Picsart 25 11 10 22 58 08 737 scaled

FD ಹಣಕ್ಕೆ ಅತೀ ಹೆಚ್ಚು ಬಡ್ಡಿ.!  ವಿವಿಧ ಬ್ಯಾಂಕ್‌ಗಳ ಬಡ್ಡಿದರ ಹೋಲಿಕೆ – ಹಿರಿಯರಿಗೆ ವಿಶೇಷ ಲಾಭ!

Categories:
WhatsApp Group Telegram Group

ಹೂಡಿಕೆ ಜಗತ್ತಿನಲ್ಲಿ ಸ್ಥಿರ ಠೇವಣಿ (Fixed Deposit – FD) ಎಂದರೆ ಸಾಮಾನ್ಯ ಜನರಿಗೆ ಅತ್ಯಂತ ಸುರಕ್ಷಿತ ಮತ್ತು ನಂಬಿಕೆಯ ಹೂಡಿಕೆ ಮಾರ್ಗ. ಮಾರುಕಟ್ಟೆಯ ಏರಿಳಿತಗಳ ಪರಿಣಾಮ ಇರುವ ಮ್ಯೂಚುಯಲ್ ಫಂಡ್, ಶೇರು ಮಾರುಕಟ್ಟೆ ಹೂಡಿಕೆಗಳಿಗಿಂತ ವಿಭಿನ್ನವಾಗಿ, ಎಫ್‌ಡಿ ಮೂಲಕ ಯಾವಾಗಲೂ ಖಚಿತ ಬಡ್ಡಿದರ ಮತ್ತು ನಿರ್ದಿಷ್ಟ ಅವಧಿಯ ನಂತರ ಖಚಿತ Returns ಲಭ್ಯವಾಗುತ್ತವೆ. ಈ ಕಾರಣಕ್ಕೆ, ದೇಶದಾದ್ಯಂತ ಲಕ್ಷಾಂತರ ಹೂಡಿಕೆದಾರರು ಎಫ್‌ಡಿಯನ್ನು ತಮ್ಮ ಪ್ರಾಥಮಿಕ ಹೂಡಿಕೆ ಮಾರ್ಗವಾಗಿ ಆರಿಸುತ್ತಾರೆ. ಆದರೆ ಎಫ್‌ಡಿ ಬಡ್ಡಿದರಗಳು ಎಲ್ಲ ಬ್ಯಾಂಕುಗಳಲ್ಲೂ ಒಂದೇರೀತಿ ಇರುವುದಿಲ್ಲ. ಬ್ಯಾಂಕ್‌ ಬಡ್ಡಿದರದಲ್ಲಿ 0.50% ರಿಂದ 1% ರಷ್ಟು ವ್ಯತ್ಯಾಸವೂ ಕಂಡುಬರುತ್ತದೆ. ಈ ಸಣ್ಣ ವ್ಯತ್ಯಾಸವೇ ದೀರ್ಘಾವಧಿಯಲ್ಲಿ ಸಾವಿರಾರು ರೂಪಾಯಿ ಹೆಚ್ಚುವರಿ ಲಾಭಕ್ಕೆ ಕಾರಣ ಆಗಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಉದಾಹರಣೆಗೆ,  3 ವರ್ಷಗಳ ಅವಧಿಗೆ ₹5 ಲಕ್ಷ FD ಮಾಡಿದರೆ, ಕೇವಲ 0.50% ಹೆಚ್ಚುವರಿ ಬಡ್ಡಿದರವೇ ₹7,500 ಹೆಚ್ಚುವರಿ Returns ನೀಡುತ್ತದೆ. ಇದೇ ಮೊತ್ತ ₹10 ಲಕ್ಷ FD ಆಗಿದ್ದರೆ, ನಿಮ್ಮ ಹೆಚ್ಚುವರಿ ಲಾಭ ₹15,000 ವರೆಗೆ ಏರಬಹುದು.

ವಿಶೇಷವಾಗಿ ಹಿರಿಯ ನಾಗರಿಕರಿಗೆ ಬ್ಯಾಂಕ್‌ಗಳು ಹೆಚ್ಚುವರಿ 0.50% (50 Basis Points) ರಿಂದ 0.60% ವರೆಗೆ ಹೆಚ್ಚುವರಿ ಬಡ್ಡಿದರ ನೀಡುತ್ತವೆ. ಇದರಿಂದ ಹಿರಿಯರಿಗೆ ದೀರ್ಘಾವಧಿಯಲ್ಲಿ ಹೆಚ್ಚಿನ Returns ದೊರೆಯುವುದರ ಜೊತೆಗೆ ಹಣಕಾಸು ಭದ್ರತೆ ಕೂಡ ಒದಗುತ್ತದೆ. ಹಾಗಿದ್ದರೆ ಪ್ರಸ್ತುತ 3 ವರ್ಷಗಳ ಅವಧಿಗೆ ವಿವಿಧ ಬ್ಯಾಂಕ್‌ಗಳು ಹಿರಿಯ ನಾಗರಿಕರಿಗೆ ನೀಡುತ್ತಿರುವ FD ಬಡ್ಡಿದರಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಭಾರತದ ಪ್ರಮುಖ ಬ್ಯಾಂಕ್‌ಗಳ 3 ವರ್ಷಗಳ FD ಬಡ್ಡಿದರಗಳು (ಹಿರಿಯ ನಾಗರಿಕರಿಗೆ) :

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI):
ಬಡ್ಡಿದರ: 6.8%
ಭಾರತದ ಅತಿ ದೊಡ್ಡ ಬ್ಯಾಂಕ್‌ಗಳಲ್ಲಿ ಒಂದಾದ SBI, ಸಾಮಾನ್ಯ ನಾಗರಿಕರಿಗಿಂತ ಹಿರಿಯರಿಗೆ 50 ಬೇಸ್ ಪಾಯಿಂಟ್‌ಗಳ ಹೆಚ್ಚುವರಿ ದರ ನೀಡುತ್ತದೆ.

ಫೆಡರಲ್ ಬ್ಯಾಂಕ್:
ಬಡ್ಡಿದರ: 7%
ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಆಗಿರುವ ಫೆಡರಲ್ ಬ್ಯಾಂಕ್, ಹಿರಿಯರಿಗೆ ಉತ್ತಮ ಬಡ್ಡಿದರವನ್ನು ನೀಡುತ್ತದೆ.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ:
ಬಡ್ಡಿದರ: 7.1%
ಸಾರ್ವಜನಿಕ ವಲಯದ ಈ ಬ್ಯಾಂಕ್, ಹಿರಿಯರಿಗೆ ಅತ್ಯಧಿಕ 7.1% ಬಡ್ಡಿ ನೀಡುತ್ತಿದೆ.

ಕೋಟಕ್ ಮಹೀಂದ್ರ ಬ್ಯಾಂಕ್:

ಬಡ್ಡಿದರ: 6.90%
ಹಿರಿಯರಿಗೆ 6.90% ಬಡ್ಡಿ ನೀಡಲಾಗುತ್ತದೆ. ಸಾಮಾನ್ಯರಿಗೆ ಇದಕ್ಕಿಂತ 0.50% ಕಡಿಮೆ ದರ.

ICICI ಬ್ಯಾಂಕ್:
ಬಡ್ಡಿದರ: 7.1%
ಖಾಸಗಿ ವಲಯದ ಪ್ರಮುಖ ಬ್ಯಾಂಕ್ ICICI ಕೂಡ 3 ವರ್ಷಗಳ FD ಮೇಲೆ ಹಿರಿಯರಿಗೆ 7.1% ನೀಡುತ್ತಿದೆ.

HDFC ಬ್ಯಾಂಕ್:
ಬಡ್ಡಿದರ: 6.95%
ಹಿರಿಯರಿಗೆ 6.95% ಮತ್ತು ಸಾಮಾನ್ಯ ನಾಗರಿಕರಿಗೆ 6.45% ಬಡ್ಡಿದರ.

ಕೆನರಾ ಬ್ಯಾಂಕ್:
ಬಡ್ಡಿದರ: 6.75%
ಸಾರ್ವಜನಿಕ ವಲಯದ ಈ ಬ್ಯಾಂಕ್ ಹಿರಿಯರಿಗೆ 6.75% ಬಡ್ಡಿದರವನ್ನು ನೀಡುತ್ತಿದೆ.

ಹಿರಿಯ ನಾಗರಿಕರಿಗೆ 3 ವರ್ಷಗಳ ಎಫ್‌ಡಿ ಮೇಲಿನ ಅತೀ ಹೆಚ್ಚು ಬಡ್ಡಿ ನೀಡುವ ಬ್ಯಾಂಕ್‌ಗಳು, ICICI ಬ್ಯಾಂಕ್ – 7.1%, ಯೂನಿಯನ್ ಬ್ಯಾಂಕ್ – 7.1%, ಫೆಡರಲ್ ಬ್ಯಾಂಕ್ – 7% ಈ ಮೂರು ಬ್ಯಾಂಕ್‌ಗಳು ಪ್ರಸ್ತುತ ಉತ್ತಮ ಬಡ್ಡಿದರಗಳನ್ನು ನೀಡುತ್ತಿವೆ.

ಒಟ್ಟಾರೆಯಾಗಿ, ಎಫ್‌ಡಿಯಲ್ಲಿ ಹೂಡಿಕೆ ಮಾಡುವ ಮೊದಲು, ಪ್ರತಿಯೊಂದು ಬ್ಯಾಂಕ್‌ಗಳ ಬಡ್ಡಿದರಗಳನ್ನು ಹೋಲಿಕೆ ಮಾಡುವುದು ಅತ್ಯಂತ ಮುಖ್ಯ. ವಿಶೇಷವಾಗಿ ದೀರ್ಘಾವಧಿಯ ಹೂಡಿಕೆಗಳಲ್ಲಿ ಸಣ್ಣ ಬಡ್ಡಿದರ ವ್ಯತ್ಯಾಸವೂ ಹೆಚ್ಚು Returns ಪಡೆಯಲು ಸಹಾಯ ಮಾಡುತ್ತದೆ. ಹಿರಿಯ ನಾಗರಿಕರು ಹೆಚ್ಚುವರಿ ಬಡ್ಡಿದರವನ್ನು ಪಡೆಯುವ ಮೂಲಕ ತಮ್ಮ ಹೂಡಿಕೆಗಳನ್ನು ಮತ್ತಷ್ಟು ಸುರಕ್ಷಿತ ಮತ್ತು ಲಾಭದಾಯಕವಾಗಿ ಮಾಡಬಹುದು.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories