ಈ ಆಹಾರ ಪದಾರ್ಥಗಳನ್ನು ಸೇವಿಸುವ ಮೂಲಕ ನೈಸರ್ಗಿಕವಾಗಿ ರಕ್ತದ ಸಕ್ಕರೆ ಮಟ್ಟ(blood suger level) ನಿಯಂತ್ರಿಸಬಹುದು. ಆಹಾರ ಪದಾರ್ಥಗಳ ಪಟ್ಟಿ ಹೀಗಿದೆ.
ರಕ್ತದ ಸಕ್ಕರೆ ನಿಯಂತ್ರಣವು ಒಟ್ಟಾರೆ ಆರೋಗ್ಯ (Health) ಮತ್ತು ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಅತ್ಯಂತ ಮುಖ್ಯ. ಸಮತೋಲನದಲ್ಲಿರುವ ಬ್ಲಡ್ ಶುಗರ್ (Blood sugar) ಮಟ್ಟವು ದೀರ್ಘಕಾಲದ ಆರೋಗ್ಯ ಸಮಸ್ಯೆಗಳನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಂದು ಡಯಾಬಿಟೀಸ್ ಮತ್ತು ಸಂಬಂಧಿತ ರೋಗಗಳು ಹೆಚ್ಚುತ್ತಿರುವ ಮಧ್ಯೆ, ನೈಸರ್ಗಿಕ ಮಾರ್ಗಗಳ (Natural ways) ಮೂಲಕ ರಕ್ತದ ಸಕ್ಕರೆ ನಿಯಂತ್ರಣವು ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಆಯುರ್ವೇದ, ಪೌಷ್ಟಿಕಶಾಸ್ತ್ರ ಮತ್ತು ಆಧುನಿಕ ವಿಜ್ಞಾನಗಳು ಈ ದಿಸೆಯಲ್ಲಿ ಮಹತ್ವದ ಸೂಚನೆಗಳನ್ನು ನೀಡುತ್ತಿವೆ. ಯಾವ ರೀತಿಯ ನೈಸರ್ಗಿಕ ಆಹಾರ ಪದಾರ್ಥಗಳನ್ನು ಸೇವಿಸಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಕೆಲವು ಆಹಾರ ಪದಾರ್ಥಗಳು ನೈಸರ್ಗಿಕವಾಗಿ ಇನ್ಸುಲಿನ್ ನಿಯಂತ್ರಣ ಮತ್ತು ರಕ್ತದ ಸಕ್ಕರೆ (Sugar) ಯ ಮಟ್ಟ ಸಮತೋಲನಕ್ಕೆ ನೆರವಾಗುತ್ತವೆ. ಈ ಆಹಾರಗಳನ್ನು ದಿನನಿತ್ಯದ ಆಹಾರದಲ್ಲಿ ಸೇರಿಸುವ ಮೂಲಕ, ದೀರ್ಘಕಾಲಿಕ ಆರೋಗ್ಯ ಸಮಸ್ಯೆಗಳನ್ನು ತಡೆಯಬಹುದು.
ಹಸಿರೆಲೆ ಸೊಪ್ಪು ತರಕಾರಿಗಳು (Green leaves and vegitables) :

ಹಸಿರೆಲೆ ತರಕಾರಿಗಳು ಸೇರಿದಂತೆ ಪಾಲಕ್ ಸೊಪ್ಪು, ಮೆಂತ್ಯೆ ಸೊಪ್ಪು, ಹಾಗೂ ಕೊತ್ತಂಬರಿ, ರಕ್ತದ ಸಕ್ಕರೆಯನ್ನು ನಿಯಂತ್ರಿಸಲು ಅತ್ಯುತ್ತಮ. ಈ ತರಕಾರಿಗಳು ಕಡಿಮೆ ಕಾರ್ಬೋಹೈಡ್ರೇಟ್ ಮತ್ತು ಕ್ಯಾಲೋರಿಗಳನ್ನು ಹೊಂದಿದ್ದು, ಹೆಚ್ಚಿನ ಪ್ರಮಾಣದ ಫೈಬರ್ (Fiber) ಮತ್ತು ವಿಟಮಿನ್‌ಗಳನ್ನು (Vitamins) ಒದಗಿಸುತ್ತವೆ. ಹಸಿರೆಲೆ ತರಕಾರಿಗಳು ಸಕ್ಕರೆಯ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತವೆ ಮತ್ತು ಇನ್ಸುಲಿನ್ ಸಂವೇದನೆಯನ್ನು ಹೆಚ್ಚಿಸುತ್ತವೆ.
ಸಂಪೂರ್ಣ ಧಾನ್ಯಗಳು (Whole grains) :
ಕಡಿಮೆ ಟ್ರೈಸೆಮಿಕ್ ಇಂಡೆಕ್ಸ್ (Trysemic index) ಹೊಂದಿರುವ ಸಂಪೂರ್ಣ ಧಾನ್ಯಗಳು, ರಕ್ತದ ಸಕ್ಕರೆಯ ಮಟ್ಟವನ್ನು ಸ್ಥಿರಗೊಳಿಸಲು ಪ್ರಮುಖ ಪಾತ್ರ ವಹಿಸುತ್ತವೆ. ಗೋಧಿ, ಜೋಳ, ಓಟ್ಸ್, ಮತ್ತು ಬ್ರೌನ್ ರೈಸ್ ಇಂತಹ ಧಾನ್ಯಗಳಲ್ಲಿ ಫೈಬರ್ ಹೆಚ್ಚು ಇರುವುದರಿಂದ ರಕ್ತಕ್ಕೆ ಗ್ಲೂಕೋಸ್ ಬಿಡುಗಡೆ ನಿಧಾನಗೊಳ್ಳುತ್ತದೆ. ಇದು ದಿಢೀರ್ ಬ್ಲಡ್ ಶುಗರ್ ಏರಿಕೆಯನ್ನು ತಡೆಯುತ್ತದೆ.
ಒಣಹಣ್ಣುಗಳು ಮತ್ತು ಬೀಜಗಳು (Dry fruits and nuts) :
ಬಾದಾಮಿ, ವಾಲ್ನಟ್, ಚಿಯಾ ಬೀಜಗಳು ಮತ್ತು ಅಗಸೆ ಬೀಜಗಳು ಆರೋಗ್ಯಕರ ಕೊಬ್ಬು ಮತ್ತು ಪ್ರೋಟೀನ್‌ಗಳನ್ನು ಒದಗಿಸುತ್ತವೆ. ಇವು ರಕ್ತದ ಸಕ್ಕರೆಯನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತವೆ. ಇವುಗಳನ್ನು ಮಧ್ಯಾಹ್ನ ತಿಂಡಿಯಲ್ಲಿ ಸೇರಿಸಿಕೊಳ್ಳುವುದು ಉತ್ತಮ ಆಯ್ಕೆ.
ದ್ವಿದಳ ಧಾನ್ಯಗಳು (Legumes)
ಕಡಲೆಕಾಳು, ಬ್ಲ್ಯಾಕ್ ಬೀನ್ಸ್ ಮುಂತಾದವುಗಳು ಪೌಷ್ಟಿಕಾಂಶದಿಂದ ಸಮೃದ್ಧವಾಗಿದ್ದು, ಬ್ಲಡ್ ಗ್ಲೂಕೋಸ್ ಮಟ್ಟದ ಏರಿಕೆಯನ್ನು ತಡೆಯಲು ನೆರವಾಗುತ್ತವೆ. ಕಡಿಮೆ ಟ್ರೈಸೆಮಿಕ್ ಇಂಡೆಕ್ಸ್ ಇರುವುದರಿಂದ ಇವು ಉತ್ಕೃಷ್ಟ ಆಹಾರಗಳಾಗಿವೆ.
ಬೆರಿಗಳು (Berries) :
ಬ್ಲೂಬೆರಿ, ಸ್ಟ್ರಾಬೆರಿ, ಹಾಗೂ ರಾಸ್ಪ್ಬೆರಿಗಳು ಹೆಚ್ಚು ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿದ್ದು, ಇನ್ಸುಲಿನ್ ಸಂವೇದನೆಯನ್ನು ಸುಧಾರಿಸುತ್ತವೆ. ಇದರೊಂದಿಗೆ, ಇದು ಸಿಹಿಯ ಕಡುಬಯಕೆಯನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ.
ಗೆಣಸು (sweet potato) :
ಗೆಣಸಿನಲ್ಲಿ ಫೈಬರ್ ಪ್ರಮಾಣ ಹೆಚ್ಚಾಗಿ ಇದ್ದು, ಇದು ನಿಧಾನಗತಿಯಲ್ಲಿ ಜೀರ್ಣಗೊಳ್ಳುವುದರಿಂದ ದಿಢೀರ್ ಶುಗರ್ ಏರಿಕೆಯನ್ನು ತಡೆಯುತ್ತದೆ ಹಾಗೂ ಆರೋಗ್ಯಕರ ಹಸಿರು ತರಕಾರಿ ಪಟ್ಟಿಗೆ ಸೇರಿದ್ದು, ಡಯಾಬಿಟೀಸ್ ರೋಗಿಗಳಿಗೆ ಅತ್ಯುತ್ತಮ ಆಯ್ಕೆಯಾಗಿದೆ.
ದಾಲ್ಟಿನ್ನಿ (cinnamon) :
ದಾಲ್ಟಿನ್ನಿ ಅಥವಾ ಸಿನ್ನಮನ್ ಇನ್ಸುಲಿನ್ ಸಂವೇದನೆಯನ್ನು ಹೆಚ್ಚಿಸಲು ಸಹಾಯಕ. ಇದನ್ನು ಆಹಾರದಲ್ಲಿ ಸೇರಿಸುವ ಮೂಲಕ, ರಕ್ತದ ಸಕ್ಕರೆಯನ್ನು ಕಡಿಮೆ ಮಾಡಬಹುದು.
ಬೆಳ್ಳುಳ್ಳಿ (Garlic) :
ಬೆಳ್ಳುಳ್ಳಿ ಔಷಧೀಯ ಗುಣಗಳಿಂದ ಸಮೃದ್ಧವಾಗಿದ್ದು, ಇದರಲ್ಲಿ ಇರುವ ಆಕ್ಸಿಡಾಂಟ್‌ಗಳು ಮತ್ತು ಬಯೋಆಕ್ಟಿವ್ ಕಾಂಪೌಂಡ್ಸ್‌ಗಳು, ರಕ್ತದ ಸಕ್ಕರೆಯನ್ನು ನಿಯಂತ್ರಣಗೊಳಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ.
ಒಟ್ಟಾರೆಯಾಗಿ, ನಿಮ್ಮ ಆಹಾರಪ್ರಕ್ರಿಯೆ ಮತ್ತು ಜೀವನಶೈಲಿಯಲ್ಲಿ ಈ ಪದಾರ್ಥಗಳನ್ನು ಸೇರಿಸುವ ಮೂಲಕ, ನೈಸರ್ಗಿಕವಾಗಿ ರಕ್ತದ ಸಕ್ಕರೆಯ ಮಟ್ಟವನ್ನು ಸಮತೋಲನದಲ್ಲಿ ಇಡಬಹುದು. ಇವು ದೀರ್ಘಕಾಲದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತವೆ. ಯಥಾಸ್ಥಿತಿಯ ಆಹಾರ ಸೇವನೆ, ನಿಯಮಿತ ವ್ಯಾಯಾಮ, ಮತ್ತು ವೈದ್ಯಕೀಯ ಸಲಹೆಗಳೊಂದಿಗೆ ಆರೋಗ್ಯದ ಮೇಲೆ ಹೆಚ್ಚು ಕಾಳಜಿ ವಹಿಸುವುದು ಮಹತ್ವದ ಸಂಗತಿಯಾಗಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




