ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಒಳ್ಳೆಯ ಸುದ್ದಿ. ಆಗಸ್ಟ್ ತಿಂಗಳ ರೂ. 2000 ಮೊತ್ತವು ಹಬ್ಬಕ್ಕೂ ಮುನ್ನವೇ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಆಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ. ತಾಂತ್ರಿಕ ಕಾರಣಗಳಿಂದ ಕೆಲವು ಜಿಲ್ಲೆಗಳಲ್ಲಿ ಹಣ ಬಿಡುಗಡೆಯಲ್ಲಿ ವ್ಯತ್ಯಯವಾಗಿದ್ದರೂ, ಬಾಕಿ ಇದ್ದ 23 ಕಂತುಗಳು ಈಗಾಗಲೇ ಫಲಾನುಭವಿಗಳ ಖಾತೆಗೆ ಜಮೆಯಾಗಿವೆ ಎಂದು ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಯೋಜನೆಯ ಮತ್ತೊಂದು ಕಂತಿನ ಹಣ ಬಿಡುಗಡೆಯಾಗಲಿದೆ. ಈ ಬಾರಿಯ ಹಬ್ಬಕ್ಕೆ ರೂ. 2000 ಫಲಾನುಭವಿ ಮಹಿಳೆಯರ ಖಾತೆಗೆ ಸೇರಲಿದೆ.
ಈ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ವಿವರ ನೀಡಿದ್ದಾರೆ. ಈಗಾಗಲೇ ಜುಲೈ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಸಂದಾಯವಾಗಿದ್ದು, ಆಗಸ್ಟ್ ತಿಂಗಳ ಹಣ ದೀಪಾವಳಿಗೂ ಮುನ್ನ ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ ಎಂದು ಸಚಿವರು ಮಾಹಿತಿ ನೀಡಿದರು.
ಗೃಹಲಕ್ಷ್ಮಿ ಯೋಜನೆ: ಎಷ್ಟು ಕಂತು ಮುಕ್ತಾಯ?
ಗೃಹಲಕ್ಷ್ಮಿ ಯೋಜನೆಯು ಆಗಸ್ಟ್ ತಿಂಗಳಿಗೆ 2 ವರ್ಷ ಪೂರೈಸುತ್ತದೆ. ಈವರೆಗೆ ಫಲಾನುಭವಿಗಳಿಗೆ ಜುಲೈ ತಿಂಗಳವರೆಗೆ ಅಂದರೆ, 23 ತಿಂಗಳ ಹಣ ಸಂದಾಯವಾಗಿದೆ. ಇನ್ನು ಆಗಸ್ಟ್ ತಿಂಗಳ ಹಣ ಕೂಡ ಸಿಕ್ಕರೆ ಒಟ್ಟು 24 ತಿಂಗಳ ಅಂದರೆ 2 ವರ್ಷಗಳ ಎಲ್ಲಾ ತಿಂಗಳ ಕಂತುಗಳು ಸಿಕ್ಕಂತಾಗುತ್ತದೆ. ಈವರೆಗೆ ಒಬ್ಬ ಫಲಾನುಭವಿಗೆ ಒಟ್ಟು 46 ಸಾವಿರ ರೂ. ಹಣ ಸಿಕ್ಕಂತಾಗಿದೆ.
ಗೃಹಲಕ್ಷ್ಮಿ ಹಣ ಎಷ್ಟು ಬಾಕಿ?
ಗೃಹಲಕ್ಷ್ಮಿ ಯೋಜನೆಯ ಆಗಸ್ಟ್ ಮತ್ತು ಸೆಪ್ಟೆಂಬರ್ ಕಂತುಗಳ ಹಣ ಬಾಕಿ ಇದೆ. ಅಕ್ಟೋಬರ್ ಅಂತ್ಯದೊಳಗೆ ಸೆಪ್ಟೆಂಬರ್ ಕಂತಿನ ಹಣವನ್ನೂ ಬಿಡುಗಡೆ ಮಾಡಲು ಚರ್ಚೆಗಳು ನಡೆಯುತ್ತಿವೆ.
ತಾಂತ್ರಿಕ ಕಾರಣದಿಂದ ಕೆಲವೆಡೆ ವ್ಯತ್ಯಯ!
ತಾಂತ್ರಿಕ ಕಾರಣಗಳಿಂದಾಗಿ ಕೆಲವು ಜಿಲ್ಲೆಗಳ ಫಲಾನುಭವಿಗಳಿಗೆ ಹಣ ಬಿಡುಗಡೆಯಲ್ಲಿ ವ್ಯತ್ಯಯವಾಗಿದೆ. ಬಾಕಿ ಇದ್ದ ಎಲ್ಲಾ ಕಂತುಗಳು ಒಟ್ಟಿಗೆ ಖಾತೆಗೆ ಜಮೆಯಾಗಲಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗೃಹಲಕ್ಷ್ಮಿಯ ಫಲಾನುಭವಿಗಳ ಪಟ್ಟಿ ಬಿಡುಗಡೆ
ಗೃಹ ಲಕ್ಷ್ಮಿ 2೦೦೦ ರೂಪಾಯಿ ಫಲಾನುಭವಿಗಳ ಲಿಸ್ಟ್ ಲಿಂಕ್ ಇದು. ಜಿಲ್ಲಾ, ತಾಲೂಕು, ಪಂಚಾಯತಿ,ಗ್ರಾಮ ಆಯ್ಕೆ ಮಾಡಿಕೊಂಡು ನೋಡಿ
ಕೆಳಗೆ ಕೊಟ್ಟಿರುವ ನೇರವಾದ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://ahara.karnataka.gov.in/Home/EServices
ನಿಮ್ಮ ಮೊಬೈಲ್ ಫೋನ ಮುಖಪುಟದ ಎಡಭಾಗದಲ್ಲಿ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ ನಂತರ ಕೆಳಗಡೆ e-Ration card ಸೆಲೆಕ್ಟ್ ಮಾಡಿಕೊಂಡು ನಂತರ ಕೆಳಗಡೆ show village list ಮೇಲೆ ಕ್ಲಿಕ್ ಮಾಡಿ

ಇಲ್ಲಿ ತೋರಿಸುತ್ತಿರುವ ಬಾಕ್ಸ್ ನಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಗ್ರಾಮ ಪಂಚಾಯತಿ ಮತ್ತು ಗ್ರಾಮವನ್ನು ಸೆಲೆಕ್ಟ್ ಮಾಡಿ Go ಮೇಲೆ ಕ್ಲಿಕ್ ಮಾಡಿ. ಇಲ್ಲಿ ನಿಮ್ಮ ಗ್ರಾಮದಲ್ಲಿರುವ ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರ ಯಜಮಾನಿಯರ ಕಂಪ್ಲೀಟ್ ಡೀಟೇಲ್ಸ್ ಕಾಣಿಸುತ್ತದೆ


ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.


WhatsApp Group




