WhatsApp Image 2026 01 10 at 11.51.05 AM

ರಾಜ್ಯದ ನಿವೃತ್ತ ಶಾಲಾ ಶಿಕ್ಷಕರು, ಸಿಬ್ಬಂದಿಗಳಿಗೆ ಸಿಹಿ ಸುದ್ದಿ: ಗಳಿಕೆ ರಜೆ ನಗದೀಕರಣಕ್ಕೆ ಸರ್ಕಾರದಿಂದ ಮಹತ್ವದ ಆದೇಶ – ಇಲ್ಲಿದೆ

Categories:
WhatsApp Group Telegram Group

ಬೆಂಗಳೂರು: ರಾಜ್ಯದ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ರಾಜ್ಯ ಸರ್ಕಾರವು ಮಹತ್ವದ ಸಮಾಧಾನಕರ ಸುದ್ದಿಯೊಂದನ್ನು ನೀಡಿದೆ. 2024-25 ಮತ್ತು 2025-26 ನೇ ಸಾಲಿನಲ್ಲಿ ನಿವೃತ್ತಿ ಹೊಂದಿದ ನೌಕರರ ‘ಗಳಿಕೆ ರಜೆ ನಗದೀಕರಣ’ (Earned Leave Encashment) ಸೌಲಭ್ಯಕ್ಕೆ ಅಗತ್ಯವಿರುವ ಅನುದಾನವನ್ನು ಕ್ರೋಢೀಕರಿಸಲು ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆಯಲ್ಲಿ ಹೀಗಿದೆ

ಶಾಲಾ ಶಿಕ್ಷಣ ಇಲಾಖೆಯ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ನಿವೃತ್ತರಾದ ನೌಕರರುಗಳಿಗೆ ನಿವೃತ್ತಿ ನಂತರದ ಗಳಿಕೆ ರಜೆ ನಗದೀಕರಣ ಸೌಲಭ್ಯಕ್ಕೆ ಸಂಬಂಧಿಸಿದಂತೆ 2019-20 ರಿಂದ 2020-21 ನೇ ಸಾಲಿನಲ್ಲಿ ನಿವೃತ್ತರಾದವರಿಗೆ ರೂ.9599.48 ಲಕ್ಷಗಳನ್ನು 2022-23 ನೇ ಸಾಲಿನಲ್ಲಿ, 2021-22 ಮತ್ತು 2022-23ನೇ ಸಾಲಿನಲ್ಲಿ ನಿವೃತ್ತರಾದವರಿಗೆ ರೂ.8265.20 ಲಕ್ಷಗಳನ್ನು 2023-24 ನೇ ಸಾಲಿನಲ್ಲಿ ಹಾಗೂ 2023-24 ಮತ್ತು 2024-25 ನೇ ಸಾಲಿನಲ್ಲಿ ನಿವೃತ್ತರಾದ ಪ್ರಕರಣಗಳಿಗೆ ರೂ.100.86 ಕೋಟಿಗಳನ್ನು 2024-25 ನೇ ಸಾಲಿನಲ್ಲಿ ಸಂಬಂಧಿಸಿದ ಶಿಕ್ಷಕರು/ನೌಕರರುಗಳಿಗೆ ನಿವೃತ್ತಿ ನಂತರದ ಗಳಿಕೆ ರಜೆ ನಗದೀಕರಣ ಸೌಲಭ್ಯವನ್ನು ಈಗಾಗಲೇ ಬಿಡುಗಡೆ ಮಾಡಲಾಗಿರುತ್ತದೆ.

2024-25 ಮತ್ತು 2025-26 ನೇ ಸಾಲಿನವರೆಗೆ ಶಾಲಾ ಶಿಕ್ಷಣ ಇಲಾಖೆಯ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ನಿವೃತ್ತರಾದ ಶಿಕ್ಷಕರು/ಸಿಬ್ಬಂದಿಗಳಿಗೆ 2025-26 ನೇ ಸಾಲಿನಲ್ಲಿ ಅಗತ್ಯವಾದ ಅನುದಾನವನ್ನು ಆರ್ಥಿಕ ಇಲಾಖೆಯಿಂದ ಬಿಡುಗಡೆ ಆಗುವ ನಿರೀಕ್ಷೆಯಲ್ಲಿದೆ.

ಈ ಹಿನ್ನಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ 2024-25 ನೇ ಸಾಲಿನಲ್ಲಿ ನಿವೃತ್ತರಾಗಿ ಗಳಿಕೆ ರಜೆ ನಗದೀಕರಣವಾಗದೆ ಇರುವ ಹಾಗೂ 2025-26ನೇ ಸಾಲಿನಲ್ಲಿ ನಿವೃತ್ತರಾದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು/ಸಿಬ್ಬಂದಿಗಳ ಮಾಹಿತಿಗಳನ್ನು ಲಗತ್ತಿಸಲಾದ ಅನುಬಂಧ-1, & ಅನುಬಂಧ-2, ಗಳಲ್ಲಿರುವಂತೆ ಸಂಬಂಧಿಸಿದ ತಾಲ್ಲೂಕು ಕಛೇರಿಗಳಿಂದ ಪಡೆದು ಕ್ರೋಢಿಕರಿಸಿ ಕ್ರೋಢೀಕೃತ ಮಾಹಿತಿಯನ್ನು ಈ ಕೆಳಗಿನ ವೇಳಾಪಟ್ಟಿಯಂತೆ ಈ ಕಛೇರಿಗೆ ಹಾಜರಾಗಲು ಸಿಬ್ಬಂದಿಯನ್ನು ನಿಯೋಜಿಸುವುದು. ಜಿಲ್ಲಾವಾರು ನಿಗದಿಪಡಿಸಿದ ವೇಳಾಪಟ್ಟಿಯಂತೆ ಆಯಾ ದಿನಾಂಕಗಳಂದು ಸಂಬಂಧಿಸಿದ ಜಿಲ್ಲೆಯ ಮಾಹಿತಿಯನ್ನು ಈ ಕೆಳಕಂಡ ದಾಖಲೆಗಳೊಂದಿಗೆ ಕಡ್ಡಾಯವಾಗಿ ಖುದ್ದು ಹಾಜರಾಗಿ ಸಲ್ಲಿಸಲು ತಿಳಿಸಿದೆ. ತಪ್ಪಿದಲ್ಲಿ ಅನುದಾನವನ್ನು ಬಿಡುಗಡೆಗೊಳಿಸಲಾಗುವುದಿಲ್ಲ ಎಂಬ ಅಂಶವನ್ನು ತಿಳಿಸಿದೆ.

ಷರತ್ತುಗಳು:

  1. ಶಿಕ್ಷಕರು/ಸಿಬ್ಬಂದಿಗಳ ಸೇವಾಪುಸ್ತಕದಲ್ಲಿ ದೃಢೀಕರಿಸಿರುವಂತೆ ನಿವೃತ್ತಿ ದಿನಾಂಕಕ್ಕೆ ಲಭ್ಯವಿರುವ ಆಖೈರು ಶುಲ್ಕ ಗಳಿಕೆ ರಜೆಯ ತಃಖ್ಯೆಯನ್ನು ಪರಿಶೀಲಿಸಿ ನಮೂದಿಸಿರುವ ಗಳಿಕೆ ರಜೆ ವಿವರಗಳು ಕ್ರಮವಾಗಿರುವ ಬಗ್ಗೆ ಖಾತರಿಪಡಿಸಿಕೊಂಡು ಅದರಂತೆ ಗಳಿಕೆ ರಜೆ ಲೆಕ್ಕ ತಃಖ್ಯೆಯಲ್ಲಿ ನಮೂದಿಸಿ ಪ್ರತಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಜಿಲ್ಲಾ ಉಪನಿರ್ದೇಶಕರುಗಳು ದೃಢೀಕರಿಸಿ ಸಲ್ಲಿಸತಕ್ಕದ್ದು.
  2. ಶಿಕ್ಷಕರು/ಸಿಬ್ಬಂದಿಗಳ ದೃಢೀಕರಿಸಿದ ಎಲ್.ಪಿ.ಸಿ/ಕೊನೆಯ ವೇತನ ಚೀಟಿಯ ಪ್ರತಿ.
  3. ಮೇಲೆ ವಿವರಿಸಿದಂತೆ ಅನುಬಂಧ-1&2 ರಲ್ಲಿ ಸಲ್ಲಿಸಲಾಗುವ ಮಾಹಿತಿಗಳಂತೆ ಅನುದಾನ ಲಭ್ಯತೆಗೆ ಒಳಪಟ್ಟು ಅನುದಾನ ಬಿಡುಗಡೆ ಮಾಡಲಾಗುವುದು.
  4. ಡಿಡಿಓಗಳ ಬಳಿ ನಿವೃತ್ತಿ ಹೊಂದಿದ ಶಿಕ್ಷಕರು/ಸಿಬ್ಬಂದಿಗಳ ಗಳಿಕೆ ರಜೆ ನಗಧೀಕರಣಕ್ಕೆ ಅಗತ್ಯವಾದ ಎಲ್ಲಾ ದಾಖಲಾತಿಗಳು ಲಭ್ಯವಿರುವ ಶಿಕ್ಷಕರ/ಸಿಬ್ಬಂದಿಗಳ ಮಾಹಿತಿಯನ್ನು ಮಾತ್ರ ಸಲ್ಲಿಸುವುದು. ಮಾಹಿತಿ ಸಲ್ಲಿಸಿದ ನಂತರದಲ್ಲಿ ಶಿಕ್ಷಕರ ಸೇವಾ ಪುಸ್ತಕ ಲಭ್ಯವಿಲ್ಲ/ಮಾನ್ಯ ಮಹಾಲೇಖಪಾಲರಿಂದ ಮಾಹಿತಿ ಬಂದಿಲ್ಲ/ಆಡಳಿತ ಮಂಡಳಿ ಬಿಲ್ ಸಲ್ಲಿಸಿಲ್ಲ ಇತ್ಯಾದಿ ಸಬೂಬುಗಳನ್ನು ತಿಳಿಸುವಂತಿಲ್ಲ. ಈ ಹಿನ್ನಲೆಯಲ್ಲಿ ಸಲ್ಲಿಸಲಾಗುವ ಮಾಹಿತಿಗೆ ಸಂಬಂಧಿಸಿದಂತೆ ಎಲ್ಲಾ ಶಿಕ್ಷಕರ/ಸಿಬ್ಬಂದಿಗಳ ಅಗತ್ಯ ಮಾಹಿತಿ ಲಭ್ಯವಿರುವ ಬಗ್ಗೆ ಸಂಬಂಧಿಸಿದ ಡಿಡಿಓ/ಜಿಲ್ಲಾ ಉಪನಿರ್ದೇಶಕರು ಖಾತರಿಪಡಿಸಿಕೊಳ್ಳುವುದು.
  5. 2024-25 ಮತ್ತು 2025-26 ನೇ ಸಾಲಿಗೆ ಜಿಲ್ಲಾ ಕಛೇರಿಯಿಂದ ಈಗಾಗಲೇ ಸಲ್ಲಿಕೆಯಾದ ಪ್ರಸ್ತಾವನೆಯ ಮಾಹಿತಿಯಂತೆಯೆ ಸಲ್ಲಿಸುವುದು. ಸದರಿ ಮಾಹಿತಿಗೆ ಅನುಗುಣವಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿರುತ್ತದೆ. ಪ್ರಸ್ತುತ ನೀಡಲಾಗುವ ಸಿಬ್ಬಂದಿವಾರು ಮಾಹಿತಿಯು ಈ ಮುಂಚಿನ ಮಾಹಿತಿಗೆ ಹೊಂದಾಣಿಕೆಗೆ ಆಗುವ ಬಗ್ಗೆ ಪರಿಶೀಲಿಸಿ ದೃಢೀಕರಿಸುವುದು. ಈ ಸಾಲಿನಲ್ಲಿ ಪ್ರಸ್ತಾಪಿಸಿದ ನಿವೃತ್ತ ನೌಕರರ ಸಂಖ್ಯೆಯ ಮೊತ್ತಕ್ಕೆ ಸಂಬಂಧಿಸಿದಂತೆ ಮಾತ್ರ ಪ್ರಸ್ತಾವನೆಗಳನ್ನು ಸಲ್ಲಿಸುವುದು. ಹೆಚ್ಚುವರಿಯಾಗಿ ಯಾವುದೇ ಪ್ರಸ್ತಾವನೆಯನ್ನು ಸಲ್ಲಿಸುವಂತಿಲ್ಲ.
WhatsApp Image 2026 01 10 at 11.46.20 AM
WhatsApp Image 2026 01 10 at 11.46.25 AM

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories