IMG 20240913 WA0005

ಕೇವಲ 10 ಸಾವಿರಕ್ಕೆ ಕಟ್ಟಿ ಮನೆಗೆ ತರಬಹುದು ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್

Categories:
WhatsApp Group Telegram Group
ಆಕರ್ಷಕ ಬೆಲೆಯಲ್ಲಿ ಹೀರೊ ಕಂಪನಿಯು ಬಿಡುಗಡೆ ಮಾಡಿದೆ ಹೊಸ ಬೈಕ್, ಕೇವಲ 10 ಸಾವಿರ ರೂಗಳಿಗೆ ದೊರೆಯಲಿದೆ ಹೀರೋ ಸ್ಪ್ಲೆಂಡರ್ ಪ್ಲಸ್!

ಹೀರೋ ಸ್ಪ್ಲೆಂಡರ್ (Hero splender) ಭಾರತದಲ್ಲಿ ಹೀರೋ ಹೋಂಡಾ ತಯಾರಿಸಿದ ಹೊಸ ಮೋಟಾರ್‌ಸೈಕಲ್ ಆಗಿದೆ. ಹೀರೋ ಹೋಂಡಾದ ಜಂಟಿ ಉದ್ಯಮವನ್ನು ಬೇರ್ಪಡಿಸಿದ ನಂತರ, ಈಗ ಇದನ್ನು ಹೀರೋ ಮೋಟೋಕಾರ್ಪ್ ತಯಾರಿಸುತ್ತದೆ. ಸ್ಪ್ಲೆಂಡರ್ ಮಾದರಿಗಳ ಬೈಕ್ ಗಳು ವರ್ಷಕ್ಕೆ ಒಂದು ಮಿಲಿಯನ್ (one million) ಯುನಿಟ್‌ಗಳ ದರದಲ್ಲಿ ಮಾರಾಟವಾಗುತ್ತಿದ್ದವು. ಹೀರೊ ಕಂಪನಿಯ ಬೈಕ್ ಗಳು ಹೆಚ್ಚು ಆಕರ್ಷಕವಾಗಿದ್ದು ಅತೀ ಹೆಚ್ಚು ಮಾರಾಟವಾಗುವ ಬೈಕ್ ಗಳ ಸಾಲಿನಲ್ಲಿ ಸೇರುತ್ತವೆ.

ಅತೀ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಹೀರೋ ಸ್ಪ್ಲೆಂಡರ್ ಪ್ಲಸ್ (Hero splender plus) :

ಇಂದು ಬೈಕ್‌ ಪ್ರಿಯರಿಗೆ ಗುಡ್ ನ್ಯೂಸ್ ತಿಳಿದು ಬಂದಿದೆ. ಭಾರತೀಯ ಮಾರುಕಟ್ಟೆಯಲ್ಲಿ ಬೈಕ್ ಕೊಂಡುಕೊಳ್ಳುವವರಿಗೆ ಸಾಕಷ್ಟು ಆಯ್ಕೆಗಳಿದ್ದು, ಅದರಲ್ಲೂ ಹೀರೋ ಕಂಪನಿಯ ಸ್ಪ್ಲೆಂಡರ್ ಪ್ಲಸ್ ಹೆಚ್ಚು ಗ್ರಾಹಕರನ್ನು ಆಕರ್ಷಿಸುತ್ತಿದೆ. ಅತೀ ಕಡಿಮೆ ಬಜೆಟ್ (Low budget) ನಲ್ಲಿ ಹೀರೊ ಕಂಪನಿಯು ತನ್ನ ಬೈಕ್ ಗಳನ್ನು ಬಿಡುಗಡೆ ಮಾಡುತ್ತದೆ. ಕಡಿಮೆ ಬೆಲೆಗೆ ಬೈಕ್ ಕೊಂದುಕೊಳ್ಳುವವರಿಗೆ ಹೇಳಿ ಮಾಡಿಸಿದಂತಹ ಬೈಕ್ ಅನ್ನು ಕೇವಲ 10,000 ರೂಪಾಯಿಗಳ ಡೌನ್ ಪೇಮೆಂಟ್‌(Down payment) ಮೂಲಕ ಹೀರೋ ಸ್ಪ್ಲೆಂಡರ್ ಪ್ಲಸ್ ಖರೀದಿಸಬಹುದು. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೀರೋ ಸ್ಪ್ಲೆಂಡರ್ ಪ್ಲಸ್ ನ ನಿಗದಿತ ಬೆಲೆ (price) :

ಹೀರೋ ಸ್ಪ್ಲೆಂಡರ್ ಪ್ಲಸ್ (Hero Splendor Plus) ನ ಆರಂಭಿಕ ಬೆಲೆ 76,306 ರೂಪಾಯಾಗಿದ್ದು, ಇದು ದೆಹಲಿಯಲ್ಲಿ ಖರೀದಿಸಿದರೆ 6,104 ರೂಪಾಯಿ RTO ಮತ್ತು 6,169 ರೂಪಾಯಿ ರಸ್ತೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಈ ಹೆಚ್ಚುವರಿ ವೆಚ್ಚಗಳೊಂದಿಗೆ ಬೈಕಿನ ಆನ್-ರೋಡ್ ಬೆಲೆ ಸುಮಾರು 88,579 ರೂ ಬೆಲೆಗೆ ದೊರೆಯುತ್ತದೆ.

EMIನಲ್ಲಿ ಬೈಕ್ ಖರೀದಿಸುವುದು ಹೇಗೆ?

ಹತ್ತು ಸಾವಿರ ರೂಪಾಯಿ ಡೌನ್ ಪೇಮೆಂಟ್ ಮಾಡುವ ಮೂಲಕ ಹೀರೋ ಸ್ಪ್ಲೆಂಡರ್ ಪ್ಲಸ್ ಅನ್ನು ಕೊಂಡುಕೊಂಡರೆ, ಉಳಿದ ಮೊತ್ತ 78,579 ರೂಪಾಯಿಗೆ ಸಾಲ(loan)ವನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ಸಾಲದ ಮೇಲೆ 10.5 ಪ್ರತಿಶತ ವಾರ್ಷಿಕ ಬಡ್ಡಿ ದರ(Interest) ವನ್ನು ವಿಧಿಸಲಾಗುತ್ತದೆ. ಹಾಗಾಗಿ ಖರೀದಿದಾರ 36 ತಿಂಗಳವರೆಗೆ ಪ್ರತಿ ತಿಂಗಳು ಸರಿಸುಮಾರು 2,554 ರೂಪಾಯಿ EMI ಅನ್ನು ಪಾವತಿಸಬೇಕಾಗುತ್ತದೆ.

13,365 ರೂಪಾಯಿಗಳನ್ನು ಬಡ್ಡಿಯಾಗಿ ಪಾವತಿಸಬೇಕು :

88,579 ರೂಪಾಯಿ ಪಾವತಿ ಬದಲು ಹೆಚ್ಚುವರಿಯಾಗಿ ಸುಮಾರು 13,365 ರೂಪಾಯಿಗಳನ್ನು ಬಡ್ಡಿಯಾಗಿ ಪಾವತಿಸಬೇಕಾಗುತ್ತದೆ. ಈ EMI ಲೆಕ್ಕಾಚಾರವು ಅಂದಾಜು ಮೌಲ್ಯವಷ್ಟೆ. ನಿಜವಾದ EMI ಮೊತ್ತವು ಗ್ರಾಹಕರು ಆಯ್ಕೆಮಾಡುವ ಡೀಲರ್‌ಶಿಪ್, ಸ್ಥಳ ಮತ್ತು ವಿಶೇಷ ಕೊಡುಗೆಗಳನ್ನು ಅವಲಂಬಿಸಿರಬಹುದು. ಇದರ ಹೊರತಾಗಿ ಸಾಲದ ಮೇಲಿನ ಬಡ್ಡಿ ದರ ಗ್ರಾಹಕರ CIBIL ಸ್ಕೋರ್‌(score) ಅನ್ನು ಆಧರಿಸಿರುತ್ತದೆ.

ಈ ಮಾಹಿತಿಗಳನ್ನು ಓದಿ

 

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ

WhatsApp Group Join Now
Telegram Group Join Now

Popular Categories