಿ ಸರ್ಕಾರಿ ಆಸ್ಪತ್ರೆಗಳು(Government Hospitals) ಹಾಗೂ ಖಾಸಗಿ ಆಸ್ಪತ್ರೆಗಳನ್ನೂ(Private hospitals) ಒಳಗೊಂಡ ಜಾಲವನ್ನು ಇಲಾಖೆ ರೂಪಿಸಿಕೊಂಡಿದೆ.
ಈ ಯೋಜನೆಯಡಿ ಎಷ್ಟು ಮಂದಿಗೆ ಚಿಕಿತ್ಸೆ ನೀಡಲಾಗಿದೆ?:
ಈವೆರೆಗೆ 5,989 ಹೃದಯಾಘಾತ ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ ಒಟ್ಟು 3 ಸಾವಿರಕ್ಕೂ ಅಧಿಕ ಹೃದಯಾಘಾತದ ರೋಗಿಗಳಿಗೆ ಡಾ. ಪುನೀತ್ ರಾಜ್‌ಕುಮಾರ್ ಹೃದಯಜ್ಯೋತಿ ಯೋಜನೆಯಡಿ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದ್ದು, ಕಳೆದ ಒಂದು ತಿಂಗಳಲ್ಲಿ 348 ಮಂದಿಯ ಜೀವ ರಕ್ಷಿಸಲಾಗಿದೆ ಎಂದು ಅರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಯಾವ ಮಾದರಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ?:
ಇನ್ನು, ಡಾ. ಪುನೀತ್ ರಾಜ್‌ಕುಮಾರ್ ಹೃದಯಜ್ಯೋತಿ ಯೋಜನೆಯಡಿ ‘ಹಬ್ ಮತ್ತು ಸ್ಪೋಕ್’(Hub and spoke) ಮಾದರಿಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದ್ದು, ಯೋಜನೆಯ 2ನೇ ಹಂತದಲ್ಲಿ ತಾಲೂಕು(Taluk) ಹಾಗೂ ಜಿಲ್ಲಾ(District) ಆಸ್ಪತ್ರೆಗಳಿಗೆ ಟೆನೆಕ್ಟ್ ಪ್ಲಸ್ ಚುಚ್ಚುಮದ್ದನ್ನು(Tenect Plus Injection) ಪೂರೈಕೆ ಮಾಡಲಾಗಿದ್ದು, ತೃತೀಯ ಹಂತದ ಚಿಕಿತ್ಸೆಗೆ ‘ಹಬ್’ ಆಸ್ಪತ್ರೆಗಳಾಗಿ ನೋಂದಾಯಿತವಾಗಿರುವ ಜಯದೇವ ಹೃದ್ರೋಗ ಸಂಸ್ಥೆ (Jayadeva Heart Institute) ಸೇರಿ ವಿವಿಧ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ರವಾನಿಸಲಾಗುತ್ತದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಚುಚ್ಚುಮದ್ದನ್ನು ಹೇಗೆ ನೀಡಲಾಗುತ್ತದೆ?:
ಆರೋಗ್ಯ ಇಲಾಖೆಯ ಸಾಂಕ್ರಾಮಿಕವಲ್ಲದ ರೋಗಗಳ ವಿಭಾಗದ ಉಪ ನಿರ್ದೇಶಕರಾದ(Deputy Director, Division of Non Communicable Diseases) ಡಾ.ಜಿ. ಶ್ರೀನಿವಾಸ್(Dr. G. Srinivas) ತಿಳಿಸಿರುವ ಪ್ರಕಾರ ಹೃದಯಾಘಾತಕ್ಕೆ ಒಳಗಾದವರಿಗೆ ಯೋಜನೆಯಡಿ ನೋಂದಾಯಿತವಾದ ತಾಲ್ಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತದೆ. ನಂತರ ಇಸಿಜಿ ಪರೀಕ್ಷೆ ನಡೆಸಿ ಅಗತ್ಯವಿದ್ದಲ್ಲಿ ಚುಚ್ಚುಮದ್ದು ನೀಡಲಾಗುತ್ತಿದೆ. ಈ ಚುಚ್ಚುಮದ್ದನ್ನು ಹೃದಯ ನಾಳದ ಬ್ಲಾಕ್ ತೆರವುಗೊಳಿಸಲು ನೀಡಲಾಗುತ್ತದೆ. ಚುಚ್ಚುಮದ್ದನ್ನು ನೀಡಿದ ನಂತರ ಕ್ಯಾಥ್‌ಲ್ಯಾಬ್(Cathlab) ಇರುವ ಆಸ್ಪತ್ರೆಗಳಿಗೆ ರೋಗಿಯನ್ನು ಕಳಿಸಿಕೊಡಲಾಗುತ್ತದೆ. ಈ ಚುಚ್ಚುಮದ್ದು ಒಂದು ಬಾಟಲಿಗೆ 30 ಸಾವಿರ ರೂಪಾಯಿ ದರ ಇದ್ದು, ಬಿಪಿಎಲ್ ಪಡಿತರ ಚೀಟಿ(BPL ration card) ಇದ್ದಲ್ಲಿ ಎಲ್ಲ ಚಿಕಿತ್ಸೆಯೂ ಉಚಿತವಾಗಿ ದೊರೆಯಲಿದೆ ಎಂದು ತಿಳಿಸಿದ್ದಾರೆ.
ಗಮನಿಸಿ :
ಹೃದಯಾಘಾತ ಪ್ರಕರಣಗಳ ನಿರ್ವಹಣೆಗೆ ಜೀವರಕ್ಷಕ ಟ್ರಸ್ಟ್ (jeevarakshaka Trust)ವತಿಯಿಂದ ವೈದ್ಯಕೀಯ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದ್ದು, ಸಾರ್ವಜನಿಕ ಸ್ಥಳಗಳಾದ (public places)ಬಸ್ ನಿಲ್ದಾಣಗಳು ಸರ್ಕಾರಿ ಕಚೇರಿಗಳು ಹಾಗೂ ರೈಲು ನಿಲ್ದಾಣಗಳಲ್ಲಿ ‘ಆಟೊಮೇಟೆಡ್ ಎಕ್ಸ್‌ಟರ್ನಲ್ ಡಿಫೈಬ್ರಿಲ್ಲೇಟರ್ಸ್’ (ಎಇಡಿ) ಸಾಧನಗಳನ್ನು(Automated External Defibrillators’ (AED) devices) ಅಳವಡಿಸಲು ಅರೋಗ್ಯ ಇಲಾಖೆ ಮುಂದಾಗಿದೆ. ಹಾಗೂ 37 ಎಇಡಿ(37AED) ಸಾಧನಗಳ ಖರೀದಿಗೆ ಟೆಂಡರ್(Tender) ಕರೆಯಲಾಗಿದೆ ಎಂದು ಅರೋಗ್ಯ ಇಲಾಖೆ ತಿಳಿಸಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




