6f0678f7 22aa 4045 ae73 b9e0301aed25 optimized 300

ವಾಹನ ತಪಾಸಣೆ ವೇಳೆ  ಸಾರ್ವಜನಿಕರ ಹತ್ತಿರ ಸೌಜನ್ಯದಿಂದ ವರ್ತಿಸಿ: ರಾಜ್ಯದ ಎಲ್ಲಾ ಪೊಲೀಸರಿಗೆ ಖಡಕ್ ಆದೇಶ.!

Categories:
WhatsApp Group Telegram Group
ಮುಖ್ಯಾಂಶಗಳು (Highlights)
  • ವಾಹನ ತಪಾಸಣೆ ವೇಳೆ ಪೊಲೀಸರು ಸಭ್ಯವಾಗಿ ವರ್ತಿಸುವುದು ಇನ್ಮುಂದೆ ಕಡ್ಡಾಯ.
  • ಚಾಲಕರ ಮೇಲೆ ಹಲ್ಲೆ, ಕೆಟ್ಟ ಪದ ಬಳಕೆಗೆ ಅಧಿಕಾರಿಗಳ ಮೇಲೆ ಕ್ರಮ.
  • ದೌರ್ಜನ್ಯ ತಡೆಯಲು ADGP ಹಿತೇಂದ್ರ ಅವರಿಂದ ರಾಜ್ಯಾದ್ಯಂತ ಖಡಕ್ ಆದೇಶ.

ರಸ್ತೆಯಲ್ಲಿ ಹೋಗುವಾಗ ಪೊಲೀಸರು ಕೈ ತೋರಿಸಿದರೆ ಸಾಕು, ಎಷ್ಟೋ ಜನರಿಗೆ ಎದೆ ಬಡಿತ ಜಾಸ್ತಿಯಾಗುತ್ತದೆ. ದಾಖಲೆಗಳು ಸರಿಯಿದ್ದರೂ ಕೆಲವು ಪೊಲೀಸ್ ಸಿಬ್ಬಂದಿಯ ಒರಟು ವರ್ತನೆ, ಅವಾಚ್ಯ ಶಬ್ದಗಳ ಬಳಕೆ ಅಥವಾ ದೌರ್ಜನ್ಯಕ್ಕೆ ಸಾಮಾನ್ಯ ಜನರು ಹೈರಾಣಾಗುತ್ತಿದ್ದರು. ಆದರೆ ಇನ್ಮುಂದೆ ಇಂತಹ ‘ಖಾಕಿ ದೌರ್ಜನ್ಯ’ ನಡೆಯಲ್ಲ! ರಾಜ್ಯ ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ (ADGP) ಆರ್. ಹಿತೇಂದ್ರ ಅವರು ರಾಜ್ಯದ ಎಲ್ಲಾ ಪೊಲೀಸರಿಗೆ ಹೊಸದೊಂದು ಖಡಕ್ ಆದೇಶ ಹೊರಡಿಸಿದ್ದಾರೆ.

ಏನಿದೆ ಆದೇಶದಲ್ಲಿ..?

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ದೂರುದಾರರ ಅರ್ಜಿಯಲ್ಲಿ ರಾಜ್ಯ ಪೊಲೀಸ್ ಇಲಾಖೆಯು ಶಿಸ್ತಿನ ಇಲಾಖೆಯಾಗಿದ್ದು, ಕೆಲವು ಅಧಿಕಾರಿ ಸಿಬ್ಬಂದಿಗಳು ತೋರುತ್ತಿರುವ ದುರ್ನಡತೆ, ಅಧಿಕಾರ ದುರ್ಬಳಕೆಯಿಂದ ಸಂಪೂರ್ಣ ಪೊಲೀಸ್ ಇಲಾಖೆಯ ಗೌರವಕ್ಕೆ ಧಕ್ಕೆ ಉಂಟಾಗುತ್ತಿರುವುದು ಸಾರ್ವಜನಿಕರ ಗಮನಕ್ಕೆ ಬಂದಿರುತ್ತದೆ. ಈ ಕುರಿತು ಕಾಲಕಾಲಕ್ಕೆ ಪೊಲೀಸ್ ಇಲಾಖೆಯಿಂದ ಹಲವಾರು ಸುತ್ತೋಲೆ, ಜ್ಞಾಪನಗಳನ್ನು ಹೊರಡಿಸಿದ್ದರೂ ಸಹ ಕೆಲವು ಪೊಲೀಸ್ ಸಿಬ್ಬಂದಿಗಳು ವಾಹನ ತಪಾಸಣಾ ಸಂದರ್ಭದಲ್ಲಿ ವಾಹನ ಚಾಲಕರ ಮೇಲೆ ದೌರ್ಜನ್ಯ, ಹಲ್ಲೆ, ಕಿರುಕುಳ, ಆವಹೇಳನಕಾರಿ, ಅವಾಚ್ಯ ಶಬ್ದಗಳ ಬಳಕೆ ಮಾಡಿ ಸಾರ್ವಜನಿಕ ಸ್ಥಳಗಳಲ್ಲಿ ವಾಗ್ವಾದಕ್ಕಿಳಿದು ಅವಮಾನ ಮಾಡುವಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ವರದಿಯಾಗುತ್ತಿರುವುದು ಕಂಡು ಬಂದಿರುತ್ತದೆ.

ಈ ಕುರಿತು ಕೆಲವು ಘಟನೆಗಳು ಮಾಧ್ಯಮಗಳಲ್ಲಿ ಜಾಲತಾಣಗಳಲ್ಲಿ ಹರದಾಡಿದ್ದು ಅದರಲ್ಲಿ ಮಂಡ್ಯ ಜಿಲ್ಲೆಯಲ್ಲಿ ಸಂಚಾರಿ ಪೊಲೀಸರು ವಾಹನ ತಪಾಸಣಾ ಸಂದರ್ಭದಲ್ಲಿ ಮಗು ಮೃತಪಟ್ಟ ಪ್ರಕರಣ, ವಿಜಯನಗರ ಜಿಲ್ಲೆ ಕೂಡ್ಲಿಗಿಯಲ್ಲಿ ಸಾರಿಗೆ ಬಸ್ ಚಾಲಕನ ಮೇಲೆ ಪೊಲೀಸ್ ಪೇದೆಯಿಂದ ನಡೆದ ಹಲ್ಲೆ, ಚಿತ್ರದುರ್ಗದಲ್ಲಿ ವಾಹನ ಪರಿಶೀಲನೆ ವೇಳೆ ಆಟೋ ಚಾಲಕನಿಗೆ ಪೊಲೀಸ್ ಸಿಬ್ಬಂದಿ ಕಿರುಕುಳ ನೀಡಿದ್ದರಿಂದ ಮನನೊಂದ ಚಾಲಕ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ, ಸಂಡೂರಿನಲ್ಲಿ ಲಾರಿ ಚಾಲಕನ ಮೇಲೆ ಪೊಲೀಸ್ ಸಿಬ್ಬಂದಿಯೊಬ್ಬರು ದೌರ್ಜನ್ಯ ವೆಸಗಿದ ಘಟನೆ, ಇಂತಹ ಪ್ರಕರಣಗಳು ದಿನನಿತ್ಯ ಮರುಕಳಿಸುತ್ತಿದ್ದು ಸಾವರ್ಜನಿಕರು ರಾಜ್ಯ ಪೊಲೀಸ್ ಇಲಾಖೆಯನ್ನು ಅಗೌರವದಿಂದ ನೋಡುವಂತಾಗುತ್ತಿದೆ. ಈ ಬಗ್ಗೆ ಸೂಕ್ತ ನಿರ್ದೇಶನನೀಡುವಂತೆ ಆಗತ್ಯ ಕ್ರಮ ಕೈಗೊಳ್ಳುವಂತೆ ಕೋರಿರುತ್ತಾರೆ.

ಆದ್ದರಿಂದ ಪೊಲೀಸ್ ಸಿಬ್ಬಂದಿಗಳು ದಂಡದ ಮೊತ್ತವನ್ನು ವಸೂಲಿ ಮಾಡುವಾಗ ಸಾರ್ವಜನಿಕರೊಂದಿಗೆ ಸೌಜನ್ಯದಿಂದ, ವಾಹನ ಚಾಲಕರೊಂದಿಗೆ ಗೌರವದಿಂದ ವರ್ತಿಸುವಂತೆ ಹಾಗೂ ಸಾವರ್ಜನಿಕರ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ, ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಈ ಮೂಲಕ ಸೂಚಿಸಲಾಗಿದೆ.

WhatsApp Image 2026 01 04 at 1.02.48 PM

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories