WhatsApp Image 2025 12 03 at 7.06.01 PM 1

ಗೃಹಲಕ್ಷ್ಮಿ 23ನೇ ಕಂತು ಜಮಾ: ಹಾವೇರಿ, ಬೆಂಗಳೂರು, ಧಾರವಾಡ, ಉಡುಪಿ ಸೇರಿ ಹಲವೆಡೆ ಹಣ ಬಿಡುಗಡೆ! ಖಾತೆ ತಕ್ಷಣವೇ ಪರಿಶೀಲಿಸಿ

WhatsApp Group Telegram Group

ಬಹುನಿರೀಕ್ಷಿತ ಗೃಹಲಕ್ಷ್ಮಿ ಯೋಜನೆಯ 23ನೇ ಕಂತಿನ ಹಣವು ಕೊನೆಗೂ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮಾ ಆಗಲು ಪ್ರಾರಂಭಿಸಿದೆ. ಇದು ರಾಜ್ಯದ ಕೋಟ್ಯಂತರ ಮಹಿಳೆಯರಿಗೆ ಸಂತಸ ತಂದ ಸುದ್ದಿ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈಗಾಗಲೇ 80% ರಷ್ಟು ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡಿದ್ದೇವೆ ಎಂದು ಘೋಷಿಸಿದ್ದರೂ, ಯಾವ ಜಿಲ್ಲೆಗಳಿಗೆ ಹಣ ಬಂದಿದೆ ಎಂಬ ಗೊಂದಲ ಅನೇಕರಲ್ಲಿತ್ತು. ಆದರೆ, ಇದೀಗ ರಾಜ್ಯದ ವಿವಿಧ ಭಾಗಗಳಿಂದ ಜನರು ನೀಡಿದ ಪ್ರತಿಕ್ರಿಯೆಗಳ ಮೂಲಕ ಹಲವು ಜಿಲ್ಲೆಗಳಲ್ಲಿ ಹಣ ಜಮಾ ಆಗಿರುವುದು ಖಚಿತಗೊಂಡಿದೆ. ಮಹಿಳೆಯರು ತಮ್ಮ ಬ್ಯಾಂಕ್ ಖಾತೆಗಳನ್ನು ತಕ್ಷಣವೇ ಪರಿಶೀಲಿಸಿಕೊಳ್ಳಬಹುದಾಗಿದೆ. ಹಾಗೆಯೇ ಅಯಾ ಜಿಲ್ಲೆಯ ಮಹಿಳೆಯರ ಖಾತೆಗೆ ಹಣ ಜಮಾ ಆಗಿರುವ ಪ್ರತಿಯನ್ನಾ ಕೆಳಗೆ ನೋಡಬಹುದು ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲುಇಲ್ಲಿ ಕ್ಲಿಕ್ ಮಾಡಿ

ಸಚಿವರ ಹೇಳಿಕೆ ಮತ್ತು ವಾಸ್ತವದ ಸ್ಪಷ್ಟನೆ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗೃಹಲಕ್ಷ್ಮಿ 23ನೇ ಕಂತಿನ ಹಣವನ್ನು 80% ಫಲಾನುಭವಿಗಳ ಖಾತೆಗಳಿಗೆ ಈಗಾಗಲೇ ವರ್ಗಾಯಿಸಲಾಗಿದೆ ಎಂದು ಮಾಧ್ಯಮಗಳ ಮುಂದೆ ತಿಳಿಸಿದ್ದರು. ಉಳಿದ 20% ಮಹಿಳೆಯರಿಗೆ ಶೀಘ್ರದಲ್ಲಿಯೇ ಹಣ ತಲುಪಲಿದೆ ಎಂದೂ ಭರವಸೆ ನೀಡಿದ್ದರು. ಸಚಿವರ ಈ ಹೇಳಿಕೆಯ ನಂತರ, ಯಾವ ಜಿಲ್ಲೆಗಳಲ್ಲಿ ಹಣ ಜಮಾ ಆಗಿದೆ ಎಂಬ ಸ್ಪಷ್ಟ ಮಾಹಿತಿ ಇರಲಿಲ್ಲ. ಆದರೆ, ಇದೀಗ ಹಾವೇರಿ,ರಾಯಚೂರು, ಬೆಂಗಳೂರು, ಧಾರವಾಡ, ಉಡುಪಿ, ಬಾಗಲಕೋಟೆ, ಬೆಳಗಾವಿ ಯಂತಹ ಜಿಲ್ಲೆಗಳಿಂದ ಬಂದಿರುವ ಖಚಿತ ಮಾಹಿತಿ ಹಾಗೂ ಸಾರ್ವಜನಿಕರ ಪ್ರತಿಕ್ರಿಯೆಗಳ ಆಧಾರದ ಮೇಲೆ ಸಚಿವರ ಹೇಳಿಕೆ ನಿಜವೆಂದು ಸಾಬೀತಾಗಿದೆ. ಹಣ ಜಮಾ ಪ್ರಕ್ರಿಯೆಯು ಪ್ರಸ್ತುತ ಭರದಿಂದ ಸಾಗಿದೆ.

ಜಿಲ್ಲಾವಾರು ಮಾಹಿತಿ: ಎಲ್ಲಿ ಹಣ ಜಮಾ ಆಗಿದೆ?

ನಮಗೆ ಲಭ್ಯವಾಗಿರುವ ಖಚಿತ ಮಾಹಿತಿಗಳ ಪ್ರಕಾರ, ಕರ್ನಾಟಕದ ಪ್ರಮುಖ ಜಿಲ್ಲೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಕ್ರೆಡಿಟ್ ಆಗಿದೆ. ಹಾವೇರಿ ಜಿಲ್ಲೆಯ ಮಹಿಳೆಗೆ ನಿನ್ನೆ ಡಿಸೆಂಬರ್‌ 2ಕ್ಕೆ ಖಾತರಗರ ಜಮಾ ಆಗಿದೆ ಹಾಗೆಯೇ ರಾಯಚೂರಿನ ಓರ್ವ ಮಹಿಳೆಗೆ ಕಳೆದ ತಿಂಗಳು ನವಂಬರ್‌ 26ನೇ ತಾರಿಕಿಗೆ ಬೆಳಗಿನ ಜಾವ 6:30ಕ್ಕೆ ಹಣ ಜಮಾ ಆಗಿದೆ ಎಂಬ ಸಂದೇಶ ಬಂದಿದೆ. ಇದರ ಜೊತೆಗೆ, ರಾಮನಗರದ ಜಿಲ್ಲೆಯ ಆರೋಹಳ್ಳಿ ತಾಲ್ಲೂಕು, ಧಾರವಾಡ ಜಿಲ್ಲೆ, ಮತ್ತು ರಾಜ್ಯ ರಾಜಧಾನಿಯಾದ ಬೆಂಗಳೂರು ನಗರದಲ್ಲಿಯೂ ಕೂಡ 23ನೇ ಕಂತು ಸ್ವೀಕರಿಸಲಾಗಿದೆ ಎಂದು ಫಲಾನುಭವಿಗಳು ಖಚಿತಪಡಿಸಿದ್ದಾರೆ. ಈ ಪ್ರೂಫ್‌ಗಳು ಹಣ ಬಿಡುಗಡೆ ಪ್ರಕ್ರಿಯೆಗೆ ಮತ್ತಷ್ಟು ವಿಶ್ವಾಸಾರ್ಹತೆ ನೀಡುತ್ತವೆ.

ಹಾವೇರಿ ಜಿಲ್ಲೆಯ ಮಹಿಳೆಯ ಖಾತೆಗೆ ಜಮಾ ಆದ ಹಣ

WhatsApp Image 2025 12 03 at 7.04.58 PM

ರಾಯಚೂರಿನ ಓರ್ವ ಮಹಿಳೆಗೆ ಕಳೆದ ತಿಂಗಳು ನವಂಬರ್‌ 26ನೇ ತಾರಿಕಿಗೆ ಬೆಳಗಿನ ಜಾವ 6:30ಕ್ಕೆ ಹಣ ಜಮಾ

WhatsApp Image 2025 12 03 at 6.17.32 PM

ಇದೇ ರೀತಿ, ಕರಾವಳಿ ಭಾಗದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹಾಗೂ ಉತ್ತರ ಕರ್ನಾಟಕದ ಬಾಗಲಕೋಟೆ,ಬೆಳಗಾವಿ ಜಿಲ್ಲೆಯಲ್ಲಿಯೂ 2000 ರೂಪಾಯಿಗಳ ಮೊತ್ತ ಕ್ರೆಡಿಟ್ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಎಲ್ಲಾ ಭಾಗಗಳ ಮಹಿಳೆಯರು ಯಾವುದೇ ಗೊಂದಲವಿಲ್ಲದೆ ತಮ್ಮ ಬ್ಯಾಂಕ್ ಖಾತೆಗಳ ಸ್ಟೇಟಸ್ ಅನ್ನು ಕೂಡಲೇ ಪರಿಶೀಲಿಸಿಕೊಳ್ಳುವುದು ಉತ್ತಮ.

ಅಪರೂಪದ ಪ್ರಕರಣ: ಎಪಿಎಲ್ ಕಾರ್ಡ್ ಇದ್ದರೂ ಹಣ ಜಮಾ

ಗೃಹಲಕ್ಷ್ಮಿ ಯೋಜನೆಯ ನಿಯಮಗಳ ಪ್ರಕಾರ, ಸಾಮಾನ್ಯವಾಗಿ ಎಪಿಎಲ್ (APL) ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಈ ಯೋಜನೆ ಅನ್ವಯಿಸುವುದಿಲ್ಲ. ಆದರೂ, ಅಪರೂಪದ ಪ್ರಕರಣವೊಂದರಲ್ಲಿ ಎಪಿಎಲ್ ಕಾರ್ಡ್ ಇದ್ದರೂ ಸಹ ಫಲಾನುಭವಿಗೆ ಗೃಹಲಕ್ಷ್ಮಿ ಹಣ ಬಂದಿರುವುದು ವರದಿಯಾಗಿದೆ. ಸರ್ಕಾರ ನಿಗದಿಪಡಿಸಿದ ಅರ್ಹತಾ ಮಾನದಂಡಗಳ ಬಗ್ಗೆ ಮತ್ತೊಮ್ಮೆ ಖಚಿತಪಡಿಸಿಕೊಳ್ಳುವುದು ಒಳ್ಳೆಯದು. ಆದರೆ, ಇಂತಹ ಕೆಲವೇ ಕೆಲವು ಪ್ರಕರಣಗಳಲ್ಲಿ ಹಣ ಜಮಾ ಆಗಿರುವುದು ಆ ಫಲಾನುಭವಿಗಳ ಅದೃಷ್ಟವೆಂದೇ ಹೇಳಬಹುದು.

ಹಂತ ಹಂತವಾಗಿ ಹಣ ಜಮಾ: ಕಾರಣವೇನು?

ಸರ್ಕಾರವು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಯಾವಾಗಲೂ ಹಂತ ಹಂತವಾಗಿ ಬಿಡುಗಡೆ ಮಾಡುತ್ತದೆ. ಈ ಬಾರಿ ಕೂಡ ಅದೇ ಪ್ರಕ್ರಿಯೆಯನ್ನು ಅನುಸರಿಸಲಾಗುತ್ತಿದೆ. ರಾಜ್ಯದಲ್ಲಿ ಕೋಟ್ಯಂತರ ಮಹಿಳಾ ಫಲಾನುಭವಿಗಳಿರುವುದರಿಂದ, ಒಂದೇ ಬಾರಿಗೆ ಎಲ್ಲರ ಖಾತೆಗಳಿಗೆ ಹಣ ವರ್ಗಾಯಿಸುವುದು ಬ್ಯಾಂಕಿಂಗ್ ವ್ಯವಸ್ಥೆಗೆ ಸವಾಲಾಗಬಹುದು. ಹೀಗಾಗಿ, ಜಿಲ್ಲೆವಾರು ಹಂಚಿಕೆ ಮಾಡಿಕೊಂಡು ಹಣವನ್ನು ಸ್ಪ್ಲಿಟ್ ಮಾಡಿ ಜಮಾ ಮಾಡಲಾಗುತ್ತದೆ. ಆದ್ದರಿಂದ, ನಿಮ್ಮ ಜಿಲ್ಲೆಗೆ ಇನ್ನೂ ಹಣ ಬಂದಿಲ್ಲವೆಂದರೆ ಆತಂಕಪಡುವ ಅಗತ್ಯವಿಲ್ಲ. ಈಗಾಗಲೇ 80% ಮಹಿಳೆಯರಿಗೆ ಹಣ ತಲುಪಿದ ಕಾರಣ, ಉಳಿದ 20% ಫಲಾನುಭವಿಗಳ ಖಾತೆಗೂ ಮುಂದಿನ ಕೆಲವೇ ದಿನಗಳಲ್ಲಿ ಹಣ ಖಂಡಿತಾ ತಲುಪುವ ವಿಶ್ವಾಸವಿದೆ .

ಮುಂದಿನ ಜಿಲ್ಲೆಗಳಿಗೆ ಶೀಘ್ರದಲ್ಲೇ ಬಿಡುಗಡೆ

ಪ್ರಸ್ತುತ, ರಾಯಚೂರು, ಬೆಂಗಳೂರು, ಧಾರವಾಡ, ಉಡುಪಿ, ಬಾಗಲಕೋಟೆ, ರಾಮನಗರ ಮುಂತಾದ ಜಿಲ್ಲೆಗಳಿಗೆ ಹಣ ಬಂದಿರುವುದು ಖಚಿತವಾಗಿದೆ. ಇನ್ನುಳಿದ ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು, ಮಂಡ್ಯ, ಮಂಗಳೂರು, ಮತ್ತು ಇತರ ಜಿಲ್ಲೆಗಳ ಫಲಾನುಭವಿಗಳಿಗೆ ಹಂತ ಹಂತವಾಗಿ ಹಣ ತಲುಪುವ ನಿರೀಕ್ಷೆ ಇದೆ. ಸರ್ಕಾರವು ನಿರಂತರವಾಗಿ ಹಣ ಜಮಾ ಪ್ರಕ್ರಿಯೆ ನಡೆಸುತ್ತಿರುವುದರಿಂದ, ಈ ವಾರದೊಳಗೆ ಹೆಚ್ಚಿನ ಜಿಲ್ಲೆಗಳಿಗೆ ಗೃಹಲಕ್ಷ್ಮಿ ಭಾಗ್ಯ ಸಿಗುವ ಸಾಧ್ಯತೆ ಇದೆ. ನಿಮ್ಮ ಹಣ ಸಂಪೂರ್ಣವಾಗಿ ಸುರಕ್ಷಿತವಾಗಿದ್ದು, ಸ್ವಲ್ಪ ಕಾಯುವಿಕೆ ಅಷ್ಟೇ ಮುಖ್ಯವಾಗಿದೆ.

ಒಟ್ಟಾರೆಯಾಗಿ, ಗೃಹಲಕ್ಷ್ಮಿ ಯೋಜನೆಯ 23ನೇ ಕಂತಿನ 2000 ರೂಪಾಯಿ ಹಣವು ರಾಜ್ಯದ ಮಹಿಳೆಯರ ಖಾತೆಗಳಿಗೆ ಜಮಾ ಆಗಲು ಶುರುವಾಗಿರುವುದು ದೃಢಪಟ್ಟಿದೆ. ಹಣ ಪಡೆದ ಫಲಾನುಭವಿಗಳು ತಮ್ಮ ಸಂತೋಷವನ್ನು ಇತರರ ಜೊತೆ ಹಂಚಿಕೊಳ್ಳಬಹುದು, ಮತ್ತು ಇನ್ನೂ ಹಣ ಬರದವರು ತಾಳ್ಮೆಯಿಂದ ಕಾಯಬಹುದು. 23ನೇ ಕಂತು ಜಮಾ ಆದ ನಂತರವೇ 24ನೇ ಕಂತಿನ ಕುರಿತು ಯೋಚಿಸುವುದು ಸೂಕ್ತ. ಮುಂದಿನ ಎಲ್ಲಾ ಅಪ್ಡೇಟ್ಸ್‌ಗಳಿಗಾಗಿ ನಮ್ಮ ಸುದ್ದಿಯನ್ನು ಗಮನಿಸುತ್ತಾ ಇರಿ.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories