WhatsApp Image 2025 08 23 at 2.41.18 PM

BIG NEWS : 1 ನೇ ತರಗತಿ ಪ್ರವೇಶದ ನಿಯಮದಲ್ಲಿ ಬದಲಾವಣೆ ಹೈಕೋರ್ಟ್ ಮಹತ್ವದ ಆದೇಶ.!

WhatsApp Group Telegram Group

ಒಂದನೇ ತರಗತಿ ಪ್ರವೇಶಕ್ಕೆ ಅರ್ಹತೆ ಪಡೆಯಲು ವಯಸ್ಸು ಕಡ್ಡಾಯವಾಗಿ ಆರು ವರ್ಷ ಪೂರ್ಣವಾಗಿರಬೇಕು ಎಂಬ ರಾಷ್ಟ್ರೀಯ ಶಿಕ್ಷಣ ನೀತಿ (ಎನ್.ಇ.ಪಿ) ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಗೋವಾ ಹೈಕೋರ್ಟ್ ತೀರ್ಪು ನೀಡಿದೆ. ಈ ನಿಟ್ಟಿನಲ್ಲಿ, ಐದು ವರ್ಷ ಹನ್ನೊಂದು ತಿಂಗಳ ವಯಸ್ಸಿನ ಮಗುವಿನ ಪೋಷಕರು ಒಂದನೇ ತರಗತಿ ಪ್ರವೇಶಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ನಿರಾಕರಿಸಿದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ವಿವರಗಳಿಗೆ ಬಂದರೆ, ಮಗುವಿನ ಪೋಷಕರು ತಮ್ಮ ಮಗು ಜೂನ್ 1, 2023ರಂದು 5 ವರ್ಷ 11 ತಿಂಗಳು ವಯಸ್ಸು ಪೂರ್ಣಗೊಳ್ಳುವುದರಿಂದ, ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ (2023-24) ಮೊದಲ ತರಗತಿಗೆ ಸೇರ್ಪಡೆಯಾಗಬೇಕು ಎಂದು ಒಂದು ಖಾಸಗಿ ಶಾಲೆಯಲ್ಲಿ (ಕಾನ್ವೆಂಟ್) ಒತ್ತಾಯಿಸಿದ್ದರು. ಆದರೆ, ರಾಷ್ಟ್ರೀಯ ಶಿಕ್ಷಣ ನೀತಿ 2020ರ ನಿಯಮಗಳು ಮತ್ತು ಶಿಕ್ಷಣದ ಹಕ್ಕು ಕಾಯ್ದೆ (ಆರ್.ಟಿ.ಇ) 2009ರ ಪ್ರಕಾರ, ಒಂದನೇ ತರಗತಿಯ ಪ್ರವೇಶ ಪಡೆಯಲು ಮಗುವಿನ ವಯಸ್ಸು ಜೂನ್ 1ನೇ ತಾರೀಖಿಗೆ ಕನಿಷ್ಠ 6 ವರ್ಷ ಪೂರ್ಣವಾಗಿರಬೇಕು. ಈ ನಿಯಮಕ್ಕೆ ಮಗುವಿನ ವಯಸ್ಸು ಕೇವಲ ಒಂದು ತಿಂಗಳು ಕಡಿಮೆ ಇದ್ದದ್ದು ಪ್ರಮುಖ ಅಡಚಣೆಯಾಗಿತ್ತು. ಇದರಿಂದಾಗಿ ಶಾಲೆಯು ಪ್ರವೇಶ ನಿರಾಕರಿಸಿದ್ದು, ಇದರ ವಿರುದ್ಧ ಪೋಷಕರು ಹೈಕೋರ್ಟ್ ಗೆ ದಾಖಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಬಂಧಿಸಲಾಗಿತ್ತು.

ನ್ಯಾಯಮೂರ್ತಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ರಾಜ್ಯ ಸರ್ಕಾರದಿಂದ ಈ ನಿಯಮಗಳ ಕುರಿತು ಸ್ಪಷ್ಟೀಕರಣ ಕೋರಿದರು. ಇದರ ಪ್ರತಿಕ್ರಿಯೆಯಾಗಿ, ರಾಜ್ಯದ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಮಾರಿಯಾ ಕೊರೆಯಾ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ ಅಧಿಕೃತ ವರದಿಯಲ್ಲಿ, ಡಿಸೆಂಬರ್ 13, 2022ರಂದು ಜಾರಿಗೆ ಬಂದ ಸರ್ಕಾರಿ ಅಧಿಸೂಚನೆಯನ್ನು ಉಲ್ಲೇಖಿಸಿದರು. ಈ ಅಧಿಸೂಚನೆಯ ಪ್ರಕಾರ, ರಾಷ್ಟ್ರೀಯ ಶಿಕ್ಷಣ ನೀತಿ 2020 ಮತ್ತು ಶಿಕ್ಷಣದ ಹಕ್ಕು ಕಾಯ್ದೆಯ ಸಂಪೂರ್ಣ ನಿಯಮಗಳನ್ನು ಗೋವಾ ರಾಜ್ಯದಲ್ಲಿ 2025-26 ಶೈಕ್ಷಣಿಕ ವರ್ಷದಿಂದ ಮಾತ್ರ ಕಡ್ಡಾಯವಾಗಿ ಜಾರಿಗೆ ತರಲಾಗುವುದು ಎಂದು ಸ್ಪಷ್ಟಪಡಿಸಲಾಯಿತು.

ಆದರೂ, ಈಗಾಗಲೇ ಅನೇಕ ಶಾಲೆಗಳು ತಮ್ಮ ಸ್ವಂತ ನೀತಿಯಂತೆ ಎನ್ಇಪಿ ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದು, ಈ ನಿರ್ದಿಷ್ಟ ಪ್ರಕರಣದಲ್ಲಿನ ಶಾಲೆಯು ವಯಸ್ಸಿನ ನಿಯಮವನ್ನು ರದ್ದುಗೊಳಿಸಲು ಒಪ್ಪಿರಲಿಲ್ಲ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ನ್ಯಾಯಾಲಯವು ಶಾಲಾ ನಿರ್ವಹಣೆಯ ನಿರ್ಧಾರವನ್ನು ಬೆಂಬಲಿಸಿ, ಶೈಕ್ಷಣಿಕ ನೀತಿಗಳನ್ನು ರೂಪಿಸುವ ಸರ್ಕಾರದ ಅಧಿಕಾರವನ್ನು ಉಳಿಸಿದ್ದಲ್ಲದೇ, ಕಡ್ಡಾಯ ವಯೋಸ್ಸಿನ ನಿಯಮವನ್ನು ಉಲ್ಲಂಘಿಸುವುದು ಇತರ ವಿದ್ಯಾರ್ಥಿಗಳಿಗೆ ಅನ್ಯಾಯವೆಂದು ಪರಿಗಣಿಸಿ, ಪೋಷಕರ ಅರ್ಜಿಯನ್ನು ವಜಾಗೊಳಿಸಲು ನಿರ್ಧರಿಸಿತು. ಈ ತೀರ್ಪು ಶೈಕ್ಷಣಿಕ ಸಂಸ್ಥೆಗಳ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯತೆಗೆ ಪ್ರಾಮುಖ್ಯತೆ ನೀಡಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

WhatsApp Group Join Now
Telegram Group Join Now

Popular Categories