ಆರ್ಥಿಕ ಇಲಾಖೆ ಒಪ್ಪಿದರೆ ಅತಿಥಿ ಶಿಕ್ಷಕರು(Guest Teachers), ಉಪನ್ಯಾಸಕರ ವೇತನ ಹೆಚ್ಚಿಸುತ್ತೇವೆ : ಸಚಿವ ಮಧು ಬಂಗಾರಪ್ಪ (Madhu Bangarappa)
ಅತಿಥಿ ಶಿಕ್ಷಕರು (Guest Teachers) ಮತ್ತು ಉಪನ್ಯಾಸಕರ ಸಂಭಾವನೆ ಹೆಚ್ಚಳ ಮಾಡುವ ಕುರಿತು ಆರ್ಥಿಕ ಇಲಾಖೆಯೊಂದಿಗೆ ಚರ್ಚೆ ಮಾಡಲಾಗುವುದು ಎಂದು ಸಚಿವ ಮಧು ಬಂಗಾರಪ್ಪ (Madhu Bangarappa) ತಿಳಿಸಿದರು.
ಬೆಳಗಾವಿಯಲ್ಲಿ(belagavi) ನಡೆಯುತ್ತಿರುವ ಅಧಿವೇಶನದಲ್ಲಿ ವಿಧಾನ ಪರಿಷತ್ ನಲ್ಲಿ ಬಿಜೆಪಿ ಸದಸ್ಯ ಧನಂಜಯ ಸರ್ಜಿ ಅವರು, ಅತಿಥಿ ಶಿಕ್ಷಕರ ವೇತನ ಹೆಚ್ಚಳ ಮಾಡುವ ಬಗ್ಗೆ ಪ್ರಸ್ತಾಪ ಮಾಡಿ, ಪ್ರಶ್ನೆ ಕೇಳಿದರು. ಈ ಕುರಿತು ಸಚಿವ ಮಧು ಬಂಗಾರಪ್ಪ (Madhu Bangarappa) ಪ್ರತಿಕ್ರಿಯಿಸಿದ್ದಾರೆ. ಏನೆಂದು ಪ್ರತಿಕ್ರಿಯಿಸಿದ್ದಾರೆ ಎಂದು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಧನಂಜಯ ಸರ್ಜಿ(Dhananjaya Sargy) ಕೇಳಿದ ಪ್ರಶ್ನೆ ಏನು? :
ಧನಂಜಯ ಸರ್ಜಿ ಅವರು ಅತಿಥಿ ಶಿಕ್ಷಕರ ವೇತನ ಹೆಚ್ಚಳ ಮಾಡುವ ಬಗ್ಗೆ ಪ್ರಸ್ತಾಪಿಸಿದ್ದು, ಉಪನ್ಯಾಸಕರಿಗೆ ಹಾಗೂ ರಾಜ್ಯದ ಅತಿಥಿ ಶಿಕ್ಷಕರಿಗೆ ಸರಿಯಾದ ಸಂಭಾವನೆ(Remuneration) ಸಿಗುತ್ತಿಲ್ಲ. ಮಾಸಿಕ ಸಂಭಾವನೆ ಹೆಚ್ಚಳ ಮಾಡಬೇಕು. ಇನ್ನು ಉಪಸ್ಯಾಕರಿಗೆ ಹಾಗೂ ಅತಿಥಿ ಶಿಕ್ಷಕರಿಗೆ ಗ್ರೂಪ್-ಡಿ ಸಿಬ್ಬಂದಿ, ಸೆಕ್ಯುರಿಟಿಗಳಿಗೆ ಸಿಗೋ ಸಂಬಳ ಸಿಗುತ್ತಿಲ್ಲ. ಸರ್ಕಾರ ಈ ಕೂಡಲೇ ಸಂಬಳ ಜಾಸ್ತಿ ಮಾಡಬೇಕು ಎಂದು ಒತ್ತಾಯಿಸಿದರು.
ಸಚಿವ ಮಧು ಬಂಗಾರಪ್ಪ (Madhu Bangarappa) ಪ್ರತಿಕ್ರಿಯೆ :
ಸೋಮವಾರದಂದು ಮೇಲ್ಮನೆಯಲ್ಲಿ ಧನಂಜಯ ಸರ್ಜಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಧು ಬಂಗಾರಪ್ಪ, ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ವೇತನವನ್ನು ಪರಿಷ್ಕರಿಸಲು 2022ರಲ್ಲಿ ಆರ್ಥಿಕ ಇಲಾಖೆಯು ಅನುಮತಿ ನೀಡಿತ್ತು. ಆದ್ದರಿಂದ ಈಗ ಮತ್ತೆ ವೇತನ ಪರಿಷ್ಕರಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಈ ಕುರಿತಾಗಿ ಮತ್ತೆ ಮರುಪರಿಶೀಲನೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು. ಆದರೆ ಅತಿಥಿ ಶಿಕ್ಷಕರು /ಉಪನ್ಯಾಸಕರ ಬದಲಾಗಿ ಅರೆಕಾಲಿಕ ಶಿಕ್ಷ ಕರ ನೇಮಕ ಮಾಡುವ ಪ್ರಸ್ತಾವನೆ ಇರುವುದಿಲ್ಲ ಎಂದು ಸಚಿವರು ಸ್ಪಷ್ಟ ಪಡಿಸಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಧನಂಜಯ ಸರ್ಜಿ ಅವರ ಪ್ರಶ್ನೆಗೆ ಉತ್ತರಿಸಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೆ ಪ್ರಸ್ತುತ ನೀಡಲಾಗುತ್ತಿರುವ, ಮಾಸಿಕ ಗೌರವಧನ ಮೊತ್ತವನ್ನು ಹೆಚ್ಚಿಸುವ ಬಗ್ಗೆ ಆರ್ಥಿಕ ಇಲಾಖೆಯ ಅನುಮೋದನೆ ಪಡೆದು ಹೆಚ್ಚಳ ಮಾಡಲಾಗುವುದು ಎಂದರು.
ಇದೇ ಸಮಯದಲ್ಲಿ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯನ್ನು ತೀವ್ರಗೊಳಿಸಲು 40,000ಕ್ಕೂ ಹೆಚ್ಚು ಅತಿಥಿ ಶಿಕ್ಷಕರನ್ನು ನೇಮಿಸಿದ್ದು, ಅವರ ಸೇವೆ ಸಮರ್ಥವಾಗಿದೆ ಎಂದು ಶ್ಲಾಘಿಸಲಾಗಿದೆ. ಇದರಿಂದ ಶಾಲೆಗಳಲ್ಲಿ ಬೋಧನೆ ನಿರಂತರವಾಗಲು ಸಹಕಾರಿಯಾಗುತ್ತಿದೆ. ಬೆಳಗಾವಿ, ಕಲಬುರಗಿ, ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿ ಸಾವಿರಾರು ಅತಿಥಿ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ.
ಸರ್ಕಾರದ ಈ ನಿರ್ಧಾರವನ್ನು ಶಿಕ್ಷಣ ಕ್ಷೇತ್ರದ ಮುಖಂಡರು ಹಾಗೂ ಶಿಕ್ಷಕ ಸಂಘಗಳು ಸ್ವಾಗತಿಸುತ್ತಿದ್ದು, ವೇತನದಲ್ಲಿ ಹೆಚ್ಚಳ ಮಾಡಿರುವುದು ಅವರ ಜೀವನಮಟ್ಟವನ್ನು ಉತ್ತಮಗೊಳಿಸಲು ಸಹಾಯಕವಾಗಲಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ. ಸರ್ಕಾರದ ಈ ಕ್ರಮ ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಗುಣಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗಲಿದೆ.
ಸಭಾಧ್ಯಕ್ಷರ ನೂತನ ಪೀಠದ ವಿಶೇಷತೆ ತಿಳಿಸಿದ ಯು.ಟಿ. ಖಾದರ್(U.T. Khader):
ಇದೇ ಸಂದರ್ಭದಲ್ಲಿ ವಿಧಾನಸಭೆ ಸಭಾಧ್ಯಕ್ಷ ಯು.ಟಿ ಖಾದರ್ ಮಾತನಾಡಿ, ಸಂವಿಧಾನದಲ್ಲಿ ಸದನಕ್ಕೆ ಬಹಳ ಉನ್ನತ ಸ್ಥಾನವಿದ್ದು, ಈ ಸದನವನ್ನು ಮುನ್ನಡೆಸುವ ಜವಾಬ್ದಾರಿ ಹೊಂದಿರುವ ಸಭಾಧ್ಯಕ್ಷರ ಹುದ್ದೆ ಸಹ ಒಂದು ಸಂವಿಧಾನಾತ್ಮಕ ಹುದ್ದೆಯಾಗಿದೆ. ಇಂತಹ ಹುದ್ದೆ ಅಲಂಕರಿಸುವ ಸಭಾಧ್ಯಕ್ಷರು ಆಸೀನರಾಗುವ ಪೀಠ ಸಹ ಅಷ್ಟೇ ಪ್ರಾಮುಖ್ಯತೆ ಹೊಂದಿರಬೇಕು ಎಂಬ ಉದ್ದೇಶದಿಂದ ಬೆಂಗಳೂರಿನ ವಿಧಾನಸೌಧದ ಪೀಠದ ಮಾದರಿಯಲ್ಲಿಯೇ ಬೆಳಗಾವಿಯಲ್ಲಿನ ಸುವರ್ಣ ವಿಧಾನಸೌಧದಲ್ಲಿನ ವಿಧಾನಸಭೆಯ ಸಭಾಂಗಣದಲ್ಲಿರುವ ಸಭಾಧ್ಯಕ್ಷರ ಪೀಠವನ್ನು ತಯಾರಿಸಿ ಅಳವಡಿಸಲಾಗಿದೆ ಎಂದರು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




