ಕರ್ನಾಟಕದ ರೈತರಿಗೆ ಸರ್ಕಾರವು 90% ರಿಯಾಯಿತಿ ದರದಲ್ಲಿ ಮಿನಿ ಟ್ರ್ಯಾಕ್ಟರ್, ಪವರ್ ಟಿಲ್ಲರ್ ಮತ್ತು ಇತರ ಕೃಷಿ ಯಂತ್ರಗಳು ಖರೀದಿಸಲು ಸಹಾಯಧನ ನೀಡುತ್ತಿದೆ. ಕೃಷಿ ಕ್ಷೇತ್ರದಲ್ಲಿ ಕಾರ್ಮಿಕರ ಕೊರತೆ ಮತ್ತು ಆಧುನಿಕ ತಂತ್ರಜ್ಞಾನದ ಬೇಡಿಕೆ ಹೆಚ್ಚಾಗಿರುವುದರಿಂದ, ರೈತರು ಈ ಯೋಜನೆಯಿಂದ ಹೆಚ್ಚಿನ ಪ್ರಯೋಜನ ಪಡೆಯಬಹುದು..ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಯೋಜನೆಯ ವಿವರ:
೧. ಸಬ್ಸಿಡಿ ದರ:
- SC/ST ರೈತರು: 90% ರಿಯಾಯಿತಿ
- ಸಾಮಾನ್ಯ ರೈತರು: 50% ರಿಯಾಯಿತಿ
೨. ಯಾವ ಯಂತ್ರಗಳಿಗೆ ಸಹಾಯಧನೆ?
- ಮಿನಿ ಟ್ರ್ಯಾಕ್ಟರ್
- ಪವರ್ ಟಿಲ್ಲರ್
- ರೋಟೋವೇಟರ್
- ಕಳೆ ಕೊಚ್ಚುವ ಯಂತ್ರ
- ಪವರ್ ಸ್ಪ್ರೇಯರ್
- ಡೀಸೆಲ್ ಪಂಪ್‌ಸೆಟ್
- ಸೂಕ್ಷ್ಮ ನೀರಾವರಿ ಘಟಕಗಳು
- ಸೋಲಾರ್ ಪಂಪ್‌ಗಳು
೩. ಕೃಷಿ ಭಾಗ್ಯ ಯೋಜನೆಯ ಅಡಿಯಲ್ಲಿ ಹೆಚ್ಚುವರಿ ಸೌಲಭ್ಯಗಳು:
- ನೀರಾವರಿಗೆ ಕೃಷಿ ಹೊಂಡ ನಿರ್ಮಾಣಕ್ಕೆ 8೦-9೦% ಸಬ್ಸಿಡಿ
- ಸೋಲಾರ್/ಡೀಸೆಲ್ ಪಂಪ್‌ಗಳಿಗೆ ಸಹಾಯಧನ
- ತಂತಿ ಬೇಲಿ ನಿರ್ಮಾಣಕ್ಕೆ ರಿಯಾಯಿತಿ
ಅರ್ಜಿ ಸಲ್ಲಿಸುವ ವಿಧಾನ:
ಅಗತ್ಯ ದಾಖಲೆಗಳು:
✅ ಆಧಾರ್ ಕಾರ್ಡ್ ನಕಲು
✅ ರೈತ ಪರಿಚಯ ಪತ್ರ (RTC)
✅ ಬ್ಯಾಂಕ್ ಪಾಸ್‌ಬುಕ್ ನಕಲು
✅ 2 ಪಾಸ್ಪೋರ್ಟ್ ಗಾತ್ರದ ಫೋಟೋಗಳು
✅ 1೦೦ ರೂಪಾಯಿ ಬಾಂಡ್ ಪೇಪರ್
ಅರ್ಜಿ ಸಲ್ಲಿಸುವ ಸ್ಥಳ:
- ಸ್ಥಳೀಯ ರೈತ ಸಂಪರ್ಕ ಕೇಂದ್ರ
- ಕೃಷಿ ನಿರ್ದೇಶಕರ ಕಚೇರಿ
ಪ್ರಮುಖ ನಿಯಮಗಳು:
- ಕನಿಷ್ಠ 1 ಎಕರೆ ಜಮೀನು ಇರುವ ರೈತರಿಗೆ ಮಾತ್ರ ಅರ್ಹತೆ.
- ಹಿಂದೆ ಈ ಯೋಜನೆಯಿಂದ ಲಾಭ ಪಡೆದವರು ಮತ್ತೆ ಅರ್ಜಿ ಸಲ್ಲಿಸಲು ಅರ್ಹರಲ್ಲ.
ಸಂಪರ್ಕಿಸುವ ವಿಧಾನ:
ಹೆಚ್ಚಿನ ಮಾಹಿತಿಗೆ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಿ.
ಕರ್ನಾಟಕ ಸರ್ಕಾರದ ಈ ಯೋಜನೆಯಿಂದ ರೈತರು ಸುಲಭ ಬೆಲೆಗೆ ಕೃಷಿ ಯಂತ್ರಗಳನ್ನು ಪಡೆದು, ಕೃಷಿ ಉತ್ಪಾದನೆ ಹೆಚ್ಚಿಸಬಹುದು. ಅರ್ಜಿ ಸಲ್ಲಿಸಿ, ಈ ಅವಕಾಶವನ್ನು ಉಪಯೋಗಿಸಿಕೊಳ್ಳಿ!
ಹೆಚ್ಚಿನ ಮಾಹಿತಿ: ಕೃಷಿ ಇಲಾಖೆ ಅಧಿಕೃತ ವೆಬ್‌ಸೈಟ್
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.