ಮಕ್ಕಳನ್ನು ಬೈಯುವುದು ಮತ್ತು ದೈಹಿಕ ಶಿಕ್ಷೆ ನೀಡುವುದು ಶಿಸ್ತನ್ನು ಕಲಿಸುವ ಸರಿಯಾದ ಮಾರ್ಗವಲ್ಲ ಎಂದು ತಜ್ಞರು ಹೇಳುತ್ತಾರೆ. ಈ ರೀತಿಯ ನಡವಳಿಕೆಯಿಂದ ಮಕ್ಕಳು ಹೆಚ್ಚು ಹಠಮಾರಿಗಳಾಗುವ ಸಾಧ್ಯತೆ ಇದ್ದು, ಅವರ ಮನಸ್ಸಿನ ಮೇಲೆ ನಕಾರಾತ್ಮಕ ಪ್ರಭಾವ ಬೀರಬಹುದು. ಬದಲಾಗಿ, ಸಕಾರಾತ್ಮಕವಾಗಿ ಮತ್ತು ಪ್ರೀತಿಯಿಂದ ಮಗುವನ್ನು ಅರ್ಥಮಾಡಿಕೊಂಡು ಶಿಸ್ತು ಕಲಿಸುವುದು ಹೆಚ್ಚು ಪರಿಣಾಮಕಾರಿಯಾಗಿದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಸಕಾರಾತ್ಮಕ ಶಿಸ್ತಿನ ತಂತ್ರಗಳು:
ಹೊಗಳುವುದನ್ನು ಅಭ್ಯಾಸ ಮಾಡಿ:
ಮಗುವು ಯಾವುದೇ ಚಿಕ್ಕಪುಟ್ಟ ಒಳ್ಳೆಯ ಕೆಲಸ ಮಾಡಿದಾಗ ಅದನ್ನು ಗಮನಿಸಿ ಹೊಗಳುವುದರಿಂದ ಅದರ ಆತ್ಮವಿಶ್ವಾಸವೂ ಹೆಚ್ಚುತ್ತದೆ. ಮನೆಕೆಲಸವನ್ನು ಸರಿಯಾಗಿ ಮಾಡಿದಾಗ, ಸತ್ಯವನ್ನು ನುಡಿದಾಗ, ಇತರರಿಗೆ ಸಹಾಯ ಮಾಡಿದಾಗ ಅವರನ್ನು ಪ್ರೋತ್ಸಾಹಿಸಿ. ಈ ಸಣ್ಣ ಪ್ರೋತ್ಸಾಹಗಳು ಅವರನ್ನು ಒಳ್ಳೆಯ ಕೆಲಸಗಳ ಕಡೆಗೆ ಪ್ರೇರೇಪಿಸುತ್ತವೆ.
ಬಲವಂತ ಮಾಡಬೇಡಿ, ವಿವರಿಸಿ:
ಮಕ್ಕಳಿಗೆ ಯಾವುದನ್ನೂ ಬಲವಂತದಿಂದ ಮಾಡಿಸುವುದರ ಬದಲು, ಅದರ ಅಗತ್ಯತೆ ಮತ್ತು ಪರಿಣಾಮಗಳನ್ನು ಪ್ರೀತಿಯಿಂದ ವಿವರಿಸಿ. ಉದಾಹರಣೆಗೆ, ಚಳಿಯಲ್ಲಿ ಸ್ವೆಟರ್ ಧರಿಸಲು ಬಯಸದ ಮಗುವಿಗೆ, “ಹೊರಗೆ ತುಂಬಾ ಚಳಿ ಇದೆ, ಸ್ವೆಟರ್ ಧರಿಸದಿದ್ದರೆ ಜ್ವರ ಬರಬಹುದು” ಎಂದು ವಿವರಿಸಿ. ಇದು ಅವರಿಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.
ಸೃಜನಾತ್ಮಕ ಚಟುವಟಿಕೆಗಳಿಗೆ ಪ್ರೋತ್ಸಾಹಿಸಿ:
ಮಗು ಕೆಟ್ಟದಾಗಿ ವರ್ತಿಸಿದಾಗ, ಅದರ ಮೇಲೆ ಕೋಪಗೊಳ್ಳುವ ಬದಲು ಅದರ ಶಕ್ತಿಯನ್ನು ಸಕಾರಾತ್ಮಕ ಚಟುವಟಿಕೆಗಳ ಕಡೆಗೆ ದಾರಿ ಮಾಡಿಕೊಡಿ. ಅವರಿಗೆ ಚಿತ್ರ ಬಿಡಿಸಲು, ಓದಲು ಅಥವಾ ಆಟವಾಡಲು ಅವಕಾಶ ಮಾಡಿಕೊಡಿ. ಇದು ಅವರ ನಡವಳಿಕೆಯನ್ನು ಉತ್ತಮಪಡಿಸಲು ಸಹಾಯ ಮಾಡುತ್ತದೆ.
ಕಾರಣವನ್ನು ಅರ್ಥಮಾಡಲು ಪ್ರಯತ್ನಿಸಿ:
ಮಗು ಪದೇ ಪದೇ ತಪ್ಪು ಮಾಡುತ್ತಿದ್ದರೆ, ಅದನ್ನು ಶಿಕ್ಷಿಸುವ ಮುನ್ನ ಯಾಕೆ ಹಾಗೆ ಮಾಡುತ್ತಿದೆ ಎನ್ನುವ ಕಾರಣವನ್ನು ಅರ್ಥಮಾಡಲು ಪ್ರಯತ್ನಿಸಿ. ಅವರನ್ನು ಹತ್ತಿರಕ್ಕೆ ಕುರಿಸಿಕೊಂಡು, ಪ್ರೀತಿಯಿಂದ ಮಾತನಾಡಿ. ಇದು ಮಗುವಿಗೆ ಸುರಕ್ಷತೆಯ ಭಾವನೆ ನೀಡಿ, ತನ್ನ ಸಮಸ್ಯೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸುತ್ತದೆ.
ಮುಕ್ತವಾಗಿ ಮಾತನಾಡುವ ಪರಿಸರ, ಪ್ರೀತಿ ಮತ್ತು ಸಹಾನುಭೂತಿ ಇವುಗಳಿಂದಲೇ ಮಕ್ಕಳಲ್ಲಿ ನಿಜವಾದ ಶಿಸ್ತು ಮತ್ತು ಜವಾಬ್ದಾರಿಯ ಭಾವನೆಯನ್ನು ಬೆಳೆಸಬಹುದು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.