ಹಾಸನ: ಹಾಸನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (DHFWS) ವಿವಿಧ ವೈದ್ಯಕೀಯ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ನರ್ಸ್ ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್ ಸೇರಿದಂತೆ ಒಟ್ಟು ಆರು ಸ್ಥಾನಗಳನ್ನು ಭರ್ತಿ ಮಾಡಲಾಗುವುದು. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಆಸಕ್ತ ಅಭ್ಯರ್ಥಿಗಳು ಆಗಸ್ಟ್ 25ರಂದು, ಬೆಳಿಗ್ಗೆ 10:00 ಗಂಟೆಗೆ ನೇರ ಸಂದರ್ಶನಕ್ಕೆ (ವಾಕ್-ಇನ್ ಇಂಟರ್ವ್ಯೂ) ಹಾಜರಾಗಬೇಕು. ಈ ಅವಕಾಶವು ವೈದ್ಯಕೀಯ ಕ್ಷೇತ್ರದಲ್ಲಿ ವೃತ್ತಿ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಒಳ್ಳೆಯ ಅವಕಾಶವಾಗಿದೆ.
ಹುದ್ದೆಗಳ ವಿವರ:
- ಹುದ್ದೆಗಳು: ನರ್ಸ್, ಕ್ಲಿನಿಕಲ್ ಸೈಕಾಲಜಿಸ್ಟ್, ನರವಿಜ್ಞಾನಿ/MD ವೈದ್ಯ, ಭೌತಚಿಕಿತ್ಸಕ, ಸ್ಪೀಚ್ ಥೆರಪಿಸ್ಟ್ ಮತ್ತು ಜಿಲ್ಲಾ ಸಂಯೋಜಕರು.
- ಒಟ್ಟು ಸ್ಥಾನಗಳು: 06
- ಸಂಬಳ: ಪ್ರತಿ ತಿಂಗಳಿಗೆ ₹15,472 ರಿಂದ ₹1,50,000 ವರೆಗೆ, ಹುದ್ದೆಯನ್ನು ಅನುಸರಿಸಿ ಬದಲಾಗುತ್ತದೆ.
- ಕಾರ್ಯಸ್ಥಳ: ಹಾಸನ
ಅರ್ಹತೆ ಮತ್ತು ಸಂಬಳದ ವಿವರ:
ಹುದ್ದೆಯ ಹೆಸರು | ಅರ್ಹತೆ | ಅಂದಾಜು ಸಂಬಳ (ತಿಂಗಳಿಗೆ) |
---|---|---|
ನರವಿಜ್ಞಾನಿ/MD ವೈದ್ಯ | ಎಂಬಿಬಿಎಸ್, ಎಂಡಿ, ಡಿಎಂ, ಡಿಎನ್‌ಬಿ | ₹60,000 – ₹1,50,000 |
ನರ್ಸ್ | ಜಿಎನ್ಎಂ ಅಥವಾ ಬಿ.ಎಸ್ಸಿ ನರ್ಸಿಂಗ್ | ₹15,472 – ₹19,999 |
ಭೌತಚಿಕಿತ್ಸಕ | ಬಿಪಿಟಿ ಪದವಿ | ₹25,000 |
ಕ್ಲಿನಿಕಲ್ ಸೈಕಾಲಜಿಸ್ಟ್ | ಎಂ.ಫಿಲ್ ಅಥವಾ ಸ್ನಾತಕೋತ್ತರ ಪದವಿ | ₹26,250 |
ಸ್ಪೀಚ್ ಥೆರಪಿಸ್ಟ್ | ಬಿಎಎಸ್ಎಲ್ಪಿ ಪದವಿ | ₹30,000 |
ಜಿಲ್ಲಾ ಸಂಯೋಜಕರು | ಸ್ನಾತಕೋತ್ತರ ಪದವಿ | ₹30,000 |
ಹಾಜರಾಗುವ ವಿಧಾನ:
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಗತ್ಯವಾದ ಮೂಲ ದಾಖಲೆಗಳು ಮತ್ತು ಫೋಟೋ ಪ್ರತಿಗಳೊಂದಿಗೆ ನೇರವಾಗಿ ಸಂದರ್ಶನದ ಸ್ಥಳಕ್ಕೆ ಹಾಜರಾಗಬೇಕು. ಅರ್ಜಿ ಅಥವಾ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ಯಾವುದೇ ಶುಲ್ಕವಿಲ್ಲ.
ಸಂದರ್ಶನದ ಸ್ಥಳ:
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ,
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಕಟ್ಟಡ,
ಹಾಸನಾಂಬ ಒಳಾಂಗಣ ಕ್ರೀಡಾಂಗಣದ ಹಿಂಬದಿ, ಸಲಗಾಮೆ ರಸ್ತೆ, ಹಾಸನ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.