ಈ ವಿಷಯಕ್ಕೆ ಸಂಬಂಧಿಸಿದಂತೆ, ಸರ್ಕಾರದ ಉಲ್ಲೇಖ-1ರ ಪತ್ರದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಕೆಎಸ್‌ಆರ್‌ಪಿ ಘಟಕದ 1500 ಸೈಆರ್‌ಪಿಸಿ ಹುದ್ದೆಗಳನ್ನು ಹಾಗೂ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (ಸಿಎಆರ್/ಡಿಎಆರ್) -2000 ಹುದ್ದೆಗಳನ್ನು ನೇರ ನೇಮಕಾತಿಯ ಮೂಲಕ ಭರ್ತಿಮಾಡಲು ಅನುಮತಿ ನೀಡಿದ್ದು, ಅದರಂತೆ ಇಲಾಖೆಯ ರಿಕ್ತವಿದ್ದ ಎಪಿಸಿ ಮತ್ತು ಸೈ.ಆರ್‌ಪಿಸಿ ಹುದ್ದೆಗಳನ್ನು ಭರ್ತಿಮಾಡಲು ಕ್ರಮ ಕೈಗೊಳ್ಳುವಂತೆ ಉಲ್ಲೇಖ 3 ಮತ್ತು 4ರ ಪತ್ರಗಳಲ್ಲಿ ಕೋರಿ ಜಿಲ್ಲಾ/ಘಟಕವಾರು ಹುದ್ದೆಗಳ ಸಂಖ್ಯಾವಾರು ವಿವರಗಳನ್ನು ಪ್ರಸ್ತಾಪಿಸಲಾಗಿತ್ತು. ಮೀಸಲಾತಿಯ ಸಂಬಂಧ ಸರ್ಕಾರವು ನೀಡಿದ ನಿರ್ಬಂಧದಿಂದಾಗಿ ಈವರೆಗೂ ನೇಮಕಾತಿ ಅಧಿಸೂಚನೆ ಈ ಮಧ್ಯೆ ಪರಿಶಿಷ್ಟ ಜಾತಿಯ ಒಳ ಹೊರಡಿಸಿರುವುದಿಲ್ಲ.ಸರ್ಕಾರದ ಅಧಿಕೃತ ಸುತ್ತೋಲೇ ಈ ಲೇಖನದ ಕೊನೆಯ ಹಂತದಲ್ಲಿದೆ ಗಮನವಿಟ್ಟು ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಪ್ರಸ್ತುತ ಸರ್ಕಾರವು ಉಲ್ಲೇಖ-2ರಲ್ಲಿ ಪರಿಶಿಷ್ಟ ಜಾತಿಯ ಒಳಮೀಸಲಾತಿಗಳನ್ನು ಗುರುತಿಸಿ ಪರಿಷ್ಕೃತ ರೋಸ್ಟರ್ ಬಿಂದುಗಳನ್ನು ಗುರುತಿಸಿ ಆದೇಶಿಸಿರುತ್ತದೆ. ಈ ಮಧ್ಯೆ ಕೆಲವು ಘಟಕಗಳಲ್ಲಿ ಈ ಹಿಂದೆ ಪ್ರಸ್ತಾಪಿಸಿರುವ ಸಂಖ್ಯಾಬಲಗಳಲ್ಲಿ ಬದಲಾವಣೆಯಾಗಿರುತ್ತದೆ. ಆದ್ದರಿಂದ ಸರ್ಕಾರವು ಹೊರಡಿಸಿರುವ ಪರಿಷ್ಕೃತ ರೋಸ್ಮರ್ ಬಿಂದುಗಳಡಿಯಲ್ಲಿ ಕ್ರೀಡಾ ಮೀಸಲಾತಿ ಸೇರಿದಂತೆ ಸಂಬಂಧಪಟ್ಟ ಘಟಕಗಳಿಂದ ವರ್ಗಿಕರಣವನ್ನು ಪಡೆದು ಈ ಕೆಳಗಿನ ವೃಂದದ ಹುದ್ದೆಗಳನ್ನು ( ಹಿಂದಿನ ಬ್ಯಾಕ್‌ಲಾಗ್ ಹುದ್ದೆಗಳು ಸೇರಿದಂತೆ) ನೇರ ನೇಮಕಾತಿಯ ಮೂಲಕ ಭರ್ತಿಮಾಡಲು ಮುಂದಿನ ಕ್ರಮಕ್ಕಾಗಿ ಮರು ಹಂಚಿಕೆಮಾಡಲಾಗಿರುತ್ತದೆ ಹಾಗೂ ಸಿವಿಲ್ ಮತ್ತು ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್‌ಗಳ ಘಟಕವಾರು ಹುದ್ದೆಗಳ ಹಂಚಿಕೆಯ ವಿವರವನ್ನು ಅನುಬಂಧ ಅ & ಆ ಗಳಲ್ಲಿ ಲಗತ್ತಿಸಿರುತ್ತದೆ.





ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.