ಗೃಹಿಣಿಯರು ಮನೆಯ ಎಲ್ಲಾ ಹೊಣೆಗಾರಿಕೆಗಳನ್ನು ಸಮರ್ಥವಾಗಿ ನಿರ್ವಹಿಸಿದರೂ, ಆರ್ಥಿಕ ವಿಷಯಗಳಲ್ಲಿ ಪತಿ ಅಥವಾ ಕುಟುಂಬದ ಇತರ ಸದಸ್ಯರನ್ನು ಅವಲಂಬಿಸಿರಬೇಕಾದ ಪರಿಸ್ಥಿತಿಯನ್ನು ಬದಲಾಯಿಸಲು ಕರ್ನಾಟಕ ಸರ್ಕಾರವು “ಗೃಹಲಕ್ಷ್ಮಿ ಯೋಜನೆ”ಯನ್ನು ಜಾರಿಗೆ ತಂದಿದೆ. ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಇದು ಒಂದು ಪ್ರಮುಖ ಯೋಜನೆಯಾಗಿದೆ.
ಗ್ರಾಮೀಣ ಪ್ರದೇಶಗಳ ಆರ್ಥಿಕ ಸ್ಥಿತಿಯನ್ನು ಬಲಪಡಿಸುವುದು ಮತ್ತು ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಪ್ರೋತ್ಸಾಹಿಸುವುದು ಈ ಯೋಜನೆಯ ಮುಖ್ಯ ಉದ್ದೇಶಗಳಾಗಿವೆ. ಈ ಯೋಜನೆಯಡಿ, ಪ್ರತಿ ಅರ್ಹ ಮಹಿಳೆಗೆ ತಿಂಗಳಿಗೆ ₹2,000 ರೂಪಾಯಿಯನ್ನು ನೇರ ಲಾಭ ವರ್ಗಾವಣೆ (DBT) ವ್ಯವಸ್ಥೆಯ ಮೂಲಕ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಈ ಹಣವು ಗೃಹಿಣಿಯರ ದೈನಂದಿನ ಅಗತ್ಯಗಳು ಮತ್ತು ಸಣ್ಣಪುಟ್ಟ ಆರ್ಥಿಕ ಗುರಿಗಳನ್ನು ಸಾಧಿಸಲು ಸಹಾಯಕವಾಗಿದೆ.
ಒಟ್ಟು ₹6,000/- ಹಣ ಬಿಡುಗಡೆ
ಇತ್ತೀಚೆಗೆ, ಯೋಜನೆಯ 13, 14 ಮತ್ತು 15ನೇ ಕಂತುಗಳ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ರಾಜ್ಯದ ಹಲವಾರು ಜಿಲ್ಲೆಗಳ ಮಹಿಳೆಯರಿಗೆ 13, 14 ಮತ್ತು 15ನೇ ಕಂತಿನ ₹6,000 ರೂಪಾಯಿ ಈಗಾಗಲೇ ಜಮೆಯಾಗಿದ್ದು, 16ನೇ ಕಂತಿನ ಹಣಕ್ಕಾಗಿ ಅನೇಕರು ಕಾಯುತ್ತಿದ್ದಾರೆ.
ವಿಶೇಷವಾಗಿ, ಹಾವೇರಿ ಜಿಲ್ಲೆಯ ಹಲವಾರು ಮಹಿಳೆಯರ ಖಾತೆಗೆ 30 ಮಾರ್ಚ್ 2025, 02 ಏಪ್ರಿಲ್ 2025 ಮತ್ತು 19 ಮೇ 2025 ರಂದು ₹2,000 ಪ್ರತಿ ಕಂತಿನಂತೆ ಒಟ್ಟು ₹6,000 ರೂಪಾಯಿ ಜಮೆಯಾಗಿದೆ. ಕೆಳಗಿನ DBT ಸ್ಟೇಟಸ್ ನೀವು ಗಮನಿಸಬಹುದು. ನೀವು ಕೂಡ ನಿಮ್ಮ ಖಾತೆಯ ಜಮಾ ಸ್ಟೇಟಸ್ ಮಾಡಿಕೊಳ್ಳಿ. ಅಥವಾ ನಿಮ್ಮ ಬ್ಯಾಂಕ್ ಖಾತೆಯ ಅಕೌಂಟ್ ಚೆಕ್ ಮಾಡಿಕೊಳ್ಳಿ.

ಈ ರೀತಿಯ ಎಲ್ಲಾ ನವೀನ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್‌ಗೆ ಈಗಲೇ ಸೇರಿಕೊಳ್ಳಿ. ಸೇರಲು ಇಲ್ಲಿ ಕ್ಲಿಕ್ ಮಾಡಿ
ಇನ್ನು ಕೂಡ ಹಣ ಬರದೆ ಇರುವ ಜಿಲ್ಲೆಯ ಮಹಿಳೆಯರ ಖಾತೆಗೆ ಇನ್ನೇನು ಈ ತಿಂಗಳ ಕೊನೆಯ ವಾರದೊಳಗೆ ಹಣ ಬಿಡುಗಡೆಯಾಗುವ ಸಾಧ್ಯತೆಯಿದ್ದು, ಹಂತ ಹಂತವಾಗಿ ಎಲ್ಲಾ ಜಿಲ್ಲೆಯ ಮಹಿಳೆಯರ ಖಾತೆಗಳಿಗೆ ಜಮಾ ಆಗುತ್ತದೆ
ಗೃಹಲಕ್ಷ್ಮಿ & ಅನ್ನಭಾಗ್ಯ DBT ನೇರ ನಗದು ವರ್ಗಾವಣೆ ಸ್ಟೇಟಸ್ ಹೀಗೆ ಚೆಕ್ ಮಾಡಿ:
DBT-ಅನ್ನಭಾಗ್ಯ, ಗೃಹಲಕ್ಷ್ಮಿ ಹಾಗೂ ಸರ್ಕಾರದ ಯಾವುದೇ ಯೋಜನೆಯ ನೇರ ನಗದು ವರ್ಗಾವಣೆ ಸ್ಥಿತಿಯನ್ನು ನಾವು ನೇರವಾಗಿ ನಮ್ಮ ಮೊಬೈಲ್ ನಲ್ಲಿ ಆಂಡ್ರಾಯ್ಡ್ ಅಪ್ಲಿಕೇಶನ್ ಮೂಲಕ ಮಾಡಬಹುದು
ಹಂತ 1: ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ DBT Karnataka application ಉಚಿತವಾಗಿ ಡೌನ್ಲೊಡ್ ಮಾಡಿ,install ಮಾಡಿಕೊಳ್ಳಿ
https://play.google.com/store/apps/details?id=com.dbtkarnataka

ಹಂತ 2: ಫಲಾನುಭವಿಯ ಆಧಾರ್ ನಂಬರ್ ಹಾಕಿ Get OTP ಮೇಲೆ ಕ್ಲಿಕ್ ಮಾಡಿ

ಹಂತ 3: ಈಗ ನಿಮ್ಮ ಆಧಾರ್ ನಂಬರ್ ಅನ್ನು ಹಾಕಿ Get OTP ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ಮೊಬೈಲ್ ಗೆ ಬರುವ ಓಟಿಪಿ ಹಾಕಿದ ನಂತರ verify OTP ಮೇಲೆ ಕ್ಲಿಕ್ ಮಾಡಿ ನಂತರ ಇಲ್ಲಿ ನಿಮ್ಮ ಆಧಾರ್ ಕಾರ್ಡ್ ಡೀಟೇಲ್ಸ್ ಕಾಣಿಸುತ್ತದೆ

ಹಂತ 4: ನಂತರ ಇಲ್ಲಿ ನೀವು ಪಾಸ್ವರ್ಡ್ ಅನ್ನು ಆಯ್ಕೆ ಮಾಡಬೇಕಾಗುತ್ತದೆ ನಿಮಗೆ ಬೇಕಾದ 4 ಸಂಖ್ಯೆಯ mPIN create ಮಾಡಿ,Confirm mPIN ಹಾಕಿ,Submit ಮೇಲೆ ಕ್ಲಿಕ್ ಮಾಡಿ

ಹಂತ 4: ಈಗ ಹೋಂ ಪೇಜ್ ನಲ್ಲಿ ನೀವು Payment status ಮೇಲೆ ಕ್ಲಿಕ್ ಮಾಡಿ. ಅನ್ನಭಾಗ್ಯದ ಡಿಬಿಟಿ ಸ್ಟೇಟಸ್ ಅನ್ನು ತಿಳಿದುಕೊಳ್ಳಬಹುದು. ಮತ್ತು ಪಕ್ಕದಲ್ಲಿರುವ Seeding status of Adhaar in bank account ಮೇಲೆ ಕ್ಲಿಕ್ ಮಾಡುವ ಮೂಲಕ ನಿಮ್ಮ ಆಧಾರ್ ಸೀಡಿಂಗ್ ಸ್ಟೇಟಸ್ ಅನ್ನು ಮತ್ತು ಯಾವ ಬ್ಯಾಂಕಿಗೆ ಸೀಡಾಗಿದೆ ಎಂಬುದನ್ನು ತಿಳಿದುಕೊಳ್ಳಬಹುದು

ಹಂತ 5: ಇಲ್ಲಿ ನಿಮಗೆ ಸರ್ಕಾರದಿಂದ ಇದುವರೆಗೂ ಬಂದಿರುವ ಯಾವುದೇ ನೇರ ನಗದು ವರ್ಗಾವಣೆಯ ಸ್ಥಿತಿ ಕಾಣಿಸಿಕೊಳ್ಳುತ್ತದೆ

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.