ರಾಜ್ಯದ ಮನೆ ಯಜಮಾನಿಯರಿಗೆ ಮತ್ತೇ ಬಂಪರ್ ಲಾಟರಿ, ಗೃಹಲಕ್ಷ್ಮಿ ಹಣ ಬರೋಬ್ಬರಿ ₹4,000/-

Picsart 25 07 03 23 27 28 425

WhatsApp Group Telegram Group

ರಾಜ್ಯದ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ(Gruhalakshmi yojane) ಮೂಲಕ ಹಣಕಾಸು ಬಲ: ಮಹಿಳಾ ಮತದಾರರ ಹಿತಕ್ಕಾಗಿ ಪಕ್ಷಗಳಿಂದ ಭರ್ಜರಿ ಘೋಷಣೆಗಳು

ಕರ್ನಾಟಕದ ರಾಜಕೀಯ ವಲಯದಲ್ಲಿ ‘ಗೃಹಲಕ್ಷ್ಮಿ’ ಯೋಜನೆ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್ ಸರ್ಕಾರ(Congress government) ಚುನಾವಣೆ ಸಂದರ್ಭದಲ್ಲಿ ಘೋಷಿಸಿದ್ದ ಐದು ಭರವಸೆಗಳ ಪೈಕಿ ‘ಗೃಹಲಕ್ಷ್ಮಿ’ ಮಹತ್ವದ ಆರ್ಥಿಕ ಸಹಾಯ ಯೋಜನೆಯಾಗಿದೆ. ಈ ಯೋಜನೆಯಡಿ ರಾಜ್ಯದ ಎಲ್ಲ ಗೃಹಿಣಿಯರಿಗೆ ಪ್ರತಿ ತಿಂಗಳು ₹2,000 ನಗದು ಸಹಾಯ ನೀಡಲಾಗುತ್ತಿದೆ. 2023 ರ ವಿಧಾನಸಭಾ ಚುನಾವಣೆಯಲ್ಲಿ ಈ ಯೋಜನೆ ಪ್ರಮುಖ ಚುನಾವಣಾ ಅಸ್ತ್ರವಾಗಿತ್ತು, ಈಗ 2028 ರ ಚುನಾವಣೆಗೂ ಇದೇ ಯೋಜನೆ ಪ್ರಮುಖ ರಾಜಕೀಯ ಅಜೆಂಡಾವಾಗಿ ರೂಪುಗೊಳ್ಳುತ್ತಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೌದು, ಇದೀಗ ಗೃಹಲಕ್ಷ್ಮಿ ಯೋಜನೆ ಪ್ರಸ್ತಾಪದಿಂದ ಉದ್ಭವಿಸಿದ ರಾಜಕೀಯ ದ್ವಂದ್ವ ಮತ್ತಷ್ಟು ತೀವ್ರಗೊಳ್ಳುತ್ತಿದೆ. ಕಾಂಗ್ರೆಸ್ ತನ್ನ ಮುಂದಿನ ಚುನಾವಣಾ ಪ್ರಣಾಳಿಕೆಯಲ್ಲಿ ಈ ಮೊತ್ತವನ್ನು ₹4,000 ಕ್ಕೆ ಏರಿಸುವ ಭರವಸೆ ನೀಡಿದರೆ, ಜೆಡಿಎಸ್‌ ಪಕ್ಷ ಇದನ್ನು ಮೀರಿ ₹5,000 monthly ಹಣ ನೀಡುವ ಭರವಸೆಯನ್ನೂ ನೀಡಿದೆ. ಈ ಹೊಸ ಘೋಷಣೆಯ ಜತೆಗೆ ವಿಪಕ್ಷಗಳ ನಾಯಕರು ಪರಸ್ಪರ ವಾಗ್ದಾಳಿ ನಡೆಸಿದ ರೀತಿಯು, ಚುನಾವಣಾ ರಾಜಕೀಯ ಹೇಗೆ ಅಭಿವೃದ್ಧಿ ಯೋಜನೆಗಳ ಹಿಂದೆ ಅಡಗಿಕೊಳ್ಳುತ್ತಿದೆ ಎಂಬುದಕ್ಕೆ ಸಜೀವ ಉದಾಹರಣೆಯಾಗಿದೆ.

ರಾಜಕೀಯ ಲೆಕ್ಕಾಚಾರ: ಗೃಹಲಕ್ಷ್ಮಿ ಯೋಜನೆಯ ಗ್ಯಾರಂಟಿ ಸ್ಪರ್ಧೆ

ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ರಂಗನಾಥ್(Congress MLA Ranganath) ಅವರು, 2028 ರ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷವು ಮತ್ತೆ ಅಧಿಕಾರಕ್ಕೆ ಬಂದರೆ ಗೃಹಲಕ್ಷ್ಮಿ ಯೋಜನೆಯ ಮೂಲಕ ₹4,000 ನಗದು ಸಹಾಯ ನೀಡಲಾಗುವುದು ಎಂದು ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ(Nikhil Kumaraswamy) ಗೃಹಲಕ್ಷ್ಮಿ ಯೋಜನೆ ಕುರಿತು ಮಹತ್ವದ ಹೇಳಿಕೆಯನ್ನು ಕೊಟ್ಟಿದ್ದಾರೆ. “ಕೋಟ್ಯಂತರ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಡಿ ₹2,000 ಸಿಗುತ್ತಿದ್ದು, ನಾವು ಅಧಿಕಾರಕ್ಕೆ ಬಂದರೆ ಇದು ₹5,000 ಆಗಲಿದೆ” ಎಂದು ಬಹಿರಂಗವಾಗಿ ಘೋಷಿಸಿದ್ದಾರೆದ್ದಾರೆ.

ಸಿದ್ದರಾಮಯ್ಯ ವಿರುದ್ಧ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ:

ನಿಖಿಲ್ ಕುಮಾರಸ್ವಾಮಿ, ಸಿಎಂ ಸಿದ್ದರಾಮಯ್ಯ(CM Siddaramaiah) ಅವರನ್ನು ಟೀಕಿಸುತ್ತಾ, “ನಾನು ವಯಸ್ಸಿನಲ್ಲಿ ಚಿಕ್ಕವನಾಗಿದ್ದರೂ ನಮ್ಮ ಪಕ್ಷದ ಇತಿಹಾಸ ತಿಳಿದಿದ್ದೇನೆ. ನೀವು ಯಾರೋ ಕಟ್ಟಿದ ಪಕ್ಷದಲ್ಲಿ ಅಧಿಕಾರ ನಡೆಸುತ್ತಿದ್ದೀರಿ. ಆದ್ದರಿಂದ ಜೆಡಿಎಸ್(JDS) ಬಗ್ಗೆ ಮಾತನಾಡಲು ನಿಮಗೆ ಯಾವುದೇ ರೀತಿಯ ಅರ್ಹತೆ ಇಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಇದೇ ವೇಳೆ 2018 ರಲ್ಲಿ ದೇವೇಗೌಡರ ಮನೆ ಬಾಗಿಲಿಗೆ ಓಡೋಡಿ ಬಂದವರು ಯಾರು? ಆಗ ಸಮನ್ವಯ ಸಮಿತಿ ಅಧ್ಯಕ್ಷರಾಗಿ ಏನು ಮಾಡಿದ್ರಿ? 2019ರ ಲೋಕಸಭಾ ಚುನಾವಣೆಯಲ್ಲಿ(Lok Sabha election) ಏನು ಮಾಡಿದ್ರಿ. ನಿಮ್ಮ ಜೊತೆ ಗುರುತಿಸಿಕೊಂಡವರನ್ನ ಬೇರೆ ಪಕ್ಷಕ್ಕೆ ಹೋಗುವಂತೆ ಮಾಡಿ ಸರ್ಕಾರ ಬಿಳಿಸಿದ್ದು ಯಾರು? ಎಂದು ವಾಗ್ದಾಳಿ ನಡೆಸಿದ್ದಾರೆ.

“ನಿಮ್ಮನ್ನ ದೇವೇಗೌಡರು ಹಣಕಾಸು ಸಚಿವನನ್ನಾಗಿ ಮಾಡಿ ಬೆಳೆಸಿದರು, ಆದರೆ ನೀವು ಜೆಡಿಎಸ್‌ನ ತಾಯಿ ಪಕ್ಷವನ್ನೇ ಬಿಟ್ಟುಹೋಗಿದ್ದೀರಿ” ಕಾಂಗ್ರೆಸ್‌ಗೆ(Congres) ನೂರು ವರ್ಷದ ಇತಿಹಾಸ ಇದೆ ಅಂತೀರಾ.? ನಿಮ್ಮ ಪಕ್ಷ ದೇಶದಲ್ಲಿ ಎಷ್ಟು ರಾಜ್ಯದಲ್ಲಿ ಅಧಿಕಾರ ಮಾಡ್ತಿದ್ದೀರಿ? ನೂರು ವರ್ಷದ ಇತಿಹಾಸ ಇರುವ ಪಕ್ಷ ಮೂರು ರಾಜ್ಯಕ್ಕೆ ಮಾತ್ರ ಸೀಮಿತವಾಗಿದೆ ಎಂದು ರಾಜ್ಯ ಕಾಂಗ್ರೆಸ್‌ ವಿರುದ್ಧ ಟೀಕಿಸಿದ್ದಾರೆ.

ಜೆಡಿಎಸ್ ಕಾರ್ಯಕರ್ತರ ಸಮರ್ಥನೆ ಮತ್ತು ಕಾಂಗ್ರೆಸ್(Congres) ಮೇಲೆ ವ್ಯಂಗ್ಯ:

ಈ ವೇಳೆ ನಿಖಿಲ್, ಜೆಡಿಎಸ್ ಕಾರ್ಯಕರ್ತರ ಬದ್ಧತೆಗೆ ಶ್ಲಾಘನೆ ವ್ಯಕ್ತಪಡಿಸಿದ್ದು, “ನಮ್ಮ ಪಕ್ಷದ ಕಾರ್ಯಕರ್ತರಲ್ಲಿ ಇರುವ ನಿಷ್ಠೆ ಎರಡು ರಾಷ್ಟ್ರೀಯ ಪಕ್ಷಗಳಲ್ಲೂ ಸಿಗದು. ಪಕ್ಷದ ಪ್ರತಿ ಕಾರ್ಯಕರ್ತರೂ ಚಿನ್ನದಂತಹವರು” ಎಂದು ಹೇಳಿದ್ದಾರೆ.

ನಾಯಕರ ಅನುಭವ ಮತ್ತು ಪ್ರಸ್ತುತ ಸರ್ಕಾರದ ವೈಫಲ್ಯಗಳ ಮೇಲೆ ಟೀಕೆ:

ಬಿ.ಆರ್. ಪಾಟೀಲ್(B.R. Patil) ಕುರಿತು ಮಾತನಾಡುತ್ತ, “ಆರೇಳು ಬಾರಿ ಶಾಸಕರಾಗಿರುವ ಹಿರಿಯ ನಾಯಕರನ್ನು ನಾವು ಗೌರವಿಸುತ್ತೇವೆ. ಅವರು ನಮ್ಮ ಪಕ್ಷದಲ್ಲಿದ್ದವರು. ಆದರೆ ಈಗ ಕಾಂಗ್ರೆಸ್ ಶಾಸಕರು ತಾವು ಅನುದಾನ ಪಡೆಯದ ಹತಾಶೆಯಿಂದ ಬಹಿರಂಗವಾಗಿ ಹೇಳಿಕೆಗಳನ್ನು ನೀಡುವಂತಹ ಪರಿಸ್ಥಿತಿ ಬಂದಿದೆ ಎಂದು ವಾಗ್ದಾಳಿ ನಡೆಸಿದರು. “ಈ ಸರ್ಕಾರ ಮೂಲಭೂತ ಸೌಲಭ್ಯಗಳಿಗೂ ಹಣ ನೀಡುತ್ತಿಲ್ಲ. ಕಾಂಗ್ರೆಸ್ಸಿನಲ್ಲೂ ನಿಮ್ಮನ್ನ ‘ಲಾಟರಿ ಸಿಎಂ(Lottery CM’)’ ಅಂತಲೇ ಪಕ್ಷದವರೇ ಬಿರುದು ಕೊಟ್ಟಿದ್ದಾರೆ” ಎಂದೂ ವ್ಯಂಗ್ಯವಾಡಿದ್ದಾರೆದ್ದಾರೆ.

ಒಟ್ಟಾರೆಯಾಗಿ, ‘ಗೃಹಲಕ್ಷ್ಮಿ’ ಯೋಜನೆ ಈಗ ಕೇವಲ ಮಹಿಳೆಯರ ಸಬಲೀಕರಣ, ನಗದು ಸಹಾಯ ಯೋಜನೆಯಷ್ಟೆ ಅಲ್ಲ, ಮಹಿಳಾ ಮತದಾರರನ್ನು ಸೆಳೆಯುವ ರಾಜಕೀಯ ಮಂತ್ರವಾಗಿದೆ. ಕಾಂಗ್ರೆಸ್(congress), ಜೆಡಿಎಸ್(JDS) ಹಾಗೂ ಭವಿಷ್ಯದಲ್ಲಿ ಬಿಜೆಪಿ(BJP) ಈ ಯೋಜನೆಯ ಕುರಿತು ಏನೆಲ್ಲಾ ಘೋಷಿಸುತ್ತವೆ ಎಂಬ ಕುತೂಹಲ ಈಗ ಮತದಾರರಲ್ಲಿ ಹೆಚ್ಚುತ್ತಿದೆ. ಇದೀಗ ನಿಖಿಲ್ ಕುಮಾರಸ್ವಾಮಿ(Nikhil Kumaraswamy) ಘೋಷಿಸಿರುವ ₹5,000 ‘ಗ್ಯಾರಂಟಿ’ ರಾಜ್ಯ ರಾಜಕೀಯದಲ್ಲಿ ಹೊಸ ತಿರುವು ನೀಡಿದಂತಾಗಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!