ರಾಜ್ಯದ ಗ್ರಾಮೀಣ ಜನತೆಗೆ(Rural people) ಬಂಪರ್ ಸುದ್ದಿ: ವಾಟ್ಸಪ್ ಮೂಲಕ ಗ್ರಾಮ ಪಂಚಾಯತಿ ಸೇವೆಗಳ ಆನ್‌ಲೈನ್ ವ್ಯವಸ್ಥೆ!
ರಾಜ್ಯ ಸರ್ಕಾರ(State Government) ಗ್ರಾಮೀಣ ಜನರ ಅನುಕೂಲಕ್ಕಾಗಿ ಮತ್ತೊಂದು ಮಹತ್ವದ ಹೆಜ್ಜೆ ಹಾಕಿದೆ. ಈವರೆಗೆ ಗ್ರಾಮ ಪಂಚಾಯತಿ ಸೇವೆಗಳಿಗಾಗಿ(Gram Panchayat services) ಕಚೇರಿಗಳಿಗೆ ಭೇಟಿ ನೀಡಿ ಅರ್ಜಿಸಲ್ಲಿಸಲು ಅಥವಾ ಅಹವಾಲು ದಾಖಲಿಸಲು ಗ್ರಾಮೀಣ ಜನತೆಗೆ ಹಲವು ರೀತಿಯ ತೊಂದರೆಗಳು ಮತ್ತು ಸಮಯ ವ್ಯಯವಾಗುತ್ತಿತ್ತು. ಆದರೆ ಈಗ ಈ ವ್ಯವಸ್ಥೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಿ, ಜನರ ಕೈಬೆರಳಿನ ತುದಿಯಲ್ಲಿ ಸೇವೆಯನ್ನು ತಲುಪಿಸುವ ನಿಟ್ಟಿನಲ್ಲಿ ‘ಪಂಚಮಿತ್ರ ವಾಟ್ಸಾಪ್ ಚಾಟ್ ಸೇವೆ’ (‘Panchamitra WhatsApp Chat Service’) ಲಭ್ಯವಿದೆ. ಈ ‘ಪಂಚಮಿತ್ರ ವಾಟ್ಸಾಪ್ ಚಾಟ್ ಸೇವೆಗಳು ಹೇಗಿರಲಿವೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಗ್ರಾಮೀಣ ಪ್ರದೇಶದಲ್ಲಿ ಸರಳ, ಸುಲಭ ಮತ್ತು ದಕ್ಷ ಸೇವಾ ಪ್ರಕ್ರಿಯೆಯನ್ನು ಶೀಘ್ರಗತಿಯಲ್ಲಿ ಜನರಿಗೆ ಒದಗಿಸುವ ಉದ್ದೇಶದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ(Panchayat Raj Department) ಹೊಸ ಸೇವೆಗಳನ್ನು ಪ್ರಾರಂಭಿಸಿದೆ. ಈ ಹೊಸ ವ್ಯವಸ್ಥೆಯ ಮೂಲಕ, ಗ್ರಾಮೀಣ ಜನತೆ ತಮ್ಮ ಕುಂದುಕೊರತೆಗಳನ್ನು, ಸಮಸ್ಯೆಗಳನ್ನು ಮತ್ತು ಅಗತ್ಯ ಸೇವೆಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ವಾಟ್ಸಾಪ್ ಮೂಲಕವೇ ಪಡೆಯಬಹುದು.
ಪಂಚಮಿತ್ರ ಚಾಟ್ ಸೇವೆ ಎಂದರೇನು?:
ಪಂಚಮಿತ್ರ ವಾಟ್ಸಾಪ್ ಚಾಟ್ ಸೇವೆ ಗ್ರಾಮೀಣ ಜನತೆಯ ಜೀವನ ಸುಲಭಗೊಳಿಸಲು ರಾಜ್ಯ ಸರ್ಕಾರದ ಪ್ರಾರಂಭವಾದ ಹೊಸ ಡಿಜಿಟಲ್(digital) ವೇದಿಕೆ. ಈ ಸೇವೆಯ ಮೂಲಕ ಗ್ರಾಮ ಪಂಚಾಯತಿ ಸೌಲಭ್ಯಗಳಿಗೆ ತ್ವರಿತ ಪ್ರವೇಶವನ್ನು ನೀಡಲಾಗುತ್ತದೆ. ಈ ಚಾಟ್ ಮೂಲಕ ಜನರು ತಮ್ಮ ಕುಂದು-ಕೊರತೆಗಳನ್ನು, ಅಹವಾಲುಗಳನ್ನು ದಾಖಲು ಮಾಡಬಹುದು, ಗ್ರಾಮ ಪಂಚಾಯತಿ ಸೇವೆಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಪಡೆಯಬಹುದು ಮತ್ತು ವಿವಿಧ ಅರ್ಜಿಗಳನ್ನು ಆನ್‌ಲೈನ್‌ನಲ್ಲಿ(online) ಸಲ್ಲಿಸಬಹುದು.
ವಾಟ್ಸಾಪ್ ಮೂಲಕ ಈ ಸೇವೆಯ ಲಾಭ ಹೇಗೆ ಪಡೆಯಬಹುದು :
ವಾಟ್ಸಾಪ್ ಮೂಲಕ ಸೇವೆಗೆ ನೇರ ಪ್ರವೇಶ ಪಡೆಯಲು ಈ ಸರಳ ವಿಧಾನವನ್ನು ಅನುಸರಿಸಬೇಕು:
ನಿಮ್ಮ ವಾಟ್ಸಾಪ್ ನಂಬರ್‌ನಿಂದ 8277506000 ಗೆ Hi ಎಂದ ಕಳುಹಿಸಿ.
ಚಾಟ್‌ನಲ್ಲಿ ತಕ್ಷಣವೇ ಪ್ರತಿಕ್ರಿಯೆ ಲಭ್ಯವಾಗುತ್ತದೆ.
ಹಂತ ಹಂತವಾಗಿ ನಿಮ್ಮ ಜಿಲ್ಲೆ, ತಾಲೂಕು, ಗ್ರಾಮಪಂಚಾಯತಿ ಹಾಗೂ ಗ್ರಾಮದ ಮಾಹಿತಿಯನ್ನು ನಮೂದಿಸಿ.
village ಮಾಹಿತಿ ಖಚಿತಪಡಿಸಲು ಹೌದು ಎಂದು ಆಯ್ಕೆ ಮಾಡಿ.
ನಂತರ, ನಿಮ್ಮ ಸಮಸ್ಯೆ/ಸೇವೆ/ಅಹವಾಲಿಗೆ ಸಂಬಂಧಿಸಿದ ಮಾಹಿತಿಯನ್ನು ಕಳುಹಿಸಿ.
ಯಾವೆಲ್ಲ ಸೇವೆಗಳನ್ನು ಪಡೆಯಬಹುದು?:
ಈ ಚಾಟ್ ಸೇವೆಯ ಮೂಲಕ ಕೆಳಗಿನ ಪ್ರಮುಖ ಸೇವೆಗಳನ್ನು ಒದಗಿಸಲಾಗುತ್ತಿದೆ:
ಅಹವಾಲು ದಾಖಲು: ಕುಂದು-ಕೊರತೆ ಮತ್ತು ಸಮಸ್ಯೆಗಳ ಪರಿಹಾರಕ್ಕೆ.
ಗ್ರಾಮಪಂಚಾಯತಿ ಸೇವೆಗಳ ವಿವರ: ಖಾಸಗಿ ಅಥವಾ ಸಾರ್ವಜನಿಕ ಅಗತ್ಯಗಳಿಗಾಗಿ.
ಹಕ್ಕು ಪತ್ರ, ಐಡಿಗಳನ್ನು ನವೀಕರಿಸುವ ಸೇವೆಗಳು.
ಗ್ರಾಮ ಅಭಿವೃದ್ಧಿ ಯೋಜನೆಗಳ ಮಾಹಿತಿಗಳನ್ನು ಪಡೆಯಬಹುದು.
ಸಮಾಜದ ಬದಲಾವಣೆಗೆ ತಂತ್ರಜ್ಞಾನ ಬಳಕೆ :
ಈ ಸೇವೆಯ ವಿಶೇಷತೆಯು ಗ್ರಾಮೀಣ ಜನರ ಸವಾಲುಗಳನ್ನು ತಾಂತ್ರಿಕತೆ ಬಳಸಿ ನಿಭಾಯಿಸುವುದಾಗಿದೆ. ಪ್ರತಿಯೊಬ್ಬ ಗ್ರಾಮೀಣ ನಿವಾಸಿಯಿಗೂ ಸುಲಭವಾದ ವೇದಿಕೆಯ ಮೂಲಕ ಸರ್ಕಾರದ ಸೇವೆಗಳನ್ನು ತಲುಪಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ.
ಇನ್ಮುಂದೆ ಗ್ರಾಮೀಣ ಜನರು ಕಚೇರಿಗಳಿಗೆ(office) ಸುತ್ತಾಡಬೇಕಿಲ್ಲ; ಅವರ ಮೊಬೈಲ್‌ನಲ್ಲಿಯೇ ಎಲ್ಲಾ ಸೇವೆಗಳ ಲಭ್ಯತೆ ಇರುವುದರಿಂದ ಗ್ರಾಮೀಣ ಜನರಿಗೆ ಉಪಯೋಗವಾಗಲಿದೆ.
ರಾಜ್ಯದ ಗ್ರಾಮೀಣ ಜನತೆಯೆ, ಈ ಸೇವೆಯನ್ನು ಸದುಪಯೋಗಪಡಿಸಿಕೊಂಡು ನಿಮ್ಮ ಜೀವನವನ್ನು ಸುಲಭಗೊಳಿಸಿರಿ. ನಿಮಗೆ ಬೇಕಾದಂತಹ ಗ್ರಾಮಪಂಚಾಯತಿ ಸೇವೆಗಳಿಗೆ ಇದೀಗ ಮೊಬೈಲ್‌ನಿಂದಲೇ(mobile) ಲಭ್ಯವಿರುವ ಪಂಚಮಿತ್ರ ವಾಟ್ಸಾಪ್ ಸೇವೆಗೆ (Panchamitra WhatsApp service ) ಸಂಪರ್ಕಿಸಿ!
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




