WhatsApp Image 2025 12 01 at 3.40.01 PM

ಗ್ರಾಮ ಪಂಚಾಯತಿ ಅಕ್ರಮ ನಿವೇಶಗಳು ಸಕ್ರಮ: ‘ಇ-ಸ್ವತ್ತು 2.0’ಗೆ ಸಿಎಂ ಸಿದ್ದರಾಮಯ್ಯ ಚಾಲನೆ; 15 ದಿನದಲ್ಲಿ ಖಾತಾ!

WhatsApp Group Telegram Group

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಹತ್ವದ ಹೆಜ್ಜೆಯಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ಇಂದು (ಸೋಮವಾರ) ‘ಇ-ಸ್ವತ್ತು 2.0’ ಎಂಬ ನೂತನ ತಂತ್ರಾಂಶಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ಗ್ರಾಮ ಪಂಚಾಯತಿಗಳ ಸ್ವಂತ ಸಂಪನ್ಮೂಲಗಳನ್ನು ಹೆಚ್ಚಿಸುವ ಮುಖ್ಯ ಉದ್ದೇಶದಿಂದ ಈ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ. ಈ ಮೂಲಕ ಗ್ರಾಮೀಣ ಪ್ರದೇಶದ ಜನರಿಗೆ ತಮ್ಮ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸುಲಭವಾಗಿ ಮತ್ತು ಡಿಜಿಟಲ್ ರೂಪದಲ್ಲಿ ಪಡೆಯಲು ಗ್ರಾಮೀಣಾಭಿವೃದ್ಧಿ ಇಲಾಖೆಯು ಸದಾವಕಾಶ ಕಲ್ಪಿಸಿದೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ………

ಡಿಜಿಟಲ್ ಇ-ಸ್ವತ್ತು ಪ್ರಮಾಣ ಪತ್ರ ವಿತರಣೆ ಆರಂಭ

ನೂತನ ಇ-ಸ್ವತ್ತು 2.0 ತಂತ್ರಾಂಶದ ಮೂಲಕ, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಸಾರ್ವಜನಿಕರ ಆಸ್ತಿಗಳಿಗೆ ಡಿಜಿಟಲ್ ಇ-ಸ್ವತ್ತು ಪ್ರಮಾಣ ಪತ್ರಗಳನ್ನು ವಿತರಿಸಲು ಆರಂಭಿಸಲಾಗಿದೆ. ಇದರಲ್ಲಿ ನಿರ್ದಿಷ್ಟವಾಗಿ ನಮೂನೆ-11ಎ ಮತ್ತು ನಮೂನೆ-11ಬಿ ಪ್ರಮಾಣ ಪತ್ರಗಳು ಸೇರಿವೆ. ಈ ಡಿಜಿಟಲೀಕರಣದಿಂದ ಗ್ರಾಮೀಣ ಪ್ರದೇಶದಲ್ಲಿ ಆಸ್ತಿ ದಾಖಲೆ ನಿರ್ವಹಣೆ ಇನ್ನಷ್ಟು ಪಾರದರ್ಶಕ ಮತ್ತು ಸರಳವಾಗಲಿದೆ.

ಈ ತಂತ್ರಾಂಶವು ಸ್ಥಳೀಯ ಯೋಜನಾ ಅಭಿವೃದ್ಧಿ ಪ್ರಾಧಿಕಾರದಿಂದ (Planning Authority) ಅನುಮತಿ ಪಡೆಯದೇ ನಿರ್ಮಾಣವಾಗಿದ್ದ ಲೇಔಟ್‌ಗಳಲ್ಲಿನ ನಿವೇಶನದಾರರಿಗೆ 11 ‘ಬಿ’ ಖಾತೆ ಪಡೆಯಲು ದಾರಿ ಮಾಡಿಕೊಟ್ಟಿದೆ. ಇದರಿಂದಾಗಿ ಕಳೆದ ಹಲವು ದಿನಗಳಿಂದ ತಮ್ಮ ನಿವೇಶನಗಳನ್ನು ನೋಂದಣಿ ಮಾಡಿಸಲು ಕಾಯುತ್ತಿದ್ದ ಜನರಿಗೆ ಕೊನೆಗೂ ದೊಡ್ಡ ಉಡುಗೊರೆ ದೊರೆತಂತಾಗಿದೆ.

ನೋಂದಣಿ ರದ್ದತಿಯಿಂದ ಆರ್ಥಿಕ ಸಂಕಷ್ಟ: ಈಗ ಮುಕ್ತಿ

ಈ ಹಿಂದೆ, ರಾಜ್ಯ ಸರ್ಕಾರವು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಂದಾಯ ಜಮೀನುಗಳಲ್ಲಿ ಪ್ರಾಧಿಕಾರದ ಅನುಮತಿ ಇಲ್ಲದೆ ನಿರ್ಮಾಣವಾಗಿದ್ದ ಲೇಔಟ್‌ಗಳಲ್ಲಿನ ನಿವೇಶನಗಳ ನೋಂದಣಿ ಮತ್ತು ಮಾರಾಟವನ್ನು ಸುಮಾರು 1 ವರ್ಷದಿಂದ ರದ್ದುಗೊಳಿಸಿತ್ತು. ಇದರಿಂದಾಗಿ ಗ್ರಾಮೀಣ ಭಾಗದಲ್ಲಿ ನಿವೇಶನ ವಹಿವಾಟು ಸ್ಥಗಿತಗೊಂಡು, ಮಧ್ಯಮವರ್ಗದ ಜನರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿತ್ತು. ತಮ್ಮದೇ ಆದ ಸ್ವಂತ ನಿವೇಶನ ಹೊಂದುವ ಅವರ ಕನಸು ನನಸಾಗದೆ ಉಳಿದಿತ್ತು.

ಆದರೆ, ಇ-ಸ್ವತ್ತು 2.0 ತಂತ್ರಾಂಶದ ಜಾರಿ ಮತ್ತು ಅದರಲ್ಲಿನ ಸಕ್ರಮ ನಿಯಮಗಳಿಂದಾಗಿ, ಈ ಸಮಸ್ಯೆಗೆ ಪರಿಹಾರ ದೊರೆತಿದೆ. 7-4-2025 ರ ದಿನಾಂಕಕ್ಕಿಂತ ಮೊದಲು ನೋಂದಣಿಯಾದ ನಿವೇಶನಗಳು ಅಥವಾ ಅಷ್ಟರೊಳಗೆ ಮನೆ ನಿರ್ಮಿಸಿ, ವಿದ್ಯುತ್ ಸಂಪರ್ಕ ಪಡೆದಿರುವ ನಿವೇಶನಗಳಿಗೆ ಮಾತ್ರ 11 ‘ಬಿ’ ಖಾತೆ ಪಡೆಯಲು ಅರ್ಜಿ ಸಲ್ಲಿಸಲು ಮೂರು ತಿಂಗಳ ಕಾಲಾವಕಾಶ ನೀಡಲಾಗಿದೆ.

15 ದಿನಗಳಲ್ಲಿ ಡಿಜಿಟಲ್ ಖಾತಾ ವಿತರಣೆ: ಪ್ರಕ್ರಿಯೆ ವಿವರ

ಇ-ಸ್ವತ್ತು ದಾಖಲೆಗಳನ್ನು ತ್ವರಿತವಾಗಿ ವಿತರಿಸಲು ಕಾನೂನು ರೂಪಿಸಲಾಗಿದ್ದು, ಅರ್ಜಿ ಸಲ್ಲಿಸಿದ ಬಳಿಕ ನಿಗದಿತ ಅವಧಿಯಲ್ಲಿ ಖಾತಾ ದೊರೆಯಲಿದೆ.

ಸ್ಥಳ ಪರಿಶೀಲನೆ: ಅರ್ಜಿ ಸ್ವೀಕರಿಸಿದ ಕೂಡಲೇ, ಗ್ರಾಮ ಪಂಚಾಯಿತಿ ಗ್ರೇಡ್-1 ಅಥವಾ ಗ್ರೇಡ್-2 ಕಾರ್ಯದರ್ಶಿಗಳು 4 ಕರ್ತವ್ಯದ ದಿನಗಳ ಒಳಗಾಗಿ ಸ್ಥಳ ಪರಿಶೀಲನೆ ನಡೆಸಿ, ಅಗತ್ಯ ದಾಖಲೆಗಳನ್ನು ಪರಿಶೀಲಿಸಿ, ತಂತ್ರಾಂಶದಲ್ಲಿ ಮಾಹಿತಿಯನ್ನು ದಾಖಲಿಸಬೇಕು.
ಅನುಮೋದನೆ: ಈ ಮಾಹಿತಿಯನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ (PDO) ಸಲ್ಲಿಸಬೇಕು. ಪಿಡಿಓ ಅವರು ಎರಡು ದಿನಗಳಲ್ಲಿ ಪಂಚಾಯಿತಿ ಅಧ್ಯಕ್ಷರ ಅನುಮೋದನೆಗೆ ಸಲ್ಲಿಸಿ, ಪ್ರಸ್ತಾವನೆ ಸ್ವೀಕರಿಸಿದ 4 ದಿನದ ಒಳಗಾಗಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು.
ಖಾತಾ ವಿತರಣೆ: ಎಲ್ಲಾ ನಿಗದಿತ ದಾಖಲೆಗಳು ಸರಿಯಾಗಿದ್ದರೆ, 15 ದಿನಗಳ ಒಳಗೆ ಡಿಜಿಟಲ್ ಸಹಿ ಮಾಡಿದ ಇ-ಖಾತಾವನ್ನು ಅರ್ಜಿದಾರರಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.

 ಸಮಸ್ಯೆಗಳ ಪರಿಹಾರಕ್ಕೆ ಸಹಾಯವಾಣಿ ಮತ್ತು ಕಾಲ್‌ಸೆಂಟರ್

ಯಶವಂತಪುರದಲ್ಲಿ ಸ್ಥಾಪಿಸಲಾಗಿರುವ ಈ ಕಾಲ್‌ಸೆಂಟರ್‌ನ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆಯೊಂದಕ್ಕೆ ವಹಿಸಲಾಗಿದೆ. ತಾಂತ್ರಿಕ ಬೆಂಬಲ ನೀಡಲು ಮತ್ತು ಸೂಕ್ತ ಮಾರ್ಗದರ್ಶನ ಒದಗಿಸಲು ಅವರ ಸಹಾಯಕ್ಕಾಗಿ 34 ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು (PDO) ಕೂಡ ನಿಯೋಜಿಸಲಾಗಿದೆ. ಸಾರ್ವಜನಿಕರಿಗೆ ಪ್ರತಿದಿನ ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ಇ-ಸ್ವತ್ತು ದಾಖಲೆ ಪಡೆಯುವ ಕುರಿತು ಮಾರ್ಗದರ್ಶನ ಲಭ್ಯವಿರಲಿದೆ.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories