WhatsApp Image 2025 10 14 at 2.09.57 PM

ಜಾತಿಗಣತಿ ಮೇಲ್ವಿಚಾರಕರಿಗೆ ಭರ್ಜರಿ ಗುಡ್ ನ್ಯೂಸ್ ಗೌರವಧನ ಬಿಡುಗಡೆಗೆ ರಾಜ್ಯ ಸರ್ಕಾರದ ಮಹತ್ವದ ಆದೇಶ.!

WhatsApp Group Telegram Group

ಕರ್ನಾಟಕ ರಾಜ್ಯದಲ್ಲಿ ಬಹುನಿರೀಕ್ಷಿತ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ (ಜಾತಿಗಣತಿ) ಕಾರ್ಯವು ಭರದಿಂದ ಸಾಗಿದೆ. ಈ ಪ್ರಮುಖ ಸಮೀಕ್ಷೆಯಲ್ಲಿ ಶ್ರಮಿಸುತ್ತಿರುವ ಸಮೀಕ್ಷಾದಾರರು ಮತ್ತು ಮೇಲ್ವಿಚಾರಕರಿಗೆ ರಾಜ್ಯ ಸರ್ಕಾರವು ಸಂತಸದ ಸುದ್ದಿಯನ್ನು ನೀಡಿದೆ. ಸಮೀಕ್ಷೆಗಾಗಿ ಗೌರವಧನವನ್ನು ನಿಗದಿಪಡಿಸಿ ಸರ್ಕಾರವು ಅಧಿಕೃತವಾಗಿ ಆದೇಶ ಹೊರಡಿಸಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಈ ಬಗ್ಗೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಕಾರ್ಯದರ್ಶಿಗಳು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲಿ, ಆಯೋಗದಿಂದ ನಡೆಸಲಾಗುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ತೊಡಗಿರುವ ಸಮೀಕ್ಷಾದಾರರು ಮತ್ತು ಮೇಲ್ವಿಚಾರಕರಿಗೆ ನೀಡಬೇಕಾದ ಗೌರವಧನದ ಮೊತ್ತವನ್ನು ಸ್ಪಷ್ಟಪಡಿಸಲಾಗಿದೆ.

ಗೌರವಧನದ ವಿವರಗಳು:

ಸಮೀಕ್ಷಾದಾರರಿಗೆ: ಲಮ್‌ಸಮ್‌ (Lump-sum) ಮೊತ್ತ ರೂ. 5,000 ಮತ್ತು ಪ್ರತಿ ಮನೆ ಸಮೀಕ್ಷೆಗೆ ರೂ. 100 ರಂತೆ ಗೌರವಧನ ನಿಗದಿಪಡಿಸಲಾಗಿದೆ.

ಮೇಲ್ವಿಚಾರಕರಿಗೆ: ಒಟ್ಟು ರೂ. 10,000 ಗೌರವಧನವನ್ನು ನಿಗದಿಪಡಿಸಲಾಗಿದೆ.

ಸಮೀಕ್ಷಾದಾರರಿಗೆ ಈಗಾಗಲೇ ಮೊದಲ ಕಂತಿನಲ್ಲಿ ತಲಾ ರೂ. 5,000 ದಂತೆ ಗೌರವಧನ ಪಾವತಿಸಲು ಅನುದಾನ ಬಿಡುಗಡೆ ಮಾಡಲಾಗಿದೆ. ಸಮೀಕ್ಷಾದಾರರಿಗೆ ಉಳಿದ ಮೊತ್ತ ಮತ್ತು ಮೇಲ್ವಿಚಾರಕರಿಗೆ ನಿಗದಿಪಡಿಸಿದ ಒಟ್ಟು ಗೌರವಧನವನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಬೇಕಿದೆ. ಒಂದು ಬ್ಲಾಕ್‌ಗೆ ಒಂದಕ್ಕಿಂತ ಹೆಚ್ಚು ಸಮೀಕ್ಷಾದಾರರನ್ನು ನೇಮಿಸಿದ್ದರೆ, ಪ್ರತಿ ಬ್ಲಾಕ್‌ಗೆ ನಿಗದಿಪಡಿಸಿದ ಲಮ್‌ಸಮ್‌ ಮೊತ್ತವನ್ನು ಸಮೀಕ್ಷಾದಾರರ ನಡುವೆ ವಿಭಜಿಸಿ ನೀಡಲು ಆದೇಶಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

WhatsApp Image 2025 10 14 at 11.16.01 AM
WhatsApp Image 2025 10 14 at 11.16.02 AM
WhatsApp Image 2025 09 05 at 11.51.16 AM 1

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

WhatsApp Group Join Now
Telegram Group Join Now

Popular Categories