ಇಂದಿನ ತ್ವರಿತ ಜೀವನದಲ್ಲಿ, ಎದೆನೋವು ಕಂಡರೆ ಎಲ್ಲರೂ ಆತಂಕಗೊಳ್ಳುತ್ತಾರೆ — “ಹೃದಯಾಘಾತನಾ(Heart attack)?” ಎಂಬ ಭಯ ಸಹಜ. ಆದರೆ, ಹಲವಾರು ಬಾರಿ ಈ ನೋವು ಹೃದಯ ಸಂಬಂಧಿತವಲ್ಲ, ಗ್ಯಾಸ್ಟ್ರಿಕ್(Gastric)ಸಮಸ್ಯೆಯಿಂದ ಉಂಟಾಗಿರಬಹುದು. ಇವೆರಡರ ಲಕ್ಷಣಗಳು ಕೆಲವೊಮ್ಮೆ ಹೋಲಿಕೆಯಾಗುವುದರಿಂದ ಜನರಲ್ಲಿ ಗೊಂದಲ ಉಂಟಾಗುವುದು ಸಹಜ. ಆದರೆ ಈ ಗೊಂದಲ ಜೀವಕ್ಕೆ ಅಪಾಯಕಾರಿಯಾಗಬಹುದು. ಹೀಗಾಗಿ, ಇವೆರಡರ ಅಂತರ ತಿಳಿದುಕೊಳ್ಳುವುದು ಅತ್ಯಂತ ಅಗತ್ಯ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಹೃದಯ, ಹೊಟ್ಟೆ ಮತ್ತು ಅನ್ನನಾಳ — ಏಕೆ ಗೊಂದಲ?
ಹೃದಯ, ಅನ್ನನಾಳ ಹಾಗೂ ಹೊಟ್ಟೆ ನಮ್ಮ ದೇಹದ ಮೇಲ್ಭಾಗದಲ್ಲಿ ಬಹಳ ಹತ್ತಿರವಾಗಿವೆ. ಇವುಗಳ ನರ ವ್ಯವಸ್ಥೆಯು ಸಹ ಪರಸ್ಪರ ಸಂಪರ್ಕ ಹೊಂದಿರುವುದರಿಂದ ನೋವು ಎಲ್ಲಿ ಉಂಟಾದರೂ ಅದು ಬೇರೆ ಅಂಗದಲ್ಲಿ ಅನುಭವವಾಗಬಹುದು. ಉದಾಹರಣೆಗೆ, ಹೃದಯಾಘಾತದ ಸಂದರ್ಭದಲ್ಲಿ ನೋವು ಕುತ್ತಿಗೆ, ಬೆನ್ನು ಅಥವಾ ಕೈಗೆ ಹರಡಬಹುದು. ಅದೇ ರೀತಿಯಲ್ಲಿ, ಗ್ಯಾಸ್ಟ್ರಿಕ್ನ ಉರಿ ಅಥವಾ ಒತ್ತಡವು ಕೂಡ ಎದೆಭಾಗದಲ್ಲಿ ಕಾಣಿಸಬಹುದು. ಈ ಸಮಾನತೆಯೇ ಜನರಲ್ಲಿ ಗೊಂದಲಕ್ಕೆ ಕಾರಣವಾಗುತ್ತದೆ.
ಗ್ಯಾಸ್ ಮತ್ತು ಗ್ಯಾಸ್ಟ್ರಿಕ್ — ಒಂದೇನಾ?
ಬಹಳ ಮಂದಿ “ಗ್ಯಾಸ್ ಆಗಿದೆ” ಮತ್ತು “ಗ್ಯಾಸ್ಟ್ರಿಕ್ ಸಮಸ್ಯೆ ಇದೆ” ಎಂದು ಪರ್ಯಾಯವಾಗಿ ಬಳಸುತ್ತಾರೆ. ಆದರೆ ಇವೆರಡರ ಮಧ್ಯೆ ಸಣ್ಣ ಆದರೆ ಸ್ಪಷ್ಟ ವ್ಯತ್ಯಾಸವಿದೆ.
ಗ್ಯಾಸ್ (Gas): ಆಹಾರ ಜೀರ್ಣಕ್ರಿಯೆ ವೇಳೆ ಹೊಟ್ಟೆಯಲ್ಲಿ ಉಂಟಾಗುವ ಅನಿಲ. ಇದು ಸಾಮಾನ್ಯವಾಗಿದೆ.
ಗ್ಯಾಸ್ಟ್ರಿಕ್ (Gastritis): ಗ್ಯಾಸ್ಸ್ ಹೊರಹೋಗದೆ ಒಳಗೇ ಉಳಿದಾಗ, ಹೊಟ್ಟೆಯ ಒಳಚಮರು ಉರಿಯುತ್ತದೆ. ಇದರಿಂದ ನೋವು, ಉರಿ, ವಾಕರಿಕೆ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಹೀಗಾಗಿ, ಗ್ಯಾಸ್ಸ್ ಸಮಸ್ಯೆ ಉಂಟಾದರೆ ಅದು ತಾತ್ಕಾಲಿಕ. ಆದರೆ ಅದು ನಿರಂತರವಾಗಿ ಮುಂದುವರಿದರೆ ಅದು ಗ್ಯಾಸ್ಟ್ರಿಕ್ ರೋಗವಾಗುತ್ತದೆ.
ಹೃದಯಾಘಾತದ ಎಚ್ಚರಿಕಾ ಲಕ್ಷಣಗಳು(Warning signs of a heart attack):
ಹೃದಯಾಘಾತದ ಸಮಯದಲ್ಲಿ ನೋವು ಹೃದಯದ ಮೇಲೆ ಭಾರವಾದ ಕಲ್ಲು ಇಟ್ಟಂತಿರುತ್ತದೆ.
ಕೆಳಗಿನ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು:
ಎದೆಯ ಮಧ್ಯಭಾಗದಲ್ಲಿ ಅಥವಾ ಎಡಭಾಗದಲ್ಲಿ ತೀವ್ರ ಒತ್ತಡದ ನೋವು
ನೋವು ಕೈ, ಬೆನ್ನು, ಕುತ್ತಿಗೆ, ದವಡೆಗೆ ಹರಡುವುದು
ಉಸಿರಾಟದಲ್ಲಿ ತೊಂದರೆ, ಬೆವರುವುದು
ವಾಕರಿಕೆ, ವಾಂತಿ, ತಲೆತಿರುಗು, ಅಶಕ್ತತೆ
ಕೆಲವು ಸಂದರ್ಭಗಳಲ್ಲಿ ಎದೆನೋವು ಕಡಿಮೆ ಇದ್ದರೂ, ಅತಿಯಾದ ದೌರ್ಬಲ್ಯ ಅಥವಾ ಉಸಿರಾಟದ ಸಮಸ್ಯೆ ಕಂಡುಬರುತ್ತದೆ (ವಿಶೇಷವಾಗಿ ಮಹಿಳೆಯರಲ್ಲಿ)
ಹೃದಯಾಘಾತದ ಅಪಾಯಕ್ಕೊಳಗಾದವರು:
ಡಯಾಬಿಟಿಸ್, ಹೈ ಬಿಪಿ, ಕೊಲೆಸ್ಟ್ರಾಲ್, ಧೂಮಪಾನ, ಮದ್ಯಪಾನ, ತಂಬಾಕು ಸೇವನೆ, ಮತ್ತು ಕುಟುಂಬ ಇತಿಹಾಸದಲ್ಲಿ ಹೃದಯ ಸಮಸ್ಯೆ ಇದ್ದವರವಾಗಿರುತ್ತಾರೆ.
ಗ್ಯಾಸ್ಟ್ರಿಕ್ ಸಮಸ್ಯೆಯ ಲಕ್ಷಣಗಳು(Symptoms of gastric problem):
ಗ್ಯಾಸ್ಟ್ರಿಕ್ನ ನೋವು ಸಾಮಾನ್ಯವಾಗಿ ಹೊಟ್ಟೆಯ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಇದು ನಿರಂತರವಾಗಿಲ್ಲ — ಕೆಲವು ಕ್ಷಣಗಳಿಗೊಮ್ಮೆ ಬರುತ್ತದೆ ಮತ್ತು ಹೋಗುತ್ತದೆ.
ಉರಿ ಅಥವಾ ಚುಚ್ಚಿದಂತಹ ನೋವು
ಹೊಟ್ಟೆ ಉಬ್ಬರ, ಬಾಯಲ್ಲಿ ಹುಳಿ ರುಚಿ
ವಾಕರಿಕೆ, ವಾಂತಿ
ಖಾರ, ಹುಳಿ ಆಹಾರ, ಮದ್ಯಪಾನ ಅಥವಾ ನೋವು ನಿವಾರಕ ಮಾತ್ರೆಗಳಿಂದ ತೀವ್ರಗೊಳ್ಳುವುದು
ಗ್ಯಾಸ್ ಪಾಸ್ ಮಾಡಿದ ನಂತರ ನೋವು ಕಡಿಮೆಯಾಗುವುದು
ಹೃದಯಾಘಾತದಲ್ಲಿ ನೋವು ಕಡಿಮೆಯಾಗುವುದಿಲ್ಲ, ಆದರೆ ಗ್ಯಾಸ್ಟ್ರಿಕ್ನಲ್ಲಿ ಅದು ತಾತ್ಕಾಲಿಕವಾಗಿ ಇಳಿಯುತ್ತದೆ — ಇದು ಪ್ರಮುಖ ಅಂತರ.
ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?
ಕೆಳಗಿನ ಸಂದರ್ಭಗಳಲ್ಲಿ ತಡಮಾಡದೆ ಆಸ್ಪತ್ರೆಗೆ ತೆರಳಬೇಕು:
ನೋವು ಎದೆ ಮತ್ತು ಹೊಟ್ಟೆಯ ಮಧ್ಯಭಾಗದಲ್ಲಿ ಇದೆ ಹಾಗೂ ಹರಡುತ್ತಿದೆ
ಉಸಿರಾಟದ ತೊಂದರೆ ಅಥವಾ ಬೆವರು ಕಾಣಿಸುತ್ತಿದೆ
ನೋವು 5 ನಿಮಿಷಕ್ಕೂ ಹೆಚ್ಚು ಕಾಲ ಮುಂದುವರಿಯುತ್ತಿದೆ
ಹಿಂದಿನಿಂದ ಹೃದಯ ಅಥವಾ ಡಯಾಬಿಟಿಸ್ ಸಮಸ್ಯೆ ಇದೆ
ವೈದ್ಯರು ECG, echo, ಟ್ರೊಪೊನಿನ್ ಟೆಸ್ಟ್, ಎಂಜಿಯೋಗ್ರಾಮ್(Angiogram) ಮುಂತಾದ ಪರೀಕ್ಷೆಗಳ ಮೂಲಕ ಹೃದಯ ಸ್ಥಿತಿ ಪರಿಶೀಲಿಸುತ್ತಾರೆ. ಹೃದಯದ ಸಮಸ್ಯೆ ತಳ್ಳಿಹಾಕಿದ ನಂತರ, ಎಂಡೊಸ್ಕೋಪಿ ಅಥವಾ ಪಿಹೆಚ್ ಮೆಟ್ರಿ ಮೂಲಕ ಗ್ಯಾಸ್ಟ್ರಿಕ್ ದೃಢಪಡಿಸಬಹುದು.
ಹೃದಯಾಘಾತ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮಗಳು(Precautions to prevent heart attack):
ಸಮತೋಲನ ಆಹಾರ ಸೇವನೆ – ಹೆಚ್ಚು ಕೊಬ್ಬು, ಉಪ್ಪು, ಸಕ್ಕರೆ ನಿಯಂತ್ರಣ
ದಿನವೂ ಕನಿಷ್ಠ 30 ನಿಮಿಷ ವ್ಯಾಯಾಮ
ಧೂಮಪಾನ, ಮದ್ಯಪಾನದಿಂದ ಸಂಪೂರ್ಣ ದೂರವಿರಿ
ಒತ್ತಡ ನಿವಾರಕ ಚಟುವಟಿಕೆಗಳು (ಧ್ಯಾನ, ಸಂಗೀತ, ನಡಿಗೆ)
ನಿಯಮಿತ ಹೃದಯ ಮತ್ತು ಶರೀರ ತಪಾಸಣೆ
ನಿದ್ರಾ ವೇಳೆಯನ್ನು ಸರಿಪಡಿಸಿ

ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




