ಮನುಷ್ಯನ ಜೀವನದಲ್ಲಿ ಒಂದು ಮುಖ್ಯವಾದ ಗುರಿ ಎಂದರೆ ಸ್ವಂತ ಮನೆ(own house). ಚಿಕ್ಕದಾಗಿನಿಂದಲೂ ಕಾಣುವ ಕನಸು, ದುಡಿತದ ಫಲವಾಗಿ ಸ್ವಂತ ಜಾಗದಲ್ಲಿ ಒಂದು ಮನೆ ಕಟ್ಟಿಕೊಳ್ಳುವ ಆಸೆ ಎಲ್ಲರಲ್ಲೂ ಇರುತ್ತದೆ. ಆದರೆ ಈ ಕನಸನ್ನು ನನಸು ಮಾಡಲು ಬೇಕಾದ ಹಣದ ಭಾರ ಒಂದು ದೊಡ್ಡ ಸವಾಲಾಗಿ ಪರಿಣಮಿಸುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಇತ್ತೀಚಿನ ದಿನಗಳಲ್ಲಿ ಸ್ವಂತ ಜಾಗದಲ್ಲಿ ಮನೆ ಕಟ್ಟುವುದು ತುಂಬಾ ದುಬಾರಿಯಾಗಿದೆ. ಆದರೆ ಗೃಹ ಸಾಲ(Home loan)ಗಳ ಬೇಡಿಕೆ ಯಾವಾಗಲೂ ಇರುತ್ತದೆ. ಸಾಲ ಇದ್ದರೆ ಅದಕ್ಕೆ ಬಡ್ಡಿ(interest) ಕಟ್ಟುವುದು ಅನಿವಾರ್ಯ. ಆದರೆ ಯಾವ ಬ್ಯಾಂಕ್‌ನಿಂದ ಸಾಲ ಪಡೆಯಬೇಕು, ಎಷ್ಟು ಬಡ್ಡಿ ದರದಲ್ಲಿ ಸಾಲ ಸಿಗುತ್ತದೆ ಎಂಬುದು ಗೊಂದಲ.
ಗೃಹ ಸಾಲ ಪಡೆಯಲು ಯಾವ ಬ್ಯಾಂಕ್ ಸೂಕ್ತ :
ಹೆಚ್ಚಿನ ಬಡ್ಡಿ ದರದಲ್ಲಿ ಸಾಲ ಪಡೆದರೆ ಸಾಲದ ಹೊರೆ ತುಂಬಾ ಜಾಸ್ತಿಯಾಗುತ್ತದೆ. ಆದ್ದರಿಂದ ಕಡಿಮೆ ಬಡ್ಡಿ(less interest) ದರದಲ್ಲಿ ಸಾಲ ಪಡೆಯುವುದು ತುಂಬಾ ಸೂಕ್ತ. ಗೃಹ ಖರೀದಿ ಒಂದು ದೊಡ್ಡ ನಿರ್ಧಾರ, ಮತ್ತು ಗೃಹ ಸಾಲದ ಆಯ್ಕೆ ಒಂದು ಪ್ರಮುಖ ಭಾಗವಾಗಿದೆ. ಯಾವ ಬ್ಯಾಂಕ್(Bank) ನಿಮಗೆ ಉತ್ತಮ ಎಂದು ತಿಳಿದುಕೊಳ್ಳುವುದು ಮುಖ್ಯ.
ಈ ವರದಿಯಲ್ಲಿ, ವಿವಿಧ ಬ್ಯಾಂಕ್‌ಗಳಲ್ಲಿ ವಿವಿಧ ರೀತಿಯ ಸಾಲಗಳ ಬಗ್ಗೆ ಸರಳವಾದ ಮಾಹಿತಿಯನ್ನು ಒದಗಿಸಲಾಗಿದೆ. ಇದು ನಿಮ್ಮ ಸಾಲದ ಅಗತ್ಯಗಳಿಗೆ ಸೂಕ್ತವಾದ ಬ್ಯಾಂಕ್ ಮತ್ತು ಸಾಲ ಯೋಜನೆಯನ್ನು ಆಯ್ಕೆ ಮಾಡಲು ಸಹಾಯ ಮಾಡುತ್ತದೆ. ವರದಿಯನ್ನು ತಪ್ಪದೆ ಕೊನೆಯವರೆಗೂ ಸಂಪೂರ್ಣವಾಗಿ ಓದಿ.
ಬ್ಯಾಂಕ್ ಆಫ್ ಬರೋಡಾ(Bank of Baroda(BOB))
ಬ್ಯಾಂಕ್ ಆಫ್ ಬರೋಡಾ ಭಾರತದ ಪ್ರಮುಖ ಮತ್ತು ಪ್ರತಿಷ್ಠಿತ ಬ್ಯಾಂಕ್‌ಗಳಲ್ಲಿ ನೆಲೆಸಿದೆ. ಖಾತೆದಾರರಿಗೆ ಅನೇಕ ಉತ್ತಮ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸುವ ಮೂಲಕ, ಈ ಬ್ಯಾಂಕ್ ದೇಶಾದ್ಯಂತ ಬಳಕೆದಾರರನ್ನು ಹೊಂದಿದೆ. ಗೃಹ ಸಾಲಕ್ಕಾಗಿ ಹುಡುಕುತ್ತಿರುವವರಿಗೆ, ಬ್ಯಾಂಕ್ ಆಫ್ ಬರೋಡಾ ಒಂದು ಉತ್ತಮ ಆಯ್ಕೆಯಾಗಿದೆ.
ಗೃಹ ಖರೀದಿ ನಿಮ್ಮ ಜೀವನದ ಪ್ರಮುಖ ಹಂತಗಳಲ್ಲಿ ಒಂದಾಗಿದೆ. ಬ್ಯಾಂಕ್ ಆಫ್ ಬರೋಡಾ ಈ ನಿಮ್ಮ ಕನಸಿನ ಪ್ರಯಾಣದಲ್ಲಿ ನಿಮ್ಮ ಜೊತೆ ನಿಲ್ಲಲು 8.4% ರಿಂದ 10.6% ವಾರ್ಷಿಕ ಬಡ್ಡಿ ದರದಲ್ಲಿ ಸ್ಪರ್ಧಾತ್ಮಕ ಗೃಹ ಸಾಲ ಯೋಜನೆಗಳನ್ನು ಒದಗಿಸಿಕೊಡುತ್ತದೆ.
ಬ್ಯಾಂಕ್ ಆಫ್ ಇಂಡಿಯಾ(Bank of India):
ಬ್ಯಾಂಕ್ ಆಫ್ ಇಂಡಿಯಾ ನಿಮ್ಮ ಕನಸನ್ನು ನನಸಾಗಿಸಲು ಸಹಾಯ ಮಾಡಲು 8.30% ವಾರ್ಷಿಕದಿಂದ ಪ್ರಾರಂಭವಾಗುವ ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲಗಳನ್ನು ನೀಡುತ್ತದೆ. 30 ವರ್ಷಗಳವರೆಗೆ ಮರುಪಾವತಿ ಮಾಡಲು ಅವಕಾಶವಿದ್ದು, ತಿಂಗಳಿಗೆ ನಿಮ್ಮ ಕಂತುಗಳು ಕಡಿಮೆಯಾಗುತ್ತವೆ.
ನಿಮ್ಮ ಅಗತ್ಯಗಳಿಗೆ ಸರಿಹೊಂದುವಂತೆ ವಿವಿಧ ಗೃಹ ಸಾಲ ಯೋಜನೆಗಳನ್ನು ಇಲ್ಲಿ ನೀವು ಹೊಂದುವಿರಿ. ನೀವು ಆನ್‌ಲೈನ್ ಅಥವಾ ಬ್ಯಾಂಕಿನ ಶಾಖೆಯಲ್ಲಿ ಸುಲಭವಾಗಿ ಅರ್ಜಿ ಸಲ್ಲಿಸಬಹುದು ಮತ್ತು ತ್ವರಿತ ಅನುಮೋದನೆ ಪಡೆಯಬಹುದು.
ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank):
ಭಾರತದ ಅತ್ಯಂತ ಹಳೆಯ ಮತ್ತು ಗೌರವಾನ್ವಿತ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಒಂದಾದ ಪಂಜಾಬ್ ಬ್ಯಾಂಕ್ (PNB) ನಿಮ್ಮ ಕನಸಿನ ಮನೆಯನ್ನು ಖರೀದಿಸಲು ಸಹಾಯ ಮಾಡಲು ಉತ್ತಮ ಗೃಹ ಸಾಲ ಯೋಜನೆಗಳನ್ನು ಒದಗಿಸುತ್ತಿದೆ.
PNB ಗೃಹ ಸಾಲಗಳ ಮೇಲೆ ಶೇ.8.45 ರಿಂದ ಶೇ.10.5 ರಿಂದ ಬಡ್ಡಿ ವಿಧಿಸುವುದು. ಇದು ಭಾರತದಲ್ಲಿನ ಕೆಲವು ಕಡಿಮೆ ಬಡ್ಡಿ ದರಗಳಲ್ಲಿ ನೆಲೆಗೊಂಡಿದೆ. PNB ₹ 30 ಲಕ್ಷದಿಂದ ₹ 80 ಲಕ್ಷದವರೆಗೆ ಗೃಹ ಸಾಲಗಳನ್ನು ನೀಡಲಾಗುತ್ತದೆ ಹಾಗೂ 15 ವರ್ಷಗಳ ಮರುಪಾವತಿ ಅವಧಿಯಲ್ಲಿ ಗೃಹ ಸಾಲಗಳನ್ನು ನೀಡಲಾಗುತ್ತದೆ. ನಿಮ್ಮ ಯೋಜನೆಗೆ ಸೂಕ್ತವಾದ ಅವಧಿಯನ್ನು ನೀವು ಆಯ್ಕೆ ಮಾಡಬಹುದು. PNB ಗೃಹ ಸಾಲಗಳಿಗೆ ಅರ್ಹತೆ ಪಡೆಯುವುದು ತುಲನಾತ್ಮಕವಾಗಿ ಸುಲಭವಾಗಿದೆ, ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವುದು ಸುಲಭ ಮತ್ತು ತ್ವರಿತವಾಗಿದೆ. PNB ನಿಮ್ಮ ಅಗತ್ಯಗಳಿಗೆ ಸರಿಹೊಂದುವಂತೆ ವಿವಿಧ ಗೃಹ ಸಾಲ ಯೋಜನೆಗಳ ಅವಕಾಶ ನೀಡುತ್ತದೆ.
ಎಚ್‌ಡಿಎಫ್‌ಸಿ ಬ್ಯಾಂಕ್ (HDFC Bank):
ದೇಶದ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್ HDFC ನಿಮ್ಮ ಕನಸಿನ ಮನೆಯನ್ನು ಖರೀದಿಸಲು ಉತ್ತಮ ಅವಕಾಶಗಳನ್ನು ನೀಡುತ್ತದೆ. HDFC ಬ್ಯಾಂಕ್ನಲ್ಲಿ ಶೇಕಡಾ 8.9 ರಿಂದ ಶೇಕಡಾ 9.6 ರ ನಡುವೆ ಬಡ್ಡಿ ದರವು ಬದಲಾಗುತ್ತದೆ. ಇದು ಪ್ರಮಾಣಿತ ಗೃಹ ಸಾಲದ ಬಡ್ಡಿ ದರವಾಗಿದೆ ಆದರೆ ವಿಶೇಷ ದರವು 8.55 ಪ್ರತಿಶತದಿಂದ 9.10 ಪ್ರತಿಶತದವರೆಗೆ ಬದಲಾಗುತ್ತದೆ. ಗೃಹ ಸಾಲವನ್ನು ಸಾಲದಾತ ಅಥವಾ ಬ್ಯಾಂಕ್‌ಗೆ ಹಿಂತಿರುಗಿಸಬೇಕಾದ ಅವಧಿಯನ್ನು ಅಧಿಕಾರಾವಧಿ ಎಂದು ಕರೆಯಲಾಗುತ್ತದೆ. ಗರಿಷ್ಠ ಸಾಲದ ಅವಧಿಯು 30 ವರ್ಷಗಳು
ಗೃಹ ಸಾಲದ ವಿಶೇಷತೆಗಳು:
ಕೇವಲ ಶೇ. 8.50 ರಿಂದ ಪ್ರಾರಂಭ, ಸಿಬಿಲ್ ಸ್ಕೋರ್(Cibil Score) ಮತ್ತು ಸಾಲದ ಅವಧಿಯ ಆಧಾರದ ಮೇಲೆ ಸಾಲದ ಮಂಜೂರಿ. ನಿಮ್ಮ ಅಗತ್ಯಗಳಿಗೆ ಸೂಕ್ತವಾದ ಯೋಜನೆಗಳ ಆಯ್ಕೆಯನ್ನು ಮಾಡಬಹುದು. ಆನ್‌ಲೈನ್(Online) ಅಥವಾ ಯಾವುದಾದರೂ ಎಚ್‌ಡಿಎಫ್‌ಸಿ ಶಾಖೆಯಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. ಅರ್ಹತೆ ಪಡೆದರೆ ಕೆಲವೇ ದಿನಗಳಲ್ಲಿ ಲೋನ್ ಮಂಜೂರಿ ಮಾಡಲಾಗುವುದು. ವಿವಿಧ ಮರುಪಾವತಿ ಆಯ್ಕೆಗಳು ಲಭ್ಯವಿದೆ.
ಗೃಹ ಸಾಲ ಒಂದು ದೊಡ್ಡ ಜವಾಬ್ದಾರಿ, ಆದ್ದರಿಂದ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಎಲ್ಲಾ ಅಂಶಗಳನ್ನು ಪರಿಗಣಿಸಿ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ಗೃಹಜ್ಯೋತಿ ಗ್ರಾಹಕರಿಗೆ ಶಾಕಿಂಗ್ ನ್ಯೂಸ್, ಉಚಿತ ವಿದ್ಯುತ್ ಯೋಜನೆಯ ನಿಯಮ ಬದಲಾವಣೆ, ಹೊಸ ರೂಲ್ಸ್ ಜಾರಿ..!
- SSP ವಿದ್ಯಾರ್ಥಿ ವೇತನ 2024, ಆನ್‌ಲೈನ್ ಅರ್ಜಿ ಸಲ್ಲಿಸಿ | Karnataka SSP Scholarship 2024
- ಕರ್ನಾಟಕ ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ಸಬ್ಸಿಡಿ ಪಡೆಯಲು ಕೂಡಲೇ ಅರ್ಜಿ ಸಲ್ಲಿಸಿ! ಇಲ್ಲಿದೆ ಸಂಪೂರ್ಣ ಮಾಹಿತಿ
- ವೋಟರ್ ಐಡಿಗೆ ಅರ್ಜಿ ಸಲ್ಲಿಸುವುದು ಹೇಗೆ? ಮೊಬೈಲ್ ನಲ್ಲೆ ಅರ್ಜಿ ಸಲ್ಲಿಸುವ ವಿಡಿಯೋ ಇಲ್ಲಿದೆ
- ಈ ಮಹಿಳೆಯರಿಗೆ 6 ಮತ್ತು 7ನೇ ಕಂತಿನ ಗೃಹಲಕ್ಷ್ಮಿ 2000/- ಹಣ ಜಮೆ ಆಗೋಲ್ಲ, ಇಲ್ಲಿದೆ ಕಾರಣ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group






