gram panchayat issues scaled

ನಿಮ್ಮ ಊರಿನ ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಕೆಲಸ ಆಗುತ್ತಿಲ್ಲವೇ? ಹೀಗೆ ದೂರು ನೀಡಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿ!

WhatsApp Group Telegram Group

ಮುಖ್ಯಾಂಶಗಳು

  • ಪಂಚಾಯಿತಿಗೆ ಬಾಯಿ ಮಾತಲ್ಲ, ಲಿಖಿತ ರೂಪದಲ್ಲಿ ದೂರು ನೀಡಿ.
  • ಕೆಲಸ ಮಾಡದಿದ್ದರೆ ತಾಲೂಕು, ಜಿಲ್ಲಾ ಪಂಚಾಯಿತಿಗೆ ಮೇಲ್ಮನವಿ ಸಲ್ಲಿಸಿ.
  • ಅಧಿಕಾರಿಗಳು ಲಂಚ ಕೇಳಿದರೆ ನೇರವಾಗಿ ಲೋಕಾಯುಕ್ತರಿಗೆ ದೂರು ನೀಡಿ.

ನಿಮ್ಮ ಊರಿನಲ್ಲಿ ರಸ್ತೆ ಸರಿಯಿಲ್ಲ, ಚರಂಡಿ ಕಟ್ಟಿಕೊಂಡಿದೆ, ಕುಡಿಯುವ ನೀರು ಬರ್ತಿಲ್ಲ ಅಂತ ಪಂಚಾಯಿತಿ ಸದಸ್ಯರಿಗೆ ನೂರು ಸಲ ಹೇಳಿದ್ರೂ ಕ್ಯಾರೇ ಅಂತಿಲ್ಲವಾ? ಎಷ್ಟೋ ಬಾರಿ ನಾವು ಬಾಯಿ ಮಾತಲ್ಲಿ ಹೇಳಿ ಸುಮ್ಮನಾಗಿ ಬಿಡುತ್ತೇವೆ. ಆದರೆ, ಹಳ್ಳಿಯ ಅಭಿವೃದ್ಧಿ ನಮ್ಮ ಧ್ವನಿಯಲ್ಲೇ ಅಡಗಿದೆ! ಪಂಚಾಯಿತಿ ಕಡೆಯಿಂದ ನಿಮ್ಮ ಊರಿನಲ್ಲಿ ಕೆಲಸ ಆಗಿಲ್ಲ ಅಂದ್ರೆ, ದೂರು ಯಾರಿಗೆ ಕೊಡಬೇಕು? ಹೇಗೆ ಕೊಡಬೇಕು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.

ಹಂತ 1: ಬಾಯಿ ಮಾತು ಬೇಡ, ಪತ್ರ ಬರೆಯಿರಿ!

ಬಾಯಿ ಮಾತಲ್ಲಿ ಹೇಳುವುದಕ್ಕಿಂತ, ಪತ್ರದ ಮೂಲಕ (Written Letter) ದೂರು ನೀಡುವುದು ನೂರು ಪಟ್ಟು ಹೆಚ್ಚು ಎಫೆಕ್ಟಿವ್. ನಿಮ್ಮ ಊರಿನಲ್ಲಿ ಏನು ಸಮಸ್ಯೆಯಿದೆ ಎಂಬುದರ ಒಂದು ಫೋಟೋ ತೆಗೆದುಕೊಳ್ಳಿ. ಆ ಫೋಟೋ ಲಗತ್ತಿಸಿ, ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಅಂದರೆ PDO (Panchayat Development Officer) ಅವರಿಗೆ ಒಂದು ದೂರಿನ ಪತ್ರ ಬರೆಯಿರಿ.

ಹಂತ 2: ಪಿಡಿಒ (PDO) ಕಡೆಯಿಂದ ಸ್ಪಂದನೆ ಸಿಗದಿದ್ದರೆ ಮುಂದೇನು?

ನೀವು PDO ಗೆ ಲೆಟರ್ ಕೊಟ್ಟ ಮೇಲೂ ಕೆಲಸ ಆಗಿಲ್ಲವಾ? ಸುಮ್ಮನೆ ಕೂರಬೇಡಿ. ಆ ಪತ್ರದ ಕಾಪಿಯನ್ನು ತೆಗೆದುಕೊಂಡು ನೇರವಾಗಿ ತಾಲೂಕು ಪಂಚಾಯಿತಿಗೆ ಹೋಗಿ. ಅಲ್ಲಿರುವ ಕಾರ್ಯನಿರ್ವಾಹಕ ಅಧಿಕಾರಿ ಅಥವಾ ಇಒ (EO – Executive Officer) ಅವರಿಗೆ ಮೇಲ್ಮನವಿ ದೂರು ನೀಡಿ.

ಹಂತ 3: ತಾಲೂಕಿನಲ್ಲೂ ನ್ಯಾಯ ಸಿಗದಿದ್ದರೆ?

ಸಾಮಾನ್ಯವಾಗಿ ತಾಲೂಕು ಮಟ್ಟದಲ್ಲಿ ನಿಮ್ಮ ಸಮಸ್ಯೆ ಬಗೆಹರಿಯುತ್ತದೆ. ಒಂದು ವೇಳೆ ಅಲ್ಲಿಯೂ ಕೆಲಸ ಆಗಿಲ್ಲ ಅಂದರೆ, ಜಿಲ್ಲಾ ಪಂಚಾಯಿತಿಯ ಸಿಇಒ (CEO – Chief Executive Officer) ಅವರ ಬಳಿ ಹೋಗಿ ಲೆಟರ್ ಕೊಡಿ. ಈ ಮೂರು ಹಂತಗಳನ್ನು ಫಾಲೋ ಮಾಡಿದರೆ ಖಂಡಿತಾ ನಿಮ್ಮ ಊರಿನ ಕೆಲಸ ಆಗೇ ಆಗುತ್ತದೆ.

ಹಂತ 4: ಲಂಚ ಕೇಳಿದರೆ ಏನು ಮಾಡಬೇಕು?

ಇದೆಲ್ಲದರ ನಡುವೆ, ಪಂಚಾಯಿತಿಯ ಯಾವುದೇ ಅಧಿಕಾರಿ ಅಥವಾ ಸಿಬ್ಬಂದಿ ನಿಮ್ಮ ಕೆಲಸ ಮಾಡಿಕೊಡಲು ಲಂಚ (Bribe) ಕೇಳಿದರೆ, ನೇರವಾಗಿ ಲೋಕಾಯುಕ್ತರಿಗೆ (Lokayukta) ಕಂಪ್ಲೇಂಟ್ ಮಾಡಿ. ಇದು ನಿಮ್ಮ ಹಕ್ಕು, ಯಾವತ್ತೂ ಬಿಟ್ಟುಕೊಡಬೇಡಿ!

ದೂರಿನ ಹಂತ (Level) ಅಧಿಕಾರಿ (Officer) ಏನು ಮಾಡಬೇಕು?
ಹಂತ 1: ಗ್ರಾಮ ಪಂಚಾಯಿತಿ PDO (ಅಭಿವೃದ್ಧಿ ಅಧಿಕಾರಿ) ಸಮಸ್ಯೆಯ ಬಗ್ಗೆ ಲಿಖಿತ ಪತ್ರ ನೀಡಿ ಸೀಲ್ ಪಡೆಯಿರಿ.
ಹಂತ 2: ತಾಲೂಕು ಪಂಚಾಯಿತಿ EO (ಕಾರ್ಯನಿರ್ವಾಹಕ ಅಧಿಕಾರಿ) PDO ಕೆಲಸ ಮಾಡದಿದ್ದಾಗ ದೂರು ನೀಡಿ.
ಹಂತ 3: ಜಿಲ್ಲಾ ಪಂಚಾಯಿತಿ CEO (ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ) ತಾಲೂಕು ಮಟ್ಟದಲ್ಲಿ ಸ್ಪಂದನೆ ಸಿಗದಿದ್ದಾಗ.
ಹಂತ 4: ಭ್ರಷ್ಟಾಚಾರ / ಲಂಚ ಲೋಕಾಯುಕ್ತ (Lokayukta) 🚨 ಅಧಿಕಾರಿಗಳು ಲಂಚ ಕೇಳಿದರೆ ನೇರ ದೂರು.

ಗಮನಿಸಿ: ನೀವು PDO ಗೆ ನೀಡುವ ದೂರಿನ ಪತ್ರದ ಜೆರಾಕ್ಸ್ ಕಾಪಿಯ (Xerox copy) ಮೇಲೆ ಕಡ್ಡಾಯವಾಗಿ ಪಂಚಾಯಿತಿ ಕಡೆಯಿಂದ ‘ಸ್ವೀಕರಿಸಲಾಗಿದೆ’ ಎಂಬ ಸೀಲು (Seal) ಮತ್ತು ಅಧಿಕಾರಿಯ ಸಹಿಯನ್ನು ಪಡೆದುಕೊಳ್ಳಿ. ಮುಂದೆ ಮೇಲಧಿಕಾರಿಗಳಿಗೆ ದೂರು ನೀಡಲು ಇದುವೇ ನಿಮ್ಮ ಬಳಿ ಇರುವ ಏಕೈಕ ಸಾಕ್ಷಿಯಾಗಿದೆ.

ಗ್ರಾಮ ಪಂಚಾಯಿತಿಗೆ ನೀಡುವ ಅಧಿಕೃತ ದೂರು ಪತ್ರದ ಮಾದರಿ

ಇಂದ,
ಲಿಂಗರಾಜ
#123, ವಾರ್ಡ್ #10
ಹೇರೂರ ಗ್ರಾಮ, ಹಾನಗಲ್ ತಾಲೂಕ.
ಹಾವೇರಿ ಜಿಲ್ಲೆ 581148
ಮೊಬೈಲ್ ಸಂಖ್ಯೆ: 99017 60108
ದಿನಾಂಕ: 02-04-2026
ಸ್ಥಳ: ಹೇರೂರ
ಗೆ,
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (PDO),
ಹೇರೂರ ಗ್ರಾಮ ಪಂಚಾಯಿತಿ,
ಹಾನಗಲ್ ತಾಲೂಕ.
ಹಾವೇರಿ ಜಿಲ್ಲೆ 581148
ವಿಷಯ: ನಮ್ಮ ಗ್ರಾಮದ/ವಾರ್ಡ್‌ನ ಮೂಲಭೂತ ಸೌಕರ್ಯಗಳ (ರಸ್ತೆ, ಚರಂಡಿ, ಕುಡಿಯುವ ನೀರು) ಸಮಸ್ಯೆಗಳನ್ನು ಕೂಡಲೇ ಬಗೆಹರಿಸುವಂತೆ ಆಗ್ರಹಿಸಿ ದೂರು.
ಮಾನ್ಯರೇ,
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ನಾವು ಹೇರೂರ ಗ್ರಾಮದ ವಾರ್ಡ್ #10 ರ ನಿವಾಸಿಗಳಾಗಿದ್ದು, ಕಳೆದ ಹಲವು ತಿಂಗಳುಗಳಿಂದ ನಮ್ಮ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಈ ಕೆಳಗಿನ ಗಂಭೀರ ಸಮಸ್ಯೆಗಳನ್ನು ಪ್ರತಿದಿನ ಎದುರಿಸುತ್ತಿದ್ದೇವೆ:
  1. ಹದಗೆಟ್ಟ ರಸ್ತೆಗಳು: ನಮ್ಮ ವಾರ್ಡ್‌ನ ಮುಖ್ಯ ರಸ್ತೆಗಳು ಸಂಪೂರ್ಣವಾಗಿ ಗುಂಡಿಬಿದ್ದಿದ್ದು, ಮಳೆಗಾಲದಲ್ಲಿ ಕೆಸರುಮಯವಾಗಿ ಶಾಲಾ ಮಕ್ಕಳು ಹಾಗೂ ವಯಸ್ಸಾದವರು ಓಡಾಡಲು ಪರದಾಡುವಂತಾಗಿದೆ.
  2. ಚರಂಡಿ ನಿರ್ವಹಣೆ ಇಲ್ಲ: ಚರಂಡಿಗಳನ್ನು ಸರಿಯಾಗಿ ಸ್ವಚ್ಛಗೊಳಿಸದ ಕಾರಣ ಕೊಳಚೆ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಇದರಿಂದ ವಿಪರೀತ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ.
  3. ಬೀದಿ ದೀಪಗಳಿಲ್ಲ: ನಮ್ಮ ಪ್ರದೇಶದ ಬಹುತೇಕ ಬೀದಿ ದೀಪಗಳು ಕೆಟ್ಟು ತಿಂಗಳುಗಳೇ ಕಳೆದರೂ ರಿಪೇರಿ ಮಾಡಿಲ್ಲ. ರಾತ್ರಿ ವೇಳೆ ಓಡಾಡುವುದು ಮಹಿಳೆಯರಿಗೆ ಮತ್ತು ಮಕ್ಕಳಿಗೆ ಅಪಾಯಕಾರಿಯಾಗಿದೆ.
  4. ಕುಡಿಯುವ ನೀರಿನ ಸಮಸ್ಯೆ: ಕುಡಿಯುವ ನೀರಿನ ಪೂರೈಕೆ ಸಮರ್ಪಕವಾಗಿ ಆಗುತ್ತಿಲ್ಲ, ನಲ್ಲಿಗಳಲ್ಲಿ ವಾರಕ್ಕೊಮ್ಮೆ ಮಾತ್ರ ನೀರು ಬಿಡಲಾಗುತ್ತಿದೆ.
ಈ ಬಗ್ಗೆ ಈಗಾಗಲೇ ಹಲವು ಬಾರಿ ಸ್ಥಳೀಯ ಪಂಚಾಯಿತಿ ಸದಸ್ಯರಿಗೆ ಹಾಗೂ ಸಿಬ್ಬಂದಿಗಳಿಗೆ ಬಾಯಿ ಮಾತಿನಲ್ಲಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಮಾನ್ಯ ಅಭಿವೃದ್ಧಿ ಅಧಿಕಾರಿಗಳಾದ ತಾವುಗಳು ಕೂಡಲೇ ಖುದ್ದಾಗಿ ನಮ್ಮ ವಾರ್ಡ್‌ಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಬೇಕು. ಹಾಗೂ, ಗ್ರಾಮ ಪಂಚಾಯಿತಿಯ ಅನುದಾನದಡಿ ಆದಷ್ಟು ಬೇಗ ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಡಬೇಕೆಂದು ಈ ಮೂಲಕ ಆಗ್ರಹಿಸುತ್ತಿದ್ದೇವೆ.
ಒಂದು ವೇಳೆ ಈ ಪತ್ರ ತಲುಪಿದ 15 ದಿನಗಳೊಳಗೆ ತಾವು ಯಾವುದೇ ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ನಾವು ಊರಿನ ಎಲ್ಲಾ ಗ್ರಾಮಸ್ಥರು ಸೇರಿ ತಾಲೂಕು ಪಂಚಾಯಿತಿ (EO) ಹಾಗೂ ಜಿಲ್ಲಾ ಪಂಚಾಯಿತಿ (CEO) ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಈ ಮೂಲಕ ಎಚ್ಚರಿಸುತ್ತಿದ್ದೇವೆ.

ನಮ್ಮ ಸಲಹೆ:

“ಈ ಪತ್ರವನ್ನು ಒಂದು ಬಿಳಿ ಹಾಳೆಯಲ್ಲಿ ಬರೆದು ಅಥವಾ ಪ್ರಿಂಟ್ ತೆಗೆದು, ಬ್ರಾಕೆಟ್ [...] ಇರುವ ಜಾಗದಲ್ಲಿ ನಿಮ್ಮ ಊರಿನ ಮಾಹಿತಿಯನ್ನು ತುಂಬಿ. ಕಡ್ಡಾಯವಾಗಿ 2 ಕಾಪಿಗಳನ್ನು (Xerox) ಮಾಡಿಕೊಳ್ಳಿ. ಪಂಚಾಯಿತಿಗೆ ಹೋಗಿ ಒರಿಜಿನಲ್ ಪತ್ರವನ್ನು ಕೊಟ್ಟು, ಜೆರಾಕ್ಸ್ ಕಾಪಿಯ ಮೇಲೆ ಪಂಚಾಯಿತಿಯ ‘ಸೀಲ್ ಮತ್ತು ಸಹಿ’ ಪಡೆದುಕೊಂಡು ನಿಮ್ಮ ಬಳಿಯೇ ಇಟ್ಟುಕೊಳ್ಳಿ. ಇದು ಮುಂದಿನ ಹೋರಾಟಕ್ಕೆ ನಿಮ್ಮ ಬಳಿಯಿರುವ ಬಹುದೊಡ್ಡ ಅಸ್ತ್ರ!”

ಕೇವಲ ಒಬ್ಬರೇ ಹೋಗಿ ಪತ್ರ ಕೊಡುವುದಕ್ಕಿಂತ, ನಿಮ್ಮ ಊರಿನಲ್ಲಿ ಸಮಸ್ಯೆಯಿಂದ ತೊಂದರೆಗೀಡಾಗಿರುವ 10-15 ಜನರನ್ನು ಒಟ್ಟುಗೂಡಿಸಿಕೊಂಡು ಹೋಗಿ. ಪತ್ರದ ಕೆಳಗಡೆ ಎಲ್ಲರ ಸಹಿ (Signatures) ಹಾಕಿ, ಸಮಸ್ಯೆಯ ಫೋಟೋಗಳನ್ನು ಲಗತ್ತಿಸಿ ದೂರು ನೀಡಿ. ಗುಂಪಾಗಿ ಹೋದಾಗ ಅಧಿಕಾರಿಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ ಮತ್ತು ಕೆಲಸ ಬಹಳ ಬೇಗನೆ ಆಗುತ್ತದೆ. ನಮ್ಮ ಊರು, ನಮ್ಮ ಪಂಚಾಯಿತಿ, ನಮ್ಮ ಹಕ್ಕು ಅನ್ನುವುದನ್ನು ಮರೆಯದಿರಿ!

ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs)

1. ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡಿಕೊಡದಿದ್ದರೆ ಮೊದಲು ಯಾರಿಗೆ ದೂರು ನೀಡಬೇಕು?
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೆಲಸ ಆಗದಿದ್ದರೆ, ನೀವು ಲಿಖಿತ ರೂಪದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಅವರಿಗೆ ದೂರನ್ನು ನೀಡಬೇಕು.
2. ಸರ್ಕಾರಿ ಕೆಲಸ ಮಾಡಿಕೊಡಲು ಅಧಿಕಾರಿಗಳು ಲಂಚ ಕೇಳಿದರೆ ಎಲ್ಲಿ ಕಂಪ್ಲೇಂಟ್ ಮಾಡಬೇಕು?
ಯಾವುದೇ ಪಂಚಾಯಿತಿ ಅಧಿಕಾರಿ ಅಥವಾ ಸಿಬ್ಬಂದಿ ಲಂಚಕ್ಕೆ ಬೇಡಿಕೆ ಇಟ್ಟರೆ, ನೀವು ನೇರವಾಗಿ ಭ್ರಷ್ಟಾಚಾರ ನಿಗ್ರಹ ದಳ ಅಥವಾ ಲೋಕಾಯುಕ್ತರಿಗೆ (Lokayukta) ದೂರನ್ನು ಸಲ್ಲಿಸಬಹುದು.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿ ಬಿತ್ತರಿಸುವುದಿಲ್ಲ.



WhatsApp Group Join Now
Telegram Group Join Now

Popular Categories