ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತನ್ನ ಐದು ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ಆರ್ಥಿಕ ಉತ್ತೇಜನ ನೀಡುತ್ತಿದೆ, ಮೊದಲನೇ ಕಂತಿನ ಹಣ ಬರದೇ ಇರುವ ಬಹುತೇಕ ಮಹಿಳೆಯರಿಗೆ ಎರಡು ಮತ್ತು ಮೂರನೇ ಕಂತಿನ ಹಣ ಬಿಡುಗಡೆ ಮಾಡಲಾಗಿತ್ತು. ನಂತರ ಬ್ಯಾಂಕ್ ಖಾತೆ ಎಲ್ಲಾ ದಾಖಲಾತಿಗಳನ್ನು ಸರಿಪಡಿಸಿಕೊಂಡ ಮಹಿಳಾ ಫಲಾನುಭವಿಗಳಿಗೆ ಈಗ ನಾಲ್ಕನೇ ಕಂತಿನ ಹಣ ಸಹಿತ ಬಿಡುಗಡೆಯಾಗುತ್ತಿದೆ. ಈ ಕುರಿತು ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
2000/- ಹಣ ಬಿಡುಗಡೆ..! 31 ನೇ ತಾರೀಕಿಗೆ ಬ್ಯಾಂಕ್ ಗೆ ಜಮಾ
ಈಗಾಗಲೇ 3ನೇ ಕಂತು ಬಿಡುಗಡೆಯಾಗಿದೆ. ಕೆಲ ಜಿಲ್ಲೆಗಳಲ್ಲಿ ಮಹಿಳೆಯರ ಕೈಗೆ ಹಣ ಸಿಕ್ಕಿದ್ದು, ಬಾಕಿ ಇರುವ ಕಡೆಗಳಲ್ಲಿ ಹಂತ ಹಂತವಾಗಿ ಬಿಡುಗಡೆ ಮಾಡಲಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಗೆ ಎದುರಾಗಿರುವ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಿ. ಬಾಕಿ ಉಳಿದ ಫಲಾನುಭವಿಗಳಿಗೆ ಶೀಘ್ರ ಹಣ ತಲುಪಿಸಬೇಕು. ಇನ್ನು4ನೇ ಕಂತಿನ ಹಣವು ಹಂತ ಹಂತವಾಗಿ ಬಿಡುಗಡೆಯಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ರೂ.2000 ಮೊತ್ತ ಈಗ ಎಲ್ಲಾ ಮಹಿಳೆಯರ ಖಾತೆಗೆ ಜಮಾ ಆಗುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಈಗಾಗಲೇ ಸರ್ಕಾರದ ಕಡೆ ಇಂದ ನಾಲ್ಕನೇ ಕಂತಿನ ಹಣ ವರ್ಗಾವಣೆ ಆಗಿದೆ ಮೊದಲ ಹಂತದಲ್ಲಿ ಕೆಲ ಜಿಲ್ಲೆಗಳಿಗೆ ಬಳಿಕ ಉಳಿದ ಎಲ್ಲಾ ಜಿಲ್ಲೆಗಳಿಗೆ ಇದೇ ಈ ಡಿಸೆಂಬರ್ ತಿಂಗಳ ಒಳಗಾಗಿ ಜಮೆಯಾಗಲಿದೆ
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
15 ಜಿಲ್ಲೆಗಳಿಗೆ ನಾಲ್ಕನೇ ಕಂತಿನ ಹಣ ಜಮಾ!
ನವೆಂಬರ್ ತಿಂಗಳ ಹಣ ಫಲಾನುಭವಿ ಮಹಿಳೆಯರ ಖಾತೆಗೆ (Bank Account) ಜಮಾ ಮಾಡುವ ಪ್ರಕ್ರಿಯೆ ಆರಂಭಗೊಂಡಿದೆ. ಆರಂಭದಲ್ಲಿ 15 ಜಿಲ್ಲೆಗಳಿಗೆ ನಾಲ್ಕನೇ ಕಂತಿನ ಹಣ ಬಿಡುಗಡೆ ಆಗಿದೆ
ಪ್ರತಿದಿನ ಒಂದಷ್ಟು ಜಿಲ್ಲೆಗಳಿಗೆ ಹಣ ವರ್ಗಾವಣೆ ಮಾಡುತ್ತಾ ಬರಲಾಗುತ್ತದೆ, ಹಾಗಾಗಿ ಡಿಸೆಂಬರ್ 20ನೇ ತಾರೀಕಿನ ಒಳಗೆ ಫಲಾನುಭವಿಗಳ ಖಾತೆಗೆ ಹಣ ಸಂಪೂರ್ಣವಾಗಿ ವರ್ಗಾವಣೆ ಆಗಿರುತ್ತದೆ ಎಂದು ಸರ್ಕಾರ ತಿಳಿಸಿದೆ. ಮೊದಲು ಉತ್ತರ ಕನ್ನಡ, ಬೆಳಗಾವಿ, ದಾವಣಗೆರೆ, ಹಾಸನ, ಚಿತ್ರದುರ್ಗ, ಗದಗ, ಕೋಲಾರ,ಮಂಡ್ಯ, ಬಾಗಲಕೋಟೆ, ಬೆಂಗಳೂರು, ಮೈಸೂರು, ಬಿಜಾಪುರ, ಧಾರವಾಡ, ಕಲಬುರ್ಗಿ, ರಾಯಚೂರು ಈ ಭಾಗದಲ್ಲಿ ಮೊದಲು ಹಣ ಜಮೆ ಆಗಲಿದ್ದು ಫಲಾನುಭವಿಗಳಿಗೆ ಎರಡು ಸಾವಿರ ಮೊತ್ತ ಸಿಗಲಿದೆ.
ಎಲ್ಲಾ ದಾಖಲೆ ಸರಿ ಇದ್ರೂ ಹಣ ಬಂದಿಲ್ಲ..!
ಇದಕ್ಕೆ ಮುಖ್ಯವಾಗಿರುವ ಕಾರಣ ಫಲಾನುಭವಿ ಮಹಿಳೆಯರ ಖಾತೆಯಲ್ಲಿ ಇರುವ ಸಮಸ್ಯೆಗಳು. ನಿಮ್ಮ ಖಾತೆಯಲ್ಲಿ ಒಂದು ಸಣ್ಣ ಹೆಸರಿನ (Spelling Mistake) ವ್ಯತ್ಯಾಸವಾದರೂ ಕೂಡ ಹಣ ವರ್ಗಾವಣೆ ಆಗುವುದಿಲ್ಲ. ನೀವು ಅರ್ಜಿ ಸಲ್ಲಿಕೆ ಮಾಡುವುದಾಗ ನೀಡಿರುವ ಮಾಹಿತಿ, ಬ್ಯಾಂಕ್ ಖಾತೆ ಮಾಹಿತಿ ಹಾಗೂ ಆಧಾರ್ ಕಾರ್ಡ್ನಲ್ಲಿರುವ ಮಾಹಿತಿ. ಈ ಮೂರು ಕೂಡ ಒಂದೇ ಆಗಿರಬೇಕು. ಅಂದರೇ ನಿಮ್ಮ ಹೆಸರು, ಮನೆ ವಿಳಾಸ, ನಿಮ್ಮ ಹೆಸರಿಗೆ ಇನ್ಶಲ್ ಇದ್ದರೆ ಅದು ಕೂಡ ಸರಿಯಾಗಿ ಇರಬೇಕು. ಈ ಸಮಸ್ಯೆ ಇರುವ ಕಾರಣದಿಂದಲೇ ಇನ್ನೂ 8-9 ಲಕ್ಷ ಮಂದಿಗೆ ಹಣ ವರ್ಗಾವಣೆ ಆಗಿಲ್ಲ ಅಂತ ಇಲಾಖೆ ಮಾಹಿತಿ ನೀಡಿದೆ. ಎನ್ ಪಿ ಸಿ ಐ (NPCI), ಆಧಾರ್ ಮ್ಯಾಪಿಂಗ್ (Aadhaar Mapping), ರೇಷನ್ ಕಾರ್ಡ್ (ration card correction) ನಲ್ಲಿ ಹೆಸರು ಬದಲಾವಣೆ, ಬ್ಯಾಂಕ್ ಖಾತೆಯನ್ನು ಆಕ್ಟಿವ್ ಆಗಿ ಇಟ್ಟುಕೊಳ್ಳುವುದು ಈ ಮೊದಲಾದ ಬದಲಾವಣೆಗಳನ್ನು ನೀವು ಮಾಡಿಕೊಳ್ಳಬೇಕು.
ಎಲ್ಲಾ ಸರಿ ಇದ್ರೂ ಹಣ ಬಂದಿಲ್ಲ ಅನ್ನೋರು ಇದೊಂದು ಪ್ರಯತ್ನ ಮಾಡಿ
ಎಲ್ಲಾ ದಾಖಲಾತಿ ಸರಿಯಿದೆ ಆದರೂ ಹಣ ಬರುತ್ತಿಲ್ಲ ಎಂದು ಹಾವೇರಿ ಯಜಮಾನಿ ಒಬ್ಬರು ಹೇಳುತ್ತಿದ್ದರು, ನಂತರ ಬ್ಯಾಂಕ್ ಖಾತೆ ಸಮಸ್ಯೆ ಇದೆಯಾ ಎಂದು ಬ್ಯಾಂಕ್ ಆಫ್ ಬರೋಡ ದಲ್ಲಿ ಹೊಸ ಖಾತೆ ತೆರೆದ ಕೇವಲ ಮೂರು ದಿನದಲ್ಲಿ ಖಾತೆಗೆ ಹಣ ಬಂದು ಜಮಾ ಆಗಿದೆ
ಎಲ್ಲ ದಾಖಲಾತಿ ಸರಿ ಇದ್ದವರು ಮತ್ತೊಮ್ಮೆ ಪೋಸ್ಟ್ ಆಫೀಸ್ನಲ್ಲಿ ಒಂದು ಹೊಸ ಖಾತೆಯನ್ನು ತೆರೆಯುವುದು ಉತ್ತಮ, ಅಥವಾ ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಖಾತೆಯನ್ನು ತೆರೆಯಿರಿ ಉದಾ : ಬ್ಯಾಂಕ್ ಆಫ್ ಬರೋಡ, ಕೆನರಾ, SBI, ಎಲ್ಲಾ ಸರಿ ಇದ್ರೂ ಹಣ ಬರ್ತಿಲ್ಲ ಅಂದ್ರೆ ಅದು ಬ್ಯಾಂಕ್ ಆಧಾರ್ ಸೀಡಿಂಗ್ ಸಮಸ್ಯೆಯೂ ಆಗಿರಬಹುದು ಹಾಗಾಗಿ ಹೊಸ ಖಾತೆಯನ್ನು ನೀವು ಆಧಾರ್ ದೃಢೀಕರಣ ಮೂಲಕ ತೆರೆದಾಗ DBT ವರ್ಗಾವಣೆ ಸುಲಭವಾಗಿ ಆಗುತ್ತದೆ. ಇದೊಂದು ಪ್ರಯತ್ನ ಮಾಡಿ ನೋಡಿ.
ಗೃಹ ಲಕ್ಷ್ಮಿ ಹಣ DBT ಆಪ್ ನಲ್ಲಿ ಈಗ ತೋರಿಸುತ್ತಿದೆ ಚೆಕ್ ಮಾಡಿ
ಕೆಲವೊಮ್ಮೆ ಮನೆ ಯಜಮಾನಿಯರಿಗೆ ಹಣ ಜಮಾ ಆಗಿರುತ್ತದೆ. ಆದರೆ ಹಲವು ಬ್ಯಾಂಕ್ ಖಾತೆಗಳು ನಿಮ್ಮ ಹೆಸರಲ್ಲಿ ಇದ್ದಾಗ ಯಾವ ಖಾತೆಗೆ ಜಮೆ ಆಗಿದೆ ಅಂತ ನಿಮಗೆ ಗೊತ್ತಾಗುವುದಿಲ್ಲ ಸಂದರ್ಭದಲ್ಲಿ ನೀವು ಡಿ ಬಿ ಟಿ ಆಪ್ ಮೂಲಕ ಈ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಹೌದು, ಡಿಬಿಟಿ ಆಪ್ ನಲ್ಲಿ ಈಗ ಗೃಹಲಕ್ಷ್ಮಿ ಹಣ ಅಪ್ಡೇಟ್ ಆಗುತ್ತಿದೆ. ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.