ಶ್ರಾವಣ ಶುರುವಾದಂತೆ ಹಬ್ಬಗಳ ಕಾಲ ಹೆಚ್ಚಾಗಿರುತ್ತೆ, ಎಲ್ಲೆಡೆ ಒಂದು ವಿಶೇಷ ಉಲ್ಲಾಸದ ವಾತಾವರಣ ಸೃಷ್ಟಿಯಾಗುತ್ತದೆ.ಇದೆ ಸಮಯದಲ್ಲಿ ನವರಾತ್ರಿ ಮತ್ತು ದಸರಾ ಮುಖ್ಯವಾಗಿ ಆಚರಿಸಲ್ಪಡುವ ಹಬ್ಬಗಳು. ಈ ವರ್ಷ ದಸರಾವನ್ನು ಅಕ್ಟೋಬರ್ 2 ರಿಂದ ಪ್ರಾರಂಭವಾಗುತ್ತದೆ. ಇದು ಗುರುವಾರ ಬರುತ್ತಿರುವುದರಿಂದ, ಬಹಳಷ್ಟು ರಾಜ್ಯಗಳಲ್ಲಿ ಶಾಲೆ ಮತ್ತು ಕಾಲೇಜುಗಳಿಗೆ ಸ್ವಲ್ಪ ದಿನಗಳ ಕಾಲ ರಜೆಯನ್ನು ಘೋಷಿಸುವ ಸಾಧ್ಯತೆ ಇದೆ. ಕೆಲವು ರಾಜ್ಯಗಳಲ್ಲಿ ಇದು 9 ದಿನಗಳವರೆಗೂ ವಿಸ್ತರಣೆಯಾಗಬಹುದು, ಆದರೆ ಅದು ರಾಜ್ಯದ ನಿಯಮಗಳ ಮೇಲೆ ಪ್ರಭಾವ ಬೀರುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈ ರಜೆಗಳು ಮಕ್ಕಳಿಗೆ ಕೇವಲ ಆಟ- ಪಾಠದಿಂದ ವಿಶ್ರಾಂತಿ ನೀಡುವುದಲ್ಲ, ಅದರ ಬದಲಿಗೆ ಸ್ನೇಹಿತರು, ಬಂದು – ಬಳಗ ಕುಟುಂಬದೊಂದಿಗೆ ಸಮಯ ಕಳೆಯಲು, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡುತ್ತವೆ. ಹಬ್ಬದ ಸಮಯದಲ್ಲಿ ದೇವಾಲಯಗಳು, ಮೆರವಣಿಗೆಗಳು ಮತ್ತು ಸಾಂಸ್ಕೃತಿಕ ಉತ್ಸವಗಳು ನಡೆಯುತ್ತವೆ, ಇವುಗಳು ಮಕ್ಕಳ ಮನಸ್ಸಿಗೆ ಹಿತ ನೀಡುತ್ತವೆ.
ಕೆಲವು ರಾಜ್ಯಗಳ ಪ್ರಕಾರ ರಜೆಯ ವಿವರಗಳು:
– ಉತ್ತರ ಪ್ರದೇಶ: ದಸರಾ ಸಮಯದಲ್ಲಿ ಶಾಲೆಗಳಿಗೆ ಸುಮಾರು 9 ದಿನಗಳ ಕಾಲ ರಜೆ ಕೊಡಲಾಗುತ್ತದೆ. ನವರಾತ್ರಿಯಿಂದ ಆರಂಭವಾಗಿ ವಿಜಯದಶಮಿಯವರೆಗೆ ಇದು ವಿಸ್ತರಣೆಯಾಗಬಹುದು.
– ಬಿಹಾರ: ರಾಜ್ಯ ಸರ್ಕಾರದ ಆದೇಶದಂತೆ, ಶಾಲಾ-ಕಾಲೇಜುಗಳಿಗೆ ಹಬ್ಬದ ಸಮಯದಲ್ಲಿ ಹೆಚ್ಚಿನ ದಿನಗಳ ಕಾಲ ರಜೆ ಇರುತ್ತದೆ, ಇದು ಮಕ್ಕಳಿಗೆ ಹಬ್ಬದ ಆಚರಣೆಗೆ ಅನು ಮಾಡಿ ಕೊಡಲಾಗುತ್ತದೆ.
– ಮಧ್ಯಪ್ರದೇಶ: ಇಲ್ಲೂ ಸಹ ಹೆಚ್ಚಿನ ಕಾಲದ ರಜೆಗಳನ್ನು ಘೋಷಿಸಲಾಗುತ್ತದೆ, ವಿಶೇಷವಾಗಿ ದುರ್ಗಾ ಪೂಜೆ ಮತ್ತು ದಸರಾ ಸಮಯದಲ್ಲಿ ರಜೆ ಕೊಡುತ್ತಾರೆ.
– ರಾಜಸ್ಥಾನ ಮತ್ತು ಛತ್ತೀಸ್‌ಗಢ: ಈ ಎರಡು ರಾಜ್ಯಗಳಲ್ಲಿ ನವರಾತ್ರಿ ಮತ್ತು ದಸರಾ ಸಂದರ್ಭದಲ್ಲಿ ಶಾಲೆಗಳಿಗೆ ರಜೆಯನ್ನು ಘೋಷಿಸುತ್ತಾರೆ, ಆದರೆ ನಿಖರವಾದ ಅವಧಿಯನ್ನು ಸರ್ಕಾರದ ಅಧಿಸೂಚನೆಯಲ್ಲಿ ತಿಳಿಯುತ್ತದೆ.
– ಪಶ್ಚಿಮ ಬಂಗಾಳ: ದುರ್ಗಾ ಪೂಜೆಯ ಸಮಯದಲ್ಲಿ ಶಾಲೆಗಳಿಗೆ ಕೆಲವು ದಿನಗಳ ಕಾಲ ರಜೆ ಇರುತ್ತದೆ, ಇದು ಸಾಮಾನ್ಯವಾಗಿ ನವರಾತ್ರಿಯ ಕೊನೆಯ ದಿನಗಳಿಂದ ಆರಂಭವಾಗುತ್ತದೆ.
– ಕರ್ನಾಟಕ: ದಸರಾ ಕರ್ನಾಟಕದ ನದ ಹಬ್ಬವಾಗಿರುವುದರಿಂದ ಇಲ್ಲಿ ದಸರಾ ರಜೆ ಸಾಮಾನ್ಯವಾಗಿ 1 ರಿಂದ 3 ದಿನಗಳವರೆಗೆ ಇರುತ್ತದೆ. ಆದರೆ ರಾಜ್ಯ ಸರ್ಕಾರದ ಅಧಿಕೃತ ಆದೇಶಕ್ಕಾಗಿ ಕಾಯಬೇಕು, ಏಕೆಂದರೆ ಕೆಲವೊಮ್ಮೆ ಇದು ವಿಸ್ತರಣೆಯಾಗಬಹುದು.
ಇದಲ್ಲದೆ, ತೆಲಂಗಾಣ ಮತ್ತು ಆಂಧ್ರಪ್ರದೇಶದಂತಹ ರಾಜ್ಯಗಳಲ್ಲೂ 9 ದಿನಗಳ ರಜೆಯ ಸಾಧ್ಯತೆ ಇದೆ, ಆದರೆ ಅದು ಸ್ಥಳೀಯ ನಿಯಮಗಳನ್ನು ಅನುಸರಿಸಿ ಬದಲಾಗಬಹುದು. ರಜೆಯ ಅವಧಿ ಸಾಮಾನ್ಯವಾಗಿ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2 ರವರೆಗೆ ನವರಾತ್ರಿಯೊಂದಿಗೆ ಸಂಬಂಧಿಸಿದ್ದು, ಆದರೆ ಪ್ರತಿ ರಾಜ್ಯದ ಶಿಕ್ಷಣ ಇಲಾಖೆಯ ಅಧಿಸೂಚನೆಯನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಿ.
ಈ ದೀರ್ಘ ಕಾಲದ ರಜೆಯ ಸಮಯದಲ್ಲಿ, ಮಕ್ಕಳುನ್ನು ಸಂಪೂರ್ಣವಾಗಿ ಆಟದಲ್ಲಿ ಮುಳುಗಿ ಹೋಗದಂತೆ ನೋಡಿಕೊಳ್ಳುವುದು ತಂದೆ ತಾಯಿಗಳು ಕರ್ತವ್ಯ. ಪೋಷಕರು ಮಕ್ಕಳೊಂದಿಗೆ ಹಬ್ಬದ ಮಹತ್ವ ಮತ್ತು ಇತಿಹಾಸದ ಬಗ್ಗೆ ತಿಳಿಸಿ, ಅವರನ್ನು ಆಸಕ್ತಿಯುಳ್ಳ ಚಟುವಟಿಕೆಗಳಲ್ಲಿ ತೊಡಗಿಸಿ. ಉದಾಹರಣೆಗೆ, ಚಿತ್ರಕಲೆ, ಪುಸ್ತಕ ಓದುವುದು ಅಥವಾ ಸಾಂಸ್ಕೃತಿಕ ನೃತ್ಯಗಳನ್ನು ಅಭ್ಯಾಸ ಮಾಡುವುದು. ಮೊಬೈಲ್ ಮತ್ತು ಟಿವಿ ಬಳಕೆಯನ್ನು ಮಿತಿಗೊಳಿಸಿ, ಬದಲಿಗೆ ಕುಟುಂಬದೊಂದಿಗೆ ಹೊರಗಡೆ ಹೋಗಿ ಸಮಯ ಕಳೆಯಿರಿ. ಇದರಿಂದ ಮಕ್ಕಳು ಹಬ್ಬದ ಆನಂದವನ್ನು ಪಡೆಯುವುದಲ್ಲದೆ, ಚುರುಕಾಗಿ ಅಧ್ಯಯನದ ದಿನಚರಿಯನ್ನೂ ಕಾಪಾಡಿಕೊಳ್ಳುತ್ತಾರೆ.
ಒಟ್ಟಾರೆಯಾಗಿ, ಈ ರಜಾ ದಿನಗಳು ವಿದ್ಯಾರ್ಥಿಗಳಿಗೆ ಒಂದು ಉತ್ತಮ ಅವಕಾಶವಾಗಿ ಪರಿಣಮಿಸಬೇಕು. ಹಬ್ಬದ ಶುಭಾಶಯಗಳು!
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.