ರಾಜ್ಯದ ವಾಹನ ಚಾಲಕರಿಗೆ ಒಂದು ಗುಡ್ ನ್ಯೂಸ್. ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ವಿಧಿಸಲಾದ ದಂಡವನ್ನು (ಟ್ರಾಫಿಕ್ ಫೈನ್) ಪಾವತಿ ಮಾಡುವಾಗ 50 ಶೇಕಡಾ ರಿಯಾಯಿತಿ ನೀಡುವಂತೆ ರಾಜ್ಯ ಸರ್ಕಾರವು ಆದೇಶಿಸಿದೆ. ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್ ವ್ಯವಸ್ಥೆಯ ಮೂಲಕ ದಾಖಲಾಗಿರುವ ಬಾಕಿ ಉಳಿದಿದ್ದ ದಂಡದ ಪ್ರಕರಣಗಳಿಗೆ ಈ ರಿಯಾಯಿತಿ ಅನ್ವಯವಾಗುತ್ತದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈ ರಿಯಾಯಿತಿ ಯೋಜನೆಯು ಆಗಸ್ಟ್ 23, 2025 ರಿಂದ ಸೆಪ್ಟೆಂಬರ್ 12, 2025 ವರೆಗಿನ ಕಾಲವಧಿಗೆ ಮಾತ್ರ ಸೀಮಿತವಾಗಿದೆ. ಈ 21 ದಿನಗಳ ಅವಧಿಯೊಳಗೆ ದಂಡವನ್ನು ಪಾವತಿಸುವ ವಾಹನ ಚಾಲಕರು ಮೂಲ ದಂಡದ ಅರ್ಧದಷ್ಟು ಮಾತ್ರ ಪಾವತಿಸಿದರೆ ಸಾಕು, ಅವರ ಪ್ರಕರಣವನ್ನು ತೀರ್ಮಾನಿಸಲಾಗುವುದು.
ರಾಜ್ಯ ಸರ್ಕಾರದ ಆರ್ಥಿಕ ಇಲಾಖೆಯು ಆಗಸ್ಟ್ 2 ಮತ್ತು ಆಗಸ್ಟ್ 16 ರಂದು ನೀಡಿದ ಸಮ್ಮತಿಯ ನಂತರ ಈ ಆದೇಶವನ್ನು ಹೊರಡಿಸಲಾಗಿದೆ. ಇದು ಪೊಲೀಸ್ ಇಲಾಖೆಯ ಇ-ಚಲನ್ ವ್ಯವಸ್ಥೆಯಲ್ಲಿ ದಾಖಲಾಗಿರುವ ಪ್ರಕರಣಗಳಿಗೆ ಮಾತ್ರ ಅನ್ವಯಿಸುತ್ತದೆ ಮತ್ತು ಇತರ ರೀತಿಯ ದಂಡಗಳಿಗೆ ಈ ರಿಯಾಯಿತಿ ಸೌಲಭ್ಯ ಲಭ್ಯವಿರುವುದಿಲ್ಲ.
ಈ ನಿರ್ಧಾರವು ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ದಂಡದ ಬಾಕಿಗಳನ್ನು ಸುಲಭವಾಗಿ ತೀರಿಸಿಕೊಳ್ಳಲು ಅವಕಾಶ ಮಾಡಿಕೊಡುವ ಉದ್ದೇಶದಿಂದ ಕೈಗೊಳ್ಳಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ರಿಯಾಯಿತಿ ಅವಧಿಯನ್ನು ಮುಂಚಿತವಾಗಿ ಘೋಷಿಸಿರುವುದರಿಂದ, ಬಾಕಿ ದಂಡವಿದ್ದ ಎಲ್ಲಾ ಚಾಲಕರು ಈ ಸವಲತ್ತನ್ನು ಪೂರ್ಣವಾಗಿ ಬಳಸಿಕೊಳ್ಳಲು ಸಾಕಷ್ಟು ಸಮಯ ಪಡೆಯುತ್ತಾರೆ.


ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.