WhatsApp Image 2025 08 22 at 18.27.35 7d7a0aad 1024x576 1

Gruhalakshmi: ಅಕ್ಟೋಬರ್ ತಿಂಗಳ ಈ ದಿನ ಗೃಹಲಕ್ಷ್ಮಿ ಬಾಕಿ ಹಣ ಖಾತೆಗೆ ಜಮಾ ಲಕ್ಷ್ಮಿ ಹೆಬ್ಬಾಳ್ಕರ್ ಭರವಸೆ

WhatsApp Group Telegram Group

ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜನತೆಗೆ ನೀಡಿದ್ದ ಐದು ಭರವಸೆಗಳ (5 Guarantees) ಯೋಜನೆಗಳನ್ನು ಕ್ರಮೇಣ ಜಾರಿಗೆ ತರಲಾಗಿದೆ. ಈ ಯೋಜನೆಗಳ ಉದ್ದೇಶ ರಾಜ್ಯದ ಬಡವರು, ಮಧ್ಯಮ ವರ್ಗದ ಕುಟುಂಬಗಳು ಹಾಗೂ ಮಹಿಳೆಯರ ಆರ್ಥಿಕ ಸ್ಥಿತಿ ಬಲಪಡಿಸುವುದು. ಈ ಭರವಸೆಗಳಲ್ಲಿ ಪ್ರಮುಖವಾದದ್ದು ಗೃಹಲಕ್ಷ್ಮಿ ಯೋಜನೆ(Grulahakshmi Yojana). ಈ ಯೋಜನೆ ಮಹಿಳೆಯರ ಸಬಲೀಕರಣದತ್ತ ದೊಡ್ಡ ಹೆಜ್ಜೆಯಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಈ ಯೋಜನೆಯಡಿ ರಾಜ್ಯದ ಅರ್ಹ ಮಹಿಳೆಯರಿಗೆ ಪ್ರತಿ ತಿಂಗಳು ₹2000 ನಗದು ಸಹಾಯ ನೀಡಲಾಗುತ್ತದೆ. ಇದರ ಮೂಲಕ ಮನೆಯ ಖರ್ಚು, ಸಣ್ಣ ವ್ಯಾಪಾರ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಆರ್ಥಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಯೋಜನೆಯನ್ನು ರೂಪಿಸಿದೆ. ಈ ಸಹಾಯದಿಂದ ಲಕ್ಷಾಂತರ ಮಹಿಳೆಯರು ತಮ್ಮ ದಿನನಿತ್ಯದ ಜೀವನವನ್ನು ಸುಧಾರಿಸಿಕೊಂಡಿದ್ದಾರೆ.

ಆದರೆ, ಕಳೆದ ಎರಡು ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಜಮಾ ಆಗದೆ ವಿಳಂಬವಾಗಿರುವುದರಿಂದ ಹಲವಾರು ಫಲಾನುಭವಿಗಳಲ್ಲಿ ಆತಂಕ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ಇದೀಗ ಒಂದು ಮಹತ್ವದ ಘೋಷಣೆ ಹೊರಬಿದ್ದಿದೆ.

ಗೃಹಲಕ್ಷ್ಮಿ ಯೋಜನೆ ಕುರಿತಾಗಿ ಲಕ್ಷ್ಮಿ ಹೆಬ್ಬಾಳ್ಕರ್(Lakshmi Hebbalkar) ಸ್ಪಷ್ಟನೆ:

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಚಿವೆಯಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿರುವ ಪ್ರಕಾರ,  ಗೃಹಲಕ್ಷ್ಮಿ ಯೋಜನೆಯ ಎರಡು ತಿಂಗಳ ಹಣ ಬಿಡುಗಡೆಯಲ್ಲಿ ತಾಂತ್ರಿಕ ದೋಷಗಳ ಕಾರಣದಿಂದ ವಿಳಂಬ ಉಂಟಾಗಿದೆ ಎಂದು ತಿಳಿಸಿದ್ದಾರೆ. ಆದರೆ ಈಗ ಸಮಸ್ಯೆಯನ್ನು ಪರಿಹರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ತೊಂದರೆಗಳು ಎದುರಾಗುವುದಿಲ್ಲ ಎಂದು ಭರವಸೆ ನೀಡಿದ್ದಾರೆ.
ಹಿಂದಿನ ಎರಡು ತಿಂಗಳ ಹಣವನ್ನು ಮಹಿಳೆಯರ ಖಾತೆಗೆ ಬಿಡುಗಡೆ ಮಾಡುವ ಕಾರ್ಯವನ್ನು ಸರ್ಕಾರ ಕೈಗೊಂಡಿದೆ. ಈ ಹಣವನ್ನು ಅಕ್ಟೋಬರ್ 15 ರಿಂದ 20ರೊಳಗೆ ರಾಜ್ಯದ ಎಲ್ಲಾ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಹಣ ಬಿಡುಗಡೆ ದಿನಾಂಕ:

ಅಕ್ಟೋಬರ್ 15 ರಿಂದ 20ರೊಳಗೆ ಗೃಹಲಕ್ಷ್ಮಿ ಯೋಜನೆಯ ಬಾಕಿ ಇರುವ 2 ತಿಂಗಳ ಹಣವನ್ನು ಸರ್ಕಾರ ಬಿಡುಗಡೆ ಮಾಡಲಿದೆ.
ಈ ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ DBT (Direct Benefit Transfer) ಮೂಲಕ ವರ್ಗಾಯಿಸಲಾಗುತ್ತದೆ.

ಗೃಹಲಕ್ಷ್ಮಿ ಹಣದ ಸ್ಥಿತಿ ಚೆಕ್ ಮಾಡುವ ವಿಧಾನ ಹೀಗಿದೆ:

ನಿಮ್ಮ ಮೊಬೈಲ್‌ನಲ್ಲಿ DBT Karnataka ಅಪ್ಲಿಕೇಶನ್‌ನ್ನು ತೆರೆಯಿರಿ.
ಅಪ್ಲಿಕೇಶನ್‌ನಲ್ಲಿ ಕೇಳಲಾದ ಸಂಪೂರ್ಣ ಮಾಹಿತಿಯನ್ನು (ಆಧಾರ್, ಖಾತೆ ಸಂಖ್ಯೆ ಇತ್ಯಾದಿ) ಸರಿಯಾಗಿ ನಮೂದಿಸಿ.
ಬಳಿಕ “Payment Status” ಅಥವಾ ಸಂಬಂಧಿತ ವಿಭಾಗವನ್ನು ಆಯ್ಕೆಮಾಡಿ.
ತದನಂತರ ನಿಮ್ಮ ಖಾತೆಗೆ ಯಾವುದೇ ಯೋಜನೆಗಳಡಿ ಹಣ ಜಮಾ ಆಗಿದೆಯೇ ಎಂದು ಸುಲಭವಾಗಿ ಪರಿಶೀಲಿಸಬಹುದು.

ಒಟ್ಟಾರೆಯಾಗಿ, ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಇದು ನಿಜವಾದ ಸಂತಸದ ಸುದ್ದಿ. ತಾಂತ್ರಿಕ ಸಮಸ್ಯೆಯಿಂದ ವಿಳಂಬವಾದರೂ, ಸರ್ಕಾರ ಸ್ಪಷ್ಟ ದಿನಾಂಕ ನೀಡಿ ಹಣ ಬಿಡುಗಡೆ ಮಾಡುವ ಭರವಸೆ ನೀಡಿದೆ. ಅಕ್ಟೋಬರ್ 15 ರಿಂದ 20ರೊಳಗೆ ಹಣ ಖಾತೆಗೆ ಬರುವ ನಿರೀಕ್ಷೆಯಿದ್ದು, ಮಹಿಳೆಯರು ತಮ್ಮ ಖಾತೆಯನ್ನು DBT Karnataka ಆಪ್ ಮೂಲಕ ತಕ್ಷಣ ಪರಿಶೀಲಿಸಬಹುದು.

WhatsApp Image 2025 09 05 at 11.51.16 AM 12

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories