ನೀವೇನಾದರೂ ನಿಮ್ಮ ಕನಸಿನ ಮನೆಯನ್ನು ಕಟ್ಟಲು ಬಯಸುತ್ತಿದ್ದೀರ, ಅದಕ್ಕಾಗಿ ಹಣ ಹೊಂದಿಸಲು ಕಷ್ಟ ಆಗುತ್ತಿದೆಯೇ, ಆದ್ರೆ ಈಗ ಅದಕ್ಕಾಗಿ ಚಿಂತಿಸುವ ಅಗತ್ಯ ಇಲ್ಲ. ನಿಮ್ಮ ಕನಸನ್ನು ಈಡೇರಿಸುವ ಸಮಯ ಬಂದೆ ಬಿಡ್ತು. ಹೌದು ಇದೀಗ ಗೃಹ ಸಾಲಕ್ಕಾಗಿ ( Home Loan ) ಮಾರುಕಟ್ಟೆಯು ವಿಶೇಷವಾಗಿ ಬಡ್ಡಿ ದರಗಳು, ತಡೆರಹಿತ ಡಿಜಿಟಲ್ ಪ್ರಕ್ರಿಯೆಗಳು ಮತ್ತು ಅವುಗಳಿಗೆ ಸಂಬಂಧಿಸಿದ ತೆರಿಗೆ ಪ್ರಯೋಜನೆಗಳನ್ನು ಬಿಡಲಾಗಿದೆ. ಇದರ ಬಗ್ಗೆ ಪೂರ್ಣ ಮಾಹಿತಿ ಬೇಕೇ ಹಾಗಿದ್ದಲ್ಲಿ ವರದಿಯನ್ನು ಕೊನೆವರೆಗೂ ಓದಿ. ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಫಾಲೋ (Follow) ಮಾಡಿ.
ಗೃಹ ಸಾಲ ಮಾಡುವ ಮೊದಲು ತಿಳಿಯಬೇಕಾದ ಮಾಹಿತಿ :

ಈ ಅನುಕೂಲಗಳು ನಿಮ್ಮ ಕನಸಿನ ಮನೆಯನ್ನು ಕಟ್ಟಲು ಸೂಕ್ತವಾಗಿವೆ ಮತ್ತು ನಿಮ್ಮ ಆರ್ಥಿಕತೆಗೆ ನೆರವನ್ನು ನೀಡುತ್ತವೆ. ಹಾಗೆಯೇ ಇನ್ನೊಂದು ಮುಖ್ಯ ವಿಷಯ ಏನೆಂದರೆ ನಿಮ್ಮ ಅಗತ್ಯಗಳಿಗೆ ಸೂಕ್ತವಾದ ಪರಿಪೂರ್ಣ ಗೃಹ ಸಾಲವನ್ನು ಆಯ್ಕೆಮಾಡುವುದರಲ್ಲಿ ಹಾಲವಾರು ಸವಾಲು ಎದುರಾಗುತ್ತವೆ. ಹೌದು, ನಿಮ್ಮ ಕನಸಿನ ಮನೆಯನ್ನು ಕಟ್ಟಲು ಪರಿಪೂರ್ಣ ಹೋಮ್ ಲೋನ್ ( Loan ) ಅಸ್ತಿತ್ವದಲ್ಲಿದೆ. ನೀವು ಅದನ್ನು ಬಳಸಿಕೊಳ್ಳಬಹುದು. ಹಾಗೆಯೇ ಇದರಲ್ಲಿ ಹಲವಾರು ಆಯ್ಕೆಗಳು ಇವೆ. ಈ ಕೆಳಗಿನ ಅಂಶಗಳನ್ನು ಬಳಸಿಕೊಂಡು ಅದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಬಹುದು.
ಇದರಲ್ಲಿ ಮೊದಲೆಯದಾಗಿ ಹೋಮ್ ಲೋನ್ ಬಡ್ಡಿ ದರವನ್ನು ಪರಿಶೀಲಿಸಬೇಕು :
ಇತ್ತೀಚಿನ ದಿನಗಳಲ್ಲಿ ಹಲವಾರು ರೀತಿಯಲ್ಲಿ ಬಡ್ಡಿ ದರಗಳು ದೊರೆಯುತ್ತದೆ. ಹಾಗೆ ಬಡ್ಡಿ ದರವಿಲ್ಲದೆ ಯಾವುದೇ ಸಾಲವನ್ನು ನೀಡುವುದಿಲ್ಲ. ಇಂದು ನಾವು ನಮಗೆ ಬೇಕಾದ ಹಾಗೆ ಸಾಲದ ಬಡ್ಡಿ ದರವನ್ನು ನಿಗದಿಪಡಿಸಬಹುದು ಅಥವಾ ಫ್ಲೋಟಿಂಗ್ ( Plotting ) ಮಾಡಬಹುದು. ಇನ್ನು ನೋಡುವುದಾದರೆ ಇಂದಿನ ಮಾರುಕಟ್ಟೆಯಲ್ಲಿ ಫ್ಲೋಟಿಂಗ್ ಬಡ್ಡಿದರಗಳು ಅತ್ಯಂತ ಪ್ರಚಲಿತದಲ್ಲಿವೆ ಏಕೆಂದರೆ ಅವುಗಳು ಮಾರುಕಟ್ಟೆ ದರಗಳನ್ನು ಒಳಗೊಂಡಿರುತ್ತವೆ.
ಈ ಫ್ಲೋಟಿಂಗ್ ಬಡ್ಡಿದರಗಳು ಗ್ರಾಹಕರಿಗೆ ಅತ್ಯಂತ ಪ್ರಯೋಜನವಾಗಿವೆ. ಯಾವಾಗ ಮಾರುಕಟ್ಟೆ ದರಗಳು ಕಡಿಮೆಯಾಗುತ್ತವೆಯೋ ಅವಾಗ ಉಳಿತಾಯವನ್ನು ನಿಮಗೆ ವರ್ಗಾಯಿಸುವುದರಿಂದ ಫ್ಲೋಟಿಂಗ್ ಬಡ್ಡಿದರಗಳು ಅತ್ಯಂತ ಪ್ರಯೋಜನಕಾರಿಯಾಗಿವೆ. ಹಾಗೆಯೇ ಇವುಗಳು ಆರ್ ಬಿ ಐ ( RBI ) ದರಗಳನ್ನು ನಿಯಂತ್ರಿಸುತ್ತದೆ ಮತ್ತು ದೀರ್ಘಾವಧಿಯಲ್ಲಿ ನೀವು ಕಡಿಮೆ ಬಡ್ಡಿದರವನ್ನು ಪಡೆಯಬಹುದು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಫಾಲೋ (Follow) ಮಾಡಿ.
ಇನ್ನು ಎರಡನೆಯದಾಗಿ ನೋಡುವುದಾದರೆ ಮಾಸಿಕ ಕಂತುಗಳನ್ನು ( Monthly invests ) ಲೆಕ್ಕ ಹಾಕಬೇಕಾಗುತ್ತದೆ. ಇದು ಒಂದು ಅವಶ್ಯಕ ವಿಷಯವಾಗಿವೆ.
ಯಾವುದಕ್ಕೂ ಮೊದಲು ನಿಮ್ಮ ಹೋಮ್ ಲೋನ್ ಅನ್ನು ಕೊನೆಗೊಳಿಸುವ ಮುಂಚೆ ಸಮಾನ ಮಾಸಿಕ ಕಂತುಗಳನ್ನು (EMI) ಲೆಕ್ಕ ಹಾಕಬೇಕಾಗುತ್ತದೆ. ಯಾಕೆಂದರೆ ಗೃಹ ಸಾಲಗಳು ದೀರ್ಘಾವಧಿಯ ಸಾಲಗಳಾಗಿರುತ್ತದೆ. ಆದ್ದರಿಂದ ಅವುಗಳನ್ನು ವರ್ಷಗಳವರೆಗೆ ಲಾಕ್ ಮಾಡಲಾಗುತ್ತದೆ.
ಹಾಗೆಯೇ ಈ EMI ಗಳು ನಿಮ್ಮ ಹಣಕಾಸಿನ ಪರಿಸ್ಥಿತಿ ಮತ್ತು ಭವಿಷ್ಯದ ಯೋಜನೆಗಳ ಮೇಲೆ ಪ್ರಭಾವ ಬೀರುತ್ತವೆ. ಮತ್ತು ಹೆಚ್ಚು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಭಾರತದ ಪ್ರಮುಖ ಬ್ಯಾಂಕ್‌ಗಳ ವೆಬ್‌ಸೈಟ್‌ಗಳಲ್ಲಿ ಲಭ್ಯವಿರುವ ಉಚಿತ ಆನ್‌ಲೈನ್ ಹೋಮ್ ಲೋನ್ EMI ಗಳ ಪಟ್ಟಿಯನ್ನು ಪರಿಶೀಲಿಸುವುದು ಅಗತ್ಯ. ಆದರೆ ಇಂದು.ಬ್ಯಾಂಕ್‌ಗಳು ಹೋಮ್ ಲೋನ್ EMI ಕ್ಯಾಲ್ಕುಲೇಟರ್ ಅನ್ನು ನೀಡಲು ಪ್ರಾರಂಭಿಸಿವೆ. ಬಡ್ಡಿ ದರ, ಹೋಮ್ ಲೋನ್ ಮೊತ್ತ ಮತ್ತು ಇತರ ವೇರಿಯಬಲ್‌ಗಳ ಆಧಾರದ ಮೇಲೆ ನೀವು ಪಾವತಿಸಬೇಕಾದ ಮಾಸಿಕ ಕಂತುಗಳನ್ನು ನಿರ್ಧರಿಸಲು ಕೊಠಕ್ ( kotak ) ಹೋಮ್ ಲೋನ್ EMI ಕ್ಯಾಲ್ಕುಲೇಟರ್ ಅನ್ನು ಬಳಸಿಕೊಳ್ಳಬಹುದು.
ಹಾಗೆಯೇ ಮೂರನೆಯದಾಗಿ ಗರಿಷ್ಠ ಸಾಲದ ಮೊತ್ತವನ್ನು ಪರಿಶೀಲಿಸ ಬೇಕಾಗುತ್ತದೆ.
ಯಾಕೆಂದರೆ ಈ ಗರಿಷ್ಠ ಸಾಲದ ಮೊತ್ತವು ಮಾನದಂಡಗಳು, ಆಸ್ತಿಯ ಮೊತ್ತ ಮತ್ತು ಮಾಸಿಕ ಆದಾಯವನ್ನು ಒಳಗೊಂಡಿರುತ್ತವೆ. ಈಗ ಹೆಚ್ಚಿನ ಬ್ಯಾಂಕ್‌ಗಳು ಸಾಮಾನ್ಯವಾಗಿ ಆಸ್ತಿಯ ಮೌಲ್ಯದ ಸುಮಾರು 70-75% ರಷ್ಟು ಹಣವನ್ನು ನೀಡುತ್ತವೆ.
ಇದಿಷ್ಟು ಅಂಶಗಳು ನಿಮ್ಮ ಕನಸು ಅಥವಾ ಗುರಿಯನ್ನು ಸಾಧಿಸಲು ನಿಮಗೆ ಸಹಾಯ ಮಾಡುತ್ತದೆ. ಪರಿಪೂರ್ಣ ಗೃಹ ಸಾಲವನ್ನು ಪಡೆಯುವಲ್ಲಿ ಉತ್ತಮವಾಗಿವೆ. ಸರಿಯಾದ ಸಾಲದ ಮೊತ್ತವನ್ನು ಆಯ್ಕೆ ಮಾಡಲು ಮತ್ತು ಉತ್ತಮವಾಗಿ ಒಂದು ಕಾರ್ಯವನ್ನು ಯೋಜಿಸಲು ನಿಮಗೆ ಇಷ್ಟೆಲ್ಲ ಮಾಹಿತಿಗಳು ಸಹಾಯ ಮಾಡುತ್ತವೆ.
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group





