ಇತ್ತೀಚಿನ ದಿನಗಳಲ್ಲಿ ಮೊಬೈಲ್ ಮತ್ತು ಇಮೇಲ್ (Email) ಹ್ಯಾಕಿಂಗ್ ಪ್ರಕರಣಗಳು ಹೆಚ್ಚುತ್ತಿದ್ದು, ಹಲವರು ತಮ್ಮ ವೈಯಕ್ತಿಕ ಮಾಹಿತಿಯನ್ನು (Tech tips) ಕಳೆದುಕೊಳ್ಳುವ ಆತಂಕದಲ್ಲಿ ಬದುಕುತ್ತಿದ್ದಾರೆ. ಮೊಬೈಲ್ ಅಥವಾ ಇಮೇಲ್ ಖಾತೆ ಹ್ಯಾಕ್ ಮಾಡಿದಾಗ, ಅದರಲ್ಲಿರುವ ಬ್ಯಾಂಕ್ ಖಾತೆ ವಿವರಗಳು, ವೈಯಕ್ತಿಕ ಡಾಕ್ಯುಮೆಂಟ್‌ಗಳು ಮತ್ತು ಖಾಸಗಿ ಡೇಟಾ ಸೋರಿಕೆ ಆಗುತ್ತವೆ.
ಇಂತಹ ಸುದ್ದಿಗಳನ್ನು ಪ್ರತಿನಿತ್ಯ ಕೇಳುತ್ತಿದ್ದಂತೆ, ನಮ್ಮ ಇಮೇಲ್ ಖಾತೆಯೂ ಹ್ಯಾಕ್ ಆಗಿರಬಹುದು ಎಂಬ ಸಂದೇಹ ಮೂಡುವುದು ಸಹಜ. ಒಂದು ವೇಳೆ ನಿಮ್ಮ ಜಿ ಮೇಲ್ ಹ್ಯಾಕ್ ಆಗಿದ್ದರೆ ಆತಂಕಪಡಬೇಕಾದ ಅಗತ್ಯವಿಲ್ಲ, ಏಕೆಂದರೆ ನಿಮ್ಮ ಖಾತೆಯ ಸುರಕ್ಷತೆ ಪರಿಶೀಲಿಸಲು ಮತ್ತು ಹ್ಯಾಕ್ ಆಗಿರುವುದನ್ನು ಈ ಮೂಲಕ ಸರಿಪಡಿಸಿಕೊಳ್ಳಬಹುದು.
ಅಷ್ಟೇ ಅಲ್ಲ, ನಿಮ್ಮ ಜಿಮೇಲ್ ಖಾತೆ ಯಾವೆಲ್ಲ ಸಾಧನಗಳಲ್ಲಿ ಮತ್ತು ಎಷ್ಟು ಮೊಬೈಲ್‌ಗಳಲ್ಲಿ ಲಾಗಿನ್ ಆಗಿದೆ ಎಂಬುದನ್ನು ನೀವು ಮನೆಯಲ್ಲೇ ಕುಳಿತು ಸುಲಭವಾಗಿ ಪರಿಶೀಲಿಸಬಹುದು. ಜಿಮೇಲ್ ಪ್ರಸ್ತುತ ಎಲ್ಲೆಲ್ಲಿದೆ ಲಾಗಿನ್ ಆಗಿರುವುದನ್ನು ಕಂಡುಹಿಡಿಯಲು ಕೆಳಗಿನ ಸರಳ ಹಂತಗಳು ನಿಮಗೆ ಸಹಾಯಕರವಾಗಬಹುದು.
ಲಾಗಿನ್ ಆಗಿರುವ ಸಾಧನಗಳನ್ನು ಪರಿಶೀಲಿಸುವ ವಿಧಾನ
ನಿಮ್ಮ ಜಿಮೇಲ್ ಖಾತೆಯಿಂದ ಯಾವ ಸಾಧನಗಳಲ್ಲಿ ಲಾಗಿನ್ ಆಗಿದೆ ಎಂಬುದನ್ನು ತಿಳಿದುಕೊಳ್ಳಲು, ಕೆಳಗಿನ ಹಂತಗಳನ್ನು ಅನುಸರಿಸಿ:
- ಮೊದಲಿಗೆ, ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್‌ನ ಬ್ರೌಸರ್‌ನಲ್ಲಿ myaccount.google.com ವೆಬ್‌ಸೈಟ್‌ಗೆ ತೆರಳಿ.
- ಅಲ್ಲಿ ಇರುವ ಭದ್ರತಾ (Security) ವಿಭಾಗ ಕ್ಲಿಕ್ ಮಾಡಿ ಮತ್ತು ಕೆಳಕ್ಕೆ ಸ್ಕ್ರಾಲ್ ಮಾಡಿ.
- ನಂತರ, Your devices ವಿಭಾಗದ ಅಡಿಯಲ್ಲಿ ಇರುವ Manage all devices ಎಂಬ ಮೇಲೆ ಕ್ಲಿಕ್ ಮಾಡಿ.
- ಇಲ್ಲಿ, ನಿಮ್ಮ ಜಿಮೇಲ್ ಖಾತೆ ಲಾಗಿನ್ ಆಗಿರುವ ಎಲ್ಲಾ ಸಾಧನಗಳ ಪಟ್ಟಿ ಕಾಣುತ್ತದೆ.
- ಈ ಪಟ್ಟಿಯಲ್ಲಿ ನಿಮಗೆ ಪರಿಚಯವಿಲ್ಲದ ಅಥವಾ ನಿಮ್ಮದಲ್ಲದ ಫೋನ್ ಕಂಡುಬಂದರೆ, ಆ ಸಾಧನದ ಮೇಲೆ ಕ್ಲಿಕ್ ಮಾಡಿ ಸೈನ್ ಔಟ್ (Sign out) ಆಯ್ಕೆಮಾಡಿ.
- ಇದಾದ ನಂತರ, ಸುರಕ್ಷತೆಯ ದೃಷ್ಟಿಯಿಂದ ತಕ್ಷಣವೇ ನಿಮ್ಮ ಜಿಮೇಲ್ ಪಾಸ್‌ವರ್ಡ್ ಅನ್ನು ಮರುಹೊಂದಿಸಿ.
Gmail ಚಟುವಟಿಕೆಯನ್ನು ಪರಿಶೀಲಿಸುವ ವಿಧಾನ
- ಮೊದಲು ನಿಮ್ಮ ಪಿಸಿಯಲ್ಲಿ ನಿಮ್ಮ ಜಿಮೇಲ್ ಖಾತೆಗೆ ಲಾಗಿನ್ ಆಗಿ.
- ಬಳಿಕ, ಇಮೇಲ್‌ಗಳ ಮುಖ್ಯ ಪುಟಕ್ಕೆ ತೆರಳಿ ಕೆಳಭಾಗದ ಬಲ ಮೂಲೆಯಲ್ಲಿ ಇರುವ Details ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಈಗ ಹೊಸ ವಿಂಡೋ ತೆರೆಯಲಾಗುವುದು. ಈ ವಿಂಡೋದಲ್ಲಿ ನಿಮ್ಮ ಖಾತೆಯನ್ನು ಯಾವ ಸಾಧನಗಳಿಂದ, ಯಾವ IP ವಿಳಾಸಗಳಿಂದ ಮತ್ತು ಯಾವ ಸಮಯದಲ್ಲಿ ಪ್ರವೇಶಿಸಲಾಗಿದೆ ಎಂಬ ವಿವರಗಳು ಕಾಣಿಸುತ್ತವೆ.
- ನೀವು ಯಾವುದಾದರೂ ಅನುಮಾನಾಸ್ಪದ ಚಟುವಟಿಕೆಯನ್ನು ಗಮನಿಸಿದರೆ, ತಕ್ಷಣವೇ ನಿಮ್ಮ ಜಿಮೇಲ್ ಪಾಸ್‌ವರ್ಡ್ ಬದಲಾಯಿಸಿ ಮತ್ತು ಖಾತೆಯನ್ನು ಸುರಕ್ಷಿತಗೊಳಿಸುವ ಕ್ರಮಗಳನ್ನು ಕೈಗೊಳ್ಳಿರಿ.
ಮೂರನೇ ವ್ಯಕ್ತಿಯಿಂದ ದುರುಪಯೋಗವಾಗುತ್ತಿದೆಯೇ ಎಂದು ಪರಿಶೀಲಿಸುವುದು ಹೇಗೆ?
- ನಿಮ್ಮ ಪಿಸಿ ಅಥವಾ ಮೊಬೈಲ್‌ನ ಬ್ರೌಸರ್‌ನಲ್ಲಿ myaccount.google.com ಗೆ ತೆರಳಿ.
- ಅಲ್ಲಿ ಇರುವ Security (ಭದ್ರತೆ) ವಿಭಾಗವನ್ನು ಆಯ್ಕೆಮಾಡಿ.
- ಕೆಳಕ್ಕೆ ಸ್ಕ್ರಾಲ್ ಮಾಡಿ “Signing in with Google (Google ಮೂಲಕ ಸೈನ್ ಇನ್)” ವಿಭಾಗವನ್ನು ಹುಡುಕಿ.
- ಈ ವಿಭಾಗದಲ್ಲಿ, ನಿಮ್ಮ ಗೂಗಲ್ ಖಾತೆ ಮೂಲಕ ಯಾವುದಾದರೂ ಮೂರನೇ ವ್ಯಕ್ತಿಯ ವೆಬ್‌ಸೈಟ್‌ಗಳು ಅಥವಾ ಅಪ್ಲಿಕೇಶನ್‌ಗಳಿಗೆ ಪ್ರವೇಶ ನೀಡಲಾಗಿದೆಯೇ ಎಂಬುದನ್ನು ನೋಡಬಹುದು.
- ಪರಿಚಯವಿಲ್ಲದ ಅಥವಾ ಅನಗತ್ಯವಾದ ಅಪ್ಲಿಕೇಶನ್‌ಗಳಿದ್ದರೆ, ಅವುಗಳನ್ನು ತಕ್ಷಣವೇ ತೆಗೆದು ಹಾಕಿ.

ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.


WhatsApp Group




